ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಧ್ರುವ ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ ಸುಬೋಧದಲಿ ಗೆದ್ದಿ 1 ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ ದೋರುದು ತಾ ಹರುಷ ಭವ ಬಂಧಪಾಶ 2 ಗುರು ಘನಸೌಖ್ಯ ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ ತರಳ ಮಹಿಪತಿ ಮನವೆÀ ಕೇಳು ಗುರುರಾಯನ ಸುವಾಕ್ಯ ಪರ ಗೆಲಿಸುವದು ನಿಜಮುಖ್ಯ 3
ಕೇಳಿರೋ ಈ ಮಾತ ಈ ಮಾತ ತಿಳಿದು ಕೋಳ್ಳಿರೊ ಸ್ವಹಿತ ಹೇಳುತಿಹ್ಯದು ವೇದಾಂತ ವೇದಾಂತ ಇಳಿಯೋಳಿದುವೆ ಸಿದ್ಧಾಂತ ಸಿದ್ಧಾಂತ 1 ಹಿಡಿಯಬ್ಯಾಡಿರೊ ಕಾಮ ಕ್ರೋಧ ಕ್ರೋಧ ಮಾಡಬ್ಯಾಡಿರೋ ಭೇದ ಭೇದಾ ಭೇದ ಈ ಡ್ಯಾಡಿರೊ ವಿವೇದ ವಿವೇದ ಬೋಧ ಸುಬೋಧ 2 ದೋರುತದೆ ತಾ ಸುಪಥ ತಾ ಸುಪಥ ಸುರ ಜನರ ಸನ್ಮತ ಸನ್ಮತ ದೋರುತಿಹ್ಯ ಗುರುನಾಥ ಶ್ರೀ ಗುರುನಾಥ ಪರಮಾನಂದ ಭರಿತ ಭರಿತ 3 ನೋಡಿರೊ ಈ ಖೂನ ಈ ಖೂನ ಮಾಡಿ ಸದ್ಗತಿ ಸಾಧನ ಸಾಧನ ಗುಹ್ಯ ನಿಜಧನ ನಿಜಧನ ದೃಢ ಭಕ್ತರ ಜೀವನ ಜೀವನ 4 ಈಹ್ಯ ಪರಿಪೂರ್ಣ ಪರಿಪೂರ್ಣ ಮಹಾಗುರು ಶ್ರೀ ಚರಣ ಶ್ರೀ ಚರಣ ಸಾಹ್ಯದೋರುವ ಸುಗುಣ ಸುಗುಣಮಹಿಪತಿ ಜೀವ ಪ್ರಾಣ ಸುಪ್ರಾಣ 5
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1 ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2 ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3