ಶ್ರೀಹರಿ
ಮೂಜಗದೊಳು ನೀನು ತೇಜವುಳ್ಳವನಾಗಿ ಪ
ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ
ಮಾಲೆಯನೆಲ್ಲ ವಿಸರ್ಜಿಸಿ ತೊಳೆದು
ನೀಲಮಾಣಿಕ ವಜ್ರಮಯವಾದ ಪೀಠದ
ಮೇಲೆ ವಾಲಗವಾಗಿ ಲೀಲೆಯ ತೋರುತ1
ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ
ಉದಕ ಶುದ್ಧವ ಮಾಡಿ ಅದರೊಳು ಬಳಿಕ
ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು
ಒದಗಿ ಬಾರೆಲೊ ಕರಚರಣ ಮಜ್ಜನಕೀಗ 2
ಮಾನಸದಘ್ರ್ಯವು ಆಚಮನಗಳು
ನಾನಾ ಪಂಚಾಮೃತ ಫಲವಭಿಷೇಕವು
ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು 3
ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ
ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ
ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ
ಸ್ತೋತ್ರವು ಸಾಹಸ್ರನಾಮಗಳಾಯಿತು 4
ಧೂಪಮಾಧ್ರೂಪಯ ದೀಪದ ದರುಶನವು
ಆದಷ್ಟು ಸರ್ವೋಪಚಾರಗಳು
ಕದಳಿ ನಾರಿಕೇಳÀವು
ಪರಿ ನೈವೇದ್ಯ ದಯಾಪರಮೂರ್ತಿ 5
ಆಗರದೊಳು ಬೆಳೆದ ನಾಗವಲ್ಲಿಯ ದಳ
ಪೂಗಿಯಫಲ ಸಹ ನಾಗಶಯನಗಿಟ್ಟು
ಬೇಗದಿ ಮಂಗಳ ಪದಗಳ ಹೇಳಿ ಲೇ
ಸಾಗಿ ಎತ್ತುವ ಅಮೋಘದಾರತಿಗಳ 6
ಮಾಡಿದ ಪೂಜೆಯ ನೋಡಿ ಕರುಣದಿಂದ
ಬೇಡಿದಿಷ್ಟವನೀಯೊ ರೂಢಿಯ ಒಡೆಯ
ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು
ಅನುದಿನ ವರಾಹ ತಿಮ್ಮಪ್ಪ 7