ಒಟ್ಟು 240 ಕಡೆಗಳಲ್ಲಿ , 61 ದಾಸರು , 212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ವಿವೇಕವ ಪಡೆಯಿರೋ ವಿಭುಗಳ ಕೃಪೆಯಿಂದವಿವೇಕವ ಪಡೆದರೆ ಈಶ್ವರಗಿಂ ಮಿಗಿಲಯ್ಯಪಮನವು ನಿಲ್ಲದು ಎಂದು ಮರುಗುವಿರೇಕಯ್ಯಮನವು ನಿಲ್ಲಲಿಕೆ ನಿಮ್ಮಧೀನವೆಮನವು ಆದಾತನಾನೇ ಮಹತ್ತು ಆದಾತನಾನೇಮನಕೆ ವಿರಹಿತುಮಾಪತಿಯು ತಾನೆಂದು1ಪಾಪವ ಮಾಡಿದೆನೆಂದು ಹಿರಿದು ಮರುಗಲದೇಕೆಪಾಪ ಪುಣ್ಯವು ಪ್ರಕೃತಿಯಲಾದವುಪಾಪವೆಲ್ಲಿಹವೆಲೆ ಪುಣ್ಯವೆಲ್ಲಿಹವೆಂದುಪರಪುರುಷ ತಾನಾಗದೆಂದೂ2ಆತ್ಮನರಿಪೆನೆಂದು ಅತಿ ಕಷ್ಟಬಡಲೇಕೆಆತ್ಮನ ವಿವರಿಸೆ ಅವನಲ್ಲವೆಆತ್ಮನೇ ತಾಕಂಡ್ಯಾಅಗಣಿತಮಹಿಮನುಆತ್ಮ ಅನಂತನಾಮನೆ ತಾನೆಂದು3ಅರಿವುಮರೆವೆ ಎಂಬ ಅಜ್ಞಾನವೇತಕೆಅರಿವುಮರೆವುಅಂಗದಧರ್ಮವುಅರಿವುಮರೆವೆಯುಂಟೆ ಆತ್ಮತಾನಾದವನಿಗೆಅರಿವುಮರೆವುಅಂಬುಧಿತೆರೆಯುಂಟು4ಇಂತು ವಿವೇಕವನ್ನು ವಿಭುಗಳಿಂದಲರಿದುಚಿಂತೆ ಹರಿದು ಚಿದಾನಂದ ಗುರುವಾಮುಂತೆ ದೃಷ್ಟಿಸಿಕೊಂಡು ಮರೆತು ತನುವನು ನಿ-ಶ್ಚಿಂತ ರಾಗಿಯೆ ನಿಜವಿದೆಯಂತೆಂದು5
--------------
ಚಿದಾನಂದ ಅವಧೂತರು
ಶ್ರೀ ಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ ಪಸಾಕುವನಿಗೆ ನಾನ್ಯಾಕೆ ಬಾರೆನೊ ಮನಕೆ ಅ.ಪವಸತಿಸ್ಥಳವಿಲ್ಲಾವಸುಧೆತಿರುಗುವೆನಲ್ಲಾವಸುಧೆಭಾರಾದೆನಲ್ಲಾ ಸ್ವಾಮಿವ್ಯಸನ ಬಡುತಿಹ ದ್ವಿಪದ ಪಶುವಿನ ನೋಡಿ ನಿನಗೆ 1ಜನನಿಜನಕ ತನಯಾ ವನುತೆ ಈ ದೇಹಾಮನಕೆ ಬಾರೆನೊಅವರಅನುಕೂಲವಾಗದಲೆವನದಲ್ಲಿ ಸಂಚಾರ ಇನುತೆ ಮಾಳ್ಪನ ನೋಡಿ 2ವರಣಿಸಾಲೇನಿನ್ನು ಸುಪರಣವಹÀನಭವಕರಣರಹಿತಶಾಯಿ ಕರಣ ವೈರಿಯಮಿತ್ರಕರುಣಿಸ್ಯನ್ನನು ಎಂದು ಶರಣು ಪೊಕ್ಕದು ನೋಡೀ 3ನರರ ಸೇವೆಯ ಮಾಡಿ ನರರಗುಣಕೊಂಡಾಡಿನರರ ಮಾತನೆಕೇಳಿನರರಗಾಥವಕೇಳಿಹರಿನಿನ್ನ ಚರಣಾಶ್ರಯಸಿದವನಾ ನೋಡೀ4ವಾತದೇವನತಾತಸೀತಾನಾಥನೆ ನಿನ್ನತಾತಕೇಳೀಗೆನ್ನ ಮಾತು ಮನಸಿಗೆ ತಂದುದಾತನೀನೆಂದು ನಾ ಆತುರದಿ ಬೇಡಿದೆನೊನೀತ ಗುರುಜಗನ್ನಾಥವಿಠಲ ನಿನಗೆ 5
--------------
ಗುರುಜಗನ್ನಾಥದಾಸರು
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ45ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆಪರಮಭಾಗವತೇಷ್ಟ ಚಿಂತಾಮಣಿಯೇ ಜಯ ಜಯಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪಪ್ರಣವಾಷ್ಠಾಕ್ಷರ ದಿವ್ಯ | ಆರುಅಕ್ಷರಮಂತ್ರ ಸುಪ್ರತಿಪಾದ್ಯವಿಶ್ವಾದಿ ಎಂಟು ರೂಪಚಿನ್ಮಯಕಾಯ|ಅರಿದರಧೃತಹಸ್ತಹಸ್ತವರದಅಭಯ| ಜಯ ಜಯತುಜೀಯಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |ವಾಸುದೇವನೆ ಏಕದಶ ಶತಾನಂತರೂಪನಿರ್ದೋಷಗುಣನಿಧೇ |ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮಶಿವಾದಿ ವಂದ್ಯನೇ || ಬಾರೋ 1ಪ್ರಚುರಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕಕರ್ತಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |ಚಕ್ರಧರವರ ಅಭಯಹಸ್ತನೇ ಅಜಿತಅಜಜಗದೇಕವಂದ್ಯನೆಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆಉತ್ತರಾಸುಧಾಮಉದ್ಧವಗೋಪಿಜನ ಅಕ್ರೂರ ವರದನೇಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿರಮಣನೆ ಶರಣು ಸಂತತ || ಬಾರೋ 2ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾಅಭಯವರಕರ ಘನ್ನ | ಅಮಲೇಂದು ವದನಂ ||ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |ಅನ್ನವಾಹನತಾತಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |ಘನದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||ಬಾರೋ ಬಂದಿರೋ ಶ್ರೀಶ|| 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಜಯೀಂದ್ರ ತೀರ್ಥರ ಚರಿತೆ110ಪ್ರಥಮ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿ ಯಿಂ ಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಹಂಸ ಲಕ್ಷೀಮಶ ನಾಭಿಭವ ಸನಕಾದಿಮಹಂತರ ಸೂರಿಗಳಗುರುಪರಂಪರೆಯಮಹಾ ಪುರುಷೋತ್ತ ಮದಾಸ ಶ್ರೀಮಧ್ವವನದೃಹ ಪಾದಗಳಲ್ಲಿ ನಾ ಶರಾಣು ಶರಣಾದೆ 1ಅರವಿಂದನಾಭ ನರಹರಿ ಮಾಧವತೀರ್ಥಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥಪರವಿದ್ಯಾಕುಶಲ ಶ್ರೀ ವಿದ್ಯಾದಿರಾಜರಜಯೀಂದ್ರರ ಚರಣಂಗಳಲಿ ನಾ ಶರಣು 2ಕೋವಿದಶಿರೋಮಣಿ ಕವೀಂದ್ರ ವಾಗೀಶರುಭಾವುಕಾಗ್ರಣಿ ರಾಮಚಂದ್ರ ವಿಭುದೇಂದ್ರದೇವ ಹರಿಪ್ರಿಯ ಜಿತಾಮಿತ್ರ ಯತಿವರರು ರಘುನಂದನದೇವಿ ತುಳಸೀಪತಿಯ ಒಲಿಸಿಕೊಂಡ ಸುರೀಂದ್ರರು 3ಈ ಸರ್ವ ಗುರುಗಳಚರಣಕಮಲಗಳಲ್ಲಿನಾ ಸರ್ವದಾ ಶರಣು ಶರಣೆಂಬೆ ಮುದದಿವ್ಯಾಸಮುನಿ ಪ್ರಿಯಮಿತ್ರ ಶ್ರೀಸುರೇಂದ್ರರಕರಸರಸಿಜದಿಜಾತ ವಿಜಯೀಂದ್ರರಲಿ ಶರಣು ನಾ 4ವಿದ್ಯಾಧಿರಾಜ ಸುತ ರಾಜೀಂದ್ರತೀರ್ಥರಪದ್ಮ ಕರದುದಯ ಜಯಧ್ವಜರಹಸ್ತವೃತತಿಜೋತ್ಪನ್ನ ಪುರುಷೋತ್ತಮ ಮಹಾಮಹಿಮಯತಿಕುವರ ಸೂರಿವತ ಬ್ರಹ್ಮಣ್ಯತೀರ್ಥ 5ಬ್ರಹ್ಮಣ್ಯತೀರ್ಥಾಖ್ಯ ಖಗಕರದಿ ಅರಳಿತುಮಹಿಯಲಿ ಪ್ರಖ್ಯಾತ ವ್ಯಾಸಮುನಿಅಬ್ಜಬಹುಮಂದಿ ಈ ಸುಮನ ಪರಿಮಾಳಾಕರ್ಷಿತರುಬ್ರಹ್ಮವಿದ್ಯಾ ಮಕರಂದದಿ ಮೋದಿಸಿದರು 6ಪೂರ್ವಜನ್ಮದಿ ನಾರದರಿಂದ ಉಪದಿಷ್ಟವ್ಯಾಸರಾಜರು ಶ್ರೀಪಾದರಾಜರಲಿಸರ್ವವಿದ್ಯಾ ಕಲಿತು ವಾದಿಗಜಹರಿ ಆಗಿತತ್ವ ಬೋಧಿಸಿ ಸಜ್ಜನರ ಕಾಯ್ದಿಹರು 7ಋಜುಮಾರ್ಗದಲಿ ಇರುವ ಯತಿವಟು ಗೃಹಸ್ಥರುನಿಜಭಕ್ತಿ ಶ್ರದ್ಧೆಯಿಂದಲಿ ಶ್ರೀವ್ಯಾಸ-ರಾಜರಲಿ ವಿದ್ಯಾಭ್ಯಾಸ ಮಾಡಲು ಆಗಪ್ರಜಾಪೇಕ್ಷೆ ಭಿನೈಸಿದ ವಿಪ್ರಶಿಷ್ಯ 8ಆವಿಪ್ರೋತ್ತಮನಿಗೆ ಪ್ರಜಾ ಅನುಗ್ರಹ ಮಾಡಿಪ್ರವರ ಪುತ್ರನ ತಮ್ಮ ಮಠಕ್ಕೆ ಕೊಡಬೇಕುಅವರಜರು ಸಂತತಿ ಅಭಿವೃದ್ಧಿಗೆ ಇರಲುಈ ವಿಧದಿ ಹೇಳಿದರು ಶ್ರೀ ವ್ಯಾಸಮುನಿಯು 9ಕೊಟ್ಟವರ ತಪ್ಪದೇ ವಿಪ್ರಪತ್ನಿಗೆ ಶಿಶುಹುಟ್ಟುವ ಸಮಯದಲಿ ಗುರುಗಳು ಕೌಶೇಯತಟ್ಟೆಯ ಕಳುಹಿಸಿ ಭೂಸ್ಪರ್ಶ ಇಲ್ಲದÀಲೇಹುಟ್ಟಿದ ಮಗುವನ್ನು ಹಿಡಿಯ ಹೇಳಿದÀರು 10ಶ್ರೀಮಠಕ್ಕೆ ವಿಪ್ರನು ಆ ಬಾಲಕನನ್ನುನೇಮಿಸಿದ ರೀತಿಯಲಿ ಒಪ್ಪಿಸಿ ಅಲ್ಲಿರುಕ್ಮಿಣಿನಾಥ ವಿಠಲನ ಪೆಸರಿಂದವಿಮಲವಟು ವಿದ್ಯಾರ್ಥಿ ಸನ್ಯಾಸಿ ಆದ 11ವಿಟ್ಠಲಾಚಾರ್ಯನು ಶ್ರೀ ವ್ಯಾಸರಾಜರಲಿಶಿಷ್ಠವಿಲ್ಲದೇ ಅಷ್ಟು ಶಾಸ್ತ್ರ ಕಲಿತು ಚತುಃಷಷ್ಟಿ ವಿದ್ಯಾದಲ್ಲಿ ಸಹನಿಪುಣನಾಗಿಅಷ್ಟ ದಿಕ್ಕುಗಳಲ್ಲಿ ಪ್ರಖ್ಯಾತನಾದ 12ಇದರಲ್ಲೇನು ಆಶ್ಚರ್ಯ ಇಲ್ಲ ಸ್ವಾಭಾವಿಕವುದೇವತೆಗಳು ಧರಣಿಯಲ್ಲಿ ಜನಿಸಿದರೂಶಕ್ಯಾತ್ಮನ ಸರ್ವ ಅಣಿಮಾದಿ ಐಶ್ವರ್ಯಇದ್ದು ಸುವ್ಯಕ್ತ ವಾಗುವವು ಗುರುಕೃಪದಿ 13ಈ ವಿಠಲನೇವೇ ವಿಜಯೀಂದ್ರ ನಾಮದಲಿಭುವಿಯಲ್ಲಿ ಬೆಳಗಿದನು ಸುರರಲ್ಲಿ ಶ್ರೇಷ್ಠದೇವತಾ ಕಕ್ಷದವರಾದ ಶ್ರೀವ್ಯಾಸಮುನಿಪ್ರವರ ಸುರಗಣ ವಾದಿರಾಜರ ಸಮೇತ 14ಸರಸಿಜಾಸನಪಿತ &ಟಜquo; ¥ಸÀನ್ನ ಶ್ರೀ ನಿವಾಸನು&ಡಿಜquo;ಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ15 ಪ-ಇತಿ ಪ್ರಥಮ ಕೀರ್ತನೆ ಸಂಪೂರ್ಣಂ-ದಿತೀಯ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂದ ಶರಣಾದೆಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಶ್ರೀಮನೋಹರ ರಂಗನಾಥನ ಸೇವಿಸಲುಶ್ರೀಮಠ ಜರುಗಿತು ರಂಗ ಕ್ಷೇತ್ರಕ್ಕೆಸೋಮಪುಷ್ಕರಿಣಿಯಲಿ ಕಾವೇರಿ ಮಧ್ಯದಲಿಕಾಮಿತಪ್ರದ ಶ್ರೀಶರಂಗ ಇರುತಿಹನು 1ಕಾವೇರಿ ತೀರದಲ್ಲಿ ಶ್ರೀತುಳಸಿವನ ಬೆಳಸೆಆವನಸಮೀಪದಲಿ ವ್ಯಾಸಮುನಿ ಮಠವುದುರ್ವಾದ ಖಂಡನ ಸಿದ್ಧ್ದಾಂತ ಸ್ಥಾಪನದೇವತಾರ್ಚನೆ ಹರಿಕೀರ್ತನೆ ವೈಭವವು 2ಒಂದು ದಿನ ಶ್ರೀ ವ್ಯಾಸರಾಯರು ನೋಡಿದರುತಂದು ಪೂಜೆಗೆ ಇಟ್ಟ ತುಳಸೀದಳಗಳುಇಂದಿರಾಪತಿಗರ್ಪಿತವಾದ ನಿರ್ಮಾಲ್ಯಎಂದು ತಿಳಕೊಂಡರು ವಿಚಾರ ಮಾಡಿದರು 3ತಿಳಿಯ ಬಂತು ಅಂದು ಪ್ರಾತಃಕಾಲದಲಿತುಳಸೀಗೆ ಬಂದುರು ಸುರೇಂದ್ರ ಮಠದವರುತುಳಸಿ ಕೊಡುವುದಿಲ್ಲ ಎನೆ ಪೋದರು ಆ ಬಾಹ್ಮಣರುಪೇಳಿದರುಗುರುಸುರೇಂದ್ರರಿಗೆವೃತ್ತಾಂತ4ಭಾವುಕ ಶಿರೋಮಣಿವಿಜ್ಞಾನಸೂರಿಗಳುತಾವು ಕುಳಿತಲ್ಲೇ ಸುರೇಂದ್ರ ಸ್ವಾಮಿಗಳುಭವಜನಯ್ಯನಿಗೆವನತುಳಸಿ ಪೂರಾವುಭಾವಶುದ್ಧದಿ ಅರ್ಪಿಸಲು ಹರಿಕೊಂಡ 5ಶ್ರೀ ಸುರೇಂದ್ರರ ಈ ಮಹಿಮೆಯ ಶ್ಲಾಘಿಸಿಬೇಗವ್ಯಾಸರಾಯರು ತಾವೇವೆ ಪೋಗಿಕುಶಲ ಸಂಭಾಷಿಸಿ ತಮ್ಮ ಮಠಕ್ಕೆ ಬಂದುಶ್ರೀಶಾರ್ಚನೆ ಚರಿಸಲು ಆಹ್ವಾನ ಮಾಡಿದರು 6ಸೂರಿವರ ರಾಜೇಂದ್ರ ರವೀಂದ್ರರುಎರಡು ಈ ಗುರುಗಳಿಂದಲಿ ಬಂದ ಮಠಗಳುಎರಡು ಸ್ವಾಮಿಗಳು ಶ್ರೀವ್ಯಾಸ ಸುರೇಂದ್ರರಹರಿಪೂಜೆ ವೈಭವವು ವರ್ಣಿಸಲು ಅಶಕ್ಯ 7ಥಳಥಳಿಪ ಬ್ರಹ್ಮವರ್ಚಸ್ಸು ಮುಖಕಾಂತಿಯುಎಲ್ಲ ಶಾಸ್ತ್ರಜ್ಞಾನ ಪ್ರವಚನ ಪಟುತ್ವಶೀಲತ್ವ ಸೌಲಭ್ಯ ಬಾಲ್ಯ ಚಟುವಟಿಕೆಯುಸೆಳೆದವು ಸುರೇಂದ್ರರ ವಿಠಲನ ಬಳಿಗೆ 8ರಮೆಯರಸನ ಪೂಜೆತತ್ವಬೋಧÀವು ಮಾಳ್ಪತಮ್ಮ ಸಂಸ್ಥಾನದ ಉನ್ನತ ಸ್ಥಾನಕ್ಕೆತಮ್ಮ ನಂತರ ವಿಜಯೀಂದ್ರರೇ ಸರಿ ಎಂದುನೇಮಿಸಿದರು ಮನದಿ ಸುರೇಂದ್ರ ಗುರುವು 9ಅಪರೋಕ್ಷದಲು ಈವಿಠಲನ ಯೋಗ್ಯತೆಆ ಪುಣ್ಯ ಶ್ಲೋಕರು ಅರಿತು ತಾವುಅಪೇಕ್ಷಿಸುವಂತ ವಸ್ತು ಬÉೀಕೆಂದರುಶ್ರೀಪನ ಇಚ್ಫೆಯನರಿತು ವ್ಯಾಸರಾಯರಲ್ಲಿ 10ಕೇಳುವ ವಸ್ತು ಬಿಟ್ಟು ಬೇರೆ ಏನೂ ಕೊಡುವೆಕೇಳÉಲಾರೆನು ಬೇರೆ ಕೊಳ್ಳೆನು ಬೇರೆಇಲ್ಲ ವೆಂದರೆ ಊಟ ಮಾಡಿಕೊಡುತ್ತÉೀನೆ ಈಲೀಲಾ ವಿನೋದ ಮಾತುಗಳು ಕ್ರೀಡಾರ್ಥ 11ವಿಮಲ ವಿರಜಾ ಸಮ ಕಾವೇರಿ ಮಧ್ಯದಲಿರಮಾಯುಕ್ ರಂಗನಾಥನು ಹನುಮಸೇವ್ಯರಾಮ ಪೂಜಿಸಿದಂಥ ರಾಮನು ಪಟ್ಟಾಭಿರಾಮ ಶ್ರೀ ಗೋಪಾಲಕೃಷ್ಣನ ಮುಂದೆ 12ಶ್ರೀಶನ ಈ ಬಹುರೂಪ ಸನ್ನಿಧಿಯಲ್ಲಿಭೂಸುರ ವಿದ್ವಾಂಸರ ಸಭೆ ಮಧ್ಯದಲಿವ್ಯಾಸಮುನಿದತ್ತ ವಿಠಲನ ಸುರೇಂದ್ರರುಸುಸ್ವಾಗತದಿಂದ ಸ್ವೀಕಾರ ಮಾಡಿದರು 13ವಿಜಯೀಂದ್ರ ತೀರ್ಥ ಶುಭತಮ ನಾಮವಿತ್ತರುವಿಜಯಶೀಲರಾಗಿ ವಿಜಯೀಂದ್ರರುನಿಜತತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತದುರ್ಜನ ದುರ್ವಾದ ಚೂರ್ಣ ಮಾಡಿದರು 14ಬ್ರಹ್ಮ ದಶರಥ ರಾಮಚಂದ್ರನು ಅರ್ಚಿಸಿದಭೂಮಾದಿ ಗುಣಗಣಾರ್ಣವ ದಯಾನಿಧಿಯುಕಮಲೆ ಸೀತಾಸೇವ್ಯ ಮೂಲರಾಮನ್ನಸಮ್ಮುದದಿ ಶ್ರೀವಿಜಯೀಂದ್ರರು ಪೂಜಿಸಿದರು 15ಸರಸಿಜಾಸನಪಿತ &ಟಜquo; ಪ್ರಸÀನ್ನ ಶ್ರೀನಿವಾಸ&ಡಿಜquo; ನುಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ16-ಇತಿದ್ವಿತೀಯಕೀರ್ತನೆ ಸಂಪೂರ್ಣಂ-ವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಧರೆಯೊಳುತ್ತಮ ಕುಂಭಕೋಣಾಖ್ಯ ನಗರದಿಹರಿದ್ವೇಷಿಯ ಗೆದ್ದು ಅವನ ಮಠ ತೋಟಸ್ಪರ್ಧೆ ಫಣವಾದ್ದವ ತಮ್ಮಲ್ಲಿ ಸೇರಿಸಿಕೊಂಡಧೀರ ವಿಜಯೀಂದ್ರರ ಚರಣಕಾನಮಿಪೆ 1ಸಾರಂಗಹಸ್ತವರಾಹಚಕ್ರಪಾಣಿ ರಾಮಮಂಗಳಾಂಬಿಕೆಯುತ ಕುಂಭೇಶ್ವರತುಂಗಮಹಿಮಳು ಕಾವೇರಿ ಸುಧಾಸರಸ್ಸುಈ ಕುಂಭಕೋಣದ ಮಹಿಮೆ ಏನೆಂಬೆ 2ಸಂಕ್ರಂದಸ್ಮರಮೊದಲಾದ ಜಗತ್ತಿಗೆ ಗುರುವಾದಮಂಗಳಾಂಬಿಕೆ ಕುಂಭೇಶ್ವರರ ನೃಹರಿ ಸಾನಿಧ್ಯರಭಂಗವಿಲ್ಲದೆ ಪ್ರತಿದಿನ ಸೇವಿಸುವರುಸುರೇಂದ್ರಮಠ ಗುರುವು ವಿಜಯೀಂದ್ರರು 3ಭಸ್ಮಧರನು ಸರ್ವೊತ್ತ ಮನೆಂದು ವ್ಯರ್ಥದಿದುಸ್ತರ್ಕ ಮಾಡಿದ ಜಗನ್ಮಿಥ್ಯಾವಾದಿಅಪ್ಪಯ್ಯನ ಮತವ ತೃಣದಂತೆ ಮಾಡಿದತತ್ವವಾದ ಅಸಿಯಿಂದ ವಿಜಯೀಂದ್ರ ಜಯಶೀಲ 4ಸ್ವಪಕ್ಷ ಪರಪಕ್ಷ ಸರ್ವವಿದ್ವಾಂಸರುಈ ಪುಣ್ಯಶ್ಲೋಕರ ಮಹಿಮೆ ಕೊಂಡಾಡಿತಪ್ಪದೇ ಆಗಾಗ ಬಂದು ಮರ್ಯಾದೆಅರ್ಪಿಸಿ ಪೋಗುವರು ಕೃತಕೃತ್ಯಮನದಿ 5ಬಾದರಾಯಣಿ ಮಾಧ್ವ ಗ್ರಂಥಗಳನುಸರಿಸಿವೇದ ವಿರುದ್ಧ ಮತ ಖಂಡನ ಗ್ರಂಥಗಳುಚತುರೋತ್ತರ ಶತಮೇಲ್ ತತ್ವ ಬೋಧಕವಾದಗ್ರಂಥಗಳ ರಚಿಸಿದರು ಉತ್ತಮ ರೀತಿಯಲಿ 6ಅಂಬುಶಾಯಿ ಸರ್ವ ಮುಕ್ತಾಮುಕ್ತ ಆಶ್ರಯನುಅಂಭ್ರಣೀಪತಿ ಶ್ರೀಮನ್ನಾರಾಯಣಗಂಭೀರ ಶಬ್ದಾರ್ಥ ನಿರ್ವಚನ ಮಾಡಿಹರುಅಂಬುಜನಾಭ ಒಲಿವ ಪಠಿಸಿದರೆ 7ಮಧ್ವಮತ ಪರಿಮಳ ಸುಗಂಧ ಭುವಿಯಲಿ ಹರಡೇಸುಧಾದಿ ಉದ್ಗ್ರಂಥ ಪ್ರವಚನದಿ ಪಟುವುಸುಧೀಂದ್ರ ಯತಿವರಗೆ ಸಂಸ್ಥಾನ ಕೊಟ್ಟರುಮಧ್ವಮತೋದ್ಧಾರ ವಿಜಯೀಂದ್ರ ಗುರುರಾಟ್ 8ಸದ್ಭಕ್ತಿಯಿಂಶುಚಿ ಅಧಿಕಾರಿ ಇವರ ನರಸಿಂಹಾಷ್ಟಕವಪಠಿಸೆ ಭೂತ ಪ್ರೇತ ಪಿಶಾಚಾದಿಗಳ ಉಚ್ಫಾಟನವುಚೋರ ವ್ಯಾಧಿ ಮಹಜ್ವರ ಭಯಾದಿ ಕಷ್ಟಗಳು ನಿವಾರಣಸಂಧ್ಯಾಕಾಲ ಪಠನದಿ ಸದ್ಭಕ್ತಿಗೆ ಒಲಿದು ಕಾಯ್ವ ಶ್ರೀ ನರಸಿಂಹ 9ಐವತ್ತು ಮೇಲೈದು ವರ್ಷ ಸಂಸ್ಥಾನದಿನಿರ್ವಿಘ್ನ ಪೂಜಾ ಶಿಷ್ಯೋ¥ದೇಶದೇವ ಲಕ್ಷೀಶಗೆ ತಮ್ಮ ಸೇವೆ ಸಮರ್ಪಣೆ ಮಾಡಿಪವಿತ್ರತಮ ಸುಸಮಾಧಿಯನ್ನು ಹೊಂದಿದರು 10ಶಾಲಿವಾಹನಶಕ ಹದಿನೈದು ನೂರು ಹದಿನಾಲ್ಕನೇ ವರ್ಷ ಜೇಷ್ಠಬಹುಳಶೀಲತಮ ಭವದಿತ್ರಯೋದಶಿ ದಿನದಿಮಾಲೋಲ ನಾರಾಯಣಪುರಯೈದಿದರು 11ಮತ್ತೊಂದು ಅಂಶದಲಿ ಕುಳಿತು ವೃಂದಾವನದಿಉತ್ತಮ ಶ್ಲೋಕ ನಾರಾಂiÀiಣನ ಧ್ಯಾನಿಸಿಒಲಿದು ಸೇವಿಸುವರಿಗೆ ಸÀತತ ಔದಾರ್ಯದಲ್ಲಿಇತ್ತು ವರಗಳ ಸದಾ ಸಂರಕ್ಷಿಸುತಿಹರು 12ಮೂಲರಾಮನ ವಿಮಲ ಭಾವದಲಿ ಅರ್ಚಿಸಿಕುಳಿತು ವೃಂದಾವನದಿ ಧ್ಯಾನಿಸುವ ಇವರುಮೂಲ ವೃಂದಾವನ ಮಾತ್ರದಿ ಅಲ್ಲದೇಅಲ್ಲಲ್ಲಿ ಇವರು ಮೃತಿಕೆಯಲ್ಲಿಯೂ ಇಹರು 13ವಿಜಯೀಂದ್ರರಾಯರ ವೃಂದಾವನದಲಿವಿಜಯಸಖ ಸರ್ವ ಜಗಜ್ಜನ್ಮಾದಿಕರ್ತಅಜಭವಾದಿಗಳಿಂದಸೇವ್ಯಶ್ರೀನರಹರಿ ಇಹನುವಿಜಯೀಂದ್ರಗುರುಅಂತರ್ಯಾಮಿವಾಂಛಿತಪ್ರದನು14ಶ್ರೀಶನ ಸಾನಿಧ್ಯ ಪೂರ್ಣ ಇರುವುದರಿಂದಶ್ರೀಶನೊಲಿಮೆ ಪೂರ್ಣಪಾತ್ರ ಇವರಲ್ಲಿಶ್ರೀ ಸುಧೀಂದ್ರಾದಿಗಳು ದೇವವೃಂದದ ಜನರುಭೂಸುರರು ಪ್ರತಿದಿನ ಬಂದು ವಂದಿಪರು 15ವೃಂದಾವನ ದರ್ಶನ ಸೇವೆ ಪಾದೋದಕಕುಂದುಕೊರತೆ ಇರುವ ಧಾರ್ಮಿಕ ಇಷ್ಟದವುಎಂದಿಗೂ ಎನ್ನ ಕುಂದುಗಳ ಎಣಿಸದೆಬಂದು ಪ್ರತಿಕ್ಷಣ ಕಾಯುತಿಹರು ಶರಣು ಶರಣಾದೆ 16ವಿ ಎಂದರೆ ವಿಠಲ ಜ್ಞಾನಮುದವೀವಜ ಎಂದರೆ ಜಯವು ಪುಟ್ಟು ಸಾವಿಲ್ಲಯೀ ಎಂದರೆ ಜ್ಞಾನಕರ್ಮ ಪೂಜಾಫಲವುಇಂದ್ರ ಎಂದರೆ ಐಶ್ಚರ್ಯ ಸುಖವೀವ 17ಸಿಂಧೂರವರದ ಶ್ರೀಕರ ಪುರುಷೋತ್ತಮಬಿಂದುಮಾಧವ ಶ್ರೀಧರ ರಾಮಚಂದ್ರಸೈಂಧವಾಸ್ಯನು ಅಚ್ಯುತಾನಂತ ಗೋವಿಂದಎಂದಿಗೂ ಎಮ್ಮನು ಕಾಯ್ವ ಗುರುಚರಿತೆ ಪಠಿಸೆ 18ಅಂಬರೀಷ ರಕ್ಷಕನು ಅಜಾಮಿಳ ವರದನುಕಂಬದಲಿ ತೋರಿ ಪ್ರಹ್ಲಾದನ್ನ ಕಾಯ್ವವನುಈ ವೃಂದಾವನ ಗುರುಚರಿತೆ ಪಠಿಸುವರಿಗೆಸೌಭಾಗ್ಯವೀವನು ಸುಧಾಮಗೊಲಿದವನು 19ನಾರಾಯಣವಾಸುದೇವ ಸಂಕರುಷಣಪ್ರದ್ಯುಮ್ನ ಅನಿರುದ್ಧ ಲಕ್ಷ್ಮೀ ಸಮೇತವರವಾಯು ಭಾರತೀ ಸುರವೃಂದ ಸಹಿತಇರುತಿಹ ವಿಜಯೀಂದ್ರರಲಿ ಅಭಯವರದ 20ಸೌಂದರ್ಯಸಾರ ಜಗದೇಕವಂದ್ಯನು ಭೈಷ್ಮೀಸತ್ಯಾಸಮೇತವರಅಭಯದ ಅಜಿತಇಂದಿರಾಪತಿ ಕೃಷ್ಣಗರ್ಪಿತ ಈ ಗುರುಚರಿತೆಸುದರ್ಶನ ಕಂಬುಧರ ಅಖಿಲಪ್ರದ ಹರಿಗೆ 21ಸರಸಿಜಾಸನಪಿತ &ಟಜquo; ಪ್ರಸನ್ನ ಶ್ರೀ ನಿವಾಸ &ಡಿಜquo; ನುಬರೆಸಿದ ಶ್ರೀ ಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ26ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆಈ ಜಗದಿ ಎಣೆಯುಂಟೆ ಅರಸಿನೋಡೆ ||ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪಏನು ಯತ್ನಿಸಿದರೂ ತೆರೆಯಲಿಕ್ಕಾಗದ |ಸ್ವರ್ಣಮಂಜೂಷದೊಳು ಮೂರ್ತಿಗಳ್ ||ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||ಭಕ್ತಾಗ್ರೇಸರುತರಳಪ್ರಹ್ಲಾದನಿಗೆ |ಎದುರಾರು ಉಳ್ಳರೈಧರೆಯ ಮ್ಯಾಲೆ 2ಬಾಲಕಸ್ತುತಿಸಿದ್ದು ನರಹರಿ ಹರುಷದಿ |ಕೇಳಿದನು ಆನಂದದಿ ತಾನರ್ತಿಸಲು |ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡುಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||ತೀರ್ಥರಕರಅರವಿಂದೋತ್ಪನ್ನ ಈ |ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6ಸಾರಾತ್ಮ ಸುಖಮಯಶ್ರುತಿವೇದ್ಯ ಮಹದಾದಿ |ಚರಾಚರ ಜಗತ್ಕರ್ತಪರಮಪೂರುಷನು ||ಮೂರಡಿ ಬೇಡಿದ ಮುರಳೀಧರ ಶ್ರೀಮನ್ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7ಈ ರೀತಿ ಹೊಗಳುವ ಸರಿಗಮ ಪದನಿ |ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||ಪರಮಭಾಗವತಮಹಾತ್ಮರು ಕೀರ್ತಿಸೆ |ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |ಶುಭತಮಗುಣಕಥನ ಶ್ರವಣದಿಂ ಲಭ್ಯವು |ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |ರುಕ್ಮಿಣಿ ಸತ್ಯಾಯುಕ್ಅಭಯವರದ ||ಶಂಖಾರಿಹಸ್ತಹಿರಣ್ಮಣಿ ನಿಭ ಕೃಷ್ಣ |ಜಗದೇಕ ವಂದ್ಯನು ಮುದದಿ ತಾಕುಣಿದ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |ನರಸಿಂಹ ಪರಂಬ್ರಹ್ಮ ನಮೋವರಾಹ||ನಾರಾಯಣವಾಸುದೇವಸಂಕರುಷಣ |ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧಪಾಹಿ11
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀರಾಮ ಜಯರಾಮ ಜಯತುಜಯತು ಸೀತಾರಾಮ ರಾಮ ಚರ-ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-ಣಾರಿ ನೀನಲ್ಲದೆ ಯಾರಿಲ್ಲಗತಿಜಯ ರಾಮ ರಾಮ1ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4ಮುಖ್ಯ ಸಚಿವ ಮಹಾ ಮುಖ್ಯಪ್ರಾಣನುಸೀತಾರಾಮ ರಾಮ ದುಷ್ಟ-ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮವಾಸವಮುಖ್ಯ ವಿಬುಧಾಸುರನುತಸೀತಾರಾಮ ರಾಮ ಸಾಧು-ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-ಜ್ಞಾನ ಭಕ್ತಿಭಾಗ್ಯ ನೀನಿತ್ತುಪೊರೆಜಯ ರಾಮ ರಾಮಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮಬತ್ತಿಹೋಗಲಿ ಮೋಹದುತ್ತುಂಗಾರ್ಣವಸೀತಾರಾಮ ರಾಮ ಪರ-ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-ಸನ್ನ ನಿನ್ನ ಸ್ಮರಣೆಯನಿತ್ತುಪೊರೆಜಯ ರಾಮ ರಾಮಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣುಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12ನಿತ್ಯನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14ಅಕುಟಿಲಗುಣಗಳ ಪ್ರಕಟಿಸೆನ್ನೊಳುಸೀತಾರಾಮ ರಾಮ ವಾಯು-ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆಸೀತಾರಾಮ ರಾಮ ಬ್ರಹ್ಮಾ-ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಖ್ಯವಿರಬೇಕು ಹರಿಭಕ್ತಜನಕೆಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ಪ.ಅನಾದ್ಯನಂತ ಕಾಲಕ್ಕು ಸಾಯುಜ್ಯಸಖಅನಂತಜೀವರಿಗೆ ಬಿಂಬರೂಪತಾನೆ ಜೀವರಿಗನ್ನಪಾನಿತ್ತು ಪಾಲಿಸುವಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ 1ಶ್ರೇಯಸವನೀವಪ್ರತಿಶ್ರೇಯಸದ ಬಯಕಿಲ್ಲಗೀಶ್ರೇಯಸವನೀವ ಔದಾರ್ಯಗುಣದಿಮಾಯ ದಾರಿದ್ರಾದ್ಯವಿದ್ಯತಮೋಭಾನುವಾಯುಸಖ ಜ್ಞಾನಿಜನಪ್ರಿಯ ಸಖನೊಳು 2ಕ್ಷುತ್ತøಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್ಶತ್ರು ಸಂಹಾರಿಪರಾತ್ಪರಸಖವೇತ್ತøಜನಧೇನು ವೇದೋಪನಿಷದ್ವೇದ್ಯಮಿತ್ರೇಂದು ಕೋಟಿ ಭ್ರಾಜಿತಗಾತ್ರ ಹರಿಯ 3ಕರುಣಾರ್ಣವನು ಶರಣು ಸುರವೃಕ್ಷ ಸುಖವಾರ್ಧಿದುರಿತಭವದೂರ ನಿರ್ದೋಷಗುಣದಿಸುರಮುನಿನಿಕರಸೇವ್ಯಶಾಶ್ವದೇಕೋಭವ್ಯವರಸಹಸ್ರಾನಂತ ವಿಗ್ರಹನೊಳು4ಪಾರ್ಥಸಖಗೋಪವಧೂಗೋತ್ರಸಖ ಸ್ತ್ರೀಪುತ್ರಮಿತ್ರದೇಹೇಂದ್ರಿಯಾತ್ಪ್ರಿಯ ಕೃಷ್ಣಮಿತ್ರವರನೊಬ್ಬ ಸರ್ವತ್ರ ನಾರಾಯಣಾನ್ಯತ್ರ ಸ್ನೇಹವ ತ್ಯಜಿಸಿ ಶ್ರೀ ಪ್ರಸನ್ವೆಂಕಟನ 5
--------------
ಪ್ರಸನ್ನವೆಂಕಟದಾಸರು
ಸತ್ಕರ್ಮವೆಂಬುದು ಸಾಧನವಲ್ಲದಲೆಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವುಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವುಸತ್ಕರ್ಮತ್ಯಾಗ ನಿಶ್ಯಬ್ದ ವಸ್ತುಪಗಾರುಡಿಯನರಿವೆನೆಂದು ಮಹೋರಗನ ಮೇಳವೇಆರು ನಂಬಲು ಬಹುದು ವಿಕಾರ ಮನವನುನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲುಸೇರುವುದು ಎಂತು ಪೂರ್ಣ ಬ್ರಹ್ಮ1ಬ್ರಹ್ಮನರಿದು ಸಂಸಾರವಮಾಡುಈಗ ಎಂಬನುಬ್ರಹ್ಮಘಾತನು ಅವನು ಮಿಥ್ಯವಲ್ಲವುನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆಸುಮ್ಮನೆ ಬಿಡಲಿಬೇಕುಸತಿಸುತರನು2ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲುವಾಸನಾಕ್ಷಯವು ಎಂತು ಸಂಸಾರದಿಗೋಪನಾರಬೇಡವೆನಲು ನಾರುವುದು ಬಿಡುವುದೇಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು3ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆಅಕ್ಕಿನೀರುವಗ್ಗಿದಂತೆ ಆಗಬಾರದುರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲುಭಕ್ಷಣಹುದುಬ್ರಹ್ಮಜ್ಞಾನಬಿಡುವುದಿಲ್ಲವು4ಸಂಸಾರದಿಮುಕ್ತನಾನು ಎನಲುತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತುಹಂಸಪರಮ ಚಿದಾನಂದ ತಾನೆಯಾಹನು5
--------------
ಚಿದಾನಂದ ಅವಧೂತರು
ಸತ್ಯಪ್ರಜÕರಾಯರಂಘ್ರಿಗಳ ಸಂತತಹೃತ್ಪದ್ಮದಲಿ ನೆನೆಯಿರಯ್ಯ ಪುನರಪಿಭವ.....ತ್ವತಿಯಂ ತೋರಿ ಸಾಪ್ರಾಯ ಪದ್ಧತಿಯ ವಿಪ್ರತಿಯಂ ತೋರುವಹೊರೆವಪ.ಸೂತ್ರಾರ್ಥಸ್ತೇಯ ದಾನವರಿಳೆಗೆ ಭಾರಾಗಿವೇತ್ತøಜನಗಳ ಮತಿಗೆಡಿಸಿ ಬಾಧಿಸುತಿರಲುಗೋತ್ರಧರನಾಜÕದಿಂ ಶ್ರೀ ಮಾರುತನು ತನ್ನಯ ತೃತೀಯಾವತಾರದಿಂದ್ವಾತ್ರಿಂಶತ್ ಲಕ್ಷಣಾನ್ವಿತನಾಗಿ ಋಜುಗಣದಗೋತ್ರದಲ್ಲೆಸೆದು ನಿಜಜನನಿಗ್ಹರುಷವನಿತ್ತುಧಾತ್ರಿಗೆ ಭೂಷಣದ ಮಣಿಯಂತೆ ಹೊಳೆ ಹೊಳೆವಸುತ್ರಾಮಾಶೇಷವರದ ಅಭಯದ 1ವಿಶ್ವವೆಲ್ಲ ಮಿಥ್ಯಪ್ರತಿಷ್ಠಿತವು ಅಲ್ಲವು ನಿರೀಶ್ವರ ಭುವನವೆಂಬ ಕುಮತಿಘಟಿಗಳ ಮಾತರಿಶ್ವಕಂಠೀರವನೀ ಯತಿ ರೂಪದಲಿ ಸದೆದುಸುಸ್ವಭಾವದಲ್ಲಿ ಒಪ್ಪುತ ಸುಶಶ್ವದೇಕ ಶ್ರೀ ಹರಿಯು ಜೀವ ಜಗದೊಡೆಯನಶ್ವರಾನಶ್ವರಾರ್ಥೇತರ ಮುಕುಂದೆನ್ನುತತಾ ಸ್ವಕೀಯರಿಗೆಲ್ಲಶ್ರುತಿಸ್ಮøತಿಸುವಾಕ್ಯದಿಂವಿಶ್ವಾಸವಂ ಬಲಿಸಿದ ಸುಬೋಧ 2ಮತ್ರ್ಯದ ಬುಧರು ಬುದ್ಧಿಭ್ರಂಶದಲಿ ಮಾಯಿಮತಗರ್ತದಲಿ ಬಿದ್ದಿರಲು ಕಂಡು ಕರುಣದಲಿ ಸುಖತೀರ್ಥ ಮಧ್ವಾನಂದ ದಶಪ್ರಮತಿಯೆಂಬ ವೇದಾರ್ಥ ನಾಮದಲಿ ಮೆರೆದುಧೂರ್ತದುರ್ಭಾಷ್ಯಾಂಧಕಾರವಂ ಬಿಡಿಸಿ ವಿದ್ಯಾರ್ಥಿಗಳಿಗೊಲಿದು ಸದ್ಭಾಷ್ಯಗಳ ರಚಿಸಿಪರಮಾರ್ಥ ವ್ಯಾಖ್ಯಾನಗಳ ಪೇಳಿ ಉದ್ಧರಿಸಿದ ಸಮರ್ಥ ಮಾರ್ತಾಂಡನಾದ ಸುಖದ 3ಮಬ್ಬು ಮುಸುಕಿದ ಪರೆಯ ತೆರೆದ ಸುಜನರ ಹೊರೆದಕೊಬ್ಬಿದ ಕುತರ್ಕಿಗಳ ತರಿದ ಇಂದುವ ಜರಿದÀಸಭ್ಯರಿಗೆ ತತ್ವಸುಧೆಯೆರೆದ ಮಂತ್ರವನೊರೆದನಬ್ಬಗುರುಪೂರ್ಣಬೋಧದುಬ್ಬಿ ತಮಸಿನೊಳು ಮಿಥ್ಯಾತ್ಮಕ ದುರಾತ್ಮರಿಳೆಗುಬ್ಬಸದ ದರ್ಶನಗಳೊರೆಸಿ ಸತ್ಯವ ಮೆರೆಸಿಅಬ್ಬರದ ತಪ್ತ ಮುದ್ರೆಯನಿತ್ತಘವ ಕಿತ್ತುನಿರ್ಭಯವ ಪದವನೀವಕಾವ4ಇಂಥ ಸಂಕರ್ಷಣನ ಪ್ರೀತಿಯ ಕುವರ ಅಮಲವಾತನಿಖಿಳಪ್ರಾಣನಾಥ ರಘುಪತಿಯಸೇವ್ಯತ್ರೇತೆಯಲಿ ಮೂಡಿ ಪ್ರಖ್ಯಾತಾಕ್ಷಯ ಪ್ರಮುಖಭೂತಳದ ಭಾರರೊದೆದಪೂತನಾರಿಯ ಪಕ್ಷಪಾತದಿಂ ಬಕ ಜರಾಜಾತ ಗಾಂಧಾರ್ಯರಂ ಘಾತಿಸಿದ ಶ್ರೀಸವಿತನಯನಾಜÕದಲಿ ಪಾತಕಿಗಳೊರಸಿದಾದ್ವೈತ ಮತ ಕಾಲನೆನಿಪ್ಪ 5ಹತ್ತುಪನಿಷದ್ಭಾಷ್ಯಸೂತ್ರಗೀತಾಭಾಷ್ಯಮತ್ತೆ ಅಣುಭಾಷ್ಯ ಋಗ್ಭಾಷ್ಯಭಾಗವತತಾತ್ಪರ್ಯ ವಿಷ್ಣುಸ್ತೋತ್ರದ್ವಯಂ ಕಲ್ಪದ್ವಯಂಹತ್ತು ಪ್ರಕರಣವು ಕೃತಿಯುತಂತ್ರಸಾರಕೃಷ್ಣಾಮೃತಾಬ್ಧಿಯ ಮಹಾಭಾರತಾನ್ವಯ ವಿವರ್ಣನವೆಂಬ ಸದ್ಗ್ರಂಥ ಮೂವತ್ತೇಳು ರಚಿಸಿ ಮೋಕ್ಷೋಪಾಯವರುಹಿದ ವಿಧಾತ್ರ ಪದಕರ್ತನೀತತಾತ6ಭಾಟ್ಟ ಪ್ರಭಾತ ಛೆರಾನಾಯತ ? ಪ್ರತ್ಯಕ್ಷ ಮತಿ............... ಚಾರ್ವಾಕ....................ಚೌದ್ಧನೆ............ಶಂಕರನೆ ಕಡೆಯಾಗಿಪ್ಪತ್ತೊಂದುನಷ್ಟ ಭಾಷ್ಯವನಂಘ್ರಿಯಲಿಮೆಟ್ಟಿ ಸದ್ಗುಣಶರಧಿಹರಿಯು ಭುವನಂಗಳನುಹುಟ್ಟಿಸೆತ್ತಿಳಿದಾಡಿ ಮುಕುತಿಯ ನಿಜರ್ಗಿತ್ತುಕಷ್ಟವ ಖಳರ್ಗೀವನೆಂದು ಡಂಗುರಿದದಿಟ್ಟಾಲವಬೋಧ ರಾಜತೇಜ 7ಶ್ರುತಿವೇದನಿಕರ ಚಕ್ರವ ಪಿಡಿದು ಬ್ರಹ್ಮತರ್ಕಾವಳಿಯ ಶಂಖದ ಭೀಕರ ಘೋಷದಿಂದ ಜಗತ್ಪ್ಪಾವನನ ಪುರಾಣಗದೆ ಇತಿಹಾಸ ಪಂಚರಾತ್ರಭಾವಶಾಙ್ರ್ಗವಿಡಿದುಜೀವೇಶ ಭೇದಶರಪಂಚಕದಿ ಬ್ರಹ್ಮಸೂತ್ರಾವಳಿಯಿಂಬಿನ ನಂದಕವ ಧರಿಸಿ ಬೆಂಬತ್ತಿದೇವರಿಪುದುರ್ಮತವ ಓಡಿಸಿದಮಧ್ವನಾರಾಯಣ ಪಾರಾಯಣ ಯತಿ ಸುಮತಿ 8ತರುಣರವಿತೇಜಸುಸ್ಮಿತ ಸುಂದರ ನಾನಾ ಸುವರ್ಣಕಾಪಿನ ಭ್ರಾತ ಪ್ರಬೋಧ ಮುದ್ರಾಭಯಕರಸರೋರುಹದಿಂದ ಮೆರೆವ ವಿಧಿಪನಶರಣಜನ ಮಂದಾರನಪರಮನವರತ್ನದ ಪದ್ಮದ ಮಾಲೆಯಿದು ಪುಣ್ಯಕರವು ವೈಷ್ಣವರ್ಗೆ ಅಘದೋಟ ಮುಕ್ತಿಯ ಕೂಟಗುರುಮೂರ್ತಿಯ ಕೀರ್ತಿ ಪ್ರಸನ್ನವೆಂಕಟಪತಿಯವರಪ್ರಧಾನಾಂಗ ಮೂರ್ತಿಯ ವಾರ್ತಿ9
--------------
ಪ್ರಸನ್ನವೆಂಕಟದಾಸರು
ಸಮಸ್ತ ನಾಮಮಣಿಗಣ ಷಟ್ಚರಣ ಪದ್ಯಮಾಲಾಶ್ರೀ ರಮಾವರ ಶ್ರುತಿವಿನುತ ಸುಖಸಾರಗೃಹಕೆ ಸರ್ವೇಶ ಸುರದ್ರುಮವಾರಿಜಾಕ್ಷ ಮುಕುಂದಮುರಹರನಾರಸಿಂಹ ನಮೋಪ.ಗರುಡಗಮನ ಗುಡಾಳಕಾಖಿಳಶರಣಜನಸುರಧೇನುಸುರಮಣಿಕರುಣಸಾಗರ ಕಾಮಿತಾರ್ಥದದುರಿತಗಜಸಿಂಹಾಸರಸಿಜಾಸನಸೇವ್ಯಮುಕ್ತಾಭರಣನಮಿತ ಸುರೇಶ ನಿಶಾಚರಹರಣಶೀಲ ಸದಾಗಮ ಜೆÕೀಯಾದಿ ಪುರುಷ ನಮೋ 1ವಿಶ್ವಗರ್ಭ ವಿಚಿತ್ರಚರಿತ ಶುಭಾಶ್ವವದನ ವಿಶಾಲವಿಕ್ರಮಶಶ್ವದೇಕ ಸುವ್ಯಾಪ್ತ ಜ್ಞಾನಾನಂದ ಬಲಪೂರ್ಣನಶ್ವರೇಶ್ವರ ಸವಿತರೇಶ್ವರಈಶ್ವರೇಶ್ವರವೇದಗೋಚರಸುಸ್ವಭಾವ ನವಾಂಬುದಾಂಗ ಕೃಪಾಳು ಕೃಷ್ಣ ನಮೋ 2ಜನಪಮುನಿನುತ ತಾಟಕಾಂತಕಜನಕಜಾವರ ಲಕ್ಷ್ಮಣಾಗ್ರಜಜನಕ ವಾಗ್ವರ ಇಂದ್ರಪೂಜಿತ ಸೂರ್ಯಸುತಪಾಲದಿನಪ ಕುಲಪತಿ ದೀನವತ್ಸಲವನಧಿಬಂಧ ವಿಹಾರದಶಶಿರಹನನಕಾರಣ ಭರತಪಾಲಕ ರಾಮರಾಜ ನಮೋ3ಪೂತನಾಂತಕ ಶಕಟಮಾರಕವಾತಚಕ್ರಾನಿಷ್ಟಹರ ನವನೀತ ಪ್ರಿಯ ದಧಿಸಾರ ಭೋಜಕ ಗೋಪವಧುಲೋಲಶೀತಕರ ಕುಲತಿಲಕ ಶ್ರುತಿವಿಖ್ಯಾತಕರಿಚಾಣೂರ ಬಕಹರ&ಟsquo;ಮಾತುಳಾಂತಕ ಪಾರ್ಥಸ್ಥಾಪಕ ಕೌರವಾಂತ ನಮೋ 4ಚಕ್ರ ಶಂಖ ಗದಾಬ್ಜಧರ ತ್ರಿವಿಕ್ರಮಾಚ್ಯುತ ವರಹ ವಾಮನನಕ್ರಶಿಕ್ಷಕ ನಾಗರಕ್ಷಕ ನಿತ್ಯತೃಪ್ತ ಹರೇಶಕ್ರಗಿರಿಶಾರ್ಚಿತ ಪದಾಬ್ಜ ತ್ರಿವಕ್ರವಧು ಸೌಂದರ್ಯದಾಯಕಅಕ್ರುರಾಭೀಷ್ಟದ ವಿದುರ ಉದ್ಧವವರೇಣ್ಯ ನಮೋಮ 5ಮಧುಮಥನ ಕೈಟಭವಿದಾರಣಕುಧರವರ ಆನಂತವರ್ಣಾಭಿಧ ಜನಾರ್ದನ ಸಾಮಗಾಯನ ವೇದ್ಯಅನವದ್ಯವಿಧಿನಿಷೇಧಾಲಿಪ್ತ ಸತತ ವಿಬುಧನಿಯಾಮಕ ನಿರ್ಭಯಾತ್ಮ ತ್ರಿವಿಧ ಜನಾಶ್ರಯ ಕುಶಶಯನ ಶಾರಙ್ಗಪಾಣಿ ನಮೋ 6ವಾಸುದೇವಕುಭಾರವಾಹಕವಾಸವೇಯ ಕಪಿಲ ಋಷಭಮಹಿದಾಸ ಯಜ್ಞಾದತ್ತ ನಾರಾಯಣ ನಿರಾಮಯ ಭೋಶ್ರೀಸನಾತನ ಸಕಲಭುವನ ನಿವಾಸ ಸಂಕರುಷಣ ಸದಾಸ್ಮಿತಹಾಸ ದಿವಾಕರೇಕ್ಷಣಸ್ವಪ್ರಕಾಶನಮೋ7ಶೇಷಶಯನ ಜಗಚ್ಚರಾಚರಪೋಷಕಾಧಾರಕ ಸ್ವಜನ ಹೃದ್ಭೂಷಣಾಪರಿಚ್ಛಿನ್ನ ಅಪ್ರಮೇಯಾದಿ ಶ್ರುತಿವಕ್ತಘೋಷ ವರ್ಣ ಸುಪೂರ್ಣ ವಾಚ್ಯಾಶೇಷದೋಷವಿದೂರ ಖಳಜನಭೀಷಣಾಪ್ರಾಕೃತ ಅನುಪಮ ಪರಮಪುರುಷ ನಮೋ 8ಇಹದ್ಭಯ ಕ್ಷಯಕರ ಗುಣತ್ರಯರಹಿತ ವೃದ್ಧಿ ಹ್ರಾಸವರ್ಜಿತವಿಹಗತೈಜಸಪ್ರಾಜÕವಿಶ್ವಾವಸ್ಥತ್ರಯದಾತಾಅಹಿತನಾಶ ಪರೇಶ ಗಹನಾತ್ಗಹನಅವ್ಯಯಅತಿಶಯಾದ್ಭುತಬಹುಳ ಜೀವಾಂತರಿಯ ಅಂತರ್ಬಹಿಃಸ್ವತಂತ್ರ ನಮೋ 9ಪೂರ್ಣ ಕಾಮಾಂಬೋಧಿ ಶ್ರೀವಟಪರ್ಣತಲ್ಪ ಪರಾತ್ಪರಾಪ್ರತಿವರ್ಣ ನಿಗಮಾಗಮ ಅತಕ್ರ್ಯಾನಂತ ಸದ್ಗುಣ ಧೇನಿರ್ಣಯಾತೀತಾನಿರುದ್ದ ಸುಖಾರ್ಣವಾಚ್ಯುತ ಸೌಖ್ಯಕರ ನವಕೀರ್ಣ ವಿಗ್ರಹಪದ್ಮನಾಭಉದಾರಲೀಲ ನಮೋ10ಮೋಕ್ಷವಲ್ಲಭ ಭವಮಲಘ್ನ ಮುಮುಕ್ಷುವರದ ಮುನೀಂದ್ರ ಸುಮನೋಧ್ಯಕ್ಷ ದಾಮೋದರ ದಯಾಪರ ಜಿತದಿತಿಜ ಸಮರಭಿಕ್ಷುಕಾನ್ವಯಪ್ರಿಯ ಸಮಾಧಿಕಪಕ್ಷ ಸೃಷ್ಟ್ಯಾದ್ಯಷ್ಟ ಕಾರಣದಕ್ಷಾಧ್ವರಹರ ಬ್ರಹ್ಮ ನಿವಹಾದ್ಭಿನ್ನರೂಪ ನಮೋ 11ಕಂಠಕೌಸ್ತುಭಭೂಷಣಾಂಶಾಕುಂಠಿತಾತ್ಮೈಶ್ವರ್ಯ ಅಶುಭವಿಲುಂಠಕಾಧೋಕ್ಷಜ ಉಪೇಂದ್ರನೆ ಶ್ರೀಶ ಅನಿರುದ್ಧಕುಂಠಿತ ಜನನ ಮರಣ ಶಿರಿ ವೈಕುಂಠಪಾಬ್ಜಾಮ್ಲಾನ ತುಲಸೀಕಂಠಮಾಲಾನ್ವಿತ ಸುಗಂಧ ಜ್ಞಾನಕೋಶ ನಮೋ 12ನಿರ್ಜರೇಷ್ಟದ ನೀತಫಲದನೆದುರ್ಜನಾರ್ದಕ ದೂಷಣಾಂತಕನಿರ್ಜಿತಾಖಿಳ ಸುಜನಪಾಲಕ ನಿಶಾಚರೌಘಹರವರ್ಜಿತಕಲುಷನಿತ್ಯವಿಬುಧರಊರ್ಜಿತರ ಚಾರಿತ್ರವಿಮಲ ಗುಣಾರ್ಜಿತೋದಧಿ ವಿಪದಧ್ವಜ ವೈರಾಗ್ಯ ಪುರುಷ ನಮೋ 13ಅಪುಶಯನ ಆದ್ಯಾಪ್ತ ಇಷ್ಟಜನ ಪರಗತಿಪ್ರದ ಈಶ ವರನುತಉಪಮವಿರಹಿತ ಊಧ್ರ್ವಗಪ್ರಿಯ ಋಜು ಭೃನ್ರೂಪಧರಲುಪತ ದುಷ್ಕøತ ಲೋಕ ಮೋದಕಚಪಲ ಏಕಾನೇಕ ವಿಗ್ರಹಸ್ವಪರ ಐಶ್ವರ್ಯೋಜ ಔದಾರ್ಯ ಸಹಸ್ರ ನಮೋ 14ಕರುಣನಿಧಿ ಖಳಹರ ಗರಾದಪಘರಘರಧಿ ಸಮ್ಯಙ್ಞ್ನಮಕ ಸುಚರಿತಪ್ರಾಕೃತಛವಿರಹಿತ ಜನಪಾಲಝಷಋಷಭಾಞುರು ಜಗತ್ಪರ್ಯಟನಕಮಠಡಮರ ಧರೇಢ್ಯನೆ ಗೂಢ ಗುಣಚಿತ್ಪರಕುಧರಧಿಕೋಚ್ಚರ ಜಾರಗ ಧನುಹನ್ಧನದನಮೋ15ನರಸಖಾಮಿತಪಶುಪಫಣಿಮದಹರ ಬಲಾನುಜಭರಿತವಿಕ್ರಮಮರುತ ಕಾಂಗಯರುಘ್ನ ನೆರಲೇಶ್ವಶುರ ಲಕ್ಷ್ಮೀಶಾವರದರಾಟ್ ಶಶಿವದನ ಷಕೃಸನಿರುತ ಸರ್ವಭುಕ್ ಯಜÕ ಹವ್ಯೇಶ್ವರ ಸ್ವತೃಪ್ತ ಸ್ವಪೂರ್ಣಲಕ್ಷ್ಮೀಧರ ಯಜ್ಞಾಂಗ ನಮೋ 16ಕಪಟನಾಟಕಕಾಲಕಿತವಭಯಪರಿಹರ ಕೀಚಕರಿಪುಪ್ರಿಯಕುಪುರುಷಾಂತಕ ಕೂಬಕೇಶನೆ ಕೈವಲ್ಯಕೀಶವಿಪುಲಕೋಶನೆ ಕೌಶಿಕಮುನಿ ಮಖ ಪರಿಪೋಷಕಕಂಬುಕಂಧರತÀಪನ ಕೋಟಿಪ್ರಕಾಶ ಕಶ್ಯಪಸುತ ಸುರೇಂದ್ರ ನಮೋ 17ಖರವಿದಾರಕ ಖಾದಿ ಪಂಚಕಭರಿತನಖಿಳ ವ್ರಜಸಖೀಮನೋಹರ ಸುಖುರಪುಟ ಶೋಭಿತ ಖಡ್ಗ ಖೂಚ್ರ್ಛ ಇಷುಪಾಣಿಸುರಸಖೇಳನ ಪರಸುಖೈಕ ಶರಿರ ವಿಶಿಷ್ಟ ಸುಖೋದಯಾಂಕುರವರಸುಖೌಘಾಖಂಡಪರಶೋ ದುಃಖಹರಣ ನಮೋ18ಗಗನನಾಭಾಗಾಧ ಚರಿತ ಗಿರಿಗಣಸೇವ್ಯ ಸುಗೀತಪ್ರಿಯ ಗುಪ್ತಗುಣ ಗೂಢಧಿ ಗೇಹ್ಯತ್ರಯಯುತ ಗೈದಿಹನೆ ಗೋಪ್ತಾಸ್ವಗತ ಗೌರವ ಗಂವ್ಹರಾಂಕಿತಸುಗಃನೋತ್ತರ ಶುಭಸುಖಾಕರಸುಗಮಸೂಕ್ಷ್ಮ್ಮ ಸುದುರ್ಗಮಾಲಯ ವಿಜಿತರೋಷ ನಮೋ19ಘಟಶ್ರವಣ ಘಾತಕ ಲಘಿಮಯುಕ್ಚಟುಲಗಾತ್ರಾ ಘೀಜನಹರಣಪಟು ರಘುದ್ವಹ ಪಿಶಿತಭೋಜಕ ಘೂಕಖದ್ಯೋತಕಠಿಣ ಘೇರಟಮಾನಖಳಸಂಕಟ ನಿವಾರಕಘೋರಯೋಧಕನಟಕಾಘೌಘ ವಿದಾರ ಘಂಟಾಚಾಪ ದೀರ್ಘ ನಮೋ 20ಚಕ್ಷುಷಾಲಯ ಚಾರುಗುಣಚಿತ್ಕುಕ್ಷ್ಷೆ ಚೀರದ್ವಯ ಚುತೇತರರಕ್ಷ ಚೂಡಾಚೇಷ್ಟ ಚೈದ್ಯಹರಾದ್ಯ ಚೋರಾರೇರಿಕ್ಷಜಾತಾವರ ಚೌರಾಶಿತಿಲಕ್ಷ ಪ್ರತಿಮಾದ್ಯಕ್ಷಚಂದನವಕ್ಷ ವನಸ್ರಗ್ಧರ ಋಚಃಸ್ವನ ಪ್ರೀಯಪುರುಷ ನಮೋ 21ಛತ್ರಯುಕ್ ಛಾಯಘ್ನ ಛಿಧ್ವರಕ್ಷುತೃಷಾರ್ದಕ ಛೇದವರ್ಜಿತ* * * ಸ್ವೇಚ್ಚೈಕಚರ ಇಚ್ಛೋದ್ರೇಕ ಮಾಂದ್ಯಹರಶತ್ರುಭಿತ್ಸಚ್ಛೌರ್ಯ ಭೂಷಿತಸತ್ರಭುಕ ಛಂದೋಮಯಾತ್ಮಕಪುತ್ರ ಪೌತ್ರ ಪ್ರಪೌತ್ರ ಶೋಭಿತ ಸ್ವಚ್ಛಃ ವರ್ಣ ನಮೋ 22ಜಯತರಾನನ ಜಾಡ್ಯಹರಜಿತಭಯನಿಚಯ ಜೀವೌಘರಕ್ಷಯಜುರ್ಯಜಾಸುರ ಜೂಕನುತ ಸುರಜೇಷ್ಠ ಜೈನಧಿಹನ್ಲಯ ಜಲಾಶ್ರಯ ಜೋತಿರ್ಮಯ ತನುವ್ಯಯ ವ್ರಜೌಕಸ ವಂದ್ಯ ಜಂಬುನಿಲಯ ಕುವಲಯನಯನ ಅಜಸ್ರಾನಂದ ಬಲಗ ನಮೋ 23ಝಡಿತಿಚರ ಝಂಝಾಮರುಚ್ಚರಝಡುಪಚರ ಝಿಲ್ಲಿಕ ವನೇಚರಜಡಧಿಚರ ಝೀರಿತ ಸುರ ಝುಂಟಾವಲಯ ಝೂಣಿಚರ ?ಒಡನೆ ಝೇಂಕರಿಸುತಲಿ ಝೈಡಿಯುದೃಢದಿ ಝೋಂಡಿಯೋಳ್ಚ್ಚರಿಸಿ ಝೌಂಕರಿಸ್ಯೊಡಲಿನೊಳು ಝಂಕಾರಪೂರ್ಣನೆ ಝಷಪತಿಯೆ ನಮೋ 24ಪಟಲಹೈಮಕಟಾಹಭಂಜಕನಿಟಿಲದೃಕ್ ಟೀಕಾರ್ಥಸುಪ್ರಿಯಕಟುಮತಿಘ್ನ ಭವೇಡ್ಯಾ ಟಂಕಾನ್ವಿತ ಕರಾಬ್ಜೇಕಾಜಠರಜಡಹ ಕುಠಾರಧರಸತ್ಕಠಿಣಕರ ಸುಕಠೋರ ಯೋಧ ಕಮಠವಿಕಾರ ಶಠೌಘಸಂಹರ ನೃಹರೆ ಭೃಗುಜ ನಮೋ 25ಕುಂಡಲೀಶ ಷಡಾಸ್ಯಸನ್ನುತಪಂಡಿತಾರ್ಚಿತ ಪಾಂಡುರಾಂಬರಮಂಡಲೇಶ ಬಿಡೌಜನುತ ನೃವಿಡಂಬನ ಚರಿತ್ರಪಂಢರಾಪುರ ರಾಜವಿಠಲಾಖಂಡಮತಿ ಪಾಖಂಡ ದೂಷಕಖಂಡಮರಕ ಪ್ರಭುಘ್ನಮುನಿ ಪುಂಡರೀಕವರದ ನಮೋ 26ಪ್ರಣತಪ್ರಿಯ ಪ್ರಣಾಯ್ಯಪ್ರಿಯ ವಿಪಫಣಿಪಪ್ರಿಯ ವಾಣೀಧವಪ್ರಿಯಅಣುಮಹದ್ರೇಣೂಸ್ಥಪ್ರಿಯ ಸುಗಣೇಶ ಪ್ರಿಯಕರನೇಕ್ಷಣ ಕ್ಷಣೈಕ್ಯ ಸುವ್ಯಕ್ತಧಾರಣಗುಣಗಣೋತ್ಪಾಟಣ ರಣೌಘಾಂಗಣ ಭಯೋಚ್ಚಾಟಣ ಗುಣಾಂಕ ಶರಣ್ಯಸುಖದ ನಮೋ 27ತÀಥ್ಯವ್ರತ ಸತ್ತಾತ್ವಿಕಾಗಮಕಥ್ಯ ತಿಲಮಾತ್ರಾರ್ಪಕೇಷ್ಟದಮಿಥ್ಯದೂಷಕ ತೀರ್ಥಶ್ರವ ತುರ್ಯಾತ್ಮಾತೂರ್ಣಪ್ರಿಯನಿತ್ಯತೇಜಸ ತೈತ್ತಿರಿಯಶ್ರುತಿಸ್ತುತ್ಯ ತೋಯಾಯನ ಧೃತೌಷಧಪಥ್ಯ ತಾಂತ್ರಿಕಪರಮಚೇತಃಪರಮಕಾಲ ನಮೋ28ಪ್ರಥಮಪುರುಷ ಪೃಥಾತ್ಮಜಾನ್ವಗಮಥಿತವೀರ್ಯ ರಥೀಂದ್ರ ಪರಿಚರಪೃಥಿವಿ ಪೂಜಿತ ಸ್ಥೂಲಕೃತ್ಯಥೇಚ್ಛ ಸ್ಥೈರ್ಯಮತೇಪಥಿಕಸದನ ಯಥೋಕ್ತ ಫಲದ ವಿಪಥರಥೌಘಪ ಸುರಥಚರಣ ಕುಪಥಗÀ ದೂರಕ ಬ್ರಹ್ಮಸ್ತಂಭಾಂತಸ್ಥ ಸ್ವಸ್ಥಃ ನಮೋ 29ದಹರ ವ್ಯೋಮಗ ದಾತೃ ದಾಂತ ಹೃದ್ಗುಹಸದನ ಕರ್ತ ತುಹಿನಬಿಂಬಗಅಹಿಪದೀಪ್ತ ಮಯೂಖ ದುರ್ಗಾವ್ಯಾಕೃತಾಂಬರಗಾಅಹಿತದೂಷಕ ದೇವ ದೈತ್ಯರದೋಹನ ಕಾರ್ಯಗ ದೌತ್ಯಕರ್ಮಗದ್ರುಹಿಣದೇಹ್ಯಗ ದಂಡಕಾರಕ ದರ್ಪಕಸಹ ನಮೋ 30ಧÀರ್ಮನಿಚಯಪ ಧಾತು ಸಮುಹಪಕರ್ಮಧಿಷÀಣಪ ಧೀರಪ್ರಜÕಪನರ್ಮವಾಗ್ಮಿಪ ಧುನಿಕದಂಬಪ ಧೂರ್ಜಟಾಂಕಿತಪಚÀರ್ಮಖಡ್ಗಪಧೇನುವಿಪ್ರಪಮರ್ಮ ಧೈರ್ಯಾಂಕಿತನಧೋಕ್ಷಜನಿರ್ಮಲಾತ್ಮಕ ಧೌಮ್ಯಗರ್ಗಪ ಧನ್ಯಧನಪ ನಮೋ 31ನಗವಿಧೃತಕರ ನಾಗಗರ್ವಹನ್ನಿಗಮರಿಪುನಾಶಕ ನೀತಪ್ರಭುಸುಗುಣಸೇವ್ಯ ನುತಜನಮಂದಾರ ನೂತನಾಬ್ಜಾಂಘ್ರೀಯುಗ ಯುಗಾಂತಕ ನೇಮನೈಷ್ಟಿಕಸುಗುಣನೋದಧಿ ನೌಗ ನಂದಕವಿಗತ ಸ್ನೇಹವಿನಷ್ಟ ಜಗದೋದ್ಧರಣಶೀಲ ನಮೋ 32ಪವನ ಮತಿ ಪರಿಪಾಕ ಬಿಂಬಸ್ತವನನಿರತ ಪಿನಾಕಿಮೋಹನಸುವಧು ಪೀಯೂಷಧರ ಪುಷ್ಪವಿಹಾಸ ಪೂರ್ಣಪ್ರಭಾಕವಿವರದ ಪೇಶಲ ಜಟಿಲ ಪೈಲವಿನುತ ಶುಕವಿಪೋಷ ಪೌರಾಣವಿರಚಕ ಪಂಚನಿಶಿ ಭಾರತ ಸೂತ್ರಕರ್ತ ನಮೋ 33ಫಲಿತ ಸದ್ರಸ ಫಾಲಲೇಖಕಲಲಿತ ಸ್ಫೀತಾತ್ಮಕ ಸ್ಫುಟಥಭೃಜ್ವಲ ಮರುತ ಪಯಫೇನ ಭುಕ್ಷತ ಸ್ಫೋಟಾತಂಕಹಾಬಲಬಲದ ಬಾಣಘ್ನ ಬಿಲಗಿರಿನಿಲಯಮುನಿ ಹೃನ್ನಿಲಯಬುಧಮಂಡಲ ವಿರಾಜಿತ ಬೋಧಯುತಕರ ಬಂಧಮೋಕ್ಷ ನಮೋ 34ಭದ್ರಪದ ಭಾವಕ ಭಿಷಗ್ವರರುದ್ರಭೀಕರ ಭುಕ್ತಿದಾ ದಾರಿದ್ರ್ಯದೂರಕ ಭೂರಿಭೂತಿದ ಭೇದವಾದೀಶಾಹೃದ್ರುಜಹನ್ ಭೈಷ್ಮೀಶ ಭೋಜೇಶಾದ್ರಿಕುಲಿಶಕುಶಸ್ಥಳೋಕ ಸುಪದ್ರವಾರ್ದಕ ಭೌಮವರಪ್ರದ ಭಂಗರಹಿತ ನಮೋ 35ಮಕರಧ್ವಜಜಿತ ಮಾಸಖಾಮಿತಭುಕುಲಜೀವನ ಮೀನ ಮುರಲಿಧರಕರ ಮೂಲಕವೀಂದ್ರ ಮೇಧ್ಯಚರಿತ್ರ ಮೈಥುಳಪಾಸುಕರಮೋಹಕ ಮೌನಿಪೂಜಕಚಕಿತಕರ ದನುಜೇಂದ್ರ ಕಷಣಾಂಬಕ ಬಕಾಂತಕ ಮಂಜುಹಾಸ ಮಹಾಧಿರಾಜ ನಮೋ 36ಯಜÕ ಭಿಕ್ಷುಕ ಯಾಜÕರತ ಯಿಂದ್ರಾಜÕ ದೂಷಕ ಯೀಷಣಾರ್ದಕಸುಜÕರಾಡ್ಯುಗ ಯೂಗಸಂಭವ ಯೂಥಪೋತ್ತಂಸಅಜÕಭಿದ್ಯೇಕೇಶ ಮೌನಿಗಣಜÕ ಯೌವನ ಪುಂಸಯಂತ್ರಾರ್ಥಜÕ ಪೋಷಕ ಕಿಂಕರೋಧೃತ ಕಾಮುಕಾಷ್ಟ ನಮೋ 37ರಸಿಕರಾಜಪ ರಾಜ್ಯಚಕ್ರಪವಸುಪ ವೃಕ್ಷಪ ಕುಲಪರೀಕ್ಷಿಪಪ್ರಸರಪಾಂಥಪ ರುಚಿಗುಣೌಘಪರೂಪಬಹುರೂಪಾಅಸುಪ ರೇತೋದ್ಭವಪ ರೈಗಪರಸಪ ರೋಷಪ ರೌಪ್ಯನಗಪಪಕುಸುಮಬಾಣಪ ರಂಗಕ್ಷೇತ್ರಪ ರಹಸ್ಯಪಾಲ ನಮೋ 38ಲವಜನಕ ಲಾಘವ ಕರಾಬ್ಜ ಲಿಪ್ತವಿಮಲ ಶ್ರೀ ಚಂದನಾಂಗ ಸುಕವಿನಚರಲುಬ್ಧ ವಧು ಪೂಜ್ಯನುಲೂಖ ಲೋಧಕನೇಭವಜಪಾಕ್ಷರ ಲೇಶ ಮೋಹ ಮದವಿರಹಿತ ಲೋಭಘ್ನ ಲೌಕಿಕಪ್ರವಹೇತರ ಲಂಕೌಕಸಾರ್ದಕ ಲಬ್ಧತುಷ್ಟನಮೋ39ವಕ್ತøವರ ವಾಲ್ಮೀಕಿ ಕೃತೀಶ ವಿವಿಕ್ತಮತಿ ಪದವೀಶಗತಿದನೆವುಕ್ತ ಸುಚರಿತ ಊಧ್ರ್ವಪಟ ಪ್ರಸ್ಥಾಪ ವೇದ್ಯ ನಮೋರಿಕ್ತಭಯ ವೈದೇಹಿ ಮನೋಹರತ್ಯಕ್ತಪ್ರಾಕೃತವೋಂ ವೌಷಡಾದ್ಯುಕ್ತಿವಾಚಕ ವಂದ್ಯವಂದಿತ ವಹಕ ವಾಹಕ ನಮೋ 40ಶಮಯುತಾಗ್ರಣಿ ಶಾಮಶಿವಕರಗಮನಶೀಘ್ರಗ ಶುದ್ಧ ವಿದ್ಯೋದ್ಯಮ ಶುಚಿವ್ರತ ಶೂರ್ಪನಖಿ ಮದಹರ್ತ ಶೇಷಸಹಯಮ ದಯಾಂಬುಧೆ ಶೈಲಗ್ರಹ ಸಂಯಮಿ ಗಣಾರ್ಥಿತ ಶೋಕತಾಪ ಪ್ರಶಮನ ಶೌಚಾಚಾರಯುತ ಪ್ರಭೊ ಶಾಂತ ಶಸ್ತ ನಮೋ 41ಷಡ್ವಿಭೂತೆ ನಿಷಾದ ಭಯಹರಷಡ್ವಧೂಧವ ಋಷಿವಧೂಸಖಶಾಡ್ವಲಚರ ಇಷೀಕ ಇಷುಧರ ಕಾಂಡ ಸುವಿಹಾರಾಷಡ್ವಿಕಾರಾತೀತ ವಿಜಿತಾನಡ್ವಷೇಚಿತ ಸೌರಭೇಯ ಭೂವಿಡ್ವರಘ್ನ ವೃಕ್ಷೌಘಘ್ನ ಸ್ವರ್ಣ ನಿಷಂಗಚಾಪನಮೋ42ಸರಸಿಜಾನನ ಸಾಧ್ಯ ಸಿದ್ಧನಿಕರಕರಾರ್ಚಕ ಸೀಕ್ಷರಕ್ಷಕಸುರಹೃನ್ಮಂದಿರಸೂರಿಹೃದ್ಗುಹಸೇವ್ಯ ಸುರಮೌಳಿನಿರುಜ ಸೈಂಧವಕಾಸ್ತø ಸೋಮಾಭರಣತೋಷಕ ಸೌಮ್ಯ ರತ್ನಾಕರನಿರಂಜನಸಂಜಯೋತ್ಸವ ಸಹಜಶೂರ ನಮೋ43ಹಲಿ ಸಹಗ ಹಾರ್ದಿಕ ಮನೋಗತಫಲ ಹಿರಣ್ಮಯವಸನ ಹೀರಾವಲಯ ಹುತ ಭುಗ್ಬಲದ ಹೂಣಪವಿತ್ರ ಹೇತ್ವರ್ಥಜಲಧಿಪುರಪತೆ ಹೈಮರಾಶಿದಬಲಿದ ಹೋಮದ ಹೋತ್ರಭಾಗದಸುಲಲಿತೋದನ ಪರಮಹಂಸ ಸತ್ಕುಲ ಹರುಷ ನಮೋ 44ಪಳಲವಾಂತ ಕಳಾಢ್ಯ ಯಜ್ಞಾವಳಿ ಕೃತಾದರ ನಿವ್ರ್ಯಳೀಕ ನಿಖಿಳ ಕೃಪಾಳುವರೇಣ್ಯಜೀವ ಜಿಳೂಕ( ಜಾಳಕ?) ತೃಪ್ತಿಕರಸ್ಥಳಕಳೇವರಭರಿತ ಬ್ರಹ್ಮ ವಿಪುಳ ಕಳೈಕ್ಯ ತಳೋಧ್ರ್ವಮದ ವಿಹ್ವಳ ಬಳೌಘನೆ ನಿಷ್ಕಳಂಕ ಕಳಾಪ್ರವೀಣ ನಮೋ 45ಕ್ಷತರಹಿತ ಕ್ಷಾರಾಬ್ಧಿ ಬಂಧಕಕ್ಷಿತಿಭರಹರ ಕ್ಷೀರನಿಧಿಗ್ರಹಅತುಳಗ್ರಹ ಕ್ಷುದ್ರಾರೆ ಕ್ಷೂರಾಯುಧನೆ ಕ್ಷೇಮೇಶಗತಿಗತೇ ದೀಕ್ಷೈಕ್ಯಕ್ಷೋಣಿಪತಿಪತೇ ಕ್ಷೌಮರಥ ಕ್ಷಾಂತಿಭರಿತ ನೃಗೋದ್ಧರ ಕ್ಷತ್ರವಲ್ಲಭ ಕ್ಷತ್ರವೇಷ ನಮೋ 46ಏಕರಾಡ್ ವಿಶ್ವೇಕಕಾರಕಏಕವ್ಯಾಪಕ ಏಕಸ್ಥಾಪಕಏಕಭೋಜಕ ಏಕಯಾಜಕ ಏಕತೋಕಾತ್ಮಏಕಸೃಜ ಭುವನೈಕವರ್ಧಕಏಕಮಾರಕ ಏಕತಾರಕಏಕಯಾಚಕ ಏಕಸೂಚಕ ಏಕಪತ್ರನಮೋ 47ದ್ವಯಕ್ರಿಯೇಶ್ವರ ದ್ವಯಪಥೇಶ್ವರದ್ವಯಸುವಿಸ್ತರ ದ್ವಯವಿಗೋಚರದ್ವಯನಿವಾರಕ ದ್ವಯಪ್ರದಾಯಕ ದ್ವಯಸಮಯಪೂರ್ಣದ್ವಯ ಪ್ರವಾಹಕ ದ್ವಯನಿಯಾಮಕದ್ವ್ವಯನಿರಂತರ ದ್ವಯದ್ವಯೇತರದ್ವಯಸುಬೋಧಕ ದ್ವಯಪ್ರಸ್ಥಾಪಕ ದ್ವಯಭಯಘ್ನ ನಮೋ48ತ್ರಯ ಸುವಿಗ್ರಹ ತ್ರಿಪದಕಾಲತ್ರಯಗ ತ್ರಿದಿವಪ ತ್ರಿಪಥಗಪಿತ ತ್ರಿನಯನಾರಿಹನ್ ತ್ರಿಪುರಮೋಹಕ ತ್ರಯ ಸ್ತ್ರಿಂಶತ್ ಸುರಪತ್ರಿಯುಗುದಿತ ತ್ರಿಗುಣೇಶ ಸಾಗರತ್ರಯಪ ಪಂಚಕತ್ರಿವಿಧಭಾಷ್ಯನಿಚಯಕಚಕ ತ್ರಿದಶಾರ್ಚ ತ್ರಿಜಗದ್ಧರಣಮಾರ್ಗನಮೋ49ಚತುರ್ವಿಧಾತ್ಮಾ ಚತುರ್ಭುಜಾಂಚಿತಚತುರ್ಮುಖಾಧಿಪ ಚತುರ್ವಿಧಾರ್ಥದಚತುರ್ವರ್ಣಾಶ್ರಯ ಚತುರ್ಮುಕ್ತಿ ಚತುಷ್ಟಯೇಶ್ವರ ತೇಚತುಃಸಮುದ್ರಗ ಚತುರತರಮತಿಚತುರ್ವಿಧಾಯಥ ಚತುರ್ಬಲಾಂಬುಧಿಚತುರವೇದಾರ್ಥಿತಚರಣ ಚತುಶ್ಯಾಸ್ತ್ತ್ರಪೂಜ್ಯನಮೋ 50ಪಂಚಮುಖಮುಖ ಪಂಚಮುಖನುತಪಂಚಜನರಿಪು ಪಂಚಮೋಕ್ಷದಪಂಚಪಾಂಡವಪ್ರಾಣ ವರಪಂಚಾಕೃತಾವ್ರಾತಪಂಚಶರಪಿತ ಪಂಚವ್ಯೂಹ ಸುಪಂಚಭಿದಮತ ಪಂಚಪರ್ವಹಪಂಚಕಾಲಜÕ್ಯಜÕ ಸಂಭೃತಪಂಚಬಾಣನಮೋ51ಷಟ್ಸಹೋದರ ಷಟ್ಚರಣಚರಷಟ್ಸಪತ್ನಹನ್ ಷಡೂರ್ಮಿಹರಷಟ್‍ಶಕ್ತ್ಯಾತ್ಮಕ ಷಡ್ಗುಣೋತ್ತರ ಷಡೃತುಪ್ರವಹಷಟ್ಕರಾಭಿದ ಷಟ್ಪರೋಕ್ಷದಷಟ್ಕ್ಕ್ರಯುಗ ಷಟ್ಶಾಸ್ತ್ರಪ್ರಿಯತಮ ಷಟ್ಕಸಹಗÀ ನಮೋ 52------------------------- 53ಅಷ್ಟಕಾರಣ ಶ್ಲಿಷ್ಟ ಮಹಿಷಿಯರಷ್ಟಕಾಶ್ರಯ ಅಷ್ಟಮದಹರಅಷ್ಟಕಾಷ್ಟಿಗ ಅಷ್ಟಭೂತಿದ ವ್ಯಷ್ಟಸೃತ್ಯಹಅಷ್ಟದಂಶಕ್ಷೋಣಿಪ್ರಜಹರಅಷ್ಟನಾಗಪ ಅಷ್ಟಭುಜಧರಅಷ್ಟ ಆಯುಧ ಸಂಭೃತಾಷ್ಟೌಷಧ ತ್ರಿಭಂಗ ನಮೋ 54ನವಸುರತ್ನಾಭರಣಯುಕ್ ತ್ರಿರ್ನವಕಪ್ರಿಯ ನವದ್ವಾರಪುರ ಪ್ರಭೊನವಶಯುಕ್ತ್ಯಾತ್ಮಕ ನವಗ್ರಹ ನವದೃಯಾಗದ್ರುಣನವರಸೇಶ್ವರ ನವಪ್ರಜೇಶಪನವನಿಧೀಶ ನವಾರ್ಥದೆ ದಾನವರಿಪುವೆ ನವಕೋಟ್ಯಮರರಿಂ ನಮಿತಚರಣ ನಮೋ 55ದಶಶತಾನನ ದಶಶತಾಂಬಕದಶಶತ ಸುತೋರ್ದಂಡ ದರಕಳದಶದಶಾಭಿದ ದಶಶತಾಭಿದ ದಶಖಗಾಮರಪದಶವರೂಥಜ ದಶಮುಖಘ್ನ ತ್ರಿದಶ ಭಯಾಂತಕ ದಶಕಕುಭ ಹಸತ್ದಶನ ದಶಮತಿಭಾಷ್ಯ ಋತದಶನೀಶದ್ರಕ್ಷ ನಮೋ 56ಶತಸುಖಾರ್ಥಿ ಶತಾಬ್ದಶಯನ ಸುಶತಮಖಾರ್ಚಿತ ಶತಗೋಪಿಪತೆಶತಸೋಮನೃಪಶತಕ ಸ್ಥಾಪಕ ಶತಶತಾಂಶುಧರಾಶತಕುರುಜಹನ್ ಶತಕುಲೋದ್ಧರಶತಾಯುಃಪ್ರದ ಶತಾಪರಾಧಿಪಶತಸಹಸ್ರಾರ್ಕಭ ಶತಪತ್ರಾಕ್ಷ ಸುಖದ ನಮೋ 57ಕ್ಷಿತಿಪ್ಲವೋದ್ಧರಕ್ಷಿತಿಭೃತೋದ್ಧರಕ್ಷಿತಿತಳೋದ್ಧರಕ್ಷಿತಿಚಲನಕರಕ್ಷಿತಿತ್ರಿಪದಧರ ಕ್ಷಿತಿಪಕ್ಷಯಕರ ಕ್ಷಿತಿಕನ್ಯಾಸುವರಕ್ಷಿತಿಜನಾಶಕ್ಷಿತಿಖಳಮೋಹಕಕ್ಷಿತಿಭರಾರ್ದಕ ಕ್ಷಿತಿಪಾಲನಪರಕ್ಷಿತಿವಲಯಚರ ಕ್ಷಿತಿಜನೇತರ ಕ್ಷಿತಿಸುರೇಶ ನಮೋ 58ಅಂಬುಗಮನ ಪಯೋಂಬುಮಥನ ಲಯಾಂಬು ತಳಗಾರುಣಾಂಬು ಸಟ ಬಾಹ್ಯಾಂಬುವಾಹಕ ಅಂಬುಶೋಷಕ ಅಂಬುಧಿಮದಘ್ನಅಂಬುಗೃಹ ಮೋಹಾಂಬುಧೆ ಧರ್ಮಾಂಬು ಶ್ರೀಮತ ಅಂಬುಜೇಶ ಸುಧಾಂಬುಧಿ ಸಮಾನೋದರಾಂಬುದಗಾತ್ರ ಕಪಿತ ನಮೋ 59ಅಗ್ನಿನಿಭ ಅಬ್ಧ್ಯಾಗ್ನಿ ಸಹಚರಅಗ್ನಿಮಯ ಪ್ರಳಯಾಗ್ನಿಲೋಚನಅಗ್ನಿಕಾರ್ಯಜ್ಞಾಗ್ನಿ ಪೂಜಿತ ಅಗ್ನಿ ಹೋತ್ರಯುತಾಅಗ್ನಿ ರುಧನ್ನಾಗ್ನಿಕೋಪನಅಗ್ನಿಸ್ಥಾಪಕ ಅಗ್ನಿವ್ಯಾಪಕಅಗ್ನಿವರ್ಧಕ ಅಗ್ನಿದೀಪಕ ಅಗ್ನಿವರ್ಣ ನಮೋ 60ವಾತಜನಕನೆ ವಾತಸಮಭ್ರಮವಾತಪಾಗ್ರಜ ನಾಸಿಕಜಲಯವಾತಸಮ ಕ್ವಾಶಾಂಕ ವಾತಭ್ರಾತೃ ಹಿತಕರಣಾವಾತಸಖಗತ ವಾತಭವನುತವಾತಸುತನುತ ವಾತರಶನ ಸುವಾತಸಮ ಹರಿಗಮನಸೂತ್ರಸುವಾತಜನಕ ನಮೋ61ಅಂಬರ್ವಾನರಜಾರ್ಚಿತ ನಗಾಂಬರಾಂಬರ ಕ್ರೀಡಾಂಬರಾಳಕಸಂಭಜಿತ ಸ್ವಾಂಬರಭರಿತಪದ ಅಂಬರೇಣುಕಹನ್ಅಂಬರಗ ವಂಶೇಂದ್ರ ಗೋವಧ್ವಾಂಬರಾಪಹರಾಂಬರಾಂಬರಅಂಬರಗ ಹಯಗಾಂಬರಪ ಪಾಂಬರ ಸುನಾಭಿ ನಮೋ 62ಶಬ್ದಬೋಧಕ ಶಬ್ದಕಾರಕಶಬ್ದಘರ್ಘರ ಶಬ್ದಹುಂಕರಶಬ್ದಪಾರಗ ಶಬ್ದ ವೀರಗಭೀರ ಶಬ್ದಾಂಕಾಶಬ್ದಶೋಧಕ ಶಬ್ದದೂಷಕಶಬ್ದಸ್ಥಾಪಕ ಶಬ್ದವಿಸ್ತøತಶಬ್ದ ಬ್ರಹ್ಮಜೆÕೀಶ ಶಬ್ದಾತೀತ ಶಬ್ದ ನಮೋ 63ವೃಷಭಗೇಷ್ಟ ಮಿಥುನ ಕುಜಾರ್ದಕವಿಷಮಕರ್ಕಶಮೃತ್ಯು ಕರಿಹರಿವಿಷರದನ ಕನ್ಯಾಪತಿಸಖ ವೃಶ್ಚಿಕಾಭಾಂಗಾವಿಷಪಧನುಹರಮಕರಕುಂಡಲವಿಷಕುಂಭ ಸ್ತನಪಾನ ತತ್ಪರವಿಷಯಸುಖಮಾಯ ಮೀನ ಮೇಷಾರೂಢಸೇವ್ಯನಮೋ64ಅಶ್ವರೂಪ ಮಹಾಭರಣಿಸಖವಿಶ್ವಕೃತ್ತಿಕಾಯಂಗಿ ವರರೋಹಿಣೇಶ್ವರೋದ್ಭವ ಮೃಗಮದಾಂಕಾರಿದ್ರವಿಣ ಹರಣಾನಿಸ್ವಜನ ಪುನರ್ವಸುದ ಗುರುಗಣಹೀಶ್ವರಾಸನ ಪಿತೃಚಯಾರ್ಚಿತಸ್ವ ಸ್ವಭಾಗ್ಯ ಸುಪೂರ್ಣ ಅಮೃತೋತ್ತರ ಸುಹಸ್ತ ನಮೋ 65ಚಿತ್ರರಥ ಸ್ವಾತಿಶಯದೂರ ಮರುತ್ತವೇಶಾನುರಾಧಕೋದ್ಧರಗೋತ್ರಿ ಸುಖಕರ ಮೂಲರಾಕ್ಷಸವಂದ್ಯ ಜಲರೂಪಶತ್ರು ಶ್ರವಣರಹಿತ ಧನಿಷ್ಠ ನಕ್ಷತ್ರ ಶತಪತಿ ಕುಲಜ ಮಧ್ಯ ಪೂರ್ವೊತ್ರ ಭದ್ರಪದೇಶ ರೇವತಿ ರಮಣಾವರಜ ನಮೋ 66ಕತರಕರ್ಚಿತ ಕಿತವಹರ ಸತ್ಯವ್ರತಪ ಕ್ರೀಡಾಪರಕುಧರಕೂಜಿತನಿಗಮಕೇಡ್ಯ ಕೋಟರಮುಖ ಕೌಶಲ ಜವಗಮಾಶ್ರುತಿಹರಹರ ಕಂಠರೇಖಾಂಕಿತ ಕಶ್ಯಪಸುತ ಕರುಣಭಾಷಕಶತಸುಖೋದ್ಧರ ಸಿತತರೋದರ ಶಫರಿರೂಪ ನಮೋ 67ಕಮಠಕಾಲಯ ಕಿಲ್ಬಿಷೋದರವಿಮಲ ಕೀಲಾಲೇಷ್ಟ ಕುಲಗಿರಿಭ್ರಮಣಕರ ಕುಪರ ಕರ್ಮೇತರ ಕೇಶ್ವರೇಷ್ಟಕರಅಮಿತ ಕೈತವಾನಿಷ್ಟ ಕೋಮಲವಿಮಲಜಠರಕಠಿಣವಪುಃ ಕೌರ್ಮ ಮಹತ್ಸ್ಮøತಿಪ್ರಿಯ ಕಂಠಲಂಬ ಕಚ್ಛಪಾತ್ಮ ನಮೋ 68ಕನಸಭವ ಕಾಪುರುಷಮಥನಕಿಟಿನಟ ಕೀರ್ತಿತಯಜÕ ಕುಶಮಯತನೋ ಶ್ರೀ ಕುಧವ ಕೆಗಕ್ರೋಡ ಕೈಶೋರ ಕುಜವರದಘನಸಮಸ್ವನಕೋಲಘರ್ಘರಮನುಸನಕನುತ ಕೌತುಕಾಟಣಕನಕಗಿರಿಚರ ಕಂಜಭವನುತ ಕಷ್ಟಹರಣ ನಮೋ 69ಮಧ್ವವಲ್ಲಭ ಮಧ್ವತೀರ್ಥಗಮಧ್ವಮತಪರ ಮಧ್ವಪತೆ ಮುನಿಮಧ್ವರಮಣ ಶ್ರೀಮಧ್ವಯತಿನುತ ಮಧ್ವಪುಷ್ಕರಪಾಮಧ್ವಪೋಷಕ ಮಧ್ವಭಾಷಕಮಧ್ವತೋಷಕ ಮಧ್ವರಿಪುಹರಮಧ್ವಕಾಮದ ಮಧ್ವಹೃದ್ಗುಹ ಮಧ್ವವಿಭವ ನಮೋ 70ಪ್ರಸನ್ನವದನ ಪ್ರಸನ್ನಲೋಚನಪ್ರಸನ್ನಭವನ ಪ್ರಸನ್ನಭಾಷಣಪ್ರಸನ್ನಕಾರ್ಯ ಪ್ರಸನ್ನಗುಣನಿಧೆ ಪ್ರಸನ್ನತರ ಮೂರ್ತೆಪ್ರಸನ್ನಪುರುಷ ಪ್ರಸನ್ನ ಸೋಂಕಿತಪ್ರಸನ್ನಕಥನ ಪ್ರಸನ್ನಭೂಷಣಪ್ರಸನ್ನಚರಿತ ಪ್ರಸನ್ನವೆಂಕಟ ಪ್ರಸನ್ನಕೃಷ್ಣ ನಮೋ 71
--------------
ಪ್ರಸನ್ನವೆಂಕಟದಾಸರು
ಸಾಧನವೇಕೆ ಸಾಧನವೇಕೆಸದ್ಗುರುನಾಥ ಸನಿಹದಿ ಇರಲಿಕೆಪಯಮನಿಯಮಾಸನ ಎಂಬಿವು ಯಾಕೆಕಮಲಾಸನವನು ಬಲಿಯಲದೇಕೆಶ್ರಮದಲಿ ವಾಯುವ ಬಿಗಿಯಲದೇಕೆಭ್ರಮಿತದಿ ಬ್ರಹ್ಮನ ಕಾಣುವುದೇಕೆ1ಮಿತ ಆಹಾರವ ಮಾಡಲದೇಕೆಅತಿ ವೈರಾಗ್ಯವು ದೇಹಕೆ ಯಾಕೆಸತತವು ಕಾಡನು ಸೇರುವುದೇಕೆಮತಿ ತಿಳಿಯದೆ ತಿರುಗಾಡುವುದೇಕೆ2ಶರಧಿಯು ತಾನಿರೆ ಒರತೆಯದೇಕೆತರಣಿಯೆ ತಾನಿರೆ ದೀಪವದೇಕೆಗುರುಚಿದಾನಂದನಿರೆ ಯೋಗಗಳೇಕೆಗುರುಕೃಪೆ ದೊರೆತರೆ ಭಯ ತಾನೇಕೆ3
--------------
ಚಿದಾನಂದ ಅವಧೂತರು
ಸಾಮಧಾನವು ಸಾಮಧಾನ ಪವಮಾನಶ್ರೀಮನ್ಮಹಾಸುಗುಣಧಾಮಸುತ್ರಾಣಪ.ಲೋಕ ಮುಳುಗುವದು ನೀನೀ ಕೆಲಸಮಂಗೈಯೆಸಾಕುವವರ್ಯಾರು ಜಗದೇಕವೀರಶ್ರೀಕಾಂತಸುಪ್ರೀತ ಶೋಕಮೋಹವಿಧೂತಸಾಕು ಬಿಡು ಸೈರಿಸುಪರಾಕುಮುಖ್ಯಪ್ರಾಣ1ಜಗಕೆ ನೀನಾಧರ ಜನ್ಮ ಮೃತಿಭಯದೂರಚಾಗಮಾಗಮವಿಚಾರ ನಿತ್ಯಶೂರಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆಮಗುಚಬೇಡೈ ಧರೆಯ ಮುಗಿವೆ ನಾ ಕೈಯ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸ್ವಾಮಿ ಶಂಕರನಿರಲಿಕ್ಕೆಕಾಮದಕಳವಳಿಕೇಕೆಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಗುರುನಾಮ ನಿಧಾನಿರಲಿಕ್ಕೆ | ಎನಗಿಲ್ಲೆಂಬುವದೇಕೆ ಅ.ಪ.ಅನಾಥ ಬಂಧುಅನುದಿನಎನಗಿರೆ |ಅನುಕೂಲದ ಚಿಂತ್ಯಾಕೆ |ತನುಮನಧನದೊಳು ತಾನೆ ತಾನಿರಲು |ಅನುಮಾನಿಸಲಿನ್ಯಾಕೆ ಸ್ವಾಮಿ1ದಾತನೊಬ್ಬ ಶ್ರೀನಾಥ ಎನಗಿರಲು |ಯಾತಕೆ ಪರರ ದುರಾಶೇ |ಮಾತು ಮಾತಿಗೆ ತೋರುವಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ2ದೊಡ್ಡದು ಸಣ್ಣದು ಧಡ್ಡನು ಜಾಣನು |ಎಂದೆಣಿಸುವದಿನ್ಯಾಕೆ | ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ3
--------------
ಜಕ್ಕಪ್ಪಯ್ಯನವರು