(ಮೂಲ್ಕಿಯ ನರಸಿಂಹದೇವರು)
ನಂಬಿದೆ ನಿನ್ನ ಇಂಬಿದೆಯೆಂದು
ಸನ್ನುತ ಪ.
ಕಂಬದಿಂದ ಕಾಣಿಸಿದ
ಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ.
ಭಾನುಕೋಟಿ ಭಾಸ್ಕರ ಪವ-
ಮಾನನಯ್ಯ ಪ್ರಾಣದ ಸುತ್ರಾಣ ಸುಗುಣ
ದೀನಜನಸಂತಾನ ಮಾನದ
ಆನಂದ ಗುಣಾನಂತ ವಿತಾನಾಬ್ಧಿಶಯ ಹರಿ 1
ಎಷ್ಟೊ ಪಾಪಿ ಕನಿಷ್ಠನೆಂದು
ಬಿಟ್ಟರೇನು ಬಿರುದು ಹಿರಿದು ಬರುವುದು
ಸೃಷ್ಟಿಕರ್ತರಿಷ್ಟಹರ್ತ
ಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2
ಚಿತ್ತಸಾಕ್ಷಿ ಚಿನುಮಯಾತ್ಮ
ಸತ್ಯರೂಪ ಸದಯೋದಯ ಸದುಪಾಶ್ರಯ
ದೈತ್ಯಭಂಜನ ಸತ್ಯರಂಜನ
ಕ್ಷೇತ್ರಜ್ಞ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3
ಮೂಲಿಕಾಪುರ ಮೌಳಿರುತುನ
ನೀಲೇಂದೀವರಶ್ಯಾಮಲ ಕಲಿಮಲಭೀಷಣ
ಕಾಲಕಾಲ ವಿಶಾಲ ಭುಜಬಲ
ಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4