ಒಟ್ಟು 733 ಕಡೆಗಳಲ್ಲಿ , 58 ದಾಸರು , 510 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕುತವತ್ಸಲ ಶೀಲಾ-ಶೇಷಗಿರಿಯ ಲೋಲಾ ಪ ನೀ ಕರುಣಿಸೊ ಎನ್ನಾ-ಕುಲಸ್ವಾಮಿ ಘನ್ನಾಅ.ಪ ಮಂದಭಾಗ್ಯನು ನಾನು ವೃಂದಾರಕ ವಂದ್ಯ ತಂದೆ ಎನಗೆಂದೆಂದು ಅನಿಮಿತ್ತಬಂಧೂ ವಂದಿಪೆ ನಿನ್ನಯ ದ್ವಂದ್ವಪಾದದ ಧ್ಯಾನ ಅ- ದೊಂದನಾದರು ಇತ್ತು ಬಂಧವ ಪರಿಹರಿಸೊ ಹಿಂದೆ ನಿನ್ನಯ ನಾಮ ಒಂದೇ ಬಂಧಹರಿಸಿತು ಭಕುತವೃಂದಕೆ ಅಂದು ಅವರೇನೆಂದು ಕರೆದರೋ ಮಂದರೋದ್ಧರ ಬಂಧಮೋಚಕ1 ಓಲೈಪರೋ ಮುಕ್ತಜಾಲ ನಿನ್ನ ಕಾಲನಾಮಕ ಆಪತ್ಕಾಲಬಾಂಧವನೆಂದು ಕಾಲಿಗೆರಗುವೆ ಕೃಪಾಳು ನೀನಲ್ಲವೆ ಸೊಲ್ಲಲಾಲಿಸೊ ಲಕುಮಿನಲ್ಲ ನೀ ನಲ್ಲದಲೆ ಇನ್ನಿಲ್ಲವೆಂದಿಗೂ ಬಲ್ಲಿದರಿಗತಿಬಲ್ಲಿದನು ಆ- ವಲ್ಲಿ ನೆನೆದರೆ ಅಲ್ಲೇ ಪೊರೆವೆ 2 ಪುರಾಣಪುರುಷನೆ ಪರಮ ಕರುಣಿ ಎಂದು ಪುರಾಣದೊಳು ನೀನೆ ಪ್ರತಿಪಾದ್ಯನೊ ಕರಿ ಧ್ರುವ ಭೃಗು ಭೀಷ್ಮರ ಚರಿತೆಯ ನೋಡಲು ಹರಿ ನಿನ್ನ ಸರಿಯುಂಟೆ ದುರಿತಾಪಹಾರದಿ ಸ್ಮರಿಪರಘ ಪರಿಹರಿಪ ಶ್ರೀಪ ಸುರಪಹರಮುಖವಿಬುಧವಂದ್ಯ ದರಸುದರ್ಶನಧಾರಿ ಶ್ರೀ ವೇಂಕಟೇಶಉರುಗಾದ್ರಿವಾಸ ವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ಭಕುತಿಯಾಬೇಡುವೆ ಪ ಮುಕುತರೊಡೆಯ ನಿನ್ನಪದಪಂಕಜದೊಳುಅ.ಪ ಬಾರಿಬಾರಿಗೆ ನಿನ್ನ ನಾಮವ ನಾ| ಸ್ಮರಿಸಲು ದಾರಿಯ ಕಾಣೆನೊ ಮಾರಮಣನೆ ದಯತೋರದಿರಲು ಇ- ನ್ಯಾರಿಗೆ ಮೊರೆಯಿಡಲಯ್ಯ ಶ್ರೀಹರೇ 1 ಘನ್ನದುರಿತಗಳಿಂದ ಹಿಂದೆ ನಾ ಬನ್ನಪಟ್ಟು ಬಹು ಖಿನ್ನನಾಗಿಹೆ ಸನ್ನುತಾಂಗ ಶ್ರೀನಲ್ಲನೆ ನೀ ಇನ್ನುಮನ್ನಿಸದಿರೆ ಇನ್ನಾರಿಗೆ ಪೇಳಲೊ 2 ಮಂಕುಮತಿಯಾಗಿದ್ದರೆನ್ನ ಹೃ- ತ್ಪಂಕಜದೊಳಗೆ ಅಕಳಂಕನಾಗಿಹೆ ಶಂಕೆ ಏಕೋ ನಿನ್ನ ಕಿಂಕರನಲ್ಲವೇ ಸಂಕಟ ಹರಿಸೋ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಭಕ್ತವತ್ಸಲನೀತ ಶಕ್ತ ಸದ್ಗುರುನಾಥ ಸಕಲ ಸಮ್ಮತ ಏಕೋದೇವನೀತ ಧ್ರುವ ಬಲಿಯಬಾಗಿಲ ಕಾಯ್ದು ಒಲಿದ ಫಲುಗುಣಗೀತ ತಲೆಗಾಯ್ದು ಪ್ರಹ್ಲಾದನ ಪ್ರಾಣಪಡದಾತ ಸಲಹಿ ಪಾಂಡವರ ರಕ್ಷಿಸಿದಾತ 1 ದಿಟ್ಟ ಧ್ರುವಗೊಲಿದು ನಿಜಪಟ್ಟಗಟ್ಟಿದಾತ ನಷ್ಟಾಜಮಿಳನ ನಿಷ್ಠೆಮಾಡಿದಾತ ಕೊಟ್ಟು ವಿಭೀಷಣಗೆ ಇಟ್ಟ ಲಂಕೆಯ ಲೀತ ಶಿಷ್ಟಜನಪಾಲಕ ಸೃಷ್ಟೇಶ 2 ಶಿಲೆಗೆ ಉದ್ಧರಗತಿಯ ಇಳಿಯೊಳಗೆ ಇತ್ತಾತ ಮೂಲೋಕದೊಡೆಯ ಶ್ರೀಹರಿಯು ಈತ ಪಾಲಿಸುವ ಮಹಿಪತಿಯ ಲೋಲಲಕ್ಷ್ಮೀಕಾಂತ ಕುಲಕೋಟಿ ಬಂಧು ತಾ ಬಳಗವೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಭವ - ಸಂಕಟ ಕಳೆ - ವೆಂಕಟೇಶ ||ಅ|| ಪಂಕ ಸಿರಿ ವೆಂಕಟೇಶ ಅ.ಪ. ಮಹ ವೇದಗಳನು ಕದ್ದ ದೈತ್ಯನ ಕೊಂದೆ ವೆಂಕಟೇಶಮಹ ಮೀನನಾಗಿ ನೀ ಸತ್ಯವ್ರತಗೆ ಒಲಿದೆ ವೆಂಕಟೇಶ 1 ಕೂರ್ಮ ನೀನಾಗುತ - ವೆಂಕಟೇಶಮಂದರಗಿರಿ ಪೊತ್ತು ಭಕ್ತರ ಸಲಹಿದೆ ವೆಂಕಟೇಶ 2 ಮತ್ತರಾದ ಮಧುಕೈಟಭರ - ಕೊಂದೆ ವೆಂಕಟೇಶಮತ್ತೆ ಭೂ ಚಾಪೆಯ ಮಾಡಿದವನ ಕೊಂದೆ ವೆಂಕಟೇಶ 3 ಕಶಿಪು ಬಾಧೆ ಕಳೆಯಲು - ತರಳಗೆ ವೆಂಕಟೇಶಕ್ಷಣದಿ ಕಂಭದಿ ಬಂದು ದುರುಳನ ಸವರಿದೆ ವೆಂಕಟೇಶ 4 ಮೂರು ಪಾದವ ಬೇಡಿ - ಬಲಿಯ ಭಂಜಿಸಿದೆ ವೆಂಕಟೇಶಪಾರಗಾಣದ ಮಹಿಮೆ ಬಾಗಿಲ ಕಾಯ್ದೆ ವೆಂಕಟೇಶ 5 ಹಂಚಿ ಮೆರೆದೆ ವೆಂಕಟೇಶ 6 ಮಡದಿಯ ಕದ್ದೊಯ್ದ ದೈತ್ಯನನ್ನಳಿದೆ ವೆಂಕಟೇಶಧೃಢ ಭಕುತಗೆ ಲಂಕೆಯ ಪಟ್ಟಣವಿತ್ತೆ ವೆಂಕಟೇಶ 7 ಗೋಪಿ ಜನರ ಪ್ರಿಯ | ಸುಪರ್ಣವರವಾಹ ವೆಂಕಟೇಶಪಾಪಿ ಕೌರವ ಕುಲಹರ ಧರ್ಮ ಸ್ಥಾಪಿ ವೆಂಕಟೇಶ 8 ಬೆತ್ತಲೆ ನೀ ನಿಂತು ಕುತ್ಸಿತ ಅಸುರರಸದೆದ್ಯೋ ವೆಂಕಟೇಶಕುತ್ಸಿತ ಅಸುರರ ಮೋಹಿಸುತಳಿದೆಯೊ ವೆಂಕಟೇಶ 9 ತುರಗನೇರಿ ಕಲ್ಕಿ ಎನಿಸಿಕೊಂಡೆಯೊ ವೆಂಕಟೇಶಉರಗಾದ್ರಿ ವಾಸ ಗುರು ಗೋವಿಂದ ವಿಠಲ ವೆಂಕಟೇಶ 10
--------------
ಗುರುಗೋವಿಂದವಿಠಲರು
ಭವ ಕೃತ ಪಾಪ ನಿಷ್ಕøತಿ ನಿನ್ನಚರಣಾಂಬುವೆಂದರುಹುತಲಿದೆ ಶ್ರುತಿತತಿ 1ಮೊದಲು ಪಾತ್ರಾಂತರದಲಿ ಗ್ರಹಿಸಿಯೆ ಯಂತ್ರವಿಧಿುಂದ ಬರೆದು ಬೀಜಾಕ್ಷರಂಗಳನುಹದಿನಾರೆಂಟಾವರ್ತಿ ಜಪಿಸಿ ಮೂಲವನೆತ್ತಿವದನದಿಂ ಬಿಂದು ಸೂಸದವೋಲ್ಸೇವಿಪ ಹಾಗೆ 2ಮೂರಾವರ್ತಿಯೊಳಿಂತು ಸೇವಿಸಿ, ಶಿರದಲ್ಲಿಸೇರಿಸಿ, ಬೇರೆ ಹಸ್ತವ ಮಾರ್ಜಿಸಿಸಾರಿಸಿ ತಡವಿ ತನುವ ಧನ್ಯನಹೆನು ಸಂಸಾರಸಾಗುವ ದಾಂಟಿಸುವರೆ ಜಗದೀಶ 3ಚರಣದಂಗುಟದಿಂದ ಚಿಮ್ಮಿದ ತುಲಸಿಯುಬೆರೆದ ಪುಷ್ಪವು ಬಂತೆನ್ನೊರೆಗೆ ಸರ್ವೇಶಹರುಷದಿಂ ನಿನ್ನಡಿ ಸರಸಿಜಯುಗಳವಮರೆಯೊಕ್ಕ ದೀನನೊಳ್ಕರುಣ ಬಂದುದೆ ಕೃಷ್ಣಾ 4ತಿರುಪತಿನೆಲೆವಾಸ ವರದವೆಂಕಟೇಶಗುರು ವಾಸುದೇವಾರ್ಯನಾಗಿಯೆ ನೀನೆಅರುಹಿದ ಮತ ಪಿಡಿದಿರುವೆನು ತ್ವನ್ನಾಮಸ್ಮರಣೆ ಮಾತ್ರವನಿತ್ತು ಪೊರೆಯಬೇಕೆನ್ನನು 5ಓಂ ಜಿಷ್ಣವೇ ನಮಃ
--------------
ತಿಮ್ಮಪ್ಪದಾಸರು
ಭಾರತೀ ದೇವಿ ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ ಪ ಶ್ರದ್ಧಾ ಮೂರುತಿ ತಾಯೆ ಕಾಯೆ ಪ್ರದ್ಯುಮ್ನ ಕುವರಿಯೆ ಶ್ರದ್ಧಾನಾಮಕಳೆ ನೀ ಶ್ರದ್ಧಾಭಕುತಿ ಕೊಟ್ಟು ಶುದ್ಧ ಮುಗ್ಧನೆನ್ನ ಉದ್ಧರಿಸುವುದೀಗಾ 1 ಚಿತ್ತ ವೃತ್ತಿಯ ಬಲ್ಲೆ ಎನಗೆ ನೀ ಉತ್ತಮಗತಿ ಈಯೆ ಚಿತ್ತಶುದ್ದ ಬುದ್ಧಿಯಿತ್ತು ನೀ ಪಾಲಿಸಿ ಚಿತ್ತಜನಯ್ಯನಾ ಹತ್ತಿರಕೊಯ್ಯೆ 2 ಪಂಕಜ ಭವನ ರಾಣಿ ಗುಣಮಣಿ ಶಂಕರನಾ ಜನನಿ ಕಿಂಕರನೆಂದು ಮನ ಶಂಕೆಯ ಹರಿಸಿ ಶ್ರೀ ವೆಂಕಟೇಶನ ಪಾದಪಂಕಜ ತೋರಿಸೆ3
--------------
ಉರಗಾದ್ರಿವಾಸವಿಠಲದಾಸರು
ಭಾರತೀಪತಿ ಮೂರುತಿ ಮಾರುತಿ ಕಾಯೊ ಪ ಘೋರದುರಿತೌಘ ಪರಿಹಾರ ಸುಸಮೀರ ಧೀರಾ ಅ.ಪ ಸತ್ತ್ವ್ವ ಸತ್ತ್ವಾತ್ಮಕ ತತ್ತ್ವದೇವತೆಗಳ ನಿತ್ಯ ನಿಯಾಮಕ ಗುರು 1 ಪಟುತರಾಂಗನೆ ಧೂರ್ಜಟಿಯ ಸೇವೆಗೆ ಮಚ್ಚಿ ಪರಮೇಷ್ಠಿ ಪದ 2 ನಂಜಯನಾಗ್ರಜನೆ ಮೂರ್ಜಗ ಗುರು 3 ಶ್ರೇಷ್ಠಮೂರುತಿ ಜಗಚ್ಚೇಷ್ಟಾಪ್ರದಾಯಕ ಪ್ರವಿಷ್ಠ ಸರ್ವಸೃಷ್ಟಿಕಾರ್ಯ ತೊಟ್ಟಿರುವೆ4 ಮುಖ್ಯವಾಚ್ಯನು ದೇವ ಅಮುಖ್ಯವಾಚ್ಯನು ನೀನು ಮುಖ್ಯ ಜೀವಕೋಟಿಯೊಳು ಪ್ರಮುಖನಯ್ಯ ಮುಖ್ಯಪ್ರಾಣ5 ಶ್ವಾಸನಿಯಾಮಕ ನಿಶೆಯೊಳು ನಿದ್ರೆಯೊಳು ಅಸುರಾದಿ ಜೀವರೊಳು ಶ್ವಾಸಭೂರ್ಭುವನೆನಿಸುವೆ 6 ಸರ್ವನಿಯಾಮಕ ಶರ್ವರೊಂದಿತಪಾದ ಸರ್ವೋತ್ತಮ ಶ್ರೀ ವೇಂಕಟೇಶನೋರ್ವನೆ ಮುಖ್ಯನೆಂದೆ7
--------------
ಉರಗಾದ್ರಿವಾಸವಿಠಲದಾಸರು
ಭಾರ್ಗವಿ ಪ ಮಹಾಲಕುಮಿ ಶ್ರೀಪತಿಗೆ ಸಮಾಸಮಳೆನಿಸಿರಲು ಅ.ಪ ಮಡುವ ಸೇರಿದ ಒಡೆಯ ಬಿಡದೆ ಮಂದರಗಿರಿಯ ಪೊಡವಿಬಗೆದು ಒಡೆದು ಕಡುಕ್ರೂರನಾದ ಬಡವನಂತೆ ಬೇಡಿ ಕೊಡಲಿ ಪಿಡಿದಿಹ ಕೆಡುಕ ಮಡದಿಯಾ ಕಳಕೊಂಡು ಕಡಹನೇರಿದ ಕ್ರಿಯಕೆ 1 ಮುಗುಧರನ ಮಾಡಿದ ಶುದ್ಧಸ್ತ್ರೀಯರನೆಲ್ಲಾ ಖಗಗಮನ ತಾ ತುರುಗವನು ಹತ್ತಿದಾಯೋಗ ಭೃಗುಮುನಿಯ ಅಪಚಯಕೆ ಕರವೀರಪುರದಲಿರೆ ನಾಗಗಿರಿಗಿಳಿದ ಪತಿಯ ಪರಿಣಯವನೆಸಗಿದೆ2 ನಾಗರಾಜನ ಕೂಗ ಕೇಳಿದಾಗ್ಹೇಳದಲೆ ಬೇಗ ಸಾಗಿಬಂದಾ ಸರಸಿನಾ ಬಳಿಗೇ ಅಂಗಜನ ವೈರಿಯ ಇಂಗಿತವನರಿತು ಹೆಂಗಳಾರೂಪದಲಿ ಮೋಹಿಸಿದ ಮಾಯಕ್ಕೆ 3 ಕ್ಷಮೆಯಸಾಗರಳೆ ನಿನ್ನ ಅನುಪಮ ಸನ್ಮಹಿಮೆ ಅಮಿತವಾಗಿಹುದು ಜಗಕಾರ್ಯದಿ ಅಮಮ ನೀನಿರಲು ನಾಭಿಕಮಲದಲಿ ಬ್ರಹ್ಮನ ಜ- ನುಮ ತೋರಿದ ಹರಿಯ ಸ್ವರಮಣನ ಕಾರ್ಯಕೆ4 ಗುಣತ್ರಯಂಗಳಭಿಮಾನಿ ಶ್ರೀ ವೇಂಕಟೇಶನರಾಣಿ ಎಣೆಯಂಟೆ ಹರಿಗುಣವನೆಣಿಸುವ ಪ್ರವೀಣೆ ಘನ್ನ ಉರಗಾದ್ರಿವಾಸವಿಠಲನ ಕರುಣ ಪೂರ್ಣಪಾತ್ರಳೆ ಹರಿಯ ವಕ್ಷಸ್ಥಳನಿವಾಸಿನಿಯೇ5
--------------
ಉರಗಾದ್ರಿವಾಸವಿಠಲದಾಸರು
ಭಾರ್ಗವಿ ದೇವಿಭೃಗುವಾರ ಬರಲಿಬೇಕು ಪ ಭೃಗುವಾರ ಬರಲಿಬೇಕ್ಹಗಲು ಪಾಯಸವುಂಡುನಗುತ ರಾತ್ರಿಲಿ ತಾಂಬೂಲಗಳ ಮೆಲ್ಲುವುದಕ್ಕೆ ಅ.ಪ. ನೂಪುರ ಮುಖ ಭೂಷನೀ ಪದ ಕುಣಿಸುತ್ತಶ್ರೀಪತಿ ಸಹ ಸುಖಾಲಾಪಗಳಾಡುತ 1 ಕಂಕಣ ಮುಖರತ್ನಾಲಂಕಾರಗಳನಿಟ್ಟುಕಿಂಕರರಿಗೆ ಮುಖಾಲಂಕಾರ ತೋರುತ2 ಶಂಕರ ಮುಖ್ಯ ಸುರಪುಂಖ ಮಧ್ಯದಿ ಶ್ರೀಮ-ದ್ವೇಂಕಟೇಶನ ದಿವ್ಯ ಟೊಂಕಾದೊಳಗೆ ಕೂತು 3 ಪಕ್ಷಿವಾಹನ ದಿವ್ಯ ವಕ್ಷಸ್ಥಳಾಶ್ರಿತೆಲಕ್ಷ್ಮೀಲೀಲಾಮೃತ ಲಕ್ಷ್ಮೀ ಕೇಳುವುದಕ್ಕೆ 4 ಇಂದಿರೇಶನ ಮೃದು ಸುಂದರೋತ್ಸಂಗದಿಪೊಂದಿ ಭಕ್ತರ ಪೂಜಾನಂದ ಭುಂಜಿಪುದಕ್ಕೆ 5
--------------
ಇಂದಿರೇಶರು
ಭೂಷಣಕೆ ಭೂಷಣ ಇದು ಭೂಷಣಶೇಷಗಿರಿವಾಸ ಶ್ರೀವರ ವೆಂಕಟೇಶ ಪ ನಾಲಿಗೆಗೆ ಭೂಷಣ ನಾರಾಯಣ ನಾಮಕಾಲಿಗೆ ಭೂಷಣ ಹರಿಯಾತ್ರೆಯುಆಲಯಕೆ ಭೂಷಣ ತುಲಸಿ ವೃಂದಾವನ ವಿಶಾಲ ಕರ್ಣಕೆ ಭೂಷಣ ವಿಷ್ಣು ಕಥೆಯು 1 ದಾನವೇ ಭೂಷಣ ಇರುವ ಹಸ್ತಂಗಳಿಗೆಮಾನವೇ ಭೂಷಣ ಮಾನವರಿಗೆಜ್ಞಾನವೇ ಭೂಷಣ ಮುನಿಯೋಗಿವರರಿಗೆಮಾನಿನಿಗೆ ಭೂಷಣ ಪತಿಭಕ್ತಿಯು 2 ಮಣಿ ಕೊರಳಿಗೆ ಭೂಷಣರಂಗವಿಠಲ ನಿಮ್ಮ ನಾಮ ಅತಿ ಭೂಷಣ 3
--------------
ಶ್ರೀಪಾದರಾಜರು
ಮಂಗಳ ಮಂಗಳಾರತಿ| ಬೆಳಗುವೆನೀಗ| ಶೃಂಗರಿಸುತ ಸುಮ| ಸಂದೋಹದಿ ಪ ಮಂಗಲವನು ಹಾಡಿ| ಇಂಗಿತವನು ಬೇಡಿ| ಮಂಗಳಾತ್ಮಕಿ ದೇವಿಯ ಪಾದಕೆ ಅ.ಪ ಅಜಭವ ಸುರನರ| ತ್ರಿಜಗಪೂಜಿತ ಪಾದ| ಭಜಿಸುತ ಮನದೊಳು| ಮೊದಲೊಂದಿಸಿ|| ಪಾದ ಪೂಜೆಯ ಮಾಡಿ| ನಿಜಭಕ್ತಿಯಿಂದಲಿ| ಜಯ ಜಯವೆನ್ನುತ 1 ಮಂದರಧರ ನಿನ್ನ| ದ್ವಂದ್ವಪಾದಗಳನ್ನ| ಚಂದದಿ ಪೂಜಿಸಿ| ಭಜಿಸುತಲಿ|| ಕಂದರ್ಪನಯ್ಯನೆ| ಸಿಂಧುಶಯನನೆ| ಇಂದಿರೇಶನಿಗಾ| ನಂದದಿಂದಲಿ 2 ಮತ್ಸ್ಯವ ತಾರಿಗೆ| ಕೂರ್ಮಗೆ ವರಾಹಗೆ| ನರಹರಿ ರೂಪಗೆ| ವಾಮನಗೆ|| ಯಾದವಕುಲದೀಪ| ಮುರಲಿ ಕೃಷ್ಣಗೆ3 ಕಲ್ಕಿಸ್ವರೂಪದಿ| ಮೆರೆವವಗೆ|| ದಶವಿಧರೂಪದಿ| ಧರೆಯನು ಪೊರೆದ| ವಿಜಯವಿಠಲ ನಮ್ಮ| ಗುರುವೆಂಕಟೇಶಗೆ 4
--------------
ವೆಂಕಟ್‍ರಾವ್
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ಮಂಗಳಂ ವೆಂಕಟೇಶಗೆ ಅಲಮೇಲ್ ಮಂಗಾ ಮನೋಹರಗೆ ಪ ಭವ ಶುಭ ಅ.ಪ ಆಕಾಶರಾಯನಳಿಯಗೆ | ಪಿ ಲೋಕವಿಶೃತಗೆ ಶ್ರೀ ಭೂರಮಣಗೆ 1 ತೊಂಡಮಾನ ನೃಪ ಪೂಜಿತಗೆ | ಬ್ರ ಕುಂಡಲಿ ಶಯನಗೆ ಗೋಪಾಲಗೆ ಮೃ ದ್ಭಾಂಡವ ರಚಿಸುವಗೆ ಭೀಮಗೊಲಿದವಗೆ 2 ವರ ಚಕ್ರಗಧಾಧರ ಹಸ್ತಗೆ 3
--------------
ಗುರುರಾಮವಿಠಲ