ಒಟ್ಟು 450 ಕಡೆಗಳಲ್ಲಿ , 70 ದಾಸರು , 419 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯೆಂಬ ಹೆಣ್ಣ ಶಕ್ತಿಯನ್ನು ನೋಡಿ ಮುಕ್ತಾಶ್ರಯ ಲಕ್ಷ್ಮೀಪತಿಯನ್ನು ಪಾಡಿ ಪ. ಸ್ವಾನಂದ ಪರಿಪೂರ್ಣ ಪರಮ ಮಂಗಲಮೂರ್ತಿ ಶ್ರೀನಿವಾಸಗೆ ಸರ್ವ ಸಂಗವ ಬಿಡಿಸಿ ತಾನಿರುವಲ್ಲಿಗೆ ಹಿಡಿದೆಳತರಿಸಿ ಸಾನುರಾಗದಿ ತನ್ನ ಸಂಗಡಲಿರಿಸಿ 1 ಅಣುರೇಣು ತೃಣಕಾಷ್ಠ ಪರಿಪೂರ್ಣ ಸರ್ವೇಶ ಗಣನೆಯಿಲ್ಲದ ದಿವ್ಯ ಗುಣಗಳುಳ್ಳವನು ಎಣಿಸಲು ಇವಳ ಜನರ ದೋಷಗಳನು ಕ್ಷಣ ಬಿಟ್ಟಗಲದೆ ಇವಳ ಕೂಡಿಹನು 2 ಭೂಧರ ಗಿರಿವರ ಶೋಭಿತ ಮೂರ್ತಿ ಮಾಧವ ಪರಿಹರಿಸುವನು ಭವಾರ್ತಿ ಪಾದ ಪಲ್ಲವಗಳ ನಂಬಿದವರಿಗರ್ಥಿ ಸಾಧಿಪ ಕರುಣಾಳು ಹರಿಯ ಶ್ರೀಕೀರ್ತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ ಪ ಕಾಮಕ್ರೋಧವ ಬಿಟ್ಟು ಮನಸಿನೊಳಗೆ ರಾಮ ಮೂರುತಿಯಿಟ್ಟು ಪ್ರೇಮ ತಿಳಿದಷ್ಟು ಆದಷ್ಟು ಕಾಮಿತಾರ್ಥವ ಕೊಟ್ಟು ಹೇಮಗರ್ಭಭವ ಸೋಮ ಸೂರ್ಯರಿಗೆಲ್ಲ 1 ನಿಯಮನ ಮಾಡುವ ಮಹಾ ದೈವವ ಬಿಟ್ಟು ಇರಸಲ್ಲ ಜಗದೊಳಜಾಮಿಳ ಬಲ್ಲ ನಂಬಿ ಕೆಟ್ಟವರಿಲ್ಲ ಧ್ರುವಬಲ ಇಂಬುಗೊಂಡರಲ್ಲ ತುಂಬಿದ ಸಭೆಯೊಳಾಂಬುಜಾಕ್ಷಿ ಅಂಬರ ದೃಷ್ಟಿ ಸುರಿಸಿದ2 ಒಂದೇ ಮನದಿ ಭಜಿಸೆ ಭವವೆಂಬೋ ಬಂಧನವ ಬಿಡಿಸುವ ಮುಂದೆ ಮುಕ್ತಿಯ ಹರಿಸಿ ಕೊಡುವನು ಚಂದದಿ ಅನುಕರಿಸಿ ಬಂಧ ಮೋಕ್ಷಪ್ರದ ಮಾನಿಧಿವಿಠಲನ ಇಂದಿಗೂ ಮುಂದಿಗೂ ಬಿಡದೆ ನೀನೆಂದೆಂದಿಗೂ 3
--------------
ಮಹಾನಿಥಿವಿಠಲ
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಧ್ರುವ ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ ಪೋಷಿಸುವ ಕೇಶವ ನಿಮ್ಮ ನಾಮ 1 ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ 2 ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ ಮಾಧವ ನಿಮ್ಮ ನಾಮ 3 ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4 ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5 ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ ಪದವೀವ ಮಧುಸೂದನ ನಿಮ್ಮ ನಾಮ 6 ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7 ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ 8 ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9 ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10 ಪಾತಕ ಹರಿಸಿ ಪದ್ಮನಾಭ ನಿಮ್ಮ ನಾಮ 11 ದುರಿತ ವಿಧ್ವಂಸನಿಯ ಮಾಡಿ ಧರೆಯೊಳು ದ್ಧರಿಸುವ ದಾಮೋದರ ನಿಮ್ಮ ನಾಮ 12 ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ ಅಖಿಳದೊಳು ಸಂಕುರುಷಣ ನಿಮ್ಮ ನಾಮ 13 ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14 ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15 ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನಿರುದ್ಧ ನಿಮ್ಮ ನಾಮ 16 ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17 ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18 ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19 ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ ಅಚ್ಯುತ ನಿಮ್ಮ ನಾಮ 20 ಜನನ ಮರಣವನಳಿಸಿ ತನುಮದೊಳು ಬೆರಿಸಿ ಜನುಮ ಹರಿಸುವ ಜನಾರ್ದನ ನಿಮ್ಮ ನಾಮ21 ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ22 ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23 ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24 ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭವ ಭಯಂಕರ ಪ ಶಂಕರ ತ್ವತ್ಪದ ಪಂಕಜದಲಿ ಮನ ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ 1 ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ 2 ವಿಷವು ಆವರಿಸಲು ತ್ರಿದಶರು ಬೇಡಲು ನಸುನಗುಗಲಿ ವಿಷ ಧರಿಸಿದ ಸದಾಶಿವ 3 ಶಿವಶಿವಾವಲ್ಲಭ ಭವಾಭವ ಪ್ರಭವನೆ ಭುವನ ಪವಿತ್ರನೆ ಭವಹರ ಸಲಹೆನ್ನ 4 ಅಂಬಿಕನಾಥನೆ ನಂಬಿದೆ ನಿನ್ನನೆ ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ 5 ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು 6 ದಿಗಂಬರ ದಯಾಕರ ಭಗೀರಥ ಹಿತಕರ ಅಘಹರ ಮೃಗಧರ ಹಗರಣಗೊಳಿಸಿದೆ 7 ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ 8 ಲಕುಮಿಕಾಂತನ ಪ್ರಿಯಸÀಖನೆ ಶ್ರೀಕಂಠನೆಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ 9
--------------
ಲಕ್ಷ್ಮೀನಾರಯಣರಾಯರು
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ
ಭವ ಸಾಗರಕೆ ಸ್ವಲ್ಪ ಪ ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ ಜಟ್ಟಿ ದಾಸರು ತಮಗೆ ಸುಲಭವಾದದು ಯನಗೆ ಇಟ್ಟುಪೋದರೆಯಿಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ 1 ಕೊಟ್ಟಿಗೆ ಮೇಲುಪ್ಪರಿಗೆಯಾಗುವದೆ ಹುಟ್ಟಾರಭ್ಯವಾಗಿ ಮಂದನಾಗಿದ್ದವಗೆ ಮಟ್ಟಯಿಲ್ಲದೆ ಬುದ್ಧಿ ಬರುವದೆಂತೊ ಧಿಟ್ಟಳಿ ಮಹಿಮ ಶಿರಿ ವಿಜಯವಿಠಲ ಮನ ಮುಟ್ಟಿ ಭಜಿಸಿದವ ದಾಸರ ಕರುಣವೆನ್ನಿ2
--------------
ವಿಜಯದಾಸ
ಭವಾಬ್ಧಿ ದಾಂಟಿಸಿದಿ ಸದ್ಗುರುನಾಥಾ ನೀನೇ ಸ್ವರೂಪಾವಬೋಧ ನೀಡಿದಿ ತಾತಾ ಜ್ಞಾನಾಸಿಯಿಂದ ಕಡಿದೈ ಸಂಸಾರಪಾಶವ ನಾನಾತ್ಮವಳಿದು ಕಳೆದೈ ಅಜ್ಞಾನದೋಷವಾ ನಾನೆನ್ನ ರೂಪ ತಿಳಿದೆ ಪ್ರಭೋ ಶ್ರೀಗುರುದೇವಾ ನಾನೇಂ ಪೇಳ್ವೆ ನಿನ್ನ ದಿವ್ಯ ಬೋಧಪ್ರಭಾವಾ ಈ ವಿಶ್ವವೆಲ್ಲ ಕನಸಿನಂತೆ ಎನಗೆ ತೊರ್ಪುದೈ ಆವಾಗ ಬೋಧವಾಯ್ತು ನಾನರಿತೆ ಸತ್ಯವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಭಾವಜಾರಿ ಪುತ್ರನೆ ಪ ಭವಾಬ್ಧಿ ಕರ್ಣಾಧಾರನೆ ಅ.ಪ ವರಗಳ ಕೊಡು ಕರುಣದಿ ವಂದಿಸುವೆ ನಿನ್ನನಾ ವೃಂದಾರಕೇಂದ್ರ ಪೂಜ್ಯನ 1 ಮೋದರಹಿತನಾದನು ನಿರ್ಮೂಲವಾಗಿ ಪೋದನು 2 ಸೂರ್ಯ ಭಾಸನೆ ಕೋಟಿ ಸೂರ್ಯಭಾಸನೆ ಸುಕುಮಾರ ಮಂದಹಾಸನೆ 3
--------------
ಗುರುರಾಮವಿಠಲ
ಭೂಮಿಯನೆ ಬಿಡಿಸೋ ಭೂದೇವಿ ರಮಣಾ ನಾ ಮಾಡುವೆ ನಿನಗೆ ಶರಣಾ ಪ. ಕರಿ ಕರಿಯಾ ಸಂಸಾರ ಥೆರಿಯಾ ಅ.ಪ. ಯನ್ನಿಂದ ದುಷ್ಟಕಾರ್ಯವನು ಮಾಡಿಸಿದಿಯೋ ನೀನು ಇಷ್ಟು ನಾನೀಗ ಉದಾಶೀನಳಾಗಿ ಇರುವೊದುಕಿಂತಾ ವೊಂದಷ್ಟು ಪ್ರಾಣವನು ಬಿಡಿಸೊ ಶ್ರೀಶಾ ಶ್ರೀನಿವಾಸಾ 1 ಸರ್ವಜ್ಞರ ಮತದೊಳಗೆನ್ನ ಪುಟ್ಟಿಸಿದೆಯೋ ಅಜ್ಞಾನ ಅಧಃಪತದಲಿ ಮಗ್ನಳಾಗಿರುವೆನು ಸುಜ್ಞಾನವನು ನಾನರಿಯೆನು ಭವಾಬ್ಧಿಯನು ದಾಟಿಸು ನೀನು 2 ದುರ್ಜನರ ಸಂಗವಾ ಕೊಡಬ್ಯಾಡ ಸಜ್ಜನರ ಸಂಗವ ಕೊಡು ಬ್ಯಾಗ ಮೂರ್ಜಗದೊಡೆಯನೇ ನೀಯನ್ನ ಪಾಲಿಸಯ್ಯ ಕಾಳಿಮರ್ಧನ ಕೃಷ್ಣರಾಯ 3
--------------
ಕಳಸದ ಸುಂದರಮ್ಮ
ಭೂಷಿತ ವನಮಾಲ | ಶ್ರೀಲೋಲ ಪ ಆಶ್ರಿತ ರಕ್ಷ ಕೃಪಾಲ ವಾಲ ಅ.ಪ. ಮಕರ ಕುಂಡಲಧರ ಪೀತಾಂಬರ | ಧೃತ ಅಕಳಂಕ ಸುಂದರ ಶ್ರೀಮನೋಹರ 1 ಜಲರುಹನಯನ ಜಲನಿಧಿಶಯನ ವನಜಭವಾದಿ ಸಂಸೇವಿತ ಚರಣ 2 ಅನಿಮಿಷ ಪೂಜಿತ ಮುನಿಜನ ವಿನುತ ವನರುಹ ಸಂಭವ ತಾತ ವಿಖ್ಯಾತ 3 ಕಾಮಿತಫಲದ ಸಾಮಜವರದ ಸಾಮನಿಗಮ ಸಂಗೀತ ವಿನೋದ 4 ಮಂದ ಸುಹಾಸ ಮೇಘ ಸಂಕಾಶ ಸುಂದರವದನ ಶ್ರೀ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು
ಮಂಗಳನಾಮಾ ನಮೋ ನಮೋ ಪ ಮಾಂಗಿರಿಧಾಮಾ ನಮೋ ನಮೋ ಅ.ಪ ಅಂಗಜಾತ ಪಿತ ಸುರಪತಿವಿನುತಾ ತುಂಗ ಕೃಪಾಂಬಕ ನಮೊ ನಮೋ 1 ರಂಗನಾಥ ನೀಲಾಂಗ ಮಹಾದ್ಭುತ ಸಿಂ[ಗಾನ]ನ ಹರೇ ನಮೋ ನಮೋ 2 ನಾಗಾಲಂಕೃತ ಸರೋಜ ಭೂಷಿತ ಕಮಲಭವಾನತ ನಮೋ ನಮೋ 3 ತಾರಕ ನಾಮ ನಮೋ ನಮೋ ರಘುರಾಮಾ ನಮೋ ನಮೋ 4 ಸುರಮುನಿ ನಾರದ ಗೌತಮ ಪ್ರೇಮಾ ಧರೆಗಭಿರಾವೂ ನಮೋ ನಮೋ 5 ಗಿರಿಜಾಧವನುತ ಗುಣ ಮಣಿಧಾಮಾ ರಾಕ್ಷಸ ಭೀಮಾ ನಮೋ ನಮೋ 6 ರಾಮಾ ರಘುರಾಮ ಕ್ಷೀರಾಬ್ಧಿಶಾಯಿ ಸೋಮಾ ಮಾಂಗಿರಿವರ ನಮೋ ನಮೋ7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದಿರ ಕರುಣಾಕರ ಪ ದುರಿತ ಸುರವರ ಮಾಮುದ್ಧರ ಅ.ಪ ಸುತೆಯಾ ಶುಭವಾರ್ತೆಯಾ ಬಿಡಿಸಯ್ಯ ಸಂಸೃತಿ ಭಯ 1 ಕಂಸಾರಿ ಪಡೆದಿಯೊ ಜವ ಶೌರಿ ನೋಳ್ಪ ಸುಖವ2 ಮಹಿಮೆಯ ತಿಳಿವ ಬಗೆಯ ಕೊಡು ಸುಮತಿಯ 3
--------------
ಕಾರ್ಪರ ನರಹರಿದಾಸರು
ಮಧ್ವಮತವ ಪೊಂದಿ ಭಜಿಸಿರೊ | ಉದ್ಧಾರವಾಗಲು ಮಧ್ವಮತವ ಪೊಂದಿ ಭಜಿಸಿರೊ ಪ ಮಧ್ವಮತವ ಪೊಂದಿ ಭಜಿಸಿ ಶುದ್ಧ ಜ್ಞಾನ ಭಕುತಿಗಳಿಸಿ ಗೆದ್ದು ಈ ಭವಾಬ್ಧಿಯನ್ನು ಪದ್ಮನಾಭನ ಪಾದವ ತೋರೆ ಅ.ಪ. ನಾನೆ ವಾಸುದೇವನೆಂದು ಹೀನ ಪೌಂಡ್ರಕನು ತಾನು ಏನು ಗತಿಯ ಕಂಡನೆಂದು ಜ್ಞಾನದಿಂದ ತಿಳಿದು ಮುನ್ನ 1 ಹರಿಯೆ ಸರ್ವೋತ್ತಮನು | ವಿಶ್ವ ವಿರುವುದಯ್ಯ ಸತ್ಯವಾಗಿ ತಾರತಮ್ಯ ಪಂಚಭೇದ ಸ್ಥಿರವೆಂದು ಸಾರಿಪೇಳ್ವ 2 ಭಕುತಿಯಿಂದ ಸೇವಿಪ ಜನಕೆ ಮುಕುತಿಯಲ್ಲಿ ನೈಜ ಸುಖವ ಲಕುಮಿಕಾಂತನು ಪಾಲಿಪನೆಂದು ಯುಕುತವಾಗಿ ಪ್ರಕಟಿಸಿದಂತ 3
--------------
ಲಕ್ಷ್ಮೀನಾರಯಣರಾಯರು
ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಪ ಅದ್ವೈತಮತಾರಣ್ಯ ದಹನ ಗುಣಸಾಂದ್ರ ಅ.ಪ. ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ 1 ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ2 ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು 3
--------------
ವಿಜಯದಾಸ
ಮನ ಬಲಿಯದನಕ ಅನುಕೂಲಾಗದನುಭವ ಧ್ರುವ ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ 1 ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ 2 ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ 3 ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ ಙÁ್ಞನಕಿದೇ ತಾ ಸನ್ಮತ ಮುನಿಜನರ ಸುಪಥ 4 ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು