ಶ್ರೀಶ ವೇದವ್ಯಾಸನಾದನು ಪ
ಶ್ರೀಶ ವೇದವ್ಯಾಸನಾಗಲು
ಸಾಸಿರ ನಯನ ಸಾಸಿರ ವದನ
ಕರ ಮಿಕ್ಕ ಸುರರೆಲ್ಲ ತು-
ತಿಸಿ ಹಿಗ್ಗುತ ಹಾರೈಸಲಂದು ಅ.ಪ.
ದರ್ಪಕ ಜನಕ ಸರ್ಪತಲ್ಪನಾಗಿ
ತಪ್ಪದನುಗಾಲ ಇಪ್ಪ ವಾರಿಧೀಲಿ
ಕಂದರ್ಪ ಹರನೈಯ
ಸುಪರ್ಣರಥನಾಗಿ ಒಪ್ಪಿಕೊಂಡು
ಇಪ್ಪತ್ತು ಲಕ್ಷಗಲಿಪ್ಪ ಯೋಜನದ
ಅಪ್ಪನ ಅರಮನೆ ದರ್ಪಣದಂತೆ ತಾ
ರಪ್ಪಥ ಮೀರಿದಂತಿಪ್ಪದು ನೋಡಿ ಸಾ-
ಮೀಪಕ್ಕೆ ವಾಣೀಶ ಬಪ್ಪ ಬೇಗಾ 1
ಬಂದು ಬೆನ್ನೈಸಿದ ಮಂದಮತಿ ಕಲಿ-
ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು
ಕುಂದ ಭಕ್ತನಿಗೆ ಒಂದೆ ಮಾತಿನಲಾ-
ನಂದ ಬಡಿಸಿ ಪೋಗೆಂದು ಪೇಳೆ
ಅಂದು ಸುಯೋಜನಗಂಧಿ ಗರ್ಭದಲ್ಲಿ
ನಿಂದವತರಿಸುತ ಪೊಂದಿದ ಅಜ್ಞಾನ
ಅಂಧಕಾರವೆಲ್ಲ ಹಿಂದು ಮಾಡಿ ಸುರ-
ಸಂದಣಿ ಪಾಲಿಸಿ ನಿಂದ ದೇವ 2
ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ
ಕಂಜಾಪ್ತನಂದನದಿ ರಂಜಿಸುವ ಕಾಯ
ಮಂಜುಳ ಸುಜ್ಞಾನ ಪುಂಜನು ವಜ್ಜರ-
ನಿತ್ಯ ಅಂಜಿದಗೆ
ಸಂಜೆಯ ತೋರಿ ಧನಂಜಯ ಶಿಷ್ಯ ನೀ-
ಗಂಜದಂತೆ ಕರಕಂಜವ ತಿರುಹಿ
ನಿರಂಜನ ಪೇಳಿದ
ಕುಂಜರ ವೈರಿಯ ಭಂಜನನು 3
ಗಂಗಾತೀರದಲಿ ಶೃಂಗಾರ ಉಪವ-
ನಂಗಳದರೊಳು ಶಿಂಗಗೋಮಾಯು ಭು
ಮೂಷಕ ಮಾತಂಗ ಸಾರಮೇಯ
ಕೊಂಗಹಂಗ ಸರ್ವಾಂಗ ರೋಮ
ಶರಭ ವಿಹಂಗ ಶಾರ್ದೂಲ ಸಾ-
ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ
ವಂಗ ತುರಂಗ ಪತಂಗ ಭೃಂಗಾದಿ ತು-
ರಂಗವು ತುಂಬಿರೆ ಮಂಗಳಾಂಗ 4
ಬದರಿ ಬೇಲವು ಕಾದರಿ ಕಾಮರಿ
ಮಧುಮದಾವಳಿ ಅದುಭುತ ತೆಂಗು
ಕದಳಿ ತಪಸಿ ಮದಕದಂಬ ಚೂ-
ತದಾರು ದ್ರಾಕ್ಷಿಯು
ಮೃದು ಜಂಬೀರವು ಬಿದಿರು ಖರ್ಜೂರ
ಮೋದದಿ ದಾಳಿಂಬ ತುದಿ ಮೊದಲು ಫ
ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ
ಇದೆ ಆರು ಋತು ಸದಾನಂದ 5
ವನದ ನಡುವೆ ಮುನಿಗಳೊಡೆಯ
ಕಾನನ ಸುತ್ತಲು ಆ-
ನನ ತೂಗುತ್ತ ಧ್ವನಿಯೆತ್ತಿ ಬಲು-
ಗಾನ ಪಾಡಿದವು ಗುಣದಲ್ಲಿ
ಕುಣಿದು ಖಗಾದಿ ಗಣಾನಂದದಿಂದಿರೆ
ವನನಿಕರ ಮೆಲ್ಲನೆ ಮಣಿದು ನೆ-
ಲನ ಮುಟ್ಟುತಿರೆ ಅನಿಮಿಷರು ನೋ
ಡನಿತಚ್ಚರಿಯನು ಪೇಳೆ 6
ಮೌನಿ ನಾರದನು ವೀಣೆ ಕೆಳಗಿಟ್ಟು
ಮೌನವಾದನು ಬ್ರಹ್ಮಾಣಿ ತಲೆದೂಗಿ
ಗೀರ್ವಾಣ ಗಂಧರ್ವರು
ಗಾನ ಮರೆದು ಇದೇನೆನುತ
ಮೇನಕೆ ಊರ್ವಸಿ ಜಾಣೀರು ತಮ್ಮಯ
ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ
ದೀನರಾದರು ನಿಧಾನಿಸಿ ಈಕ್ಷಿಸಿ
ಎಣಿಸುತ್ತಿದ್ದರು ಶ್ರೀನಾಥನ 7
ನಮೋ ನಮೋಯೆಂದು ಹಸ್ತ-
ಕಮಲ ಮುಗಿದು ನಮಗೆ ನಿಮ್ಮಯ
ಅಮಲಗುಣ ನಿಗಮದಿಂದೆಣಿಸೆ
ಕ್ರಮಗಾಣೆವು ಉತ್ತಮ ದೇವ
ಕೂರ್ಮ ಖಗಮೃಗ ಸಮವೆನಿಸಿ ಅ-
ಚಮತ್ಕಾರದಲ್ಲಿ ನಾಮಸುಧೆಯಿತ್ತ
ರಮೆಯರಸ ಆಗಮನತ8
ಇದನು ಪಠಿಸೆ ಸದಾ ಭಾಗ್ಯವಕ್ಕು
ಮದವಳಿ ದಘವುದದಿ ಬತ್ತೋದು
ಸಾಧನದಲ್ಲಿಯೆ ಮದುವೆ ಮುಂಜಿ
ಬಿಡದಲ್ಲಾಗೋದು ಶುಭದಲ್ಲಿ
ಪದೆಪದೆಗೆ ಸಂಪದವಿಗೆ ಜ್ಞಾನ-
ನಿಧಿ ಪೆಚ್ಚುವುದು ಹೃದಯ ನಿರ್ಮಲ
ಬದರಿನಿವಾಸ ವಿಜಯವಿಠ್ಠಲ
ಬದಿಯಲ್ಲೆ ಬಂದೊದಗುವ 9