ಇಷ್ಟುದಯ ಮಾಡಿದ್ದೆ ಅತಿ ಸೋಜಿಗ
ಶೀಷ್ಟೇಷ್ಟದಾತ ಭ್ರಷ್ಟಮಾನವನಲ್ಲಿ ಪ.
ಉದಯಕಾಲದಲೆದ್ದು ಪದುಮಸಂಭವ ಪಿತನ
ವದನದಲಿ ನೆನೆಯದಲೆ ಮಾನುನಿಯರ
ಚದುರತೆಗೆ ಮೆಚ್ಚುತಲೆ ಉದರ ಪೊರೆದನ ಮೇಲೆ
ಚದುರ ಶ್ರೀಕೃಷ್ಣ ಬದಿಗನಾಗಿದ್ದು 1
ಕರುಣಾಸಮುದ್ರನ ಸ್ಮರಣೆ ಸಾಲದೆ ಎಂಬ
ಪರಮ ಗುರುಗಳ ವಚನ ಮರೆತು ನಿನ್ನ
ಸ್ಮರಿಸದೆಲೆ ನಿರುತದಿ ಪರರ ಬಾಗಿಲಿಗ್ಹೋಗಿ
ಚರಣ ಧಣಿವುತ ಮನದಿ ಮರುಗಿದೆನೋ ಕೃಷ್ಣಾ 2
ಇನ್ನಾದರೆನಮನದಿ ಪನ್ನಗಾದ್ರಿನಿವಾಸ
ನಿನ್ನ ಸ್ಮರಣೆಯ ಕೊಟ್ಟು ಮನ್ನಿಸೆನ್ನ
ಘನ್ನ ಅಪರಾಧಗಳ ವರ್ಣಿಸಲಳವಲ್ಲ
ಚೆನ್ನಿಗ ಶ್ರೀ ಶ್ರೀನಿವಾಸ ಘನ್ನ ಸಂಪನ್ನ ಸರಿಯಾರೋ 3