ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ ಧ್ರುವ
ಪಿಡಿದರೆ ದೃಢ ಗುರುಭಕುತಿ ಸಾಕು
ಷಡದರುಷಣ ಗೂಢವ್ಯಾತಕೆ ಬೇಕು
ನಡಿನುಡಿಯಲಿ ನಿಜ ಭೇದಿಸಬೇಕು
ಪಡಕೊಂಡರೆ ಬಾಹುದು ಘನಥೋಕÁ 1
ಒಂದರಿಯದೆ ನಿಜದೋರುದು ಖೂನ
ಸಂದಿಸಿ ಬೆರೆವುದು ಮನ ಚಿದ್ಛನ
ತಂದೆ ಸದ್ಗುರು ದಯದನುಸಂಧಾನ
ಎಂದೆಂದಿಗೆ ಅದ ತಾ ನಿಧಾನ 2
ಒಂದಾಗುದೆ ನಿಜಗುರು ದಯಕರುಣ
ವಂದಿಸಿ ನೋಡಬೇಕಿದೆ ಘನಸ್ಫುರಣ
ಹೊಂದಿ ಬದುಕಿರೊ ಮಹಿಪತಿಗುರುಚರಣ
ಚಂದವಿದೆ ಇಹಪರ ಭೂಷಣ 3