ಒಟ್ಟು 12410 ಕಡೆಗಳಲ್ಲಿ , 137 ದಾಸರು , 5990 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿಭಜಿಸೊ ನಿರಂತರ | ನೆರೆ ನಂಬಿ ಭಜಿಸಿ ಮನವೆÉ ಪ ಕುಂಭಿಣಿನಾಥ ದಾಸಾರ್ಯ | ಸಹ್ಲಾದರಾ | ಶಲ್ಯಾಖ್ಯರಾ ಅ.ಪ ಆದಿಯುಗದಿ ಪ್ರಹ್ಲಾದನನುಜ | ಸಹ್ಲಾದನೆಂದೆನಿಸಿದರಾಯರ 1 ದ್ವಾಪರದಲ್ಲಿ ಶರಚಾಪಧಾರಿ | ಶಲ್ಯಭೂಪರೆನಿಸಿದ ರಾಯರು 2 ಭಾವಿ ಮರುತರಾಜರ ಪ್ರೀಯ ದೂತರ 3 ಪಾಲದಾಸರ ದಯಷಾತ್ರರ 4 ರಂಗವಲಿದ ಗುರುರಾಯರ 5 ದೀನಜನರಾಮರಧೇನುವೆಂದೆನಿಸಿದ ಮಾನವಿಕ್ಷೇತ್ರ ನಿವಾಸರ 6 ಬುಧರಿಗೆರೆದ ರಾಯರ 7
--------------
ಶಾಮಸುಂದರ ವಿಠಲ
ನಂಬಿರೋ ಮನವನುದಿನಾ ಪ ನಂಬಿರೋ ಮನವನುದಿನಾ | ನಂಬಿದರಿಂಬಾಗುವನಾ 1 ಸುರಮುನಿರಂಜನು ಸುರರಿಪು ಭಂಜನಾ | ನಿರುಪಮ ಕಂಜನಯನ ವದನಾ 2 ಈರೆರಡಾಸ್ಯನ ಪಿತ ಪದ್ಮಾಸ್ಯನೆ | ಈ ರೈದಾಸ್ಯನ ಕೊಂದವನಾ 3 ಅಸುರನ ಕಂದನ ನುಳಹಿದಾ ನಂದನ | ವಸುದೇವ ಬಂಧನ ಹರಿಸಿದನಾ 4 ಇಹಪರ ವಂದ್ಯನ ದೇವಕಿ ಕಂದನ | ಮಹಿಪತಿ ನಂದನ ಜೀವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ದಯಾನಿಧಿ ರಾಮನಾ ಪ ಶಬರಿಯ ಭಾವಕೆ ಮೆಚ್ಚಿ ಉಂಡನು ಬದರಿ ಫಲಾ| ವಿಭು ನೀಡಿದನು ಪದಾಚಲಾ 1 ತೃಣ ಪಶು ಪಿಪ್ಪೀಲಿಕಾ ನಗಾದಿಗಳಾ| ಸುಗತಿಗೆ ವೈದನು ಘನ ನೀಲಾ 2 ಗುರು ಮಹಿಪತಿ ಪ್ರಭು ನೀರೊಳು ತಾರಿಸಿದ ಶಿಲಾ| ಚರಿತವ ದೋರಿದ ಸಿರಿಲೋಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ನಂಬು ನಂಬು ಮನವೆ ಅಂಬುಜಾಕ್ಷನ ಪ್ರಭುವ ಪಾದ ಇಂಬು ನಿನಗೆ ದೊರಕುವುದು ತುಂಬಿ ಮಂಗಳ ಪ ದುಷ್ಟ ಅನ್ನ ದುಷ್ಟ ಸಂಗ ಭ್ರಷ್ಟ ಭಾವದಿಂದ ಮನವು ಕೆಟ್ಟು ಬೆದರಿ ಸವಿಯುಗೊಳ್ಳದು ಶಿಷ್ಟರನುಭವ 1 ಸತ್ಯಹರಿಯು ಜಗದ್ಗುರುವು ಸತ್ಯ ಮಧ್ವಶಾಸ್ತ್ರ ಫಲವು ಸತ್ಯ ಮಹಿಮ ಗುರುಕರುಣ ಸತ್ಯ ನಿತ್ಯದಿ 2 ಭಾರತ ಭಾಗವತವ ಕೇಳು ಭರತನಣ್ಣನ ಚರಿತೆ ಕೇಳು ಖರೆಯು ಹರಿಯ ಭಕ್ತರೀಗೆ ನಿರುತ ಮಂಗಳ 3 ನಿರುತ ವಿದಯ ಲೋಭಿಗಳ ದುರುಳ ದುರ್ಬಲ ಭಾವ ತಿಳಿದು ಹರಿಯ ಮೆರೆಯೆ ಸಕಲ ಭಯವು ಮರುಳು ಮಾಳ್ಪವು 4 ಕರಿಯ ಧ್ರುವನ ಅಸುರ ಬಾಲನ ನರನ ಸತಿಯು ಭೀಷ್ಮ ಕುಚೇಲ ವರದ ದೇವನ ದಾಸರ ಭಜಿಸು ನಿರುತ ದೃಢದಲಿ 5 ಹಿಂದೆ ಎಷ್ಟೊ ಕಾಲದಿಂದ ಕುಂದು ನೋಡದೆ ನಿನ್ನ ಬಿಡದೆ ಮುಂದು ತಂದ ಬಗೆಯ ತಿಳಿಯೊ ಸಂದೇಹ ಪೋಪದು 6 ಕಾಲಿಗೆ ಬಿದ್ದ ದೀನರನ್ನು ಕರ್ಮ ಮೀರಿ ಪೊರೆವ ಬಾಳ ಕರುಣಿ ಮಹಾ ವಿಜಯ ರಾಮಚಂದ್ರನು7 ಹಿಂದೆ ಪೇಳ್ದ ವಾಕ್ಯವೆಲ್ಲಿ ಇಂದು ಬಿಡದೆ ಫಲಿಸುವೋವು ಮಂದನಾಗದೆ ಪ್ರಭುವ ಪಾದ ದ್ವಂದ್ವ ಬಿಡದಿರು 8 ನಿತ್ಯ ಹನುಮ ಭೀಮ-ಮಧ್ವ ಭೃತ್ಯರ ಶಿರೋರತನುನಿವನು ಸತ್ಯ ಮಹಿಮ ಜಯೇಶವಿಠ- ಲಾಪ್ತ ಸತ್ಯವು 9
--------------
ಜಯೇಶವಿಠಲ
ನಂಬು ನಂಬು ನಾರಾಯಣನ ಈಮಿಕ್ಕ ದೈವಗಳು ಕಾಯಬಲ್ಲವೆ ಪ. ಅಂಬರದಿ ಧ್ರುವನ್ನ ನೋಡು ಈ ಭಕ್ತಿಮೌಳಿಯೆಂಬೊ ಪ್ರಹ್ಲಾದನ್ನ ನೋಡುಕುಂಭಿಣಿಯೊಳು ವಿಭೀಷಣಗೆ ಶ್ರೀರಾಮ ಕೊಟ್ಟತುಂಬಿದ ಭಾಗ್ಯವ ನೋಡಯ್ಯ 1 ಹಿರಣ್ಯಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲಕರಗಿ ಹೋದದ್ದು ನೋಡಯ್ಯದುರುಳರಾವಣ ಏನಾದ ಆ ದುಃಖವನ್ನುಪಾರಂಪರ್ಯದಿಂದ ಕೇಳಯ್ಯ 2 ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ[ಕಟ್ಟೆಂದ] ಖಳನೇನಾದಹಯವದನನ್ನ ನಂಬಿದ ನಮ್ಮ ಧರ್ಮ-ರಾಯನ ಭಾಗ್ಯ ನೋಡಯ್ಯ3
--------------
ವಾದಿರಾಜ
ನಂಬು ನಂಬು ಶ್ರೀನರಹರಿ ಪಾದವÀ ನರನೇ ಪಾಮರನೆ ಪಾತಕ ಕೃಷ್ಣಾ ಮೂರ್ತಿಯನ್ನೇ ಪ ಸಾಧು ಸಜ್ಜನ ಸಂತರ ಸಲಹುವ ಸಕಲ ಲೋಕ ಕರ್ತನಾ ಮೇದಿನಿ ಭಕ್ತರ ಮನದಲಿ ಚರಿಸುವ ಮಂಗಳ ಮಹಿಮನ ಆದಿಮೂರುತಿ ಆನೇಕ ಚರಿತಾ ಅನಂತ ಅವತಾರನಾ ಅನುದಿನ ಮರೆಯದೆ ನೀ ಯಿನ್ನಾ 1 ಶ್ರೀನಿವಾಸ ಆಶ್ರಿತ ಜನಪೋಷಕ ಶಾಶ್ವತನಾಗಿಹನಾ ಗಾನಲೋಲ ಶ್ರೀವೇಣುನಾದನ ಕರಿರಾಜ ವರದನ ದಾನವಾಂತಕನ ದಶರಥತನಯನ ದೇವಾದಿದೇವನ್ನ ಮಾನವ ಮದನ ಜನಕನಾದನಾ 2 ಭೂಸುರ ನಾಯಕನ ಮಾಧವ ಗೋವಿಂದನ ಮುಕ್ಕುಂದನಾದ ಅವನಾ 'ಹೆನ್ನೆವಿಠ್ಠಲನಾ’ 3
--------------
ಹೆನ್ನೆರಂಗದಾಸರು
ನಂಬು ನರಮೃಗನಾ|ಮನುಜಾ| ಅಂಬುಧಿವಾಸ ಶ್ರೀ ದೇವನಾ ಪ ಕುಟಿಲ ಶಠಸುರನುಪಟಳ|ಘಟಿಸೆ ಖಟಮ ನವ್ಯಾಟಪ್ತ ಬಾಯೆನೆ ಶರಣಾ| ಖಟಖಠಾನೆಂದು ವಿಸ್ಫುಟವಾಗಿ|ಸ್ತಂಬ| ಛಟಛಟಾನೆನೆ ಬ್ರಮ್ಹಾಂಡ | ಘಟಪಟುವಂತೆ ಯಾರ್ಭಟದಿಂದಲೊಗೆದನಾ1 ಅರಿಯನರದವನ ಕರಳು ಸರಧರಿಸಿ| ಭರದಿ ಪೊರೆದೆ ಡಂಗುರನಾ ಹರನಾ ಗುರುಮಹೀಪತಿ ಪ್ರಭು ಚರಣಚರನೆನಿಸಿದ| ಸ್ಮರಹರ ಅಜಸುರ ಪರರೊಡೆಯನಾ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ ಕುಟುಂಬ ಸಾರಥಿಯ ಪ ಬಲಿ ನಂಬಿ ಪಾತಾಳಲೋಕಕರಸಾದನದೆಕುಲದ ಪ್ರಹ್ಲಾದನು ನಿಜವ ಕಂಡಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ1 ಅಂಬರೀಷನು ನಂಬಿ ವೈಕುಂಠವೇರಿದನುಹಂಬಲಿಸಿ ಶಶಿಧರನು ಉರಿಯ ಗೆದ್ದಕುಂಭಿನೀದೇವಿ ತಾ ಬಂಧನವ ಕಳೆದಳುಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು 2 ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನುಮತಿಭ್ರಷ್ಟ ಅಜಮಿಳನ ಉದ್ಧರಿಸಿದನುಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯಪತಿತ ಪಾವನ ಪರಮಪುರುಷೋತ್ತಮನನು 3
--------------
ಕನಕದಾಸ
ನಂಬು ಮನವೆ ರಾಮಚಂದ್ರನಾ ದ | ಯಾಂಬು ನಿಧಿ ಸದ್ಗುಣ ಸಾಂದ್ರನಾ|| ನಂಬಿದ ಭಕ್ತ ಕುಟುಂಬಿಯೆನಿಸುವ| ಅಂಬುಜನಾಭನ ಹಂಬಲವಿಡಿದು ಪ ದಶರಥ ಕೌಸಲ್ಯ ಬಸುರಿಲಿ ಬಂದು| ಋಷಿಮಖ ರಕ್ಷಿಸಿ ಶರದಿ|| ಅಸುರೆಯ ಭಂಗಿರಿಸಿ ನಡೆಯಲಿ|ಮುನಿ| ಅಸಿಯಳುದ್ದರಿಸಿ ಉಂಗುಟದಲಿ| ಅಸಮ ಧನುವೆತ್ತಿ ವಸುಧಿಯ ಮಗಳ ವ ರಿಸಿಕೊಂಡು ಬಂದನು ಕುಶಲವಿಕ್ರಮನಾ1 ಜನಕನ ವಚನಕ ಮನ್ನಿಸಿ|ಸತಿ| ಅನುಜನೊಡನೆ ವಿಹರಿಸಿ| ವನಚರ ಭೂಚರ ನೆರಹಿಸಿ|ದಾಟಿ| ವನಧಿಯೊಳಗ ಗಿರಿಬಂಧಿಸಿ|| ಮುನಿದು ಮರ್ದಿಸಿ ದಶಾನನ ಮುಖ್ಯ| ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ2 ಸುರರಿಗೆ ನೀಡಿದಾನಂದನು|ಸೀತೆ| ವರಿಸಿ ಅಯೋಧ್ಯಕ ಬಂದನು| ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು| ವರ ಮಹಿಪತಿ ನಂದನೊಡೆಯನು|| ಅರಿತು ಸದ್ಬಾವತಿ ಸರಿಸಲಿ ಸದ್ಗತಿ| ಶೆರೆವಿಡಿದೆಳೆತಹದರಿಯಲೋ ನಾಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ಹರಿಯ ಎನ್ನ ಮನವೇ ಪ ಸುರಪತಿ ಮುಳಿಯಲು ಸಕಲ ಗೋವಳರನು| ಹೊರೆದನು ಕರದೆತ್ತಿ ಗಿರಿಯಾ 1 ಭಕುತಿಲಿ ಶರಣು ಬರಲು ಸುದಾಮನು| ಸಕಲ ಸುಖವನಿತ್ತಾ ದೊರೆಯಾ2 ಗುರುಮಹಿಪತಿ ದೀನೋದ್ಧಾರನು| ಮುರ ಅರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬುಗೆ ಪಡಿಯಿರೋ ದೇವರ ದೇವನಾ ಪ ಧಾಮ ಸಾರ್ವಭೌಮ ತಾಮರಸ ಸಖ ಆ ಮಹಾಕುಲೋದ್ದಾಮ ಆಹವ ಭೀಮ| ಸ್ವಾಮಿ ಸಕಲರ ಕಾಮಿತಾರ್ಥವ ನೇನಿ ಮುನಿಜನ ಪ್ರೇಮಿ| ಚರಿತ ನಿಸ್ಸೀಮಿಯಾ1 ಧಾಟಿಯಲಿ ನರನಾಟಕ ವಿಡಿದ ಆಟವಾಡಲು ನೀಟಾ| ಕೋಟಿ ಕೋಟಿ ನಿಶಾಟ ದರ್ಪೋಚ್ಚಾಟ ಮಾಡಿದ ಸ್ಪೋಟಾ| ನೀಟ ಶರಣ ಮುಕುಟಿಗಿತ್ತನು ಪೀಠಾ| ಧೀಟ ಶ್ರೀ ಜಟೆ ಜೂಟ ವಂದಿತ ಪಾಟರಹಿತ ಸ್ಪರಾಟನಾ 2 ಅಂದು ಇಂದೇ-ನೆಂದಿಗಾದರ ವಂದೇ ದಯದಿಂದ| ಛಂದ ಛಂದದ-ಲಿಂದ ಭೋಕ್ತರ ಬಂಧು ಭಕ್ತರ ವೃಂದ| ಸುಂದರಾನನ ಕುಂದರದನ ಸುಮಂದ ಹಾಸಾನಂದ| ಇಂದಿರೈರಸ ತಂದೆ ಮಹಿಪತಿ ಕಂದ ಪ್ರೀಯ ಮುಕುಂದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬುವುದು ತಾನು ಎಂತು ಸತಿಯು ಸುತರು ಮಗಳನುನಂಬಿ ಕಡೆ ಹಾಯ್ದುದುಂಟೆ ಹಾದಿಕಾರರನು ಪ ದಾರಿಕಾರರಿಗೆ ವಸತಿ ಮಳಿಗೆ ಭೇಟಿಯಲ್ಲೇದಾರಿ ಹಿಡಿದ ಬಳಿಕ ತಿರುಗಿ ಭೇಟಿಯಾಗೋದೆಲ್ಲಿದಾರ ಸುತರ ಭೇಟಿಯಿದೇ ದೇಹದೊಳಗೆ ಎಂದರಿಯೋಶರೀರವು ಬಿದ್ದ ಬಳಿಕ ಭೇಟಿ ಮುಂದೆ ಮರೆಯೋ1 ಕನಸಿನವರ ತಾನು ಈಗ ನೆನಸಲಿಕ್ಕೆ ಬಹರೆಕನಸಿನಂತೆ ತೋರುವರು ನೀನು ನಚ್ಚುವರೆಮನೆಯ ಬದುಕುಭಾಗ್ಯವೆಲ್ಲ ಮನದಿ ಜರೆದು ಬಿಡುನಿನಗೆ ಗತಿಯು ಏನು ಎಂದು ನೀನು ತಿಳಿದು ನೋಡು 2 ಹೆಗ್ಗಣವು ಜಾಗಿನೊಳಗೆ ಬಿದ್ದು ಮಿಡುಕಿದಂತೆವೆಗ್ಗಳಾಗಿ ಸಂಸಾರಕೆ ಮಾಡಿವೆಯೋ ಚಿಂತೆನುಗ್ಗು ಆದೆ ಬಯಲಭ್ರಾಂತಿ ನಿನಗೆ ವ್ಯಾಪಕಾಗಿಮುಗ್ಗುವೆ ನೀನೊಣನ ತೆರದಿ ನರಕದಲ್ಲಿ ಹೋಗಿ3 ನನ್ನ ಸಂಸಾರವೆನ್ನಬೇಡ ನೀನು ಇದನು ಈಗನನ್ನ ನನ್ನದೆಂದೆ ಹೋದ ನಿಮ್ಮಪ್ಪ ಮುಕ್ತನುಇನ್ನು ನಾಶವಿದು ಒಬ್ಬರಿಲ್ಲ ಸತ್ಯನಿನ್ನದಾರೆಂದು ಮರೆಯದಡೆ ನಿತ್ಯಾ4 ಇಂದ್ರಜಾಲ ನೋಡಲಿಕ್ಕೆ ಖರೆಯದಾಗಿ ಇಹುದುಅಂದದಾ ಪರಿಯು ಸಂಸಾರವೆ ನಿತ್ಯವಿಹುದುಬಂಧನವು ನಿನಗೆ ಇಹುದು ಗುರುವಿನ ಪಾದವಹೊಂದು ಮುಂದೆ ಚಿದಾನಂದನಹೆ ನೀನೀಗ ಎಂದು 5
--------------
ಚಿದಾನಂದ ಅವಧೂತರು
ನಭಕೀಶ - ನಭಕೀಶ ಪ ಇಭಮೊಗ ನಿನ್ನಡಿ | ಗಭಿ ವಂದಿಸುವೆನುಇಭವರದನ ಮನ | ನಭದಲಿ ತೋರೋ ಅ.ಪ. ಮೂಷಕ ವಾಹಾಹಿ | ಭೂಷನೆ ತ್ರೈಜಗತೋಷ ಗಣಾಧಿಪ | ಪಾಶಾಂಕುಶಧರ 1 ಶುಭ ಗುಣ ಭಜನೆಯಸುಭಗನೆ ಪಾಲಿಸಿ | ಕುಭವನೆ ಹರಿಸೋ 2 ಅಂಬುಜಾಂಡದಿ ತವ | ಶುಭಗುಣ ಪ್ರಸರಣಸುಭುಜಾಹ್ವಯ ಗೈ | ದ ಭಯವ ನಿತ್ತನು 3 ಅಬುಧಿಗೆ ಸೇತುವೆ | ವಿಭವದಿ ಗೈವಾಗಬುಜಾಂಡೋದರ | ಭಜಿಸಿದ ನಿನ್ನಾ 4 ಕ್ರತು ರಾಜಸೂಯ 5 ರಕ್ತವಾಸ ಅನು | ರಕ್ತ ಹರಿಯಲಿಭಕ್ತಿಯ ಪಾಲಿಸೋ | ಭಕ್ತಾಶ್ರಯನೇ 6 ಅಸಮಾಧಿಕ ಪ್ರಿಯ | ಶಶಿಭೂಷಣ ಸುತಶಶಿ ದ್ವಿಟ್ ಮರ್ಭವ | ಪಾಶವ ಕಳೆಯೋ 7 ಎಕಮೇವ ನಲಿ - ವಿ | ವೇಕವ ಕೊಡುವುದುಏಕದಂತ ಚಾ | ಮೀಕರ ಕೃತ ಭೂಷಾ 8 ಮೋದಕೇಕವಿಂಶ | ಸಾದರ ಸ್ವೀಕೃತಮೋದ ತೀರ್ಥ ಮತ | ಭೋದಿಸು ಗುರುವೇ 9 ಚಾರುದ್ವೇಷ್ಣಾಭಿಧ | ಚಾರ್ವಾಂಗನೆ ಹರಿಚಾರು ಚರಿತೆ ಸತ್ | ಸ್ಫೋರಣ ಕೊಡುವುದು 10 ಭಾವಜಪಿತ ಗುರು | ಗೋವಿಂದ ವಿಠಲನಭಾವದಿ ತೋರಿಸೊ | ಭಾವಜ ಭ್ರಾತಾ11
--------------
ಗುರುಗೋವಿಂದವಿಠಲರು
ನಮಃ ಓನ್ನಮಃ ಮಮದೇಶಿಕ ತಿರುವಡಿಗಳೆ ಶರಣಂ ಪ ಶ್ರೀ ಪರಾತ್ಪರನೆ ಭಾಪದನಿಸರಿ ಕೋಪವ್ಯಾತಕೆ ಸಲಹೊ ಮುನಿಕುಲ ದೀಪ ನೀನಹುದಯ್ಯ ಅಡಿಯೇನ್ನಮಃ 1 ಸಾನಿಧಾಪ ಮದಾಪದದಿ ಸರಿ ಶ್ರೀನಿವಾಸ ದಯಾಳೊ ಅಡಿಯೇನ್ ನಮಃ 2 ವಾಸವಾರ್ಚಿತ ಶ್ರೀಗುರು ಹರಿ ದೋಷಗಳೆದೀಗೆನ್ನ ಆ ನಿಜ ಶೇಷಭೂತನ ಮಾಡೊ ಅಡಿಯೇನ್ ನಮಃ 3
--------------
ಚನ್ನಪಟ್ಟಣದ ಅಹೋಬಲದಾಸರು
ನಮಗೆಲ್ಲಿ ಮನೆಗಳಯ್ಯ ನಾರಾಯಣ ಪ ಕಮಲ ಬ್ರಹ್ಮಾಂಡ ಕೋಟಿ ಒಡಲೊಳು ತಾಳ್ದಂಥರಮಾಧವ ನಿಮಗೆ ನೀರೊಳಗೆ ವಾಸವಾಯಿತುಅ ಜಲನಿಧಿಯನುತ್ತರಿಸಿ ಲಂಕೆಯನೈವುದಕೆಕುಲಗಿರಿಯ ಕಿತ್ತು ತಂದು ಸೇತುವೆ ಕಟ್ಟಿಸಲೆ ದೈತ್ಯನ ಕೊಂದು ಸೀತೆಯ ತಂದನಿಗೆ ಗಿರಿತಲೆಯ ಮೇಲೆ ಇಹ ಪ್ರಾಪ್ತಿಯಾಯಿತು 1 ಪೃಥ್ವಿಯ ತಲೆಯನು ಪರೆಮಾಡಿ ತಾಳಿದಳುತ್ಯಾನಮಮ್ಮನ ತಂದೆಯ ಮೆಲುವನಮೃತ್ಯುನಾಶಕನೆಂದು ಸುತ್ತಿದ್ದಾನೆಹುತ್ತಿನೊಳಗೆ ಇಹ ಪ್ರಾಪ್ತಿಯಾಯಿತು 2 ನಾಡದೇವತೆಗಳ ಸೆರೆಗಳ ಬಿಡಿಸಿಕ್ರೀಡೆಯಾಯಿತು ನಿಮ್ಮ ದಯದಿಂದಲಿರೂಢಿಯೊಳತಿ ಸೇವಕನಾದ ಗರುಡನಿಗೆಬೋಡು ಮರದ ಮೇಲೆ ಇಹ ಪ್ರಾಪ್ತಿಯಾಯಿತು 3 ಜಲನಿಧಿ ಸುತನ ಮೊಮ್ಮಗನ ಕೊಂದ ಶೂರ ನಕುಲ ಸಹದೇವ ಪಾಂಡವರೈವರುಲಲನೆ ದ್ರೌಪದಿಯೊಂದಿಗೆ ವನವಾಸ ಹೋಗಿಹೊಲದೊಳಗೆ ಇಹ ಪ್ರಾಪ್ತಿಯಾಯಿತು4 ಇಂಥಿಂಥವರಿಗೆಲ್ಲ ಮನೆಯಿಲ್ಲದಿರಲು ನ-ನ್ನಂಥವನಿಗಿನ್ನೆಲ್ಲಿ ಇರಲು ಸಾಧ್ಯಕಂತುಪಿತ ಕಾಗಿನೆಲೆಯಾದಿಕೇಶವನೆ ನಿ-ಶ್ಚಿಂತನಾಗಿ ನಿಮ್ಮ ಗುಡಿಯಲಿಪ್ಪೆನು 5
--------------
ಕನಕದಾಸ