ಸುಶೀಲೇಂದ್ರರ ಸ್ತೋತ್ರ
ಇಂದು ನೋಡಿದೆ, ಸುಶಿಲೇಂದ್ರ ಗುರುಗಳ
ಕುಂದಣದ ಶಿಖರ ಮೌಕ್ತಿಕದಿಂದ ವಿರಾಜಿಸುವ
ರಜತ ಅಂದಣವನೇರಿ ಸಂಭ್ರಮದಿಂದ
ಮೆರೆದು ಬರುವ ಗುರುಗಳ ಪ
ಧ್ವಜ ಪತಾಕೆಶ್ವೇತ ಛತ್ರ
ರಜತವರ್ಣ ಚವರ ಚಾಮರ
ಭಜಿಪÀ ಭಟರ ಸಂದಣಿಮಧ್ಯ
ರಜನಿ ಪತಿಯ ತೆರದಿ ಶೊಭಿಪರಿಂದು 1
ಭೇರಿ ಕಹಳೆ ವಾದ್ಯನೇಕ
ಚಾರುತರ ಶೃಂಗಾರವಾದ
ವಾರಣಗಳು ಎಡಬಲದಲಿ
ಸಾರಿಬರುವ ಸಂಭ್ರಮವನು 2
ಎಲ್ಲಿನೋಡೆ ಪಾಠಪ್ರವಚ -
ನೆಲ್ಲಿ ನೋಡೆ ವೇದಶಾಸ್ತ್ರ
ಎಲ್ಲಿ ನೋಡಲಲ್ಲಿ ಲಕುಮಿ
ನಲ್ಲನ ಸತ್ಕಥಾಲಾಪವಿಂದುನೋಡಿದೆ 3
ಆ ಮಹಾಸುಶೋಭಿತಮಾದ
ಹೇಮಮಂಟಪ ಮಧ್ಯಮೂಲ
ರಾಮನಾರ್ಚನೆಗೃವ ವೃಂದ
ಪ್ರೇಮದಿ ನೋಡಿ ಧನ್ಯನಾದೆ 4
ಈ ಮಹಾಗುರುವರ್ಯರ ಪದ
ತಾಮರ¸ವÀ ಪೊಂದಿದ ಭಕ್ತರ
ನೇಮದಿಂ ವರದೇಶ ವಿಠಲ
ಕಾಮಿತಾರ್ಥಗರೆವ ಸತ್ಯ 5