ಒಟ್ಟು 1173 ಕಡೆಗಳಲ್ಲಿ , 100 ದಾಸರು , 986 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪತಿ ಸ್ತುತಿ ಭಜಿಸುವೆ ತವ ಚರಣ ಗಜಾನನ ಪ ಸಿಂಧುವ ಮಥಿಸುವಾಗ ಸುರಾಸುರರ್ ಮಂದರ ಗಿರಿಯ ಬಲ್ಪಿಂದ ಮಳ್ಗಿಸುತವ - ರಿಂದ ಮೊದಲ ಪೂಜೆವೊಂದಿದ ವಿಘ್ನೇಶ 1 ಭೂಷಣ ರವಿಶತಭಾಸ ಲಂಬೋದರ 2 ಧರಿಸುತಲನುದಿನ ಮೆರೆವನೆ ಪಾವಂಜಿ ಪುರದಧೀಶನ ದಾಸರ್ಗುರು ಹಿತಗೈವನೆ 3
--------------
ಬೆಳ್ಳೆ ದಾಸಪ್ಪಯ್ಯ
ಗಣಪಾ ನೀ ಪಾಲಿಸೊ ಗಜಮುಖನೆ ವೋ ಪ ತ್ರಿಣಿಯಸತಿ ಗಿರಿಜಾಸುತನೆ ಕೇಳ್ ಮನುಮುನಿ ಸನಕಾದಿ ವಂದಿತ ಅಣಿದು ನೀ ರಕ್ಷಿಸಲು ನಿನಗಿ ನ್ನೆಣೆಯುಗಾಣೆನು ಸರ್ವಸಿದ್ಧಿ ವೋ 1 ವೇದಶಾಸ್ತ್ರ ಪುರಾಣ ವಿದ್ವ ಕ್ಕಾದಿ ರೂಪನೆ ದಿವ್ಯಪ್ರಣನಾ ನಾದರೂಪನೆ ಸರ್ವಮಂಗಳ ಸಾಧು ಶಿಖರನೆ ಸರ್ವಸಿದ್ಧಿ ವೋ 2 ಏಕದಂತನೆ ಷಣ್ಮುಖಾಗ್ರಜ ವಾಕ್ಕು ಶುದ್ಧಿಯೊಳಾಡಿಸೆನ್ನನೂ ಬೇಕು ನಿನ್ನಯ ಕರುಣಯಿತರವು 3 ವಾಸವಾರ್ಚಿತ ಶ್ರೀಗುರು ಹಿರಿ ದಾಸ ತುಲಸೀರಾಮ ನಿನ್ನಯ ದೋಷ ಅಂತಕನಾಮ ಯತಿಗಣ ಪ್ರಾಸು ಹೊಂದಿಸೊ ಯೀಶಪುತ್ರನೇ 4
--------------
ಚನ್ನಪಟ್ಟಣದ ಅಹೋಬಲದಾಸರು
ಗಣೇಶ ವಂದಿಸುವೆ ಕರದ್ವಂದ್ವ ಜೋಡಿಸಿ ಪ ವಂದಿಸುವೆ ಒಂದೆ ಮನದಲಿ ನಂದಿವಾಹನ ಕಂದ ಗಣಪಗೆಬಂದ ಭಯಗಳ ಹಿಂದೆ ಮಾಡುತ ಸಿಂಧುಶಯನನ ತೋರಿಸೆಂದು ಅ.ಪ. ಅನುದಿನ ಪಾಶ ಅಂಕುಶದಾರನೇ 1 ವಾಕು ಲಾಲಿಸಬೇಕೊ ಪ್ರಭುವೇಕಾಕುಜನ ಸಹವಾಸದಿಂದಲಿ ನೂಕಿಸೆನ್ನನು ಏಕದಂತನೆಏಕಭಾವದಿ ಭಜಿಪ ಭಕುತರೋಳ್ಹಾತನೆನ್ನಗಜವದನನೆ ಬಾ ತೈಜ ವಿಶ್ವಭಾಜಕನೆ ತೋರೋ ಪಾದಭುಜ ಚತುಷ್ಟನೆ ತ್ರಿಜಗವಂದ್ಯನೆ ಭಜಿಪ ಭಕುತರ ಅಘವ ಕಳೆವನೆನಿಜೆ ಸುಜನರ ...ಭುಜಗ ಭೂಷಣ ಕಾಮನನುಜನೆ 2 ವಾರಿಬಂಧನ ಪೂರ್ವದಿ ಶ್ರೀ ರಾಮಚಂದ್ರನು ಪ್ರೀತಿಲಿ ಪೂಜಿಸಿದದುರುಳ ರಾವಣ ಮೆರೆದು ಕೆಟ್ಟನು ಧರೆಯಗೆದ್ದನುಜರಿದು ಚಂದ್ರನುವಿದ್ಯ ಪ್ರದಾಯಕನೆ ಮನ ತಿದ್ದು ಬೇಗನೆ ಬಿದ್ದು ಬೇಡುವೆ ಸಾಧುವಂದ್ಯನೆಮಧ್ವ ಮತದೊಳು ಶ್ರದ್ಧೆ ಪುಟ್ಟಿಸೊ ಮಧ್ವವಲ್ಲಭತಂದೆ ವರದ ವಿಠಲ ಪ್ರಿಯ ಸಿದ್ಧಿದಾಯಕ
--------------
ಸಿರಿಗುರುತಂದೆವರದವಿಠಲರು
ಗಣೇಶ ಹಿತಮತಿಯ ಪಾಲಿಸೊ ಪ ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ ಭಜನೆ ಮಾಡುವಂಥ ನಿಜವ ಪಾಲಿಸಿ 1 ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2 ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
--------------
ಬಾಗೇಪಲ್ಲಿ ಶೇಷದಾಸರು
ಗಣೇಶ ಪ್ರಾರ್ಥನೆ ಗಜವದನಾ ಗಣೇಶಾ ಪ ನೀ ಮೊದಲು ಸಕಲ ವಿಘ್ನಗಳ ಕಳಿಯೊ ಅ.ಪ ಗಿರಿಜಾಮಲ ಸಂಭೂತ ನಮೋ ನಮೋ ಹರಿಬ್ರಹ್ಮ ಶಿವರಿಗತಿ ಪ್ರಿಯನೆ 1 ಕಂಬುಕಂಠ ಶುಕ್ಲಾಂಬರಧರ 2 ಸ್ಮರಿಸುವ ಸುಜನರಿಗೆ ಅಭಯವ ಕೊಡು ನೀ 3
--------------
ಗುರುರಾಮವಿಠಲ
ಗಣೇಶ ಪ್ರಾರ್ಥನೆ ನಿರ್ವಿಘ್ನ ನೀಡೋ ನಭದೀಶಾ ಪ ಗಜಮುಖ ಅಗಜ ಅಂಗಜ ಮೃದ್ಭವ ಗಜವರದನ ನಿಜ ದಾಸ 1 ನಾಕಪವಂದ್ಯ ಪಿನಾಕಿಧರನುತ ಏಕದಂತ ದ್ರಿತ ಪಾಶಾ 2 ಶಿರಿಗೋವಿಂದ ವಿಠಲನ ದಾಸರಿಗೆ ನಿಖಿಳ ಭಯ ನಾಶ 3
--------------
ಅಸ್ಕಿಹಾಳ ಗೋವಿಂದ
ಗಣೇಶ ಸ್ತುತಿ ಗಜವದನ ಪಾವನ ವಿಘ್ನನಾಶನ ಪ. ವರ ಪಾಶಾಂಕುಶಧರ ಪರಮದಯಾಳೊಕರುಣಾಪೂರಿತ ಗೌರೀವರಕುಮಾರನೆ 1 ಸುಂದರವದನಾರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ 2 ಗೋಪಾಲವಿಠಲನ ಅಪಾರ ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ 3
--------------
ಗೋಪಾಲದಾಸರು
ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ಗಿರಿಜಾಕಾಂತನೆ ನಿನ್ನ ಶುಭ ಚರಣವ ನಂಬಿದೆ ಮುನ್ನ ಕರವಿಡಿದೀಗಲೆ ಕಾಯಬೇಕೆನ್ನ ಪರಿಪರಿ ವರಗಳ ಕೊಡುವ ಪ್ರಸನ್ನ ಪ ಗಜ ಚರ್ಮಾಂಬರನೆ ನಿತ್ಯ ಸುಜನರ ಪಾಲಿಸುತಿಹನೆ ಅಮಿತ ಮಹಿಮನೆ ತ್ರಿಜಗೋದ್ಧಾರನೆ ಭುಜಗಭೂಷಿತನೆ 1 ನಂದಿಯನೇರಿಯೆ ಬಂದು ಎನ್ನ ಮಂದಿರದೊಳ್ ನಿಂದು ಕುಂದದಿರುವ ಆನಂದವ ಕೊಡು ಎಂದು ವಂದಿಸುವೆನು ನಾ ನಿನಗೆ ಕೃಪಾಸಿಂಧು 2ವರ ಚಿಕ್ಕನಾಗರದಿ ನಿಂದು ಗರಪುರವಾಸನೆ ದಯದಿವರದ ಶ್ರೀ ವೆಂಕಟರಮಣನ ರೂಪದಿಪೊರೆವೆ ನಾರಾಯಣದಾಸನ ಮುದದಿ 3
--------------
ನಾರಾಯಣದಾಸರು
ಗುರು ಸದ್ಗುರು ಆರೆಂದು ನೋಡೊ ಗುರುತಿಟ್ಟು ಮನವೆ ಸೇವೆ ಮಾಡೊ ಧ್ರುವ ಗುರುಗಳುಂಟು ಮನೆಮನೆ ಬಹಳ ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ ದೋರುತಿಹರು ಮೋಹಿಸುವ ವಾಗ್ಜಾಲ ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ 1 ಎಲ್ಲ ಬಲ್ಲತನದಭಿಮಾನ ಅಲ್ಲೆ ಕೊಂಬುದೇನುಪದೇಶ ಜ್ಞಾನ ಸೊಲ್ಲಿಲ್ಹೇಳಿ ಕೇಳಿದರಾಹುದೇನ ಸಲ್ಲದರಲಿಹುದೆನೊಡೆತನ 2 ಸರ್ವಸಮ್ಮ ತಾಗುವ ಸುಜ್ಞಾನ ಗರ್ವಾಭಿಮಾನಗೆಲ್ಲಿಹುದು ಖೂನ ಪೂರ್ವಾಪರ ಸದ್ಗುರು ನಿಜಧ್ಯಾನ ದೋರ್ವದು ತಾಂ ಪಡೆದವಗ ಪೂರ್ಣ3 ವಿರಳಾಗತ ಎಲ್ಲಿಗೊಬ್ಬ ಮಹಿಮ ಶರಣ ಹೊಕ್ಕವಗೆ ಪೂಜ್ಯಪರಮ ಕರತಳಾಮಲಕವಾಗುವ ನಿಜವರ್ಮ ಗುರುಮಾರ್ಗದಾಗೆನಬೇಕು ನೇಮ 4 ಗುರುವರ ಶಿರೋಮಣಿ ಭಾನುಕೋಟಿ ಗುರುತಾದ್ಯೆನ್ನ ಮನದೊಳು ನಾಟಿ ಪರಬ್ರಹ್ಮನಹುದೊ ಜಗಜೇಟಿ ತರಳ ಮಹಿಪತಿ ಮನವಸೋಘಟಿ(?) 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರುಮುನಿಜರ ಪ್ರಿಯವಾದ ನಾಮ ದ್ರುವ ಬ್ರಹ್ಮ ವಿಷ್ಣುರುದ್ರರಿಗಿದೆ ನಿಜನಾಮ ಪ್ರೇಮದಿಂದ ಸ್ಮರಿಸುವರು ಇದೆ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ 1 ಸಕಲಾಗಮ ಪೂಜಿತರಿದೆ ನಾಮ ಏಕೋಮಯವಾಗಿ ದೋರುವದಿದೆನಾಮ ಶುಕವಾಮ ದೇವರಿಗಿದೆ ನಿಜ ನಾಮ ಸುಖ ಸರ್ವರಿಗೆ ದೋರುವ ಗುರುನಾಮ 2 ಕರ್ಮಬಂಧನ ಛೇದಿಸುವದಿದೆ ನಾಮ ಕರ್ಮದೋರಿ ಕೊಡುವದೀ ಗುರುನಾಮ ಬ್ರಹ್ಮಾನಂದ ಸುಖದೊರುವಾನಂದ ನಾಮ ಧರ್ಮ ಜಾಗಿಸಿಕೊಡುವದೀ ಗುರುನಾಮ 3 ಅಜಮಿಳಗೆ ತಾರಿಸಿದಿದೇ ನಾಮ ಗಜಭಯ ಪರಿಹರಿಸಿದಿದೆ ನಾಮ ಸುಜನರಿಗೆ ಸುಪ್ರಸನ್ನವಾದ ನಾಮ ಮೂಜಗಕೆ ತಾಮುಖ್ಯವಾದ ಗುರುನಾಮ 4 ಅಹಲ್ಯ ಉದ್ಧರಣ ಮಾಡಿದುದಿದೆ ನಾಮ ಪ್ರಲ್ಹಾದÀನ ಪ್ರಾಣಗಾಯಿದಿದೆ ನಾಮ ಫಲುಗುಣ ತಾ ಪಕ್ಷವಾದದುದಿದೆ ನಾಮ ಒಲಿದು ಧ್ರುವಗಥಳವಿತ್ತ ಗುರುನಾಮ 5 ಅಗಣಿತ ಗುಣ ಪರಿಪೂರ್ಣವಾದ ನಾಮ ಸುಗಮ ಸುಪಥಸಾಧನ ಇದೆ ನಾಮ ಯೋಜನ ಸೇವಿಸುವ ನಿಜನಾಮ ನಿರ್ಗುಣಾನಂದವಾಗಿಹ್ಯ ಗುರುನಾಮ6 ಸೂರ್ಯಚಂದ್ರ ಸಮಸ್ತವಂದ್ಯ ಇದೆ ನಾಮ ಕಾರ್ಯಕಾರಣವಾಗಿಹ್ಯ ವಿದೆ ನಾಮ ತೂರ್ಯಾವಸ್ಥೆ ಯೊಳಗೆ ಸೂರಿಗೊಂಬು ನಾಮ ತರಳಮಹಿಪತಿ ತಾರಕ ಗುರುನಾಮ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುರಾಯ ಭವಹರ ಹರಿಪ್ರೀಯಾ ಪ ಅಂಗಜ ಸಮಕಾಯಾ ರಂಗನಾಥನ ಪ್ರೀಯ ಭವ ಭಯ ಅಂಗಜ ನಿಚಯಾ 1 ನಮಿಸುವೆ ತವಪಾದ ವನಜಕೆ ನಾ ಸದಾ ಅನಘ ಚರಿತನೇ ಬುಧಾ ವಿನಮಿತ ಕಾಮದಾ 2 ಮಾನವ ಅರಿಶಿರಿ ಗೋವಿಂದ ವಿಠಲನ್ನ ಪಾವನ ಪಾದದ ಸೇವೆನೀಯೊ 3
--------------
ಅಸ್ಕಿಹಾಳ ಗೋವಿಂದ
ಗುರುವಶಕೆ ನಮೋ ಎಂಬೆ ನಮ್ಮ ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ 1 ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ 2 ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ನಿತ್ಯ ವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ | ವಾದಿಗಜಕೆ ಸಿಂಹ ಸತ್ಯನಾಥರಿಗೆ 3 ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ | ಸತತ ಸಜ್ಜನಪಾಲ ಸತ್ಯಪೂರ್ಣರಿಗೆ || ಅತಿಶಯವಾನಂದ ಸತ್ಯ ವಿಜರಿಗೆ | ಮತ ಉದ್ಧಾರಕ ಶ್ರೀ ಸತ್ಯಪ್ರಿಯರಿಗೆ4 ಇಂತು ಗುರುಗಳ ಸಂತರೆ ಕೊಂಡಾಡಿ ಇಂತು ಸುತಾಪವನುರುಹಿ ಬಿಟ್ಟು || ಸಂತೋಷಿ ನಾನಾದೆ ವಿಜಯವಿಠ್ಠಲನ್ನ ಚಿಂತಿಯ ಮಾಡುವೆ ದಾಸರ ದಯದಿಂದ 5
--------------
ವಿಜಯದಾಸ
ಗುರುವಿನ ಮರಿಲ್ಯ್ಹಾಂಗೆ |ಮರೆತು ನಾನಿರಲ್ಹ್ಯಾಂಗೆ ಪ ಮರೆತು ಹೋದ ಗಂಟಾ |ತೆರೆದಿಟ್ಟಾ ಕರೆದು ಕೈಯಲಿ ಕೊಟ್ಟಾ 1 ಬೋಧ ಗಜದ ಮೇಲೆ ಕೂಡಿಸಿದಾ |ಭೇದಾಭೇದ ಓಡಿಸಿದಾ 2 ಸ್ಥಿರಚರ ಜಗವೆಲ್ಲ ವ್ಯಾಪಿಸಿದಪರಶಿವ ತಾನೇ ಆದ 3
--------------
ಭೀಮಾಶಂಕರ
ಗೋಕುಲಕ್ಹೋಗು ನೀ ಶೋಕವಿನಾಶಿನಿ ಲೋಕೇಶ ಪಾರ್ವತಿ ಶ್ರೀಕರೆ ಶ್ರೀಮತಿ ಪ. ದೇವಕೀಗರ್ಭದ ಕೇವಲೆಂಟಂಶದ ದೇವಶೇಷಾಖ್ಯನ ದೇವಿಗೈ ದರ್ಶನ 1 ಶಶಿಮುಖಿ ರೋಹಿಣಿ ಬಸುರೊಳಗಿಡು ನೀ ಬಿಸರುಹಲೋಚನಿ2 ಸುಂದರಿ ದೇವಕೀ ಕಂದನಾಗುವೆ ಸುಮುಖಿ ನಂದನ ನಂದಿನಿಯೆಂದೆನಿಸು ಭವಾನಿ 3 ಜಗದಂಬಿಕೆ ಜಯೆ ಸುಗುಣೆ ವೈಷ್ಣವಿ ವಿಜಯೆ ಜಗದೊಳು ನಿನ್ನ ಪೂಜೆ ಅಗಲದ ಗೈವರಗಜೆ 4 ಲಕುಮಿನಾರಾಯಣನ ಯುಕುತಿಯಂತಾಕ್ಷಣ ಸುಖದೆ ಗೈದಳು ಶಿವಸಖಿ ತಾನೆಲ್ಲವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ