ಒಟ್ಟು 612 ಕಡೆಗಳಲ್ಲಿ , 82 ದಾಸರು , 490 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1 ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2 ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯಗೈಸಿದೆನಗ ಗುರು ಮಹಿಪತಿ ತಾನು ಪ ವಿಜಯಗ್ಹೇಳಿದ ಹರಿಗೀತೆಯಲಿ | ಸುಜನ್ಮಾಹುದು ಸಂತರಲ್ಲಿ ದುರ್ಭರದ 1 ಕಿವಿಯೊಳು ಸುಜ್ಞಾನ ಗುಟ್ಟು 2 ದೊಡ್ಡದರೊಳಿಹ ಚಿದ್ಘನ ವಾ ದೋರಲಿ 3 ಇಂಬಾಗಿರಲು ಗುರುದಯ ಕಾಮಧೇನು 4 ಕಂದಗೊಲಿದನು ಇಹಪರಗತಿಯಾ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ಧನ್ಯಧನ್ಯನೊ ಶ್ರೀ ಗುರುರಾಯಾಧನ್ಯ ಶ್ರೀ ರಾಘವೇಂದ್ರ ಯತಿವರ್ಯಾ ಪ ವೀಣಾಪಾಣಿಯ ಆಣತಿಯಂತೆಮಾಣದೆ ಸನ್ಯಾಸವ ಗ್ರಹಿಸಿದೆವೇಣುಗೋಪಾಲನು ತಪದ ಕಾಣಿಕೆಗೆಕಾಣಿಸಿಕೊಂಡನೆ ಓ ಮಾರಾಯಾ 1 ಕರ ಕಮಲಾಸಂಜಾತನೆಏಸು ಜನ್ಮದ ಸುಕೃತವೊ ಜೀಯಾ 2 ಉನ್ನತ ಗದುಗಿನ ವೀರನಾರಾಯಣಸನ್ನಿಧಿಯೊಳು ನರಸಿಂಹನೆದುರಿನಲಿಸನ್ನಿಹಿತನು ನೀನಾಗಿ ಕುಳಿತೆಯೋಆದರಿಸಿನ್ನು ಸಲಿಸಲು ನಿನ್ನ ಭಕ್ತಿಯಾ 3
--------------
ವೀರನಾರಾಯಣ
ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ. ಅರುಣ ಉದಯದಲ್ಲಿ ಎದ್ದು ದುರಿತದೂರವನ್ನು ಸ್ಮರಿಸಿ ಹರುಷದಿಂದ ಶೌಚ ಕರ್ಮ ಅರಿತು ನಿರುತ ಚರಿಸುವರನು 1 ಸತ್ಯಮತದ ಪದ್ಧತಿಯನು ಚಿತ್ತವಿಟ್ಟು ಆಚರಿಸುತ ಭೃತ್ಯನೆಂದು ಪೇಳಿಕೊಳುವ ನಿತ್ಯ ತೃಪ್ತನಾದವರನು2 ಸಿರಿಯುತ ರಂಗೇಶವಿಠಲ ಸರುವ ದೇವರೊಡೆಯನೆಂದು ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾಣ ನರನು 3
--------------
ರಂಗೇಶವಿಠಲದಾಸರು
ಧನ್ಯನಲ್ಲವೇ ಇವನು ಧನ್ಯನಲ್ಲವೇ ಪ ಧನ್ಯನಲ್ಲವೇ ಪನ್ನಂಗಶÀಯನ ನುನ್ನತ ಮಹಿಮೆ ತನ್ನೊಳ್ತಿಳಿದವ ಅ.ಪ ಕರಿ ಮೊಸಳಿಗೆ ಸಿಲ್ಕಿ ಪೊರೆಯೊ ಹರಿಯೆನಲು ಕರುಣದಿಂದಲಿ ಬಂದು ಪೊರೆದನೆಂದರಿತವ 1 ದುರುಳ ದುಶ್ಯಾಸನನು ಸೀರೆ ಸೆಳೆಯುತಿರೆ ತರುಣಿಗ್ವರದ ಶ್ರೀಪರಮನೆಂದರಿತವ 2 ಬಲಿಯನು ರಸಾತಳಕಿಳಿಸಿ ತಾ ಪಾದದಿ ಒಲಿದು ಮನೆಯ ಬಾಗಿಲ ಕಾಯ್ದೆಂದರಿತವ 3 ಮಲತಾಯಿ ಧ್ರುವನೊದೆದು ಛಲದಿ ನೂಕಲು ಕಂದ ನಳಿನಾಕ್ಷ ಗತಿಯೆನಲು ಒಲಿದು ಸಲಹಿದ್ದರಿತವ 4 ನೀನೆಗತಿಯೆನಗೀ ಭುವನದಾರು ಗತಿಯಿಲ್ಲ ಪಾದ ನೆನವಿನೊಳಿರ್ದವ 5
--------------
ರಾಮದಾಸರು
ಧನ್ಯನಾಗೆಲೊ ಮುನ್ನ ಹರಿಯ ಕಾ ರುಣ್ಯವನೆ ಪಡೆದು ಮಾನವನೆ ಪ ಬನ್ನ ಬಿಡಿಸುವ ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ ಬಣ್ಣಿಸುತ 1 ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ ಭೃತ್ಯನಾಗಿ ಬಲು 2 ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು ಭ್ರಾಂತಿಯ ಬಿಡು ನೀನು ಪೇಳುವ ಮಹಂತರ ಸೇವಿಸಿ 3 ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ ಪಾತ್ರನಾಗಿ ಬಲು 4 ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ ರ್ಭೀತನಾಗಿ ಬಲು 5
--------------
ಕಾರ್ಪರ ನರಹರಿದಾಸರು
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತ 'ಠ್ಠಲನ ಕಂಡು 1ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ 'ಠಲನಾದ 2ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ 'ಠಲನಾದ 3ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ 'ಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿ'ಠಲಗೆ 5ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
--------------
ಭೂಪತಿ ವಿಠಲರು
ಧನ್ಯನಾದೆನಯ್ಯ ನಾನು ಧನ್ಯನಾದೆನುಅನ್ಯಮಾರ್ಗವನುಳಿದು ನಿನ್ನ ಭಕ್ತ ಭಕ್ತನಾಗಿ ಪನಿನ್ನ ಮೂರುತಿಯ ನೋಡಿ ನಿನ್ನ ಗುಣವ ಕೊಂಡಾಡಿನಿನ್ನ ನಾಮಗಳ ಪಾಡಿ ನಿನ್ನ ಮುಂದೆ ಕುಣಿದಾಡಿ 1ಆವ ಜನ್ಮಾರ್ಜಿತ ಪುಣ್ಯ ತಾವೊದಗಿತೊ ನಾ ಕಾಣೆನೀವೊಲಿದರೆ ದುರ್ಲಭ ವಾವುದೀ ಮೂರು ಲೋಕದಿ 2ತಿರುಪತಿ ಕ್ಷೇತ್ರಾಧಿವಾಸ ಪರಮಪುರುಷ ವೆಂಕಟೇಶಗುರು ವಾಸುದೇವಾರ್ಯ ವೇಷ ಮರೆಯೊಕ್ಕೆ ನಾ ನಿನ್ನ ದಾಸ 3ಓಂ ಭೀಷ್ಮ ಮುಕ್ತಿಪ್ರದಾಯಕಾಯ ನಮಃ
--------------
ತಿಮ್ಮಪ್ಪದಾಸರು
ಧನ್ಯನಾದೆನಾ ಗುರು ಪ ಸನ್ನುತಾಂಗ ಗುರುರಾಜರ ನೋಡಿಅ.ಪ ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು | ಸುಖಗಳನೀವರ ನೋಡಿ 1 ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ| ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು| ಅಧಮರ ಮುರಿದಿಹ ಧೀರರ ನೋಡಿ2 ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಕೊಂಡಾಡುತೆ ನೋಡಿ3
--------------
ಶ್ರೀಶ ಕೇಶವದಾಸರು
ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ. ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ. ವ್ರತನೇಮ ಜಪ ತಪ ಹಿತಮಾದುದೈ ಸುತಪ ಕೃತಿಪತಿ ತವ ಕೃಪಾಶತಧೃತಿಲೋಲುಪಾ 1 ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದ ಪದುಮನಾಭ ಗೋವಿಂದ ಪವನನಯ್ಯ ಮುಕುಂದ 2 ಪ್ರೀಯ ತಪೋವಾಸನನೀಯುವ ದೇವರ ದಾನ ತೋಯಜಾಕ್ಷ ಲಕ್ಷ್ಮೀನಾರಾಯಣ ಪರಾಯಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಧನ್ಯನಾದೆನು ಗುರು ನಿಮ್ಮಯ ದಯದೀ ಪ ಹಿಂಗಿತು ಮುನ್ನಿನಂಗವದೋಷವು ಮಂಗಲವಾಗಲು ಇಂಗಿತ ಸುಖದಾ 1 ಸಾರಾಸಾರ ವಿಚಾರದ ತತ್ವದ ದಾರಿಯ ಸುಜನಕ ದೋರುತ ಕರುಣದಿ ಪ್ರೇರಿಸಿ ಸುಮತಿಯ ಶ್ರೀ ರಘುಪತಿ ಸಾ ಕಾರವ ತೋರಿಸಿ ತಾರಿಸಲಾಗಿ 2 ಕರುಣಿ ಅಭಿನವ ತೀರ್ಥ ಮುನಿಕರ ವಾರಿಧಿ ಶ್ರೀ ಸತ್ಯ ಪೂರಣ ಚಂದ್ರರ ಸಾರಲು ಹೋಯಿತು ಮೂರು ತಾಪಗಳು ದೋರಲು ಕಂದಗ ಪಾರದ ಸುಖವು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯನಾದೆನು ನಾಂ ಪ ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ಅ.ಪ ದೇಶದೇಶದಿಂದ ಸಕಲ ದಾಸಜನರು ಬಂದು ಸದಾ ಶ್ರೀಶ ಸಲಹೆಂದು ಕೂಗುವ ಘೋಷ ಕೇಳಿ ಕರ್ಣಗಳಿಂ 1 ವೈರಿ ವಿನುತ ಅರ್ಥ ಗಳಿಸುವವನ ಕಂಡು2 ಸತಿಯರೆಲ್ಲ ಮುತ್ತಿನಾ- ರತಿಯ ಬೆಳಗುವುದು ಕಂಡು 3 ಸಂತಸದಿ ಮಹಂತರು ಶ್ರೀ- ಕಾಂತನ ಗುಣರಾಸಿ ಪೊಗಳಿ ಸ್ವಾಂತನಿರ್ಮಲರಾಗಿ ಭಜಿಪ- ರಂತರಾತ್ಮನ ಕಂಡು 4 ಭೂಮಿಗಧಿಕ ಶೇಷಗಿರಿ ಧಾಮಪೂರ್ಣಕಾಮ ಭಕ್ತ- ಸ್ತೋಮವನ್ನು ಪಾಲಿಪ ಗುರು- ರಾಮವಿಠಲನ್ನ ಕಂಡು 5
--------------
ಗುರುರಾಮವಿಠಲ
ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ಹಿಂಡು ಪ ಧನ್ಯನಾದೆನೂ ಕಾಮನ್ನ ಪಿತನ ಲಾ ವಣ್ಯ ಮೂರುತಿಯ ಕಣ್ಣಿಲೆ ಕಂಡು ಅ.ಪ. ದೇವವರೇಣ್ಯ ಸದಾ ವಿನೋದಿ ವೃಂ ದಾವನ ಸಂಚರ ಗೋವನ ಕಂಡು 1 ಮಂಗಳಾಂಗ ಕಾಳಿಂಗ ಮಥsÀನ ಮಾ ತಂಗವರ ವರದ ರಂಗನ ಕಂಡು 2 ಹಾಟಕಾಂಬರ ಕಿರೀಟ ಸಾರಥಿ ತಾಟಕಾರಿ ವೈರಾಟನ ಕಂಡು 3 ಚಿಂತಿತ ಫಲವ ಕೃತಾಂತನಾತ್ಮಜಾ ದ್ಯಂತರಹಿತ ನಿಶ್ಚಿಂತನ ಕಂಡು 4 ಮಾತುಳಾಂತಕ ವಿಧಾತಪಿತ ಜಗ ನ್ನಾಥ ವಿಠಲ ವಿಖ್ಯಾತನ ಕಂಡು 5
--------------
ಜಗನ್ನಾಥದಾಸರು