ಒಟ್ಟು 295 ಕಡೆಗಳಲ್ಲಿ , 73 ದಾಸರು , 265 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಂಭವಿ ದಯಮಾಡೆ ಸಿಟ್ಟು ಬಿಡು | ಮುನಿಯದೆ ಎನ್ನ ಕೂಡ |ಕೋಪವು ಮಾಡಬೇಡ ಎನಗಾರ |ಕರುಣ ದೃಷ್ಟಿಲಿ ನೋಡ ಪ ಮೂರ್ತಿ 1 ರಜ ತಮ ಸಂಗದಲಿ ನಾ ಕೆಟ್ಟೆ | ನಿನ್ನ ಸ್ಮರಣೆಯ ಬಿಟ್ಟೆ | ಕಾಮ ಕ್ರೋಧದಲಿ ಬಹು ಸುಟ್ಟೆ |ತಿಳಿಯದು ನಿನ್ನ ಗುಟ್ಟೇ 2 ಮನಸಿಗೆ ತರದಿರೆ ಎನ್ನ ದೋಷ |ಮಾಡೆನ್ನ ದುರಿತವಿನಾಶಾ |ಕಲಿಕಾಲಸುತನಾ ಭವಪಾಶಾ | ಭಜಿಸುವೆ ನಿನ್ನ ಮಹೇಶಾ 3
--------------
ಭೀಮಾಶಂಕರ
ಶೇಷಾಚಲ ಮಂದಿರ-ಇಂದಿರೇಶ ಪ. ಪಾದ ಸ್ಮರಣೆಯಿತ್ತು ಅ.ಪ ಕರಣಕ್ರಿಯಕರ್ಮಂಗಳೆಲ್ಲವು ಜಡವು ಕರ್ಮ ನಿನ್ನ ನಿಯಮನವಿಹುದು ನಿರುತ ಪರವಶನಾಗಿ ನಾ ಮಾಳ್ಪೆನೆಂಬ ಈ ದುರಭಿಮಾನದಿ ನಾ ಭವಕೊಳಗಾದೆನೊ 1 ವಿಷಯಂಗಳೆಲ್ಲ ಜ್ಞಾನಗೋಳಕದಿ ಬಂದು ಎನ್ನ ವಿಷಮಗೊಳಿಸಿತು ಮನ ಅಭಿಮಾನದಿಂದಲಿ ಹೃಷೀಕಪನೆ ಎನ್ನ ಮನವಿಷಮತೆಯ ಹರಿಸಿ ಪೋಷಿಸೊ ನಿರುತ ಕೃಪಾಕರ ಮೂರುತೇ 2 ದೋಷದೂರನೆ ನಿನ್ನ ವಿಸ್ಮರಣೆಯಿಂದಲಿ ವಾಸುಕೀಶಯನ ನೀ ಭೂತಾವಾಸ ನೀನಾಗಿರೆ ಮೋಸಹೋದೆನ್ನನು ಪೋಷಿಸಬೇಕಯ್ಯ 3 ಕುಟಿಲ ಮನದಲಿ ನಿನ್ನ ಭಕುತನೆಂದೆನಿಸಿದೆ ವಟಪತ್ರಶಾಯಿ ನೀ ಹಟ ಸಾಧನಕ್ಕೆ ಒಲಿಯೆ ದಿಟಭಕುತಿಯ ಕೊಟ್ಟು ಕಡೆ ಹಾಯಿಸಯ್ಯ 4 ತನುಛಾಯೆ ಕ್ರಿಯೆಯು ತನ್ನ ತನುವನಾಶ್ರೈಸಿದಂತೆ ನಾ ನಿನ್ನ ಪ್ರತಿಬಿಂಬನಾಗಿರಲು ಸದಾ ಎನ್ನ ಕ್ರಿಯೆಗಳೆಲ್ಲಾ ನಿನ್ನ ಆಣತಿಯಂತಿರೆ ಘನಮಹಿಮನೆ ನಿನ್ನಾಕ್ರಿಯವನರಿಯದೆ ಹೋದೆ5 ಪನ್ನಗಾಚಲನಿಲಯ ಆಪನ್ನರಕ್ಷಕ ನೀನಿರೆ ಬನ್ನಬಡಲ್ಯಾಕಯ್ಯ ಅನ್ಯರನಾಶ್ರಯಿಸಿ ಮನೋವಾಕ್ಕಾಯ ಕರ್ಮವನರ್ಪಿಸಲು ಸನ್ಮತಿಯನೆ ಇತ್ತು ಸತತ ಸಲಹಯ್ಯ 6 ಸರ್ವಸತ್ತಾಪ್ರದನೆ ಸರ್ವಪ್ರವೃತ್ತಿಪ್ರದನೆ ಸರ್ವರಂತರ್ಯಾಮಿ ಮಮಕುಲಸ್ವಾಮಿ ಉರಗಾದ್ರಿವಾಸವಿಠಲ ನಿನ್ನಯ ದಿವ್ಯ ಚರಣಸ್ಮರಣೆಯನಿತ್ತು ಕಾಯೊ ಕಮಲಾಕಾಂತ7
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಗುರುಮಹಾರಾಯಾ ದಮ್ಮಯ್ಯ ನಿನ್ನ ಪಾದಕೆ ಬಿದ್ದೆನು ತೋರಿಸೋ ಶ್ರೀ ಗುರುನಾಥಾ ಪ ತೋರುವ ತೋರಿಕೆಗಳೆಲ್ಲವ ಹಿಂಗಿಸೋ ಷಡ್ವೈರಿಗಳಾಗಿಹ ಚೋರರ ಬಾಧೆಯ ಬಲವನು ಭಂಗಿಸೋ ತತ್ವಾಮೃತ ಸಾರ ನಿತ್ಯಸುಖದೊಳನ್ನ ನಿಲ್ಲಿಸೋ 1 ಅಮೃತಾನ್ನವ ಮುಂದಿಡೋ ಜೋಡಾಗದ ಊಟವನ್ನುಣ್ಣಿಸೋ ನವನೂತನವಾಗಿಹ ಆಡದಿರುವ ಆಟವಾಡಿಸೋ ನಿನ್ನರ್ಚನೆ ಪೂಜೆಯ ಮಾಡುವಾನಂದವುದಯ ಮಾಡಿಸೋ 2 ಚರಣತೀರ್ಥ ಪ್ರಸಾದವನು ಕೃಪೆಮಾಡೋ ಸಜ್ಜನರಾ ಸ್ಮರಣೆಯ ಕರ್ಣಾಭರಣವ ನೀಡೋ ನಾನಾಮೃತದ ಚರಣ ರಜಪ್ರಕಾಶದೊಳಿಡೋ ವಿಮಲಾನಂದ ವಿಧಿ ನೋಡೋ 3
--------------
ಭಟಕಳ ಅಪ್ಪಯ್ಯ
ಶ್ರೀ ವೆಂಕಟೇಶ ಸ್ತೋತ್ರ(2) ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ ಸಾಕಾರರೂಪ ತೋರೋ ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು ನೀ ಕರುಣಿಸೀಗ ಕಾಯೊ 1 ವಾಕು ಲಾಲಿಸುತ ನೀ ಬೇಕೆಂದು ಬೆಟ್ಟದಲ್ಲಿ ಲೋಕದ ಜನರನ್ನು ಸಾಕುತ್ತ ನಿಂತಿರುವ ಆಕಳ ಕಾಯ್ದ ದೇವಾ 2 ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ ಘನರೂಪವನ್ನೆ ತೋರೊ ಅನುರಾಗದಿಂದ ಸಲಹೋ 3 ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ ಸಂಕಟಗಳನೆ ಹರಿಸೊ ಶಂಖಚಕ್ರಾಂಕಿತನೆ ಪಂಕಜಪಾದ ಮನ ಪಂಕಜದೊಳಗೆ ತೋರೊ 4 ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ ಪದ್ಮ ಪಾದವೆ ಗತಿಯೊ ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ ಪದ್ಮಾದಿ ನಿನ್ನ ತೋರೊ 5 ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ ದಿಷ್ಟಾವ ಸಲಿಸಿ ಕಾಯೋ ಥಟ್ಟಾನೆ ಮನಕೆ ತೋರೊ 6 ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು ಕರ್ಮ ಮಾಳ್ಪೆ ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ ನಿತ್ಯಾಮೂರುತಿ ನೀ ಎಂದೂ 7 ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ ಬಗಣೀತ ಮಹಿಮ ದೇವಾ ಖಗರಾಜ ವಾಹನನೆ ನಗೆಮೊಗದ ಚೆಲುವ ಪ ನ್ನಗಶಾಯಿ ಸಲಹೊ ಎನ್ನ 8 ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ ನಿತ್ಯಾ ವಿಯೊಗಿ ದೇವಾ ನಿತ್ಯ ನಿರ್ವೀಕಾರ ನಿತ್ಯಾ ಕಲ್ಯಾಣಪೂರ್ಣ 9 ಜೀವಾಂತರಾತ್ಮಕನೆ ಜೀವಾ ನಿಯಾಮಕನೆ ಜೀವಾದಿ ಭಿನ್ನ ದೇವಾ ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ ಜೀವಾರ ಕರ್ಮಕರ್ತ 10 ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ ವ್ಯಾಪ್ತಾನಾಗಿರುವೆ ಜಗದಿ ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ ಸತ್ಯಾಧಿಪತಿಯ ವಂದ್ಯ 11 ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ ಛೇದೀಸಿ ತಮನ ಕೊಂದೂ ನಿಗಮ ತಂದಾದರದಿ ಸುತಗಿತ್ತೆ ಶ್ರೀಧರನೆ ಮಚ್ಛರೂಪಿ 12 ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು ಕರುಣೆಯಿಂದಾಲಿ ಬಂದೂ ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ ವರ ಕೂರ್ಮರೂಪಿ ಸಲಹೊ 13 ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ ಛೇದೀಸಿ ಅವನ ಕಾಯಾ ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ ವರಾಹ ಕಾಯೊ 14 ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ ಸೃಷ್ಟೀಶ ಪೊರೆಯೊ ಎನಲು ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು ಪುಟ್ಟಾನ ಕಾಯ್ದ ನೃಹರಿ 15 ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು ಪೇಂದ್ರಾ ನೀನಾಗಿ ಬಂದೂ ಇಂದ್ರಾರಿಗೇಸುತಲ ಚಂದಾದಿತ್ತು ನೀ ನಿಂದ್ರಾಗೆ ಸ್ವರ್ಗವಿತ್ತೆ 16 ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು ಮತಿವಂತನೆನಿಸಿ ಮೆರೆದೇ ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ ಪ್ರತಿ ಭಾರ್ಗವಾನೆ ಕಾಯೋ 17 ಸೇತು ಬಂಧನಗೈದು ಖ್ಯಾತ ರಾವಣನೊರಸಿ ಸೀತೇಯ ತಂದ ರಾಮಾ ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ ಪ್ರೀತಿಯಿಂದೆನ್ನ ಕಾಯೊ 18 ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ ವನಜಾಕ್ಷಿಯರನೆ ಕಾಯ್ದೆ ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ ಸನಕಾದಿ ವಂದ್ಯ ಸಲಹೋ 19 ತ್ರಿಪುರಾಲಲನೆಯಾರ ವ್ರತಭಂಗವನೆಗೈದು ನಿಪುಣಾನೆಂದೆನಿಸಿ ಮೆರೆದೆ ಬುದ್ಧ ತ್ರಿಪುರಾರಿ ವಂದ್ಯ ಹರಿ ಕೃಪೆಮಾಡಿ ಸಲಹೊ ಎನ್ನ 20 ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು ತಲೆಯಾ ಚೆಂಡಾಡಿ ಮೆರೆದೆ ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ ನಳಿನಾಕ್ಷ ಕಲ್ಕಿ ಕಾಯೊ 21 ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ ಶಕ್ತಾವಂತನೆ ಸ್ವಾಮಿ ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ ಮುಕ್ತಾರಿಗೊಡೆಯ ನೀನೆ 22 ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ ಕೆಂದೂ ನೀ ನಾಗಗಿರಿಗೆ ನಂದಾಕಂದಾನೆ ಹರಿ ಇಂದಿರೆಯರಸ ಬಹು ಸುಂದಾರ ಶ್ರೀನಿವಾಸ 23 ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ ವಿಂದಾನ ಗಿರಿಯ ಯಾತ್ರೇ ಸಂದೀಸೆ ವೇಂಕಟನ ಸಂದಾರುಶನದಿಂದ ದುರಿತ 24 ಜಯ ಗುರುಗಳಂತರ್ಯ ಜಯ ನಾಗಶಯನ ಹರೆ ಜಯ ವೆಂಕಟಾದ್ರಿನಿಲಯ ಜಯ ತಂದೆ ಮುದ್ದುಮೋಹನ ದಾಸವರದ ಜಯ ಪದ್ಮನಾಭ ಜಯ ಭೋ 25 ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ ಕಾಮೀತವೀವ ಪ್ರಭುವೇ ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ ಕಾಮೀತವೀಯೊ ದೇವಾ 26 ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ ಕಷ್ಟಾವ ಬಿಡಿಸಿ ಕಾಯೋ ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ ಶ್ರೇಷ್ಠಾ ಶ್ರೀ ಗುರುವರದನೇ 27 ಸೀತಾಪತಿವಿಠಲ ದಾಸಳ ನಿರ್ಯಾಣ ಪದ 266 ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ 3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ 22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36
--------------
ಅಂಬಾಬಾಯಿ
ಶ್ರೀಗುರುಪ್ರಾಣೇಶದಾಸರಾಯರ ಸ್ತೋತ್ರ ತರುಳನ ಪರಿಪಾಲಿಸು ಜೀಯಾ ಪ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ ಭವಜನಿ ತಾಪದಾದಿ ಸಂ - ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ 1 ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ - ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ- ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ ಅತಿ ದುಷ್ಕøತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ ನಿಮ್ಮನಾ ತುತಿಪೆನೆ ಮತಿಮಂದ2 ಮತಗಳಹಳಿದು ಪ್ರೇಮದಿಂದ ಪೊರೆದು ಪಾತಕಿ ಪಾಮರನೆನ್ನಗೆ ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ- ಪ್ರೇಮದಿ ಕೊಡು ಮುದದಿ 3
--------------
ವರದೇಶವಿಠಲ
ಶ್ರೀನಿವಾಸ ಕರುಣದಿ ಕಾಯೊ ಶ್ರೀನಿಧೆ ದಯದಿ ಬಾನು ಪ್ರಕಾಶ ಶ್ರೀಹರಿಯೆ ಪ. ಈ ನರಜನ್ಮದಲಿ ಬಂದು ಬೇನೆ ಬಿಟ್ಟು ಸಂಸಾರದಿ ಕಾನನದಿ ಕಣ್ಣು ಮುಚ್ಚಿ ನೀನೆ ಎನ್ನ ಬಳಲಿಸುವರೆ ಅ.ಪ. ಎಷ್ಟು ವಿಧದಿ ಕರೆದರೂ ನಿನಗೆ | ಈಗಿನ್ನು ದಯ ಪುಟ್ಟದ್ಹೋಹಿತಲ್ಲೊ ದೇವನೆ ಬೆಟ್ಟದೊಡೆಯ ನಿನ್ನ ನಂಬಿ ಕಷ್ಟ ಬಿಡಿಸು ಎಂದು ಬಾಯಿ ಬಿಟ್ಟು ಕೂಗಿದರೂ ಕರುಣ ಪುಟ್ಟಲಿಲ್ಲೊ ಸೃಷ್ಟಿಗೊಡೆಯ 1 ಯಾಕೆ ಎನ್ನ ಈ ಪರಿಯಿಂದ | ಜರೆದು ತೊರೆಯುತ್ತ ನೂಕುವುದು ನ್ಯಾಯವೇ ಶ್ರೀಶ ವಾಕುಲಾಲಿಸೆನ್ನನೀಗ ಸಾಕಿದರೆ ನಿನ್ನ ಭಕ್ತರೊಡನೆ ಬೇಕೆಂದು ನಿನ್ನ ಪದ ಸ್ಮರಣೆಯ ಏಕಮನದಿ ಧ್ಯಾನಿಸುವೆನೊ 2 ನಡೆನುಡಿಗಳ ತಪ್ಪನೆಣಿಸಿದರೆ | ಶ್ರೀನಿಧಿಯೆ ಎನ್ನ ಪೊಡವಿಯೊಳಗೆ ಪೊರೆವರಿನ್ಯಾರೊ ಬಿಡು ಬಿಡು ಈ ಬಿಂಕವೆಲ್ಲ ಕೊಡು ನಿನ್ನ ಪದ ಸರ್ವಕಾಲ ದೃಢ ಭಕ್ತಿ ವೈರಾಗ್ಯ ಎನಗೆ ಕೊಡು ಗೋಪಾಲಕೃಷ್ಣವಿಠ್ಠಲ 3
--------------
ಅಂಬಾಬಾಯಿ
ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ || ಶ್ರೀ ಹರಿ |ಕುಹಕರ ಸಂಗಕೆ ಬ್ಯಾಡೋ ಪ್ರಾಣಿ ಪ ಉರಿಹಸ್ತ ವರಕೊಟ್ಟು ಹರನು ಬಳಲಿದಾಗತ್ಪರದಿಂದವನ ಪೊರೆದ ಸುರನ ಸಂಹರಿಸಿದ1 ದಿತಿಜರ ಬಾಧೆಗೆ ಶತಮಖ ಪ್ರಾರ್ಥಿಸಲಮೃತವ ಕರದು ಅಹಿತರನು ವಂಚಿಸಿದ 2 ತರಳ ಪ್ರಹ್ಲಾದ ಕರ್ಬುರ ದೈತನ ಬಾಧಿಗೆ ಹರಿಯೆಂದೊರಲವನ ಪೊರೆದು ದೈತ್ಯನ ತರಿದ3 ಪರಮೇಷ್ಟಿ ಜನಕನಲ್ಲಿಅಷ್ಟೆ ಕರ್ತೃತ್ವವಿರಲು ಇಷ್ಟ್ಯಾಕ ಬಳಲುವಿ 4 ಗುರು ಮಧ್ವಾಂತರ್ಗತ ಗುರು ಪ್ರಾಣೇಶ ವಿಠಲ ವಿಠಲಾಸುರ ಮುಖ್ಯರಳಿದು ತನ್ನ ಶರಣ ಜನರ ಪೊರೆದಾ 5
--------------
ಗುರುಪ್ರಾಣೇಶವಿಠಲರು
ಸರಸಿಜನಾಭ ಪ. ಉಡುಪಿಯ ಕೃಷ್ಣನೇ ಅ.ಪ. ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ 1 ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ 2 ಮಾಡಿಸೊ ಧ್ವಂದ್ವಕಾರ್ಯ ನಿನ್ನದೆಂಬ ಸೊಲ್ಲ ಪಾಲಿಸು 3 ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ ಕರುಣಾನಿಧಿಯೇ4 ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ5
--------------
ಸರಸಾಬಾಯಿ
ಸಲಹಯ್ಯಾ ನಿನ್ನ ಸಾರಿದೇ|ಶ್ರೀ ರಮಣನಾ ಪ ಮರುಹು ಮರಸಿ ಎನ್ನ|ಅರಹು ಕೊಡಿಸಿ ನಿನ್ನಾ| ಸ್ಮರಣೆಯೊಳಿಡಬಾರದೇ 1 ನಿನ್ನ ಚರಣವದೋರಿ|ಘನದಯವ ಬೀರಿ| ಧನ್ಯನ ಮಾಡಬಾರದೇ 2 ತಂದೆ ಮಹಿಪತಿ|ನಂದನ ಸಾರಥಿ| ಇಂಧುದ್ಧರಿಸಬಾರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಧನವು ಮತ್ತೇನಾಗಬೇಕು ನಿನಗೇ ಪ ಮಾಧವನ ನಾಮವು ಮನದೊಳಿದ್ದರೆ ಸಾಲದೇ ಅ.ಪ. ಗೋಕೋಟಿ ದಾನವು ಗೋವಿಂದನ ಸ್ಮರಣೆಯ ತಾಕಲಾರದಿದಕೆ ಸಂದೇಹವೇ ಇಲ್ಲ ಸಾಕಲ್ಯದಿ ಮಾಳ್ಪ ಸಕಲ ದೇವತಾರ್ಚನೆಯು ಪಾದ ಭಜನೆಗೆಣೆಯು ಅಲ್ಲ 1 ಸ್ನಾನ ಸಂಧ್ಯಾವಂದನ ಜಪತಪಾದಿಗಳು ದಾನವೇ ಮೊದಲಾದ ನೇಮ ನಿಷ್ಟೆಗಳು ಆನುಪೂರ್ವಕ ಮಾಳ್ಪ ಸಕಲ ಕರ್ಮಗಳೆಲ್ಲ ಶ್ರೀನಿವಾಸನ ನಾಮಸ್ಮರಣೆಗೆ ಎಣೆಯು ಅಲ್ಲ 2 ರಾಸಿ ವಿದ್ಯ ವೇದಾಧ್ಯಯನ ಪಾಠಗಳು ಬೇಸರಿಲ್ಲದೆ ಪಠಿಪ ಮಂತ್ರ ತಂತ್ರಗಳೆಲ್ಲ ಈ ಸಮಸ್ತ ಭುವನಗಳೊಡೆಯನಾದ ಶ್ರೀ ರಂ ಗೇಶವಿಠಲನ ನಾಮದಲ್ಲಡಗಿರುವುದಲ್ಲ 3
--------------
ರಂಗೇಶವಿಠಲದಾಸರು
ಸಾಧುಸಂಗ ಶೀಘ್ರಕೂಡಿಸೊ ಪ ಎಷ್ಟು ದಿನ ಕಷ್ಟಪಡುವದೋಈ ಭವದೊಳು ಈಸಲಾರೆನಯ್ಯ ಹರಿಯೇ ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ 1 ಹರಿಹರರು ಸಮಾನರೆನ್ನದಾ ಈ ಸಜ್ಜನರಾ- ಸಂಗದಿಂದ ಹೀನಾ ನಾನಾದೆ ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ 2 ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ ಒಂದು ದಿನ ಮಾಡಲಿಲ್ಲವೋ ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ3 ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ- ಸಕ್ತನಾಗಿ ಇರುವೆ ಮುಕುಂದಾ ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ 4 ಹನುಮ ಭೀಮ ಮಧ್ವೇಶಾರಿಂದಾ ಸೇವಿತ ಪ್ರಿಯಾ ಶಾಂತಮೂರ್ತಿ ಶಾಮವರ್ಣನೇ ಶ್ರೀದವಿಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾಚಾರಿ5
--------------
ಶ್ರೀದವಿಠಲರು
ಸಾರಿ ಸಾರಿ ಹೇಳು ತೀನಿ ಕಡ್ಡಿ ಮುರಿದು ನಾನು ಬಾರಿ ಬಾರಿಗೆ ಸತ್ತು ಹುಟ್ಟತಲಿಹೆ ನೀನು ಪ ಇರುಳು ವಿಷಯದೊಳಗೆ ಮನವ ನಿರಿಸಿ ಮಡದಿ ಮಕ್ಕಳೆಂಬಲೆಯಲಿ ಪರಿಯನರಿಯದಿದು ಇನ ಸುತನ ದೂತರೊಡನೆ ಕೊಲಿಸಿ ಕೊಳದಿರು 1 ನೀನು ಹುಟ್ಟಿ ಬರುವ ಮುನ್ನ ಇವರಿಗೆಲ್ಲ ವಾಸವೆಲ್ಲಿ ನೀನದೆಲ್ಲಿ ನಟ್ಟನಡುವೆ ಬಂದ ಸಿರಿಯಿದು ಕಾನ ಕಪಿಗಳಂತೆ ನೆರೆದು ಮಡದಿ ಮಕ್ಕಳೆಂದು ಈಗ ಪ್ರಾಣವನ್ನು ತಿನಲು ಬಂದ ನರಿಗಳಿವದಿರು 2 ದಾರಿ ಹೋಕರಿವರು ನಿನ್ನ ಋಣವು ತೀರಿ ಹೋದ ಬಳಿಕ ಯಾರಿಗಾರು ಇಲ್ಲ ನಿನಗೆ ನೀನದಲ್ಲದೆ ವೈರಿ ಕೋಣೆಲಕ್ಷ್ಮೀಪತಿಯ ಸೇರಿ ನಾಮ ಸ್ಮರಣೆಯಿಂದ ಮುಕ್ತಿ ಪಡೆದಿರು 3
--------------
ಕವಿ ಪರಮದೇವದಾಸರು
ಸಿರಿ ತಂಬೂರಿ ಪ ನರಹರಿ ನಾಮಸ್ಮರಣೆಯಗೈಯುವ ನರರಿಗೆ ಸಹಕಾರಿ ಅ.ಪ ತಾಪತ್ರಯವನು ಲೋಪಗೈವ ಸುಖರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿಶಯನ ವಿಲಾಸದ ಕೀರ್ತಿ ವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನೆಯ ಕರಾಲಂಬನ ತಂಬೂರಿ ತುಂಬುರು ನಾರದರಂಬುರುಹಾಕ್ಷನ ಹಂಬಲಿಗನು ಸಾರಿ3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರು ನಲವಿಂದಲಿ ನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತಮಾಗಲು ಮತಿಯುತರಿಗೆ ಸಮ್ಮತವಹ ತಂಬೂರಿ ಕೃತಿ ಶತವದು ಸಾರಿ5 ಸುಕೃತ ಪರಿಪಾಕದ ತಂಬೂರಿ ಈಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖದಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ವೆಂಕಟವರದಾರ್ಯರು
ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು