ಭೂತೇಶನುತ ವಿಠಲ | ಕಾಪಾಡೊ ಇವನಾ ಪ
ಓತ ಪ್ರೋತನು ಆಗಿ | ದಾತನೀನಿರುವೇ ಅ.ಪ.
ಪಾದ | ದಾಸ್ಯವನೆ ಕಾಂಕ್ಷಿಸುವವಾಲಿಭಂಜನ ರಾಮ | ಪಾಲಿಸೋ ಇವನಾ 1
ತೈಜಸನೆ ನೀನು ಗುರು | ರಾಜರೂಪಿಲಿ ತೋರಿನೈಜೋಪದೇಶವನು | ಪೊಂದುವುದು ಎನುತಾ |ಮಾಜದಲೆ ಪೇಳಿರಲು | ವಾಜಿವದನನೆ ನಿನ್ನಬ್ರಾಜಿಷ್ಣು ನಾಮದಲಿ | ಅಂಕನವ ಗೈದೇ 2
ದಾಸ ದಾಸರ ಗುಣಾ | ದಾಸನೆಂದೆನಿಸುತ್ತಕೇಶವನ ಗುಣನಾಮ | ಸೂಸಿಕೊಂಡಾಡಿ |ಲೇಸಾದ ಆನಂದ | ಭಾಸಿಸುತ್ತಲಿ ಗುಹಾ ವಾಸನನು ಕಾಂಬಂಥ | ಮಾರ್ಗದನು ಆಗೋ 3
ಮಧ್ವಮತ ತತ್ವಗಳು | ಬುದ್ಧಿಯಲ್ಲಿ ಸ್ಛುರಿಸುತ್ತಶುದ್ಧಭಾವದಿ ಮನನ | ಸಿದ್ಧಿಸುತಲಿವಗೇ |ಅದ್ವೈತ ತ್ರಯಜ್ಞಾನ | ಶ್ರದ್ಧೆ ಭಕ್ತಿಯ ಉದಿಸೆಮಧ್ವರಮಣನೆ ಹರಿಯೆ | ಉದ್ಧಾರ ಮಾಡೋ4
ಸರ್ವಜ್ಞಾ ಸರ್ವೇಶ | ಸರ್ವಾಂತರಾತ್ಮಕನೆದರ್ಪಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೇ |ದುರ್ವಿ ಭಾವ್ಯನೆ ಗುರು | ಗೋವಿಂದ ವಿಠ್ಠಲನೆಅವ್ಯಾಜ ಕರುಣನಿಧಿ | ಭಿನ್ನಪವ ಸಲಿಸೋ5