ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ
ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ
ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ
ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ
ಇಗಡತನ ಬಿಟ್ಟು ನೀಗಿ ನಿಜಗೂಡಿ
ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ 1
ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ
ಗುಹ್ಯಗೂಢವಿದೆ ನೋಡಿ ರಾಜಯೋಗ
ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ
ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ 2
ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ
ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ
ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ
ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ 3