ಒಟ್ಟು 4256 ಕಡೆಗಳಲ್ಲಿ , 116 ದಾಸರು , 2832 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ ನಾಕನಕಾಭರಣನ ತೋರಿಕೊಡೆ ಸೈರಿಸಲಾರೆ ಪ.ಕನಕದಂತೆ ಮೈಯವನ ಕನಕಾಚಲಧರನಕನಕಾಂಬಕನ ಗೆದ್ದಕನಕಕಶ್ಯಪನ ಗೆದ್ದ1ಕನಕಾದ್ರಿಕರಕರ ಕನಕಭೂಮಿತಾರಕನಕಮೃಗ ಸಂಹಾರ ಕನಕಪಕ್ಷಿಸಂಚರ 2ಕನಕಾಂಬರವ ಬಿಟ್ಟ ಕನಕವರ್ಮವ ತೊಟ್ಟಕನಕಗನ್ನಿಕೆಯ ರಮಣಕರ್ತುಪ್ರಸನ್ನವೆಂಕಟನ3
--------------
ಪ್ರಸನ್ನವೆಂಕಟದಾಸರು
ಕಮಲನಾಭ ವೆಂಕಟೇಶ ಭಕ್ತ ಕಲ್ಪಭೂರುಹ ಶ್ರೀಕಮಲಪ್ರಾಣೇಶಾಪವಿಮಲ ವೈಕುಂಠಪುರೀಶಾ ಶಿವಕಮಲಸಂಭವನುತ ಕರ್ಬುರನಾಶಾ ಅ.ಪನಿರುಪಮ ಸುಂದರ ಗಾತ್ರಾನಿತ್ಯಪರಿಪೂರ್ಣ ವೈಭವಪರಮಪವಿತ್ರಾಶರನಿಧಿತನಯಕಳತ್ರಾಶೇಷಪರಿಜನಕೃತಘೋರಪಾಪಾಂಧ ಮಿತ್ರಾ1ಸನಕಸನಂದನ ವಿನುತಾಶಶಿದಿನಕರಶತಕೋಟಿ ದಿವ್ಯ ಸುಚರಿತಾಜನನ ಮರಣ ಕ್ಲೇಶರಹಿತ ಶ್ರೀವನಜಸುದರ್ಶನ ವನಮಾಲ ಧರಿತ2ಜಲಜಮಿತ್ರ ವಂಶ ಭೂಷಾ ಕ್ಷಾರಜಲಧಿಬಂಧನ ಪುಣ್ಯಜನ ಪ್ರಾಣ ಶೋಷಾತುಲಸೀ ರಾಮದಾಸ ಪೋಷಾ ಶ್ರೀತುಲಸೀ ಕಾನನಹಿತ ತುಂಬುರ ತೋಷಾ 3
--------------
ತುಳಸೀರಾಮದಾಸರು
ಕಮಲೇಶ ನಿನ್ನ ವಿಮಲಯುಗಳಪಾದಕಮಲಕೆಅಮರರುಭ್ರಮರಗಳುಪ.ಅತಿಸುವಟು ರೂಪದಿ ವಿತರಣ ಬೇಡಲುಕ್ರತದೆಡೆ ಮೂರಡಿಕ್ಷಿತಿನೋಡೆಅತುಳಚರಿತ ವಸುಮತಿಯನಳೆಯುತಲಿದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ 1ಹಲವು ಕಾಲವು ತನ್ನ ನಲ್ಲನ ಶಾಪದಿ ಅಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲುಸುಲಭದಿ ಭಕ್ತರ ಸಲಹುವ ಬಿರುದಿಗೆಲಲನೆಯ ಮಾಡಿದ ಸುಲಲಿತ ಪಾದಕೆ 2ಚಿನ್ನತನದೊಳೆ ಉನ್ನತ ಭಕ್ತ ಧ್ರುವನ್ನ ದೃಢಮತಿಯನ್ನೆ ಕಂಡುತನ್ನ ಕರುಣದಿ ಪಾವನ ಪದವಿತ್ತ ಪ್ರಸನ್ನ ವೆಂಕಟೇಶನ ಶ್ರೀಪಾದಕೆ 3
--------------
ಪ್ರಸನ್ನವೆಂಕಟದಾಸರು
ಕರತಾರೆ ಕರತಾರೆ ಶ್ರೀನಿವಾಸನಸುರರರಸ ಸ್ವಾಮಿ ಶ್ರೀ ವೆಂಕಟೇಶನ ಪ.ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆಸಿರಿರಾಣಿರಮಣ ಘನಾಂಗಗೆಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ 1ಸುಂದರ ಸುಂದರ ಶುಭಮಂದಿರನ್ನ ದಯಾರಸಸುಂದರನ್ನ ವರಕಂಬುಕಂದರನ್ನಚೆಂದಾವರೆಗಣ್ಣವನಸಿಂಧೂರವರದನ್ನ ದೇವೇಂದ್ರಜಿತ ಪಾರಿಜಾತ ತಂದನ್ನ 2ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರದಾಯಿತೀ ಅವಸ್ಥೆ ಹುಟ್ಟು ಹೊಂದಿಕಾಯಬೇಕೆಂದೊಮ್ಮಿಗೆ ಉದಯವಾದ ಪ್ರಸನ್ವೆಂಕಟರಾಯ ಬಂದ ಫಲಿಸಿತಾನಂದ 3
--------------
ಪ್ರಸನ್ನವೆಂಕಟದಾಸರು
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
--------------
ಗೋವಿಂದದಾಸ
ಕರುಣಾಂಬುಧಿ ಪಾಲಿಸೊಶರಣಾಗತರರಸ ಮುರಾರಿ ಪ.ಹಿಂದೆ ಕ್ಲೇಶವನುಂಡು ಬಳಲಿ ನಾ ನೊಂದೆಮುಂದೆ ಕತ್ತಲೆ ಕವಿದಿದ್ಯಲ್ಲೊ ತಂದೆ 1ಒಡೆಯನಿದ್ದೊಡಲಿನ ಚಿಂತೆ ಎನಗ್ಯಾಕೆಪಡಿಯಾಸೆಲಿನ್ನೊಬ್ಬರೊಲಿಸಲ್ಯಾಕೆ 2ಜನಕಜನನಿಆಪ್ತಧನ ಧಾನ್ಯ ನೀನೆಅನುಮಾನ ಬಿಡಿಸುವ ಅನುಕೂಲದವನೆ 3ಪೋಕರ ಮುಂದೆÀಡಹಿದರಾರಕುಂದುಜೋಕೆ ಬಿರುದುದಾತಆನತ ಬಂಧು4ನಾಭಿಸುರಭಿಕಾಣದರಸುವ ಮೃಗದಂಥಈ ಭ್ರಾಂತಿ ಕಳೆಯೊ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆಪರಮಭಾಗವತರ ಅರಿಗಳ ತರಿದು ನೀನರಕ ತಪ್ಪಿಸಿ ನಿಜಪುರಕೊಯ್ಯುವೆಯೆಂದು ಪ.ತಾಯಿಯೆಂಬೆ ತವರೂರೆಂಬೆತ್ರಾಹಿತ್ರಾಹಿ ಎಂಬೆಬಾಯೆಂಬೆ ಮಾನವರಘ ಕಾಣಿಸುತಿರೆನೀಯಜಾಮಿಳಗಾಶ್ರಯನಿತ್ತೆಯೆಂದು 1ತಾತನೆಂಬೆ ಆದ್ಯಾಪ್ತನೆಂಬೆ ನಾಥನಾಥೆಂಬೆಪಾತಕಕೌರವರಾತಂಕ ಬಿಡಿಸಿ ಸಂಪ್ರೀತಿಲಿ ಪಾಂಡವರ ಕಾಯುವೆಯೆಂದು 2ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆಶ್ರೀಕಾಂತ ಪ್ರಸನ್ವೆಂಕಟೇಕಾಂತ ದಾಸರಬೇಕಾಗಿ ದಡ ನೂಕುವೆಯೆಂದು 3
--------------
ಪ್ರಸನ್ನವೆಂಕಟದಾಸರು
ಕರುಣಿಸಿ ಬಾರೆಲೆ ತಾಯೆ ಮಾಧವನಾವ್ಯಾಕೃತನಕರೆತಾರೆ ನೀರೆ ಬೇಕಾದವಳನಿನಿತುವಿರಹವಾರಿಧಿಯಲ್ಲಿ ನೂಕಿ ಓಡಿರುವನಲ್ಲೆ ಸಲೆ ಪ.ಬಿಸಜಕುಟ್ಮಳಕುಚವಸೋಂಕಿಮುದದಿ ಪಿಡಿದುಶಶಿಮೊಗದಿ ಮೋಹವನಿಡುವ ನುಡಿವಎಸೆವ ಕೊನೆವಲ್ಲಲಳುಕಿಸಿ ಎನ್ನಅಧರಪೀಯೂಷವನೊಲಿದೊಲಿದು ಸವಿದಕೋವಿದಪೊಸಮದಕರಿಯ ಸೊಂಡಿಲ ತೋಳಲಮರ್ದಪ್ಪಿಮಿಸುನಿಪುತ್ಥಳಿಯ ತೆರದಿ ಮೆರೆದಅಸಿಯ ಮಾಣಿಕಳೆ ಕೇಳಸುರಹರನಾಳಿದನೀಅಸುತೊರೆವೆ ತಾನಪಕಾರೆ ನೀರೆ1ಎಂಟೆರೆಡು ಕಳೆದೋರಿ ಸವಿದೋರಿ ಸುಖಬೀರಿ ಸಲೆಕಂಠಮಾಲೆಯ ಕೊಟ್ಟನೆ ನೆಟ್ಟನೆಎಂಟೆರಡವಸ್ಥೆಗಳ ಮೇಳಿಗೆಯ ಕ್ಷಣಲವಕೆವೆಂಠಣಿಸಿ ಅಮೃತವೆರೆದ ನೆರೆದಕಂಟಕಿಯು ದಾವಳೊ ಹರಿಯನೊಯ್ದಳಕದಿಂಗಂಟಿಕ್ಕಿದಳೊ ಬಿಡದೆ ಮಡದೆಉಂಟು ಮಾಡಿದನಲಾಮಂದಮುಗ್ಥೆಗೆ ಅಸಿಕಕಂಟಕಬಲೆಯ ಕಾಣೆ ಜಾಣೆ 2ಸರಸವಾತಿನ ಜಾಣ್ಮೆಯೆಂತುಸುರುವೆನಬಲೆಹರಣಳಿಯದೆಂದು ಪೇಳೆ ಕೇಳೆನಿರುತವನ ಕಿರುವೆರಳ ಸೌಂದರ್ಯಮಂ ನೆನೆಯುತಿರುವೆ ಪುಸಿಯಲ್ಲ ಕಾಣೆ ಪ್ರಾಣೆಕರುಣಿ ಬಲುನೊಂದರೆಂದದು ತನಗೆಕುಂದುಮರೆಯದಿನಿತೆಲ್ಲ ಒರೆಯೆ ಚತುರೆಯೆಭರದಲೊಮ್ಮದೊಮ್ಮೆ ಬಂದು ಪ್ರಸನ್ನವೆಂಕಟಗಿರಿಯರಸನೆಂದನಕ್ಕ ರಸಿಕ 3
--------------
ಪ್ರಸನ್ನವೆಂಕಟದಾಸರು
ಕರುಣಿಸಿನ್ನಾದರೆ ರಂಗ ಸುರಾರಿಭಂಗಕರುಣಿಸಿನ್ನಾದರೆ ರಂಗ ಪ.ಹುಳು ಹಕ್ಕಿ ನಾಯಿ ನರಿ ಗಿಡ ಹುಲ್ಲು ಮುಳ್ಳುಗಳಜನ್ಮವಾಂತು ನಾ ಬಳಲಿದೆ ರಂಗನೆಲೆಗಾಣೆನಿನ್ನು ಮಾನಿಸನಾಗಿ ವೃಥನಾದೆಗುಳದ ಹಣ್ಣಿಗೆ ಸೊರಗಲ್ಯಾಕೊ ರಂಗ 1ತುದಿಮೊದಲಿಗೆ ಮದ ಮತ್ಸರದಿಂ ಬೇಗುದಿಗೊಂಡು ನಿನ್ನಂಘ್ರಿ ಮರೆದೆನೊ ರಂಗಪದುಮನಾಭನೆ ನನ್ನ ಹೊರೆಯಲಾರೆಯಹುಲ್ಲೆವದನಕ್ಕೆ ಮುಳ್ಳ ಕಡಿವಾಣ್ಯಾಕೊ ರಂಗ 2ಮಲೆತವನಾದರೊದಿಯೊ ನಿನ್ನಂಗಣದೊಳುತೊಳಲುವ ನಾಯಿಗೆ ಕ್ಲೇಶವು ಸಲ್ಲ ರಂಗಹಲವು ದುಷ್ಕøತ ನಿನ್ನ ನಾಮ ಘೋಷಣೆಯಲ್ಲಿನಿಲ್ಲಬಲ್ಲವೆ ಪ್ರಸನ್ವೆಂಕಟ ರಂಗ 3
--------------
ಪ್ರಸನ್ನವೆಂಕಟದಾಸರು
ಕರುಣಿಸೊ ಕರುಣಾಸಾಗರ ನರಹರಿಯೆ ನಿನ್ನಚರಣದಾಚರಣೆಗೆಚ್ಚರಾದರನು ಪ.ಮನ ಮಲಿನವ ತೊಳೆದನುದಿನ ದೃಢದೊಳುಜ್ಞಾನ ಭಕ್ತಿ ವಿರಕ್ತಿಯ ಘನಾಸಕ್ತಿಯಮನಗಂಡು ಮುದವಂತರೆನಿಸಿ ನಾಮಾಮೃತಉಣಬಲ್ಲ ಪೂತಾಂಗ ಮಾನಿಸರ ಸಂಗ 1ಸಭ್ಯರ ದೂಷಣ ಕೇಳುಬ್ಬಸ ಶ್ರವಣಕೆಇಬ್ಬರ ಕಲಹದಿ ಶಬ್ದಗುಂದಿಅಬ್ಜನಾಭನ ಬಿರುದುಬ್ಬುಬ್ಬಿ ಸುಖವೇರಿಕೊಬ್ಬಿ ಕುಣಿವ ಶಂಲಬ್ಧರೂಳಿಗವ 2ವೃಂದಾವನದಲಿ ಮುಕುಂದನಾಲಯದಮುಂದಾ ದಿಗಿದಿಗಿತ ವಾದ್ಯವಂದನಿಂದತಂದೆ ಪ್ರಸನ್ನವೆಂಕಟೇಂದ್ರ ನಿನ್ನ ಮುದ್ರಾಂಕಹೊಂದುವ ಜನುಮವ ಆನಂದಮುನಿಮತವ 3
--------------
ಪ್ರಸನ್ನವೆಂಕಟದಾಸರು
ಕರ್ತಕೃಷ್ಣಯ್ಯ ನೀ ಬಾರಯ್ಯ ಎನ್ನಾರ್ತ ಧ್ವನಿಗೊಲಿದು ಬಾರಯ್ಯ ಪ.ಸುಗುಣದ ಖಣಿಯೆ ನೀ ಬಾರಯ್ಯ ನಮ್ಮಘವನೋಡಿಸಲು ನೀ ಬಾರಯ್ಯಧಗೆಯೇರಿಸಿತುತಾಪಸುಧಾಮುಗುಳ್ನಗೆ ಮಳೆಗರೆಯೆ ಬಾರಯ್ಯ 1ವೈರವರ್ಗದಿ ನೊಂದೆ ಬಾರಯ್ಯ ಮತ್ತಾರು ಗೆಣೆಯರಿಲ್ಲ ಬಾರಯ್ಯಸೇರಿದೆ ನಾ ಶರಣ್ಯ ಬಾರಯ್ಯ ಒಳ್ಳೆದಾರಿಯ ತೋರಲು ನೀ ಬಾರಯ್ಯ 2ವೈರಾಗ್ಯ ಭಾಗ್ಯ ಕೊಡು ಬಾರಯ್ಯ ಜ್ಞಾನಾರೋಗ್ಯದಭೇಷಜಬಾರಯ್ಯಜಾರುತದಾಯು ಬೇಗ ಬಾರಯ್ಯ ಉದಾರಿ ಪ್ರಸನ್ವೆಂಕಟಪ ಬಾರಯ್ಯ 3
--------------
ಪ್ರಸನ್ನವೆಂಕಟದಾಸರು
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿಫುಲ್ಲನಾಭನಿನ್ನ ಪಾದಪಲ್ಲವ ಛಾಯೆಯ ಬಿಡೆಪ.ಶೂಲಕೋಟಿಗಂಜೆಕರವಾಳಘಾತಿಗಂಜೆವಿಶ್ವಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು 1ಪೋಕಜನಕಂಜೆ ದುರಿತಾನೀಕ ಬರಲಂಜೆ ಜಗದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ 2ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ 3
--------------
ಪ್ರಸನ್ನವೆಂಕಟದಾಸರು
ಕಲ್ಲುಸಕ್ಕರೆ ಕೊಳ್ಳಿರೊ - ನೀವೆಲ್ಲರು |ಕಲ್ಲುಸಕ್ಕರೆ ಕೊಳ್ಳಿರೊ ಪ.ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು |ಫುಲ್ಲನಾಭಕೃಷ್ಣನ ದಿವ್ಯನಾಮವೆಂಬಅ.ಪಎತ್ತ ಹೇರುವುದಲ್ಲ ಹೊತ್ತು ಮಾರುವುದಲ್ಲ |ಒತ್ತೊತ್ತಿ ಗೋಣಿಯ ತುಂಬುವುದಲ್ಲ ||ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ |ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ 1ನಷ್ಟಬೀಳುವುದಲ್ಲ ನಾಶವಾಗುವುದಲ್ಲ |ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ ||ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ |ಪಟ್ಟಣದೊಳಗೊಂದು ಲಾಭವೆನಿಸುವಂಥ 2ಸಂತೆಪೇಟೆಗೆ ಹೋಗಿ ಶ್ರಮಪಡಿಸುವುದಲ್ಲ |ಎಂತು ಮಾರಿದರದಕಂತವಿಲ್ಲ ||ಸಂತತ ಪುರಂದರವಿಠಲನ ನಾಮವ |ಎಂತು ನೆನೆಯಲು ಪಾಪ ಪರಿಹಾರವಲ್ಲದೆ 3
--------------
ಪುರಂದರದಾಸರು
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲಭ್ರಷ್ಟಮಾನವ ಹಣೆಯ ಬರಹವನ್ನದೆ ಇಲ್ಲ ಪಸಿರಿವಂತನ ಸ್ನೇಹಮಾಡಿ ನಡೆದರಿಲ್ಲಪರಿಪರಿಯಲಿ ವಿದ್ಯ ಕಲಿತರಿಲ್ಲನರಿಯ ಬುಧ್ಧಿಯಲಿ ನಡೆದುಕೊಂಡರು ಇಲ್ಲಅರಿಯದೆ ಹಲವ ಹಂಬಲಿಸಿದರಿಲ್ಲ 1ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲಕಂಡಕಂಡವರಿಗೆ ಕೈ ಮುಗಿದರಿಲ್ಲಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲಚಂಡನಾದರೂ ಇಲ್ಲ ಪರಿಹಾಸ್ಯವಲ್ಲ 2ಕಟ್ಟಾಳು ಕಂಡು ಜಾಣನಾಗಿ ಪುಟ್ಟಿದರಿಲ್ಲಬೆಟ್ಟಗಳನು ಕಿತ್ತಟ್ಟರಿಲ್ಲಸೃಷ್ಟಿಯೊಳು ಪುರಂದರವಿಠಲರಾಯ
--------------
ಪುರಂದರದಾಸರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು