ಒಟ್ಟು 654 ಕಡೆಗಳಲ್ಲಿ , 99 ದಾಸರು , 588 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಳಸಮ್ಮ ಎನಗೊಲಿಯಮ್ಮ ವಿಲಸಿತವಿಮಲೆ ನೀ ಕಲ್ಯಾಣಮಾಡೆನಗೆ ಪ ನಿಲಯನಿಲಯದಲಿ ನಿಂದು ಭಕ್ತ ಕುಲವನುದ್ಧರಿಸಿದಿ ಇಂದುಮುಖಿ ಮಲಿನಹರಣೆ ದಯಸಿಂಧು ಅಹ ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ ಕಳವಳಪಡಿಸದೆ ಸಲಹು ಬೇಗೆನ್ನಮ್ಮ 1 ಭಯದೂರೆ ಜಯಕಾರೆ ಜಗಕೆ ಲೋಕ ತ್ರಯದ ಜನನಿ ಎನ್ನ ಮನಕೆ ಬೇಗ ಜಯವ ನೀಡಿ ಮಾಡು ಜೋಕೆ ಅಹ ರಮೆ ದಯಯುತೆ ನಿನ್ನ ದಯದಿ ಬೇಡುವೆನವ್ವ ಭವಭವದಲಿ ಎನ್ನ ಜಯವ ಪೊಂದಿಸಿ ತಾಯಿ 2 ಜಲಜನಾಭನ ಮೋಹಮಾಲೆ ನೀನು ಬಲು ದಯಾನ್ವಿತಭಕ್ತ ಶೀಲೆ ಎನ್ನ ಗಳವೆ ಪೊಗಳಲು ನಿನ್ನ ಲೀಲೆ ಆಹ ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ 3
--------------
ರಾಮದಾಸರು
ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು
ತೋರೈಯ್ಯ ಚರಣವ ಕ್ಷೀರಾಬ್ಧಿಶಯನಾ ಪ. ಒಂದೂ ಅರಿಯದ ಮಂದಮತಿಯ ಬಂದೂ ನೀ ಕಾಯೋ ಸಿಂಧುಶಯನನೇ 1 ವಾರಿಧಿ ತಂದೆ ಕ್ಷೀರಾಬ್ಧಿ ಶಯನಾ ಪಾರು ಕಾಣಿಸಯ್ಯ | ಮಾರಾನಾಪಿತನೇ 2 ಶೇಷಾದ್ರಿ ವಾಸಾ ವಾಸುಕೀಶಯನಾ ರಮಾವಲ್ಲಭ ವಿಠಲ ಪೊರೆಯನ್ನ3
--------------
ಸರಸಾಬಾಯಿ
ತ್ರಾಹಿ ತ್ರಾಹಿ ಶ್ರೀಗುರು ಅವಧೂತ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ ಧ್ರುವ ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ ಕೃಪಾಸಿಂಧು ಸದ್ಗುರು ಪರಬ್ರಹ್ಮ ಪಾಪಿ ದುರಾಚಾರಿಯು ನಾಪರಮ ಕೃಪೆಯಿಂದ ಕಾವದು ದಯನಿಮ್ಮ 1 ಗುಣದೋಷ ನೋಡದಿರೊ ಶ್ರೀಹರಿ ದುರಿತ ಕೋಟಿಗಳ ಸಂಹಾರಿ ನೀನಹುದೊ ಬಡವನಾಧಾರಿ ಅನುದಿನ ಕಾಯೊ ನೀ ಪರೋಪರಿ 2 ಒಮ್ಮೆ ಬಂಧನವ ಬಿಡಿಸೊ ಸಮ್ಯಕ ಙÁ್ಞನ ಸಾರದೊಳು ಕೂಡಿಸೊ ನಿಮ್ಮದಾಸ ಮಹಿಪತಿಯೆಂದೆನಿಸೊಬ್ರಹ್ಮಾನಂದದೊಳು ನಲಿದಾಡಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಂಡವ್ಯಾತಕಯ್ಯ ಹರಿ ಹರಿ ದಂಡವ್ಯಾತಕಯ್ಯ ಪ ದಂಡವ್ಯಾತಕಯ್ಯ ಪಾಂಡುಪಕ್ಷ ಮಹ ಪಾದ ಮರೆಯ ಬಿದ್ದವರಿಗೆ ಅ.ಪ ಭಾರನಿನ್ನದೆಂಬ ಭಕ್ತರ ಭಾರವಹಿಸಿಕೊಂಬ ಪಾರಕರುಣಾನಿಧಿ ಧೀರ ನಿನ್ನ ಪಾದ ಸೇರೆ ಭಜಕರಿಗೆ ಧಾರುಣಿ ಜನರ 1 ಅಜಾಮಿಳನಂತ್ಯದಿ ತವನಾಮ ನಿಜವಾದೊಂದಕ್ಷರದಿ ಮಜೆದು ಗೆಲಿದು ಕಷ್ಟ ನಿಜಪದ ಪಡೆದದ್ದು ನಿಜವನರಿತು ನಿಮ್ಮ ಭಜಿಸುವ ಜನರಿಗೆ 2 ಸಿಂಧುಶಯನನೆನಲು ಅನ್ಯರ ಬಂಧುವೆ ಕರುಣಾಳು ಮಂದರಪರ್ವತ ಮಂದಿರ ಶ್ರೀರಾಮ ಪಾದ ವಂದಿಸಿ ಸುಖಿಪರಿಗೆ 3
--------------
ರಾಮದಾಸರು
ದಯವ ತೋರೆ ತುಳಸಿ ಹರುಷವೆರಸಿ ಪರಾಂಬರಿಸಿ ಹರಿಯ ಸ್ಮರಿಸಿ ಪ. ಭವ ದಯಾವೆರೆದು ಪ್ರೇಮಗರೆದು ತಾಯೆ ನೀ 1 ಮಲ್ಲೆ ಮಲ್ಲಿಗೆ ಜಾಜಿ ಮರುಗ ಸೇವಂತಿಕೆ ಎಲ್ಲ ಪೂಜೆ ಮಾಡೆ ಸಲ್ಲಲಿತದಲಿ ನೀನಿಲ್ಲದ ಪೂಜೆಯ ವಲ್ಲನು ಶ್ರೀ ಹರಿಯು ಎಲ್ಲರಿಗಧಿಕಳೆಂದು ಪೂಜೆಗೊಂಡು ದಯಾಸಿಂಧು ತಾಯೆ ನೀ 2 ಶ್ರೀ ಶ್ರೀನಿವಾಸನೊಳು ವಾಸಿಪೆ ಸರ್ವದಾ ಪೋಷಿಪೆ ಭಕ್ತರನು ವಾಸುದೇವನ ತೋರಿ ಪೋಷಿಸೆ ಬಾರಮ್ಮ ವಾಸವಾಗಲು ಮನೆಗೆ ಸೂಸಿ ಭಕುತಿಯಿಂದ ಪೂಜಿಪೆ ನಿಮ್ಮ ಚರಣವಮ್ಮಾ ತಾಯೆ ನೀ 3
--------------
ಸರಸ್ವತಿ ಬಾಯಿ
ದಯವಾಗು ದೀನ ಬಂಧು ನಿಜ ಭಕ್ತ ಭಯ ಹರ ಸ್ಮಯ ಮುಖೇಂದು ಸಿಂಧು ನಿನ್ನಡಿಯ ಬಯಸುವೆನು ಭಕ್ತನೆಂದು ಪ. ಶ್ರೀ ಭೂಮಿಯರಸ ನೀನು ದಯವಾಗೆ ಭಾಗವತರುದಯವಹುದು ಯೋಗ ಭೋಗಗಳೆಂಬುದು ಮಿತಿರಹಿತ- ವಾಗಿ ತಾನೇರಿ ಬಹುದು 1 ತಾಪಾಗ್ನಿ ಶಮನಕಾರಿಯೆ ನಿ:ಶೇಷ ಭೂಪಾಲ ಮೌಳಿಸಿರಿಯೆ ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ ಕೋಪಿಸದೆ ಸಲಹು ದೊರೆಯೆ 2 ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ ಸರ್ವ ದುರಿತೌಘವನ್ನ ಪರ್ವತ ಶೃಂಗವನ್ನು ನಿಶಿತ ಶತ- ಪರ್ವದೊಲ್ ತರಿವರನ್ನ 3
--------------
ತುಪಾಕಿ ವೆಂಕಟರಮಣಾಚಾರ್ಯ
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದಶರಥರಾಮಹರೆ ಸೀತಾಪತೆ ದಶರಥರಾಮ ಸುಧಾಕರವದನ ¥ರಶುರಾಮ ಬಾಹುಪರಾಕ್ರಮ ಜಿತಶ್ರೀ ಪ ಸುರಮುನಿ ಸೇವಿತ ಶುಭಕರ ಚರಿತ ಕೌಸ್ತುಭ ಶೋಭಿತ ವರ ವಿಶ್ವಾಮಿತ್ರಾಧ್ವರ ಪರಿಪಾಲನ ಖರ ದೂಷಣ ರಾಕ್ಷಸ ಬಲ ಖಂಡನ 1 ವಾಲಿ ಮರ್ದನ ಭಕ್ತವತ್ಸಲ ಮಾಧವ ವಿನುತ ಪಾದ ಪದ್ಮ ನೀಲ ನೀರದ ಸನ್ನಿಭಗಾತ್ರ ಪರಮ ದಯಾಳು ನಾರಾಯಣ ಲೀಲಾ ಮಾನುಷ ವೇಷ 2 ಸಿಂಧು ಬಂಧನ ಪಂಕ್ತಿ ಕಂಧರಾಂತಕ ಗೋವಿಂದ ಮುಕುಂದಾರ ವಿಂದೋದರ ಇಂದಿರಾಧಿಪ ಶ್ರೀ ಹೆನ್ನೆಪುರ ನಿಲಯಾ ನಂದ ವಿಗ್ರಹ ಜಗದ್ವಂದ್ಯ ಮಂದಹಾಸ 3
--------------
ಹೆನ್ನೆರಂಗದಾಸರು
ದಶಾವತಾರಗಳು ಕರುಣದಿ ಪಾಲಿಸೆನ್ನ ಶ್ರೀ ಹಯ ವದನ ಪ ಕರುಣದಿ ಪಾಲಿಸೊ ಕರಿವರದನೆ ನಿನ್ನ ಚರಣ ಕಮಲಗಳಿಗೆರಗಿ ಬೇಡಿಕೊಂಬೆ ಅ.ಪ ಅಗಣಿತ ಮಹಿಮನೆ ನಗಪಾಣಿ ಶ್ರೀಶನೆ ವಾಹನ ನಿಗಮ ಗೋಚರನದ ಮೃಗರೂಪ ಮೂರ್ಜಗದೊಡೆಯನೆ ನಿನ್ನ ಮೀಗೆ ಹರುಷದಿಂದ ಪೊಗಳುವ ಸುಖವಿತ್ತು ಹಗಲಿರುಳೆನ್ನದೆ ಅಘು ಕಳೆದು ಕಾಯೊ ಗಗನಾಳಕ ವಂದಿತ ತ್ವರಿತದಿ ಕರ ಮುಗಿದು ಬೇಡುವೆ ಸಂತತ ಮರಿಯದೆಪೊರೆ ಪ ನ್ನಗ ಶಾಯಿ ಶ್ರೀ ಭೂನಾಥ ನಿನ್ನಯ ಪಾದ ಯುಗ ಸೇವೆ ನೀಡಯ್ಯ ನಗವೈರಿ ಮಗ ಸೂತ 1 ಕ್ಷಿತಿಜೆರಮಣ ದ್ರೌಪದಿ ರಕ್ಷಕನೆ ನಿನ್ನ ಸುರ ಸನ್ನುತ ಪತಿತೋದ್ಧಾರಕಮನ್ ಪತಿ ಪಾದ್ಯನೆ ಸಂ ಪಾದ ಶತಪತ್ರ ನಂಬಿದೆ ಹಿತದಿ ಎನ್ನಯ ದುರ್ಮತಿ ಕಳೆದು ಕಾಯೊ ಶತ ಮಖಾನುಜ ಗೋವಿಂದ ಬಾಗುವೆ ಶಿರ ದಿತಿಜಾರಿ ನಿತ್ಯಾನಂದ ಮಾತುಳ ವೈರಿ ವಿತತ ಮಹಿಮ ಮುಕುಂದ ನಿನ್ನನುದಿನ ಕೃತಿ ಪತಿ ಭರದಿಂದ 2 ಇಂದಿರಾಧವ ಶಾಮಸುಂದರ ವಿಠಲನೆ ಮಂದರ ಗಿರಿ ಪೊತ್ತು ಮಂದಜಾಸನಪಿತ ಮಾಧವ ಸುರ ವಿನುತ ದಯಾಸಿಂಧು ದಿನ ಬಂಧು ಪಾದ ಪೊಂದಿದೆ ಸಂತತ ಕಂದನೆಂದರಿದೆನ್ನ ಕುಂದು ಎಣಿಸದೆ ದಯ ದಿಂದ ಪಾಲಿಸು ಹೇದೇವ ನಂಬಿದೆ ದಶ ಕಂಧರಾಂತಕ ರಾಘವ ಬೇಡುವೆ ದಶ ಶ್ಯಂದನ ಸುತ ವರವ ಪಾಲಿಸಿ ಕಾಯೊ ಕಂದರ್ಪ ಪಿತ ಕುಂತಿನಂದನರ ಭಾವಾ 3
--------------
ಶಾಮಸುಂದರ ವಿಠಲ
ದಾತ ಅವಗುಣ ಧೂತ ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ ಧ್ರುವ ಜೀವದ ಜೀವ ದೇವರ ದೇವ ವಾಸುದೇವ 1 ಪ್ರಾಣಕ ಪ್ರಿಯ ಮುನಿಜನಾಶ್ರಯ ಙÁ್ಞನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ 2 ಅನಾಥ ಬಂಧು ಘನಕೃಪಾಸಿಂಧು ಅನುದಿನ ದೊರೆವ ದೀನನಾಥನೆಂದೆಂದು 3 ಮನದ ಮಾಣಿಕ ಅಣುರೇಣುಕ ವ್ಯಾಪಕ ಅನಂತಕೋಟಿ ಬ್ರಹ್ಮಾಂಡ ನಾಯಕ 4 ಪರಮ ಉದಾರ ಕರುಣಾಸಾಗರ ತರಳ ಮಹಿಪತಿಸ್ವಾಮಿ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾನಿಗಳೊಳು ಪ್ರತಿಗಾಣೆನೊ ನಿನಗೆಸ ನ್ಮೌವಿ ಶ್ರೀ ಸುಶೀಲೇಂದ್ರ | ನೀನೇವೆ ಗತಿ ಎಂದ ದೀನರ ಮನೋಭೀಷ್ಟ ಸಾನುರಾಗದಿ ಕೊಡುವಿ | ಕೈಪಿಡಿಯುವಿ ಪ ಶ್ರೀಸುವೃತೀಂದ್ರ ಸುಯಮೀಂದ್ರಗಳಿಂದಲಿ ಸ | ನ್ಯಾಸತ್ವ ಸ್ವೀಕರಿಸಿ ಪತಿ ಮೂಲ | ದಾಶರಥಿಯ ಪಾದ ಲೇಸಾಗಿ ಒಲಿಸಿದೆ ನೀ | ಸುಜ್ಞಾನಿ 1 ಕರಿವರದನ ಪೂರ್ವ ಕರುಣ ಪಡೆದು ದಿವಾ ಕರನಂತೆ ರಾಜಿಸುತ | ಗುರುರಾಘವೇಣದ್ರಾಖ್ಯ | ಸುರಧೇನುವಿಗೆ ಪುಟ್ಟ ಕರುವೆನಿಸುತ ಮೆರದಿ ಭೂವಲಯದಿ 2 ಮೋದತೀರ್ಥಾಗಮ ಸಾಧು ಸಜ್ಜನರಿಂದ ಶೋಧಿಸಿ ಬಹುವಿಧಧಿ ಪಂಚಭೇದ | ಶಿಷ್ಯರಿಗೆಲ್ಲ ಬೋಧಿಸುತಲಿ ಪೊರೆದಿ ದಯಾಂಬುಧಿ 3 ಸಿಂಧುತೀರದಿ ನೆಲಸಿ ಮಂದ ಜನರಿಗೆ | ಕ ರ್ಮಂದಿ ಪವರಗಳನು | ನೀಡುವಿ ನೀನು 4 ಶ್ರೀ ಶಾಮಸುಂದರ ವಿಠಲ ವಾಸಿಸುವ | ಕಾ ಪ್ಯಾಸನ ವರಕ್ಷೇತ್ರದಿ | ದೇಶ ದೇಶದಿ ಬಂದ | ಭೂಸುರರಿಗೆ ಧನ ರಾಶಿ ಸೂರೆ ಮಾಡಿದಿ | ಸನ್ಮೋಹದದಿ 5
--------------
ಶಾಮಸುಂದರ ವಿಠಲ
ದಾಸನಾದವನಿಗೆ ಭವಭೀತಿಯುಂಟೆ ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ ತನುಮೋಹ ಬಿಟ್ಟವಗೆ ಮರಣದ ಭಯವೆ 1 ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ ಸಂದೇಹವಳಿದವಗೆ ಕರ್ಮಗಳ ಭಯವೆ ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ ಸಿಂಧುಶಯನನರ್ಚಕಗೆ ಕಾಲನ ಭಯವೆ 2 ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ ಪರವ ಸಾಧಿಪನಿಗೆ ಕಷ್ಟಗಳ ಭಯವೆ ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ ಶರಣರೊಳಾಡುವಗೆ ನರಕಂದಜಿಕೆಯೆ 3 ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ ಸತ್ಯರೊಳಾಡುವಗೆ ಮೃತ್ಯುವಿನ ಭಯವೆ 4 ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ 5
--------------
ರಾಮದಾಸರು
ದೀನ ಬಂಧು ಕರುಣಾಸಿಂಧು ನೀನೆ ಬಂದು ರಕ್ಷಿಸೆಂದು ಪ. ನಿತ್ಯ ಮಂಗಳಾತ್ಮ ನಿಜ ಭೃತ್ಯಪೋಷಣ ಪರಾತ್ಮ ನಿತ್ಯ ಕಾರುಣ್ಯ ಚಿತ್ತಜನಯ್ಯನೆ ಈ ಜಗತ್ತಿನೊಳು ನಿನ್ನ ಪೋಲ್ಪ ಉತ್ತಮ ವಸ್ತುವ ಕಾಣೆ ಸತ್ಯಭಾಮಾ ವರ ನಿನ್ನಾಣೆ 1 ಸರಸಿಜಾಸನ ತಾನು ಪರಮ ಭಕುತಿಯಿಂದ ಸಿರಿವರ ನಿನ್ನ ನಾನಾ ಪರಿಯಿಂದಲಿ ಶರದೃತುವಿಲಿ ಬಹುಧರವಾಗಿ ಪೂಜಿಸುವ- ದರಿತು ಪಾಡುವೆನೀಗ ಕರುಣಿಸೆನ್ನ ನೀ ಬೇಗ 2 ಮತ್ಸಕೇತುಪಿತ ಭಕ್ತವತ್ಸಲ ವೆಂಕಟನಾಥ ತತ್ಸದೆಂಬೋ ಮಂತ್ರಾಗಮ್ಯ ಕುತ್ಸಿತಾಗಮ್ಯ ಉತ್ಸವ ಕಾಲದಲಿ ಸಿರಿವತ್ಸ ಬೆನ್ಹಾನಿನ್ನನು ನಿ- ರ್ಮತ್ಸರದಿ ನಂಬಿದೆ ಗೋವತ್ಸವೈದುವಂತೆ ಬಾರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೀನಬಂಧು ನೀ ದಯಾಸಿಂಧು ಪ ಆಪನ್ನ ಜನರನು ಮನ್ನಿಸಿ ಸಲಹಿ ಪ್ರಸನ್ನನಾಗುವೆ 1 ಕಂಜಲೋಚನ ನಿನಗಂಜಲಿ ಮುಗಿಯುವೆ ಕುಂಜರ ವರದ ಭುಜಂಗ ಶಯನ 2 ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3
--------------
ಬಾಗೇಪಲ್ಲಿ ಶೇಷದಾಸರು