ಒಟ್ಟು 11370 ಕಡೆಗಳಲ್ಲಿ , 137 ದಾಸರು , 5713 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ ಅಷ್ಟಮದ ಮತ್ಸರಗಳೆಂತೆಂಬ ಟಗರುಗಳುದೃಷ್ಟಿ ಜೀವಾತ್ಮನೆಂತೆಂಬ ಆಡುಸೃಷ್ಟಿ ಸಿದ್ಧ ಪ್ರಸಿದ್ಧವೆಂತೆಂಬ ಹೋತಗಳುಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ 1 ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳುಕಾದಿದ್ದು ನಮ್ಮಜ್ಜನ ಹಿಂಡೊಳಗೆಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲುಆದರಿಸಿ ಅಂಬಲಿಯನೆರೆವ ನಮ್ಮಜ್ಜ 2 ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲುಮರೆವೆಂಬ ವ್ಯಾಘ್ರ ಕಿರುಬ ತೋಳಗಳು ಹೊಕ್ಕುತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ 3 ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ 4 ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತಕಲಿಯುಗಂಗಳನೆಲ್ಲ ಪೊರೆವಾತನೀತಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ 5
--------------
ಕನಕದಾಸ
ನಾಸಿಕ | ಸಂಭವ ಕಾಯೊ ನಮಿಸುವೆ ನಿನಗೆ ನಾನು ಪ ಅಂದು ಧರಣಿ ಜಲ ವಂದಾಗಿ ಕರಗಿರೇ | ನಂದನ ಚಿಂತಿಸಿ ಬಂದ ವರಹಮೂರ್ತಿ 1 ಮಧು ಪಾನಾವವ ಸಾ | ದದು ಅವನ ಚರ್ಮ | ಹೊದಿಸಿ ಹೆಪ್ಪುಗೊಟ್ಟು ಮೇದಿನೆಂದಿಸಿದೆ 2 ಕನಕಲೋಚನ ಭೂಮಿಯನು ಕದ್ದು ಮೈಯಲು | ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ3 ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ | ಸರಿಗಾಣೆ ನಿನಗೆ ಅಂತರ ಬಹಿರದೊಳು 4 ರಜೋಭಿಮಾನಿಯ ವಡಿಯಾ ಸುಜನಪಾಲಾ | ಭುಜಗ ಗಿರಿಯ ವಾಸಾ ವಿಜಯವಿಠ್ಠಲಾಧೀಶಾ 5
--------------
ವಿಜಯದಾಸ
ನಿಖಿಲಾತ್ಮ ನಿಖಿಲಾತ್ಮ ಅಖಿಲಬ್ರಹ್ಮಾಂಡಪತಿ ಸಲಹು ಸರ್ವೋತ್ತಮ ಪ ಮಂದರಧರ ಎನ್ನ ಮಂದಮತ್ಯಳಿದಾ ನಂದ ಮತಿಯಿತ್ತು ಚೆಂದದಿಂ ರಕ್ಷಿಸು 1 ನಿತ್ಯನಿರುಪಮ ಸತ್ತು ಚಿತ್ತ ನಿಮ್ಮ ಭಕ್ತಿ ಭಜನೆ ಎನ್ನ ಚಿತ್ತಕ್ಕೆ ದಯಮಾಡು 2 ಬಗೆದು ಎನ್ನಂತರಂಗzಗಲದೆ ನಿಂತು ನಿಜ ಸುಗುಣವಿತ್ತು ಪೊರೆ ಸುಗುಣಾಂಬುಧಿ 3 ಕಾಮಿತಜನಕಲ್ಪ ಕಾಮಧೇನು ಎನ್ನ ಕಾಮ ಪೂರೈಸಿ ನಿನ್ನ ನಾಮವಿತ್ತು ಕಾಯೊ 4 ಭಕ್ತಿದಾಯಕ ನಿನ್ನ ಭಕ್ತಿಯಿಂ ಭಜಿಸುವೆ ಸತ್ಯ ಶ್ರೀರಾಮ ನಿತ್ಯಮುಕ್ತಿಯಿತ್ತು ಪೊರೆ 5
--------------
ರಾಮದಾಸರು
ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಪ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಅ.ಪ ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ 1 ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ2 ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ 3 ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲುಕದು ಹರಿಯೆ 4 ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾಣೆ ಸತ್ಪಾತ್ರ ಕೂಡುಂಬೊ ಪದ್ಧತಿ ನೋಡೊ ಪುಣ್ಯಾತ್ಮ 5 ಮನೆ ಮನೆ ತಿರಿದರು ಕಾಸು ಪುಟ್ಟದೆ ಸು ಮ್ಮನೆ ಚಾಲ್ವರಿದು ಬಳಲಿದೆನೊ ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ ತಾನೆ ಪ್ರಾಪ್ತಿ ನೋಡೊ ಜೀಯಾ 6 ವೈದಿಕ ಪದವಿಯನೀವಗೆ ಲೌಕಿಕ ಐದಿಸುವುದು ಬಹು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ ಪಾದಸಾಕ್ಷಿಯನುಭವವೊ 7
--------------
ವಿಜಯದಾಸ
ನಿಗಮ ಗೋಚರ ಸಿರಿರಮಣಾ ಪ ವಾಚಾಮಗೋಚರ ಕಂಜ ಲೋಚನ ಗುಣ ಪೂರ್ಣಾ ಅ.ಪ ಪರಮ ಪವಿತ್ರ ಸಕಲಗುಣಭರಿತ ಜಗತ್ಪ್ರಭುವೇ ನರಸುರ ಗರುಡೊರಗ ಕಿನ್ನರರೊಳು ನೀನಿರುವೆ 1 ಪಾವನ ಸುಜನಾ ವನಜಗ ಜೀವನ ಮಮಸ್ವಾಮಿ ಸಾವಧಾನದೊಳೆನ್ನ ಮೊರೆ ಕೇಳ್ ಸರ್ವಾಂತರ್ಯಾಮಿ 2 ಗುರುರಾಮ ವಿಠಲ ನಿಜ ಭಕ್ತರಿಗೆ ಕಾಮಧೇನು 3
--------------
ಗುರುರಾಮವಿಠಲ
ನಿಗಮ ಗೋಚರಾನಂತ ಮಹಿಮ ಶ್ರೀದೇವ ಸಗುಣ ನಿರ್ಗುಣನಾಗಿ ತೋರುವ ಸುಗಮಲಿಹ್ಯ ಸುಖದಾಯಕ ಧ್ರುವ ಅಗಣಿತ ಗುಣಗಮ್ಯನುಪಮ ಶ್ರೀನಾಥ ನಿಗಮ ತಂದು ನೀ ಪ್ರಕಟದೋರಿದೆ ನಗವು ಬೆನ್ನಿಲಿ ತಾಳಿದೆ ಮಣಿ ಮಾಧವ ಶ್ರೀ ಕಾಂತ ಜಗವನುಳಹಿದೆ ನೆಗಹಿದಾಡಿಲೆ ಭಗತಗೊಲಿದು ನೀ ಕಾಯಿದೆ 1 ಹರಿ ಸರ್ವೋತ್ತಮ ಪರಮಪುರಷ ಶ್ರೀ ವೇಷ ಧರಿ ಮೂರಡಿ ಮಾಡಿದೆ ನೀ ಪರಶುಧರನಾಗ್ಯಾಡಿದೆ ಪರಿಪರ್ಯಾಡುವಾ ನಂದಸ್ವರೂಪ ಶ್ರೀಧರ ಶರಣ ರಕ್ಷಕನಾಗಿ ನೇಮದಿ ತುರುಗಳನ ನೀ ಕಾಯಿದೆ 2 ಸಾಮಜ ಪ್ರಿಯ ಶ್ರೀನಿಧೆ ಹಯವನು ತೋರುವೆ ಸರಸಿಜೋಧ್ಬವನುತ ಸಿರಿಲೋಲ ಎನ್ನಯ ಅನುದಿನ ಸೂರ್ಯಕೋಟಿ ಪ್ರಕಾಶನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ ಬಗೆದು ಜಲಿಧಿಲಿ ಸೇತು ಗಟ್ಟಿದ ಖಗವಾಹನ ಯದುಕುಲ ಲಲಾಮಗೆ ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1 ಸಿರಿಯನಾಳುವ ದೊರಿಯೆ ನಿನ್ನ ಮರೆಯ ಹೊಕ್ಕಿಹ ಚರಣಕಮಲ ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು ಬಿರುದು ನಿನ್ನದು ಸಾರುತಿಹುದು ಕರಿಯ ವರದಾನಂದ ಮೂರುತಿ ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2 ಮೂರ್ತಿ ಸದ್ಗುರು ನೆನೆವರನುದಿನ ಸಾರ್ಥ ಸದ್ಗುರು ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ ಸಾರ ನೀಡುತ ತನುಮನದೊಳನುವಾಗಿ ಸಲಹುವ ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3 ಶರಣಜನಾರಾಭರಣವಾಗಿಹ ಮೂರ್ತಿ ಸದ್ಗುರು ತರಣೋಪಾಯದ ಸಾರಸುಖವಿರುವ ನಿಜದಾತ ಪರಮಪಾವನ ಗೈಸುತಿಹ ವರ ಶಿರೋಮಣಿ ಭಕ್ತವತ್ಸಲ ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4 ನೋಡದೆನ್ನವಗುಣದ ದೋಷವ ಮಾಡುವದು ಸದ್ಗುರು ದಯ ಘನ ನೀಡುವುದು ನಿಜ ಸಾರಸುಖವನು ಕರುಣದೊಲವಿಂದ ಬೇಡುವÀದು ನಿನ್ನಲ್ಲಿ ಪೂರಣ ಪ್ರೌಢ ಘನಗುರುಸಾರ್ವಭೌಮನೆ ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5 ಸ್ವಾಮಿ ಸದ್ಗುರು ಸಾರ್ವಭೌಮನೆ ಕಾಮ ಪೂರಿತ ಕಂಜನಾಭನೆ ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ ಮಾಮನೋಹರ ಮನ್ನಿಸೆನ್ನ ನೀ ನೇಮದಿಂದಲಿ ಹೊರೆವದನುದಿನ ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6 ಕುಂದ ನೋಡದೆ ಬಂದು ಸಲಹೆನ್ನಯ್ಯ ಪೂರ್ಣನೆ ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ ಬಂಧು ಬಳಗೆಂದೆಂದು ನಿನ್ನನೆ ಹೊಂದಿ ಕೊಂಡಾಡುವ ಮೂಢ ನಾ ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7 ದೀನಬಂದು ದಯಾಬ್ಧಿ ಸದ್ಗುರು ಭಾನುಕೋಟಿ ತೇಜಪೂರ್ಣನೆ ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ ನೀನೆ ತಾಯಿತಂದೆಗೆ ನೀನೆ ಬಂಧುಬಳಗ ಪೂರಣ ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ ಪಾಪವೆಂಬುದು ಹೊರಗಿಹುದೆ ತನ್ನ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ 1 ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ 2 ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3 ಹರಿಸ್ಮರಣೆಗೆ ಪೋಪ ದೋಷ ಬಲು ಪರಿ ಧರ್ಮವ ಮಾಡಲು ಲೇಶ ಸರಿಯಾವು ತರುವಾಯ ಮೋಸದಿಂದ ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4 ಒಬ್ಬರ ಸರಿಗಟ್ಟದಿರೊ ನಿನ ಕರ್ಮ ಸುಖವೆಂದು ಸಾರೊ ಉಬ್ಬಲ ದಾಡಿಪರಾರೊ ಎಲೆ ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
--------------
ವಿಜಯದಾಸ
ನಿಜ ದೇವನೇ ಕೇಶವಾ ತ್ರಿಜಗಧೀಶಾ ಭಜಿಸುವೆ ತರಳ ದಾಸಾ ಪ ಅಜಸುರಾರ್ಚಿತ ಸುಗುಣರೂಪನೇ ನಿಜ ಶ್ರೀ ಲಕ್ಷ್ಮೀ ಸೇವಿತ ಹರಿಯೆ 1 ಸುಜನ ಪಾಕನಿಂದ ಚರಣವ ಭಜಿಸುವೆನು ಶ್ರೀ ಜಾನ್ಹಕಿ ರಮಣಾ 2 ನಿರುತ ದಾಸರ ಕಾಯೋಪಿತನೇ ಸಿರಿ ಚನ್ನಕೇಶವ ಮಾದವನೇ 3
--------------
ಕರ್ಕಿ ಕೇಶವದಾಸ
ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ ಪ ಇತರರ ದುಃಖವು ತನಗೆಂದರಿವಾಸತತದಿ ಸೇವೆಗೆ ತತಪರನಿರುವಾ 1 ತೊರೆದು ಹೆಮ್ಮೆಯಾ ಸರುವರು ನಮಿಸುವ ಪರರನು ಜರಿಯಾ ನಿರುಮಲನಿರುವಾ 2 ಧನ್ಯನವನು ತಾಯನ್ಯ ಸತಿಯರನುತನ್ನ ತಾಯಿಯೊಲು ಮನ್ನಿಸುತಿರುವಾ 3 ಸಟಿಯನು ನುಡಿಯಾ ಪರಧನವೆಡಿಯಾಕಟ್ಟಿಲಿ ಸಿಕ್ಕದೆ ಸಮಮನನೆನವ 4 ನಡೆನುಡಿಗಳಲಿ ಮಡಿಯಿಂದಿರುವಾದೃಢ ಮನದಿಂ ಬಹು ಶಾಂತಿಯಲಿರುವಾ 5 ಪ್ರತಿಪ್ರಾಣಿಯಲಿ ಹರಿಯನು ನೋಡುವಾಅತಿಶಯ ದಯವನು ತೋರುತಲಿರುವಾ 6 ಕಾಮಕ್ರೋಧಗಳ ಗಡ ಜೈಸಿರುವರಾಮನಾಮವ ನೇಮದಿ ಭಜಿಸುವ 7 ಗದುಗಿನ ವೀರನಾರಾಯಣನಹೃದಯದಿ ಸತತ ಮುದದಲಿ ಪಿಡಿವ 8
--------------
ವೀರನಾರಾಯಣ
ನಿಜದ ನೆನಪು ನಿನಗಿರಲಿ ಮತ್ತೆ ಅಜನ ಲಿಖಿತದಿ ಬಂದುದೆಲ್ಲಾ ಬರಲಿ ಪ ಹುಟ್ಟಿಬಹಾಗ ತಂದಿಲ್ಲಾ ಶಿವ ಕೊಟ್ಟ ಸರ್ವಸ್ವ ಸಂಗಡ ಬಹಾದಲಾ ಬಟ್ಟೆ ಬೈಲಾಗುವುದೆಲ್ಲಾ ಮನ ಮುಟ್ಟಿ ಭಜಿಸೊ ಗುರುನಾಥನ ಸೊಲ್ಲಾ ನಿಜದ 1 ಸುಖದ ಸುದ್ದಿಯ ನಂಬಬೇಡಾ ಬಹು ದುಃಖ ತಂದೊಡ್ಡುವುದಕೆ ತಡಮಾಡಾ ಸುಖ ದುಃಖ ತನದೆಂದು ನೋಡಾ ನಿತ್ಯ ಮುಕುತಿ ಮಾರ್ಗದಲಿ ಚಿತ್ತವ ನೀಡೋ ಗಾಡಾ ನಿಜದ 2 ನಿನ್ನೊಳು ಶೋಧಿಸಿನೋಡು ಪ್ರ ಸನ್ನವಾಗಿಹ ಪ್ರಕಾಶದಲಿ ಲೋಲಾಡು ಭಿನ್ನಭಾವನೆಯನೀಡಾಡು ವ್ಯು ತ್ಪನ್ನ ಶ್ರೀ ಗುರುವಿಮಲಾನಂದನ ಪಾಡು ನಿಜದ 3
--------------
ಭಟಕಳ ಅಪ್ಪಯ್ಯ
ನಿಜದಿ ಸುಖಪದ ಕೊಡುವೆಯೋ ಭಜಕರಿಗೆ ಶುಭದಾಯಿಯೋ ಪ ತ್ರಿಜನ ಪೂಜೆಯಗೊಂಬೆಯೋ ಅಂ- ಗಜಜನಕ ಗೋಕಾಯ್ದೆಯೋ ಅ.ಪ ಸುತನಕೊಂದೇ ಸತಿಯ ತೊರೆದೇ ಅತಿಯ ದುಃಖವ ನಟಿಸಿದೇ ಸತತ ಸರ್ವವ್ಯಾಪಿಯೆಂಬರು ಹಿತನೆ ಕಾಣಿಸೆಯೆಲ್ಲಿಹೇ 1 ನಾರಿಯರ ಸೆರೆ ನೀಗಿಸೀ ಹದಿ ನಾರು ಸಾವಿರ ಸೇರ್ದೆಯೋ ಚೋರನೆನ್ನಿಸಿ ಸೀರೆಕದ್ದು ಮಾರಕನೆ ತಾಮಮೃತನೇ 2 ಕೂರ್ಮ ವರಾಹನೇ ನರ ಕೇಸರೀ ವಾಮನನು ನೀ ಹಸ್ತಪರಶು ಶ್ರೀ ರಾಮಕೃಷ್ಣನೆ ವಿಶ್ವ ಬುದ್ಧನೆ ಕಲ್ಕಿಯೇ 3 ಘೋರ ದೈತ್ಯ ವಿದಾರಿಯೋ ಹರಿ ಸಾರಿ ಹಲವವತಾರದಿಂ ತೋರಿದವ ನೀನಾದರೂ ಜಾ ಮಾಧವ ನಂಬಿದೇ 4
--------------
ಶಾಮಶರ್ಮರು
ನಿಜವತಂದೆ ಗುರುಕೃಪೆಯಿಂದ ಸುಖಿಯಾಗಿರೊ ಮನವೆ 1 ದೊರ್ಕದು ಎಂದಿಗೆ ಮೂರ್ಖರಿಗಿದು ತಾ ತರ್ಕರಹಿತ ಪರವಸ್ತು ಗರ್ಕನೆ ತಿರುಗಿ ಸರ್ಕನೆ ನೋಡಿ ಅರಿಕ್ಯುಳ್ಳವಗರ್ಜಿತ ನಿಜಧನವು 2 ಸಾಧಿಸಿ ಜನ್ಮಾಂತರದ ಪುಣ್ಯವು ಒದಗಿ ಬಂತಿದಿರಾಗಿ ಭೇದಿಸಿ ಬೆರಿ ಚೆನ್ನಾಗಿ ಮನವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಂತ ಭಾವದ ಬಗೆಯನೆಂತು ಬಣ್ಣಿಪೆನುಚಿಂತಾಯಕನೆ ನೀನು ಚಿತ್ಸ್ವರೂಪದಲಿ ಪಸಕಲ ಲೋಕವ ಸೃಜಿಸಿ ಸಕಲದೊಳು ನೀ ನೆಲಸಿಸಕಲವನು ನಿನ್ನೊಳಗೆ ಸಲೆ ಸೇರಿಸಿಪ್ರಕಟಿಸಿದ ಜಗವೆಲ್ಲ ಪರಿಪರಿಯ ಕಲ್ಪದಲಿಪ್ರಕೃತಿಯಲಿ ಲಯವಾಗೆ ಪರಮ ಸದ್ರೂಪದಲಿ 1ಚಿತ್ರಕರ್ಮಗಳಿಂದ ಚರಿಸಿ ನಾನಾತ್ವದಲಿಚಿತ್ರದಂದದಿ ತೋರಿ ಚೈತನ್ಯವಾಗಿಕರ್ತೃಭೋಕ್ತøತ್ವದಲಿ ಕರಣಾದಿ ರೂಪದಲಿಚಿತ್ರರಚನೆಗೆ ಸಾಕ್ಷಿ ಚಿತ್ಸ್ವರೂಪದಲಿ 2ಹರಿ ಹರ ಬ್ರಹ್ಮ ಯಮ ಹರಿ ವರುಣ ಧನದಾದಿಸುರಮುನಿಗಳೊಳಗಿರುವ ಸುಖವೆಲ್ಲ ನಿನ್ನನಿರತಿಶಯ ಸುಖದಲ್ಲಿ ಲೇಶನೀನಿತ್ತವರವರದರವರೆಂದೆನಿಸಿ ಮೆರೆದು ಸುಖರೂಪದಲಿ 3ಈ ವಿಧದ ದೇವತೆಗಳಿರವ ನೋಡಿದರವರುದೇವ ನೀನೊಲಿದು ದಯಮಾಡಿದವರುಭಾವಿಸುತ ನಿನ್ನಂಘ್ರಿಕಮಲವನು ಭಕ್ತಿಯಲಿಭಾವ ನಿನ್ನೊಳು ನಿಲಲು ಭುವನೇಶ ನಿತ್ಯದಲಿ 4ಪರಿಪೂರ್ಣ ಪರಮೇಶ ಪರಮ ಮಂಗಳರೂಪಪರನೆನಿಸಿ ದೇಶಕಾಲಾದಿಗಳಿಗೆಗುರುಮೂರ್ತಿ ಶ್ರೀ ವಾಸುದೇವಾರ್ಯರೆಂದೆನೆಸಿತಿರುಪತಿಯ ವೆಂಕಟನೆ ಹೃದಯಕಮಲದಲಿ 5ಓಂ ಸರ್ವತೀರ್ಥಾತ್ಮಕಾಯ ನಮಃ
--------------
ತಿಮ್ಮಪ್ಪದಾಸರು
ನಿಂತು ಬೇಡುವೆನ್ವರವ ಪ ನಿಂತು ಬೇಡುವೆ ಎನ್ನಲ್ಲಂತಃಕರಣ ಮಾಡ್ಯ- ಭ್ಯಂತರಿಲ್ಲದೆ ಲಕ್ಷ್ಮೀಕಾಂತ ನೀ ಸಲಹೆಂದು 1 ಶಂಖ ಚಕ್ರವು ಗದಾಪದ್ಮ ಧರಿಸಿದಕ- ಳಂಕ ಮಹಿಮ ನಿನ್ನ ಕಿಂಕರ ನಾನೆಂದು2 ಕಮಲನಾಭನೆ ಕಮಲಾಪತಿ ನಿನ್ನಂಘ್ರಿ ಕಮಲಕ್ಕ ್ವಂದಿಸುವೆನು ಕಮಲಾಕ್ಷದಿ ನೋಡೊ 3 ಆಶೀಲೆ ಬಂದೆನಾದಿಶೈಲವಾಸನೆ ದಾಸರಿಗ್ವೊಲಿವ ಭೀಮೇಶಕೃಷ್ಣನೆ ನಿನ್ನ 4
--------------
ಹರಪನಹಳ್ಳಿಭೀಮವ್ವ