ಸಂತರಾ ಪದವಿಡಿಯೋ ಪ
ಸಂತರಾ ಪದವಿಡಿಯೋ |
ಭ್ರಾಂತಿಗಳೆಲ್ಲಾ ಕಡಿಯೋ |
ಅಂತಭಾವನೆಯಿಂದ ತಂತುವಿಡಿದು ನಿಜ |
ಶಾಂತಿಸುಖವ ಪಡಿಯೋ ಮನುಜಾ | ಶಾಂ | 1
ಡಾಂಭಿಕಾತನಗಳೆದು |
ಬೆಂಬಲಗುಣವಳಿದು |
ಹಂಬಲಿಸದೇ ಮನ ಸ್ತಂಭಪರಿಯ ಮಾಡಿ |
ನಂಬುಗೆ ದೃಢ ತಳೆದು ಮನುಜಾ | ನಂ | 2
ನಾನಾರೆಂಬುದು ಮರೆದೀ |
ಜ್ಞಾನದೆಚ್ಚರ ತೊರೆದೀ |
ಕಾನನ ಹೊಕ್ಕಂತೆ ನಾನಾ ಸಾಧನದಿಂದ |
ಏನ ಸುಖವ ಪಡೆದೀ ಮನುಜಾ | ಏ | 3
ಸುಲಭವೇ ಮಾನುಷ ಜನ್ಮ |
ಮ್ಯಾಲ ಅಗ್ರಜ ಧರ್ಮಾ |
ಚಲಿಸಲಿ ಪರಿಮತ್ತೆ ಇಳೆಯೊಳು ದೊರಕುದೇ |
ತಿಳಿನಿಜಗತಿ ವರ್ಮಾ ಮನುಜಾ | ತಿ| 4
ಕೋಟಿ ಮಾತಿಗೆ ವಂದೇ |
ನೀಟ ಸುಪಥವಿದೇ |
ಧಾಟಿಲಿ ಮಹಿಪತಿ ಸುತ ಪ್ರಿಯನೊಲುಮೆಯಿಂದ |
ಕೋಟಿಳಗಳಿನಿಳದೇ ಮನುಜಾ | ಕೋ | 5