ಸ್ಮರಿಸೆಲವೋ ಸ್ಮರಿಸೆಲವೋ ಮನವೇ |
ನಿರುತದಿ ಗುರುಮಹೀಪತಿ ಪಾದಾ ಪ
ಆದ್ಯಾತ್ಮದಘನ ವಿದ್ಯೆಯ ಸಾಧಿಸಿ |
ಸಿದ್ಧರ ನಡುವೆ ಪ್ರಸಿದ್ಧರಾದವರ 1
ನೆಟ್ಟನೆ ಶರಣರ ಪುಟ್ಟಿಸಿರಧಿಕಾ |
ಬಿಟ್ಟುಪದೇಶವ ಕೊಟ್ಟು ಸಾಕುವರಾ 2
ಧಾರುಣಿಯೊಳು ಸಂಸಾರ ಮಾಡಿದರ |
ಸಾರಸಜಲದಂತೆ ರಚಿಸಿದರಾ 3
ಯೋಗಧಾರುಣದಿ ಸಾಗಿಪದಿನಗಳು |
ಭಾಗವತಾಗ್ರಣಿ ಎನಿಪಶ್ರೀಗುರುಪಾದಾ4
ವಿತ್ತಜನರು ತಂದಿತ್ತರೆ ಹಿಡಿಯದೆ |
ನಿತ್ಯವ್ಯಯವ ಪವಡಿಸುತಿಹರವರಾ5
ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ
ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ 6
ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ
ಮಸ್ತರಲಿ ನಿಜ ವಸ್ತು ಕಂಡವರಾ7
ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ
ರಾಕರಿಸದೆ ಅಂಗೀಕರಿಸಿದರಾ 8
ಎಂದೆಂದಿಗೂ ಹೊರಗೊಂದಿನ ಹೋಗದೆ |
ಮಂದಿರದೊಳಗಾನಂದದಲಿಹರಾ9
ತಾಪತೃಯದಾ ಭವಪರಿಹರಿಸುತ |
ತಾಪೋರೆದನು ಗುರು ಶ್ರೀಪತಿಗುರುಪಾದಾ 10
ಅಂಕಿತ-ಗುರುಶ್ರೀಪತಿ