ಒಟ್ಟು 194 ಕಡೆಗಳಲ್ಲಿ , 59 ದಾಸರು , 183 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮುಖ ಸಂವತ್ಸರ ಸ್ತುತಿ150ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು ಸರ್ವರನುಕಷ್ಟಉಪಟಳಹಾವಳೀ ಯಾವುದೂ ಪೀಡಿಸದೆ ಸೌಖ್ಯದಲಿಇರಲಿಕ್ಕೆ ದಯಮಾಡಿ ಒದಗಲಿನಿರ್ದೋಷಸರ್ವೇಶ ರಮಾಪತಿಯು ಪಪೂರ್ಣ ಕಲ್ಯಾಣತಮ ಗುಣಗಣಾರ್ಣವ ಆನಘಶ್ರೀಮನ್ನಾರಾಯಣನು ಘನದಯದಿ ಅತ್ರಿ ಋಷಿಗೊಲಿದುತನ್ನನ್ನು ತಾನೇವೆ ದತ್ತಮಾಡಿ ತಾ ದತ್ತನೆನೆಸಿಕೊಂಡಅನುಪಮ ಮಹಾಯೋಗ ಯೋಗೇಶ್ವರನುಶ್ರೀಮುಖದಿ ಕಾಯಲಿ ಶರಣೆಂಬೆ 1ಶ್ರೀಮುಖ ಸಂವತ್ಸರ ಅನುಕೂಲ ಕಾಲವು ಯೋಗ್ಯ ಸುಜನರಿಗೆಶ್ರೀ ಮಹಾಮುನಿಕುವರನೆಂದು ಪ್ರಾದುರ್ಭವಿಸಿದ ದತ್ತಾತ್ರೇಯನ್ನಸುಮನಸೆ ವಾಕ್‍ಕಾಯದಿಂ ಸೇವಿಸುವವರಿಗೆಜ್ಞÕನಬಲ ಐಶ್ವರ್ಯವಿತ್ತುರೋಗನಿವಾರಣ ಮಾಳ್ಪ ಕರುಣಾಳುದತ್ತಘೃಣೀಬ್ರಹ್ಮವಾಯುಸೇವ್ಯ 2ಶ್ರೀಮುಖ ಸಂವತ್ಸರ ರಾಜಾ ಬುಧನು ಮಹಾಶ್ರೇಷ್ಠ ಬುದ್ಧಿಕುಶಲನುಬ್ರಹ್ಮದೇವರಿಂದ ಕೃತ ಬುಧನಾಮ ಶ್ರೀ ನಾರಾಯಣ ಪ್ರಿಯನುಸಂವತ್ಸರ ಸಚಿವಾದಿ ಉಪನಾಯಕ ಸಹಪಾಲಿಸಲಿ ಲೋಕ ಜನರನ್ನುಬ್ರಹ್ಮದೇವರಪಿತ ಪ್ರಸನ್ನ ಶ್ರೀನಿವಾಸ ಶ್ರೀಕೃಷ್ಣನೊಲುಮೆಯಿಂದ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಸಂಶಯವಾಯಿತೋ ನಮಗೆಸಂಶಯವಾಯಿತೊಕಂಸಾರಿನಿನಗೆ ಎರಗ ಬರಲುಹಂಸರೂಪ ಕಂಡು ಬೆದರಿ ಪ.ಮದನಜನಕ ನಿನಗೆ ನಾವುಮುದದಿ ಎರಗ ಬರಲುಬ್ಯಾಗಕುದುರೆರೂಪಕಂಡು ನಮಗೆಹೆದರಿಕೆ ಬಾಹೋದು ಕೃಷ್ಣ 1ಪ್ರದ್ಯುಮ್ನ ನಿನಗೆ ಎರಗಿ ನಾವುಸಿದ್ಧಿ ಪಡೆÀದೇವೆಂದು ಬರಲುಅರ್ಧನಾರಿ ರೂಪವ ಕಂಡುಗಡಗಡ ನಡುಗಿದೆವೊ ಕೃಷ್ಣ 2ಚಲ್ವ ರಾಮೇಶಗೆ ಎರಗಿಕಲಿಯಕಿಲ್ಬಿಷPಳೆದೆವೆಂದರೆÉಶಿಲೆಯ ಹೆಣ್ಣು ಮಾಡಿದ್ದು ಕಂಡುಬಲುಬಲು ಅಂಜಿದೆವೊ ಕೃಷ್ಣ 3
--------------
ಗಲಗಲಿಅವ್ವನವರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ