ಸರಸೀರುಹಾಂಬಕಿ ನಿನ್ನ ಪಾದ-
ಸರಸಿಜಗಳ ಸ್ಮರಿಸುವೆ ಪೊರೆಯೆನ್ನಪ.
ಕಾಳಾಹಿವೇಣಿ ಕಲಕೀರವಾಣಿ
ಫಾಲಾಕ್ಷನ ರಾಣಿ ಪರಮಕಲ್ಯಾಣಿ1
ಕಣ್ಮಯಜಾತೆ ಹಿರಣ್ಮಯ ಖ್ಯಾತೆ
ಕಣ್ಮುಖ ವರಕರಿ ಷಣ್ಮುಖಮಾತೆ2
ಕಣ್ಮನದಣಿಯೆ ಕೊಂಡಾಡುವೆ ಪಾಡುವೆ
ಮನ್ಮನೋರಥದಾಯೆ ಚಿನ್ಮಯೆ ಚೆಲುವೆ3
ಕಂಬುಕಂಧರಿ ನಿನ್ನ ನಂಬಿದೆ ಶಂಕರಿ
ಕುಂಭಪಯೋಧರಿ ಶಂಭುಮನೋಹರಿ4
ಸಿರಿ ಕಾತ್ಯಾಯಿನಿ ಗೌರಿ ಭವಾನಿ
ಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ5