ಎಂದು ಕಾಂಬುವೆ ಮಾಧವತೀರ್ಥರ
ಸುಂದರ ಮಂದಿರ ಪ
ಚಾರುಚಿತ್ರ ಕಲಶಕನ್ನಡಿ
ಆರೊಂದು ನೆಲೆಗೋಪುರವ ಸವಿ
ಸ್ತಾರಮಾಗಿ ತೋರುವ ಮಹಾ
ದ್ವಾರದಮುಂದೆ ಬಿದ್ದು ನಮಿಸಿ 1
ತೊಲೆತುಂಡು ಕಂಭ ಬೋದುಗೆ
ಶಿಲೆಯಿಂದ ನಿರ್ಮಿತವಾಗಿ
ಹೊಳೆವ ಮಂಟಪ ರಂಗು ಮಧ್ಯ
ದೊಳಗೆಚೆಲುವ ವೃಂದಾವನವ 2
ಮೂಲ ಪ್ರತಿಮೆ ಸಾಲು ಸಾಲು ವಿ
ಮೂಲಪೀಠದ ಪವಿತ್ರಶಾಲೆ
ಕಾಲತ್ರಯದಿ ವೇದಘೋಷ 3
ಧಾತ್ರಿಜನರು ಬಂದು ಕೂಡಿ
ಯಾತ್ರೆಗೈದು ಜನುಮ ನಿತ್ಯ
ಸಾರ್ಥಮಾಡಿಕೊಂಡು ಸತತ
ಅರ್ಥಿಯಿಂದ ಪೋಪ ಸಮಯ 4
ಧರೆಯೊಳಧಿಕ ಬುದ್ಧಿನ್ನಿಪುರದಿ
ಮೆರೆವ ಶ್ರೀಗುರು ಮಾಧವೇಂದ್ರ
ವರಮಂದಿರದಮಿತ ವೈಭವ
ಕರುಣಿ ಶ್ರೀರಾಮ ನಿಂತು ನಡೆಸುವ 5