ಹರಿ ವಿಮುಖನಾದ ಮನುಜಶ್ವಪಚ ಶ್ರೇಷ್ಠನು |
ಹರಿವಲುಮೆ ಕಂಡ ನರನು ಪರಮ ಶಿಷ್ಠನು ಪ
ಹರಿಯ ಕಾಣದ ಕಣ್ಣು ನೌಲಗರಿಯಾ ಕಣ್ಣವು |
ಹರಿಯ ಕಥೆ ಕೇಳದ ಶ್ರವಣಾ ಬಧಿರ ಶ್ರವಣವು |
ಹರಿಯ ನಿರ್ಮಾಲ್ಯ ಕೊಳದ ಘ್ರಾಣ ಲೆತ್ತಿ ಘ್ರಾಣವು |
ಹರಿಗೆರಗದಂಗ ತ್ರಾಣ ಬೆಚ್ಚಿನ ತ್ರಾಣವು 1
ಹರಿಯನ್ನದ ಮುಖವು ರಾಜ ಬಿರದ ಮುಖಗಳು |
ಹರಿಸೇವೆ ಮಾಡದ ಕೈಯ್ಯಾ ಕೀಲಿ ಕೈಗಳು |
ಹರಿಯಾತ್ರೆ ಇಲ್ಲದ ಕಾಲು ಹೊರಸಿನ ಕಾಲ್ಗಳು |
ಹರಿ ವಿಷಯ ವಿಲ್ಲದ ವಿದ್ಯೆದೊಂಬನ ವಿದ್ಯಗಳು 2
ಹರಿಗರ್ಪಣೆ ಅಲ್ಲದಯಜ್ಞ ವೇಷಿಕ ಕರ್ಮವು |
ಬರುದೇ ಮೌನ ವೃತಗಳೆಲ್ಲ ಬಕನ ಧರ್ಮವು |
ಹರಿಭಕ್ತಿರಹಿತ ತಪದಿ ಬಿಡದು ಜನ್ಮವು |
ಗುರು ಮಹಿಪತಿಸ್ವಾಮಿ ಭೋಧಿಸಿದನು ಮರ್ಮವು 3