ಕೊಂಬುವರಿಲ್ಲೆನ್ನ ಸರಕ | ಇಂಬಿಲ್ಲ ಇಡಲಿಕ್ಕೆ |ಹೂರಲಾರೆ ಮುದುಕ ನಾ ಪ
ಸುರರು ಸೇವಿಸಲಿನ್ನು | ಸೆರೆ ಸಿಕ್ಕಿರುವರಲ್ಲಾ | ಧರೆಯೊಳು ಲೋಗರಿಗೆ |ಗುರುತಿಲ್ಲಾ ಇದರೊಳು 1
ಕೊಂಡವರಿಗೆ ಲಾಭವು ಒಂದಕ್ಕೆ ನಾಲ್ಕು | ಇಸಗೊಂಡವರಿಗೆಂಟು ಮಡಿಯಹುದು || ಪುಂಡತನದಲಿ ಕಸಗೊಂಡೇನೆಂದವರಿಗೆ | ಮಂದಮತಿಗಳಿಗೆಂದಿಗೂ ದೊರೆಯದು 2
ತಂದೆ ಸದ್ಗುರು ಭವತಾರಕನ ಭಜಕ- | ರಿಂದು ಈ ವಾರ್ತೆಯನು ಕೇಳಿದರೆ | ಬಂದು ವಂದಿಸೆನ್ನ || ಆನಂದವ ಬಡಿಸುವರು | ಎಂದು ಆಗುವದೋಹಾಗೆಂದು ಯೋಚಿಸುವೆ 3