ಒಟ್ಟು 251 ಕಡೆಗಳಲ್ಲಿ , 44 ದಾಸರು , 216 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-ನಾಮ ಸರ್ವಾಂತರ್ಯಾಮಿ ಪ.ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-ಸ್ತೋಮವಂದಿತ ಭೀಮಬಲ ಗುಣ-ಧಾಮವರನಿಸ್ಸೀಮ ಮಹಿಮನೆಅ.ಪ.ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-ಕಾಂತಗೆ ಪರಮಾಪ್ತನೆಚಿಂತಿಪ ಭಕ್ತರ ಚಿಂತಾಮಣಿ ನಿ-ಶ್ಚಿಂತನೊಂದೆ ಶಿರದಿ ಸಾಸವೆ-ಯಂತೆ ಲೋಕವನಾಂತುಕೊಂಡಿಹೆ 1ರಾಮನ ಸೇವೆಗಾಗಿ ಲಕ್ಷ್ಮಣನೆಂಬನಾಮವ ತಾಳ್ದಯೋಗಿಯಾಮಿನೀಚರರ ನಿರ್ನಾಮಗೈದ ವೀರಲ-ಲಾಮ ನಿರ್ಜಿತಕಾಮ ಸಜ್ಜನ-ಪ್ರೇಮಭೌಮನಿರಾಮಯನೆ ಜಯ2ಸಂಕರ್ಷಣ ಸುಗುಣಾ-ಭರಣ ನಿ-ಶ್ಯಂಕ ವೈರಿಭೀಷಣಶಂಕರಾದಿಸುರಸಂಕುಲನುತಪಾದ-ಪಂಕಜನೆ ತಾಟಂಕಗೋಪಾ-ಲಂಕೃತಾಂಗ ಶುಭಂಕರನೆ ಜಯ 3ಸಾರತತ್ತ್ವಬೋಧನೆ ಶರಣುಜನವಾರಿಧಿಚಂದ್ರಮನೆಘೋರಭವಾರ್ಣವತಾರಕನಮಲ ಪಾ-ದಾರವಿಂದದ ಸೌಂದರ್ಯ ನಿಜಭೂರಿನೇತ್ರಗಳಿಂದ ಕಾಣುವೆ4ಮಂಜುಳ ನಗರೇಶನೆ ಭಕ್ತಭಯ-ಭಂಜನಸುವಿಲಾಸನೆಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸರಸೀರುಹಾಂಬಕಿ ನಿನ್ನ ಪಾದ-ಸರಸಿಜಗಳ ಸ್ಮರಿಸುವೆ ಪೊರೆಯೆನ್ನ ಪ.ಕಾಳಾಹಿವೇಣಿ ಕಲಕೀರವಾಣಿಫಾಲಾಕ್ಷನ ರಾಣಿ ಪರಮಕಲ್ಯಾಣಿ 1ಕಣ್ಮಯಜಾತೆ ಹಿರಣ್ಮಯ ಖ್ಯಾತೆಕಣ್ಮುಖ ವರಕರಿ ಷಣ್ಮುಖಮಾತೆ 2ಕಣ್ಮನದಣಿಯೆ ಕೊಂಡಾಡುವೆ ಪಾಡುವೆಮನ್ಮನೋರಥದಾಯೆ ಚಿನ್ಮಯೆ ಚೆಲುವೆ 3ಕಂಬುಕಂಧರಿ ನಿನ್ನ ನಂಬಿದೆ ಶಂಕರಿಕುಂಭಪಯೋಧರಿ ಶಂಭುಮನೋಹರಿ 4ಸಿರಿಕಾತ್ಯಾಯಿನಿ ಗೌರಿ ಭವಾನಿಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಂಸಾರ ನಂಬುವೆಯ ಹೆಡ್ಡ ಈಸಂಸಾರವಿಹುದು ಮುಕ್ತಿಗೆ ಅಡ್ಡಪಮನೆಯು ಎಂಬುದುವಸ್ತಿ ಮಳಿಗೆಸತಿತನಯಹೋಹರು ಹಾದಿಗಳಿಗೆಎನಿತು ಮಮತೆ ಇದರೊಳಗೆ ಯಮಮನಮುಟ್ಟಿ ಹಿಡಿದಿಹ ಗುದಿಗೆ1ಸುಳ್ಳುಗಳಾಡೋದು ಎಷ್ಟುಮಹಾತಳ್ಳಿಕಾರಿಕೆ ಬೆಟ್ಟದಷ್ಟುಬೆಳ್ಳಿಟ್ಟು ಬಗುಳೋದು ಯಷ್ಟು ಯಮ ಕಕ್ಕಲಿಹಶೀಳುಯಂಬಾಕೊಲ್ಲೆಯಿವನ ಕುಟ್ಟುಕುಟ್ಟು2ಮಕ್ಕಳು ಮನೆಗಿಲ್ಲವೆಂಬ ಎನಗೆತಕ್ಕ ಹೆಂಡತಿ ಅಲ್ಲವೆಂಬರೊಕ್ಕವ ದಿನ ನೋಡಿಕೊಂಬ ಯಮಕಕ್ಕರಲಿರು ಶೀಳುಯೆಂಬ3ಗುರುಹಿರಿಯರ ನಿಂದಿಪನುಸತಿಮರುಕಕೆ ಹಲ್ಲು ತೆರವನುಹೊರಡಿಪ ತಂದೆ ತಾಯಿಯನುಯಮನರಕಕೆ ಹಾಕುಯೆಂಬುವನು4ನಾನಾರುಯೆಂಬುದು ಅಣಕೆ ಹಿಂದಕ್ಕೆನಿದ್ದೆಯೆಂಬುದು ಒಣಗಿಏನೋಮುದೆಂಬುದು ಜಣಗಿ ಚಿದಾನಂದ-ನೆಂಬುದು ಮುಣಗಿ5
--------------
ಚಿದಾನಂದ ಅವಧೂತರು
ಸಿಕ್ಕಿರೆನ್ನ ಕೈಗೀಗ ಇನ್ತಕ್ಕೊಳ್ಳಿ ಸೀರೆಯ ಬೇಗ | ಎಲೆ ಸಿಕ್ಕಿ ಪಬೀದಿಯೊಳಗೆ ನಿಮ್ಮ ಮೈಗೆ ಸರಿಸಿ ನಾ |ಹೋದರೆ ಮುಟ್ಟಿದನೆಂದು ||ಬೈದು ಯಶೋದೆಗೆ ಪೇಳಿ ಕೊಲ್ಲಿಸಿದ್ದ- |ಕ್ಕಾದುದು ನೋಡಿರಿ ಇಂದು1ಹುಡುಗರೊಡನೆ ನಾನಾಡುತ ಬಂದರೆ |ಬಡಿಯಲಿ ಹವಣಿಸಲಿಲ್ಲೇ ||ಕುಡಿಯಲು ಪಾಲ್ ಬಾಯ್ತೆರೆದು ಬೇಡಿದರೆ |ಕೊಡದಲೆ ನೂಕಿಸಲಿಲ್ಲೆ 2ಬಚ್ಚಲೊಳಗೆ ಮೈದೊಳೆವಲ್ಲಿಗೆ ಬಂದ |ನಚ್ಚುತನೆಂಬುವಿರಲ್ಲೇ ||ಬಚ್ಚದೆ ಬತ್ತಲೆ ಅಡವಿಯೊಳಿರುವದು |ಹೆಚ್ಚಿದು ಅಹ ಅಲ್ಲಲ್ಲೇ 3ಬೆಳ್ಳಕೆ ದಾರೋ ಕಾಣಿಸುತಿಹರು |ಇಲ್ಲಿಗೆ ಬಂದರೆ ಹೇಗೆ ||ಸುಳ್ಳಲ್ಲವೆ ನಿಮ್ಮಂಣರಾಣೆ |ಇನ್ನೆಲ್ಲಿಗೆ ಹೋಗುವಿರೀಗೆ 4ಒಂದೊಂದೇ ನಿಮ್ಮಾಟವು ಮನಸಿಗೆ |ತಂದರೆ ಕೋಪವು ಘನ್ನ ||ಇಂದಿರೇಶ ಪ್ರಾಣೇಶ ವಿಠಲ ಗತಿ- |ಯೆಂದಿರೆ ವಂದಿನಕನ್ನಾ5
--------------
ಪ್ರಾಣೇಶದಾಸರು
ಸ್ವಾಮಿಪರಾಕುಮಹಾಸ್ವಾಮಿ ಸಜ್ಜನಪ್ರೇಮಿಪ.ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯಪಾರಮೇಷ್ಠಿ ಪ್ರಮುಖಾಮರಪೂಜಿತಚಾರುಪದಾಬ್ಜದ್ವಯ ದನು-ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮದೂರನುಲಾಲಿಸುಚಿನ್ಮಯ ಜಯ1ದುಷ್ಟ ನಿಶಾಚರರಟ್ಟುಳಿಘನಕಂಗೆಟ್ಟುದು ಸುರಮುನಿಗಣ ಆಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮಕಷ್ಟವು ಪದಕರ್ಪಣ ಪರಾಯಣ 2ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲುಭ್ರಾಂತಿವಿಜ್ಞಾನವಿತಾನಧುರೀಣರ್ಸಂತಾಪಿಪರು ಮುರಾರಿ ನಮ್ಮಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವಶೌರಿಜಗ-ದಂತ ವಿಹಾರಿ ನಿರಂತ ಪರಂತಪ 3ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮಬಿನ್ನಪಲಾಲಿಸುತ್ರಿಭುವನವನ್ನುಸನ್ನುತಶುಭಾಂಗ ಸ-ರ್ವೋನ್ನತ ಮಹಿಮತರಂಗದುರಿತಾನ್ವಯತಿಮಿರಪತಂಗ ಸುಪ್ರಸನ್ನಸದೋದಿತವಿಹಂಗತುರಂಗ4ನೀಲೇಂದೀವರ ಶ್ಯಾಮಲ ಕೋಮಲಕಾಲನಿಯಾಮಕ ಪ್ರಾಣ ನಿನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣನತಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರಿನಾಮಕೀರ್ತನೆಅನುದಿನಮಾಳ್ಪಗೆ |ನರಕ ಭಯಗಳುಂಟೆ? ಪಕೇಸರಿಗಂಜದ ಮೃಗವುಂಟೆ?-ದಿ-|ನೇಶನಿಗಂಜದ ತನುವುಂಟೆ? ||ವಾಸದೇವ ವೈಕುಂಠ ಜಗನ್ಮಯ |ಕೇಶವ ಕೃಷ್ಣ ನೀನೆಂದುಚ್ಚರಿಸುವ1ಕುಲಿಶವನೆದುರಿಪ ಗಿರಿಯುಂಟೆ?-ಬಲು |ಪ್ರಳಯ ಬಂದಾಗ ಜೀವಿಪರುಂಟೆ?ಜಲಜನಾಭ ಗೋವಿಂದ ಜನಾರ್ಧನ |ಕಲುಷಹರಣಕರಿರಾಜ ರಕ್ಷಕನೆಂಬ 2ಗರುಡಗೆ ಅಂಜದ ಫಣಿಯುಂಟೆ? -ದ-|ಳ್ಳುರಿಯಲಿ ಬೇಯದ ತೃಣವುಂಟೆ? ||ನರಹರಿನಾರಾಯಣ ಕೃಷ್ಣ ಕೇಶವ |ಪುರಂದರವಿಠಲ ನೀನೆಂದುಚ್ಚರಿಸುವ3
--------------
ಪುರಂದರದಾಸರು