ಒಟ್ಟು 228 ಕಡೆಗಳಲ್ಲಿ , 57 ದಾಸರು , 214 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ಲೋ||ಮಣಿಮಂತ್ರೌಷಧವೆಂಬ ಭ್ರಾಂತಿಯಲಿಮಾಯಾಮೋಹದೊಳ್ ಸಿಕ್ಕಿ ತಾಮಣಿಮಾದ್ಯಷ್ಟ ವಿಭೂತಿಯೆಂಬಯ ಸುಜ್ಞಾನಾಂಧರಾಗೆಲ್ಲಿಯುಂಎಣೆಯಾರಿಲ್ಲೆಮಗೆಂದು ಮೋಹಿಸುವ ಈ ಮೂಢಾತ್ಮರಂ ಬೇಗದಿಂಗುಣಮೂರೊಂದಕೊುದು ಪಾಲಿಸುಗೆ ಗೋಪಾಲ ಸಚ್ಚಿದಾನಂದಮಂಮತಿಹೀನನಾಗದಿರೊ ಓ ಜೀವಾಮತಿಹೀನನಾಗದಿರೊ ಪಸುತರ ತನುಧನಗಳ ಹಿತವೆಂದು ನಂಬಿ ನೀ ಅ.ಪಶೃತಿ ಮತಗಳ ಬಿಟ್ಟು ಪ್ರತಿದಿನ ವಿಷಯವೆಗತಿಯೆಂದು ನೆಚ್ಚದಿರೊ ರಾಗದ್ವೇಷಯುತರ ನೀ ಮೆಚ್ಚದಿರೊ ನಿನ್ನ ತೋರದವ್ರತದಿಂದ ಹೆಚ್ಚದಿರೊ ಓ ಜೀವಾ 1ಪರಿಭವವ ಮಾಡುವ ಪರಸೇವೆಗೆಳಸುವಸಿರಿಯ ನೀ ಬೇಡದಿರೊ ಕಾಮುಕನಾಗಿಪರಸತಿಯ ನೋಡದಿರೊ ಮುಂದುಗೆಡಿಪಪರಧರ್ಮವ ಕೂಡದಿರೊ ಓ ಜೀವಾ 2ಧೈರ್ಯವಿಲ್ಲದೆ ನಿನ್ನೊಳಾರ್ಯ ಸಂಗವ ಬಿಟ್ಟುಕಾರ್ಯದೊಳ್ಬೆರೆಯದಿರೊ ಮನದಿಮಾತ್ಸರ್ಯದೊಳ್ ಕೊರೆಯದಿರೊ ಶ್ರೀ ಗೋಪಾಲಾರ್ಯನ ಮರೆಯದಿರೊ ಓ ಜೀವಾ 3
--------------
ಗೋಪಾಲಾರ್ಯರು
ಸ್ಮರಣೆಯೊಂದೆ ಸಾಲದೆ - ಗೋವಿಂದನ |ಸ್ಮರಣೆಯೊಂದೆ ಸಾಲದೆ ? ಪ.ಪರಿಪರಿ ಸಾಧನ ಭ್ರಾಂತಿಯ ಬಿಡಿಸುವ |ಪರಮಾತ್ಮನಪಾದನೆರೆನಂಬಿದವರಿಗೆಅಪಕಡುಮೂರ್ಖನಾದರೇನು - ದಾನ - ಧರ್ಮ - |ಕೊಡದಾತನಾದರೇನು ||ಬಡವನಾದರೇನು ವಿಜಾತಿಯಾದರೇನು |ಒಡನೆ ಪ್ರಹ್ಲಾದನುದ್ಧರಿಸಿದ ಶ್ರೀ ಹರಿಯ 1ಪಾತಕಿಯಾದರೇನು - ಸರ್ವಲೋಕ - |ಘಾತಕಿಯಾದರೇನು ||ಮಾತೆಯಂದದಿ ತನ್ನ ದಾಸರ ಸಲಹುವ |ಚೇತನಾತ್ಮಕನ ಪಾದವ ನಂಬಿದವರಿಗೆ 2ಪಾತಕ ವೆಗ್ಗಳವೊ - ನಾಮವು ಪ್ರಾಯ - |ಶ್ಚಿತ್ತಕೆ ವೆಗ್ಗಳವೊ ||ಪಾತಕವೆನಗಿಲ್ಲ ಪ್ರಾಯಶ್ಚಿತ್ತ ಮುನ್ನಿಲ್ಲ |ಏತರ ಭಯವಯ್ಯ ಪುರಂದರವಿಠಲನ 3
--------------
ಪುರಂದರದಾಸರು
ಸ್ವಾಮಿಪರಾಕುಮಹಾಸ್ವಾಮಿ ಸಜ್ಜನಪ್ರೇಮಿಪ.ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯಪಾರಮೇಷ್ಠಿ ಪ್ರಮುಖಾಮರಪೂಜಿತಚಾರುಪದಾಬ್ಜದ್ವಯ ದನು-ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮದೂರನುಲಾಲಿಸುಚಿನ್ಮಯ ಜಯ1ದುಷ್ಟ ನಿಶಾಚರರಟ್ಟುಳಿಘನಕಂಗೆಟ್ಟುದು ಸುರಮುನಿಗಣ ಆಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮಕಷ್ಟವು ಪದಕರ್ಪಣ ಪರಾಯಣ 2ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲುಭ್ರಾಂತಿವಿಜ್ಞಾನವಿತಾನಧುರೀಣರ್ಸಂತಾಪಿಪರು ಮುರಾರಿ ನಮ್ಮಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವಶೌರಿಜಗ-ದಂತ ವಿಹಾರಿ ನಿರಂತ ಪರಂತಪ 3ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮಬಿನ್ನಪಲಾಲಿಸುತ್ರಿಭುವನವನ್ನುಸನ್ನುತಶುಭಾಂಗ ಸ-ರ್ವೋನ್ನತ ಮಹಿಮತರಂಗದುರಿತಾನ್ವಯತಿಮಿರಪತಂಗ ಸುಪ್ರಸನ್ನಸದೋದಿತವಿಹಂಗತುರಂಗ4ನೀಲೇಂದೀವರ ಶ್ಯಾಮಲ ಕೋಮಲಕಾಲನಿಯಾಮಕ ಪ್ರಾಣ ನಿನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣನತಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.ನನ್ನ ಗುಣಕೆ ನಾ ಮೆಚ್ಚಿದೆ ಬರಿದೆಪುಣ್ಯವಂತನೆಂದನ್ಯರ ಜರಿದೆಉನ್ನತ ಸೂಕ್ಷ್ಮ ಸುಧರ್ಮವ ಕಾಣೆನನ್ನೊಳು ನಾ ವೃಥಾ ಹಿಗ್ಗಿದರೇನು 1ಜನದೊಳು ದಣಿಯದೆ ಜ್ಞಾನವನೊರೆದುಘನವೈರಾಗ್ಯಕೆ ಹಿಂದಕೆ ಸರಿದುತನು ಮನ ಕದ್ದು ಭಕುತಿಯೊಳಿದ್ದುಹೆಣಗಾಡುತ ಭಾಗವತೆನಿಸಿದ್ದು 2ಸಂತರು ಒಪ್ಪಿದ ಜ್ಞಾನಿಯವ ಸಂತಸಂತರಿಗಾಗದವಿರತಿಭ್ರಾಂತಿಸಂತರುಕೂಡಿದಭಕುತಿ ಮುಕುತಿಸಂತರ ಪ್ರಿಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು