ಪಾರ್ವತೀಶ ಎನ್ನಿರೋ ಮನಸಾರೆ
ಪಾರ್ವತೀಶ ಎನ್ನಿರೊ ಪ.
ಪಾರ್ವತೀಶನ ಭಜಿಸಿ ನಿಮ್ಮನು
ದ್ಧಾರ ಮಾಡುತ ಹರಿಯ ಮಹಿಮೆಯ
ಸಾರಿ ಭಜಿಸಲು ಮನವನೀಯುವ
ಕಾರ್ಯ ದುರಂಧರ ಈಶನನ್ನು ಅ.ಪ.
ತರುಣಿ ಅಸ್ತಂಗತನಾಗುತಿರೆ
ಹರುಷದೊಳೊಮ್ಮೆ ಶಂಭೊ ಎಂದು
ವರ ಉಚ್ಚಾರವ ಮಾಡಲಾಕ್ಷಣ
ತರಿದು ನಿಮ್ಮಯ ಸಕಲ ಪಾಪವ
ಪೊರೆವ ಕರುಣಿ ಈಶನೆನ್ನುತ
ಸ್ಮರಿಸಿ ಸುಖದೊಳು ಬಾಳಿ ಜಗದೊಳು 1
ಪಾದ ನೆನವ ಶಂಭೋ ಎಂ
ದೀ ಸುನುಡಿಯ ತಿಳಿದು
ಭಾಸುರಾಂಗನ ಮೊಮ್ಮಗನ ಸ್ತುತಿ ಲೇಸು
ಎಂದು ಧ್ಯಾನವ ಮಾಡಲು
ಸೂಸಿ ಕರುಣವ ಬೀರಿ ನಿಮಗೆ
ಲೇಸು ಮಾಡುತ ಹರಿಯ ತೋರುತ 2
ಪಾಶಾಂಕುಶಧರನೆನಲು ನಿಮ್ಮಯ ಪಾಪ
ರಾಶಿ ಖಂಡಿಸಿ ಪೊರೆದು
ಶ್ರೀ ಶ್ರೀನಿವಾಸ ಪದವನು
ಈಶ ಧ್ಯಾನಿಪ ಮನವನೀವನು
ಸೂಸಿ ಭಕ್ತಿಯೊಳ್ ಶ್ರೀಶ ಭಕ್ತರು
ವಿಶ್ವಾಸದಿಂದಲಿ ಈಶ ಎನ್ನಿರೋ ಈ ಸಂಸಾರ ಈಸಲೋಸುಗ 3