ಪೂಜಾನುಷ್ಠಾನವ ಯೋಚಿಸಿ ಮನದೊಳುಪೂಜೆ ಷೋಡಶಗಳ ಮಾಜದೆ ಮಾಡಿರೋ ಪ
ಉಷಃ ಕಾಲದಲೆದ್ದು | ಝಷಕೇತು ಪಿತ ನಾಮಉಸುರು ತಿಪ್ಪುದೇ ಪೂಜೆಯೋ 1
ಶೌಚ ಬಾಹ್ಯವು ಮೃತ್ತು ಶೌಚ ಮಾಡಿಕೊಂಡುಶುಚಿಷತ್ತು ನಿನ ನಾಮ ಉಚ್ಚರಿಪುದೆ ಪೂಜೆಯೋ2
ತುಲಸಿ ಮೃತ್ತಿಕೆ ಹಚ್ಚಿ | ತುಲಸಿ ವಂದನೆ ಮಾಡಿಅಲಸಾದೆ ಕೃಷ್ಣನ ವಲಿಸೂವುದೇ ಪೂಜೆಯೋ 3
ಗೋವನೆ ಬಳಸುತ್ತ ಗೋಪುಚ್ಛ ಪಿಡಿಯುತ್ತಗೋವ ವಂದಿಪುದೆಲ್ಲ ಗೋಪಾಲ ನಿನ ಪೂಜೆಯೋ4
ಸ್ನಾನ ಸಂಧ್ಯಾನ ಮೇಣೂಧ್ರ್ವ ಪುಂಡ್ರವ ಧರಿಸಿಭಾನುಗಘ್ರ್ಯವ ನೀಯೆ ಶ್ರೀನಿವಾಸ ಪೂಜೆಯೋ 5
ಪಾದ ತೀರ್ಥ ಸೇವನೆ ಪೂಜೆಯೋ 6
ಅಷ್ಟ ಮಹಾಮಂತ್ರ ಶಿಷ್ಪನಾಗುತ ಹೃದಯಅಷ್ಟ ಕಮಲದಲ್ಲಿ ಧ್ಯಾನ ಮಾಳ್ಪುದೆ ಪೂಜೆಯೋ 7
ಮಂಟಪೋತ್ತಮ ಪೂಜೆ ಸುಷ್ಠು ಕಲಶ ಪೂಜೆಶ್ರೇಷ್ಠ ಪಂಚಾಮೃತ ಪೀಠ ಶಂಖ ಪೂಜೆಯೋ 8
ಘಂಟನಾದಾ ಅಖಂಡ ಶ್ರೇಷ್ಠ ದೀವಿಗೆ ಪೂಜೆಪೀಠಾವರಣ ಹೃತ್ಪೀಠ ಚಿಂತನೆ ಪೂಜೆಯೋ 9
ಮೂರ್ತಿ ಗುರುಮೂತ್ರ್ವೆಕ್ಯವೆ ಪೂಜೆಯೋ ||
ಚಿಂತಿಸಿ ಸ್ವಾಂತಸ್ಥ ಬಿಂಬನೋಳೈಕ್ಯವಚಿಂತಿಸುತ್ತಾನೇಕ ಗೈವ ವೈಭವ ಪೂಜೆಯೋ 11
ಹೃತ್ಪುಂಡರೀಕಗೆ ಕಲ್ಪ ತರುವನೆ ಬೇಡುತ್ತಪ್ರೀತ್ಯಾದ ಮಾನಸ ಪದಾರ್ಥಗಳ ಪೂಜೆಯೋ 12
ಪೂರ್ಣ ಶೃತಿಯ ಭಾವ ಚೆನ್ನಾಗಿ ಗ್ರಹಿಸುತ್ತಪೂರ್ಣನ ಕಳೆಯೊಂದು ಪ್ರತಿಮಾದಲ್ಲಿರಿಸೋ 13
ನಿಷುಸೀದ ಶ್ರುತಿಯಂತೆ ವಸುದೇವ ಕೃಷ್ಣನೆಅಸಮ ಪೂಜಕ ಪೂಜ್ಯ ಅವನೇವೆ ತಿಳಿಯೊ 14
ಬಾಹ್ಯದರ್ಚನೆಗಳು ಶ್ರೀ ಹಸ್ತದಿಂದಲಿವ್ಯಾಹರಣೆಂಬೋದೆ ಹರಿ ಪೂಜೆಯೋ 15
ಆವಾಹನಭಿಷೇಕ ನೈವೇದ್ಯಾದಿ ಪೂಜೆದೇವಗಾರುತಿ ಶಂಖ ಭ್ರಮಣಾದಿ ಪೂಜೆಯೋ 16
ಸರ್ವವನರ್ಪಿಸಿ ಅಸ್ವಾತಂತ್ರ್ಯವ ಗ್ರಹಿಸಿಶರ್ವಾದಿ ವಂದ್ಯ ಬಿಂಬಗೆ ಸರ್ವ ಪೂಜೆಯೋ 17
ಸರ್ವಾಪರಾಧವ ಸರ್ವೇಶನಲಿ ಪೇಳಿವೈಶ್ವ ದೇವಾದಿಗಳ್ ಸತ್ಕರ್ಮಗಳೆ ಪೂಜೆಯೋ 18
ಯತಿಗಳರ್ಚನೆಯನ್ನು ಮತಿಯಿಂದ ಗೈಯುತ್ತಸುತ ವಿಪ್ರಾದಿಯ ಸಹ ಹುತಶೇಷ ಮೆಲ್ಲೋದೆ ಪೂಜೆಯೋ 19
ಪ್ರಾಣಾಗ್ನಿ ಹೋತ್ರಾನು ಸಂಧಾನದಲಿ ಮದ್ದುಪ್ರಾಣನ ಪ್ರಾಣ ವೈಶ್ವಾನರಗೀಯೋದೆ ಪೂಜೇ 20
ಅಂತರಂಗದ ಪೂಜೆಗೊಲಿದ ಸಂತತ ಹರಿಕಂತು ಪಿತನು ಗುರು ಗೋವಿಂದ ವಿಠಲಾ 21