ಒಟ್ಟು 253 ಕಡೆಗಳಲ್ಲಿ , 4 ದಾಸರು , 252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ (ಅ) ಅಂಟಿ ಅಂಟದ ಹಾಗೆ ಇರಬೇಕು ಪ ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ ಎಂಟು ಮದಗಳನ್ನು ಬಿಡಬೇಕು | ಹದಿ- ನೆಂಟನೇ ತತ್ವ ತಿಳಿಯಬೇಕು ಭಂಟನಾಗಿ ವೈಕುಂಠ ಸೇರುವದಕೆ 1 ಶತ್ರುಗಳಾರ್ವರ ಗೆಲ್ಲಬೇಕು | ನಿಜ- ಮಿತ್ರರಾರ್ವರೊಳು ನಿಲ್ಲಬೇಕು ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ- ಪತ್ರದಿ ನೀರಿದ್ದ ರೀತಿಯಿಂದಲಿ ತಾನು 2 ಮಾನವಮಾನ ಒಂದಾಗಬೇಕು | ಅನು- ಮಾನವಿಲ್ಲದೆ ತಿರುಗಲುಬೇಕು ಇನ್ನೇನಾದರು ಗುರುರಾಮವಿಠಲನಾ- ಧೀನನೆನುತ ಮದ್ದಾನೆಯಂದದಿ ತಾನು 3
--------------
ಗುರುರಾಮವಿಠಲ
ಲೋಕನೀತಿ (ಆ) ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ ಯಾತಕ್ಕೆ ತಡವಾಗೋದು | ಪ ತರಬೇಕೇಂದು ನೂರು ತಡವೆ ನಾ ನುಡಿದರು ಅರಿಯದವರ ಪರಿತಿರುಗುತ್ತಲಿರುವದು ಅ.ಪ ಮನೆ ಮನೆಯಲಿವಂದು ಮಾನಾರ್ಧಮಾನಗಳು ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ ಮನೆಗೆ ಬಂದು ಹಸಿವೆನುತ ಪೇಳುವದು 1 ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2 ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ- ಖರವ ಮಾಡುವುದು ಈ ಮನೆಯೊಳಿಲ್ಲಾ ಹಿರಿಯರಿಂದ ಬಂದ ಸಂಪ್ರದಾಯವಿದೇನೊ ಇಂಥಾಮನೆಯ ಸೇರಿ ಈ ಸುಖ ಪಡುವೆ 3 ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ ಬದಲು ಸೀರೆಯು ನಾನುಟ್ಟರಿಯೆ ವಿಧಿಲಿಖಿತವು ತಪ್ಪುವುದೆಯೆಂದಿಗಾದರು ವದರಿ ಕೊಂಡರೆಯೇನು ಇದರೊಳು ಫಲವುಂಟು 4 ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು ಈ ನರಜನ್ಮವು ಇಷ್ಟಕ್ಕೆಸಾಕೆಂದು ಧೇನಿಸಿ ಗುರುರಾಮವಿಠಲನ ಬೇಡುವೆ 5
--------------
ಗುರುರಾಮವಿಠಲ
ವಂಚನೆಲ್ಲಿಹುದಯ್ಯ ವೈಕುಂಠಪತಿ ಗೊಂಚನೆಲ್ಲಿಹದಯ್ಯ ಪ ವಂಚನೆಲ್ಲಿಹ್ಯದು ವಿರಂಚಿತಾತನಿಗೆ ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ ಚರಣದಾಸರೆಂದು ಪಾಂಡವರ ತುರಗಕಾಯ್ದ ನಿಂದು ನರಗೆ ಬೆಂಬಲನಾಗಿ ತಿರುಗಿದ ಧುರದಲಿ ಜರ ಮರೆಯಾಗದೆ ಪರಮಕರುಣಾಕರ 1 ಜಾಗುಮಾಡುತಲಿವ ಭಕ್ತರ ಯೋಗಕ್ಷೇಮ ತಿಳಿವ ನೀಗದಂಥ ಮಹಾಭೋಗಭಾಗ್ಯವಿತ್ತು ಬಾಗಿಲ ಕಾಯ್ದನು ಸಾಗರನಿಲಯ 2 ಜಾರನೆನಿಸಿಕೊಂಡ ಒಲಿದು ಚೋರನೆನಿಸಿಕೊಂಡ ತೋರಿದವರ ಮನಸಾರ ವರವಿತ್ತು ಭೂ ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ 3
--------------
ರಾಮದಾಸರು
ವಸ್ತ್ರಗಳನರ್ಪಿಸುವೆ ವಾರಿಜನಾಭ ಪ ಹಸ್ತಿರಾಜ ವರದ ನೀಲಘನನಾಭ ಅ.ಪ ತರುಣೆಗೆ ಅಕ್ಷಯಾಂಬರಗಳಿತ್ತವನೆ 1 ಬ್ರಹ್ಮಾಂಡ ಶರೀರನೆ ಬ್ರಹ್ಮನ ಪೆತ್ತವನೆ ಬ್ರಹ್ಮಸ್ವರೂಪನೆ ಬ್ರಾಹ್ಮಣ ಪ್ರೀಯನೆ 2 ಧ್ಯಾನವಂದೇ ಪಾಲಿಸು ಗುರುರಾಮ ವಿಠಲಾ 3
--------------
ಗುರುರಾಮವಿಠಲ
ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ವಿಧಿ ಪ ಪುರಾರಿನುತ ಚರಣಾ ನಾರಾಯಣಾ ಅ.ಪ ಸರಸಿಜಾಪ್ತ ಕುಲಚಂದ್ರಮ ರಾಮ | ಮ- ಹಾರಾಜ ರಾಜಲಲಾಮ ನಿಸ್ಸೀಮ 1 ಎನ್ನಪರಾಧಗಳೇನಿದ್ದರು ಸರಿ ಮನ್ನಿಸುವರು ನೀನಲ್ಲದಾರು 2 ಅಜಿತಾದ್ಯನಂತರೂಪಾಪ್ರಮೇಯಭಜಕ ಪೋಷ ಗುರುರಾಮ ವಿಠ್ಠಲ ರಾಯಾ 3
--------------
ಗುರುರಾಮವಿಠಲ
ವಿನುತ ಪದ ಪ ಭವ ಸರ್ವಜೀವ ಹೃದ್ವನಜ ನಿವಾಸಿ ಅ.ಪ ಕಾನನ ಗಂಭೀರ ಸುಗುಣದಾರ ಸುವಿಚಾರಧೀರ | ರಘು ಧರಣಿಜಾ ಕರುಣಾಕರ ದಿನಕರ ಕುಲಮಣಿ ಜನ ವರ ಶುಭಕರ1 ಖರವಿದಾರ ಕಲಿ ಕಲ್ಮಷನಾಶನ ನಾಮ ಶ್ರೀಕರ ಸುಂದರ ಶ್ಯಾಮ ಭಾಸುರ ಶರೀರ ಸಂಪೂರ್ಣ ಕಾಮ ತುಳ- ಸೀದಳಧಾಮ ವಿಭೀಷಣ ಪ್ರೇಮ 2 ಕಮಠ ಕಿಟ ನರಹರಿ ವಾಮನರೂಪ ಭಾರ್ಗವ ಕರಧೃತ ಚಾಪ ಸುಜ್ಞಾನದೀಪ ವಸುದೇವ ತನಯ ಜಿನ ಜಾತ ಕಲ್ಕಿ ಗುರುರಾಮ ವಿಠಲ 3
--------------
ಗುರುರಾಮವಿಠಲ
ವಿರೋಧವ್ಯಾತಕಯ್ಯ ನಿಮಗಿದರೊಳು ಪ ಪರಂಪರದ ಸಂಪ್ರದಾಯಕೆ ನಿಮಗೆ ಅ.ಪ ಈಶ ನಾನೆಂಬುವದೊಂದು ಸರ್ವೇಶ ಹರಿಯಂಬೊದೊಂದು ಲೇಸಾಗಿ ಹೆಚ್ಚು ಕಡಮೆಗಳ ತಿಳಿಯುವದಿನ್ನೊಂದು 1 ಈ ಮೂರು ಮತಗಳಿಗೆ ಪ್ರೇಮವಾದಭಿಪ್ರಾಯಗಳು ನೇಮನೇಮವಾಗಿಟ್ಟು ಕೊಂಡಿರುತಿಹರೆಲ್ಲರು 2 ನಿಮ್ಮ ನಿಮ್ಮ ಮನಗಳಿಗೆ ಸಮ್ಮತವಾಗುವ ಪರಿ ಬ್ರಹ್ಮ ಜ್ಞಾನವೊಂದು ಸಂಪಾದಿಸಿದರೆ ಸಾಕು 3 ಸರಿಯಾದರ್ಥ ತೋರಿ ದಾರಿಯ ಕೊಡುವುದು 4 ಧೀರ ಶ್ರೀಗುರುರಾಮವಿಠ್ಠಲನೊಬ್ಬನೆ 5
--------------
ಗುರುರಾಮವಿಠಲ
ವೇದಾಬಲು ಸ್ವಾದ ಪ ಸಾದರದಲಿ ಬಿಡದೋದಿ ಪಠಿಸುವಗೆ ಅ.ಪ ಆದಿಯನಾದಿಗಳ ಹಾದಿಯ ತೋರಿ ಸ- ಗುಹ್ಯ ಪ್ರತಿತಾರ್ಥಗಳಿಹ 1 ಘನಸಾಧನೆಗಳಿಗನುಕೂಲಿಸುವುದು 2 ಸ್ವರಿತೋದಾತ್ತನುದಾತ್ತ ಪ್ರಚಯಗಳಿಂ ಗುರುರಾಮವಿಠಲನ ಚರಣನೋಡುವದಕೆ ವೇದಾ 3
--------------
ಗುರುರಾಮವಿಠಲ
ಶಂಕರ ಕೃಪಾಸಾಗರ ಶಿವ ಮೃಗಾಂಕಾ ಶಶಿಶೇಖರಾ ಪ ಕಿಂಕರರಿಗೆ ಬಂದ ಸಂಕಟವ ಬಿಡಿಸುವ ಅ.ಪ ಭವ ರೋಗಗಳ ಕಳೆವ ಭೋಗ ನಂಜುಂಡದೇವ 1 ಕಂದರ್ಪ ಸಂಹಾರನೆ 2 ಸಂಗರಹಿತ ಭಸಿತಾಂಗಲೇಪಿತ ಶಿವ 3 ಗರಳಪುರದಿ ನೆಲೆಸಿರುವ ಶ್ರೀಕಂಠೇಶ ಶರಣಾಗತರ ಸುರತರುವೆ ಮದ್ಗುರುವೆ | ಶಿವ 4 ಲಕ್ಷ್ಮೀಶನಾದ ಗುರುರಾಮವಿಠಲನ ಸಖ5
--------------
ಗುರುರಾಮವಿಠಲ
ಶಂಕರ ಭಗವತ್ ಪರಭಾವ ಪ ಪುರಹರ ಕವಿಜನ ವಂದಿತ ರಾಗದೆ ರತಿಯನು ಜಾಗು ಮಾಡದೆ ಕೊಡು 1 ಮನಕಭಿಮಾನಿಯು ನೀನು ಮನ್ಮ ಅನುದಿನದಿ ಶ್ರವಣ ಮನನ ನಿಧಿ ಧ್ಯಾ ಸನ ಮೊದಲಾದ ಸಾಧನೆಯನು ಮಾಡಿಸು 2 ಸುರಪತಿ ಮೊದಲಾದವರೆಲ್ಲ ನಿನ್ನ ಚರಣವ ಧ್ಯಾನಿಪರೆಲ್ಲ ಧರಣಿಜಾರಮಣ ಗುರುರಾಮ ವಿಠಲನ ಮರೆಯದಿರುವ ಮಹತ್ತರ ಭಾಗ್ಯವ ಕೊಡು3
--------------
ಗುರುರಾಮವಿಠಲ
ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1 ಸಾಧನಾತ್ಮಕಕೌಶಿಕನಮಖ ಕಾದುಸಲಹಿದವಿಘ್ನವೇದು ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ ಸಾಧರವೆವರಯಜ್ಞಗೌತಮ ಭೂದಿವಿಜಸತಿಶಾಪಮೋಕ್ಷವೆ ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2 ಪರುಶುರಾಮ ಸಮಾಗಮವುವಿ ಸ್ತರಿಸಿನೋಡೆಸಮತ್ವವಿಪಿನಾಂ ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ ಪರಿಕಿಸಲುದುರ್ವೃತ್ತಿಗಳುತತ್ ಪರಿಜನಖರಾದಿಗಳುಭ್ರಾಂತಿಯು ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3 ಅರುಣತನಯನುಧರ್ಮನೋಡೆ ಶ ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು ಹಿರಿಯಮಗನೆಸಹಾಯವಾಸೆಯೆ ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4 ಮಣಿಯೆಜ್ಞಾಪಕಸ್ವಸ್ಥಚಿತ್ತತೆ ವನವಶೋಕವುತ್ರಿಜಟೆಕನಸೇ ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ ದನುಜಪತಿಸುತಮುಖರವಧೆಯೇ ಮುನಿಮತವುದುರ್ವೃತ್ತಿಪರಿಹರ ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5 ಮಮತೆಲಂಕೆಯದಹಿಸಿಮತ್ತೆಹ ಪಮಶರಧಿ ಬಂಧನವೆಯಾಸೆನಿರೋಧನಂತರವು ಕ್ರಮದಿಧರ್ಮವಿಭೀಷಣನಸುರ ದಮನವಿಂದ್ರಿಯಜಯವುಮಿಗೆ ಹೃ ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6 ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು ವಿಧವಿಧದಯಜ್ಞಗಳವಿರಚಿಸಿ ಸದಮಲಾತ್ಮನುಸಕಲರಿಂದೈ ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7
--------------
ಗುರುರಾಮವಿಠಲ
ಶಿಖಾಮಣಿ | ದುರ್ಗುಣಿ ಪ ಶ್ರೀ ಕಳತ್ರನೆ ಜಗದೇಕ ನಾಯಕನೆಂದರಿಯದೆ ಅ.ಪ ಬನ್ನ ಬಿಡಿಸುವರೇನೊ ಮಾನವ ಕಡು ಮೂರ್ಖನೆ 1 ನಾನಾ ಪ್ರಯತ್ನಗಳ ಕಾಣುವುದಿಲ್ಲವೇಕೊ ಪ್ರಾಣಿಮಾತ್ರನು ನೀ ನಿಜವಿದು 2 ವರಿಗೆ ಬಿಡದೆ ಸರ್ವರೊಳಗೆ ನಿಂತಿಹ ಗುರುರಾಮ ವಿಠಲನೆಂದರಿಯದೆ 3
--------------
ಗುರುರಾಮವಿಠಲ
ಶಿಸ್ತಿಗೆ ಅಲಂಕಾರವು ಪ ಗೃಹಸ್ಥರಲ್ಲಿ ವ್ಯಾಜ್ಯವು ನಾಸ್ತಿ ಭಕ್ಷ್ಯ ಭೋಜ್ಯವು ಅ.ಪ ನೀರು ತುಪ್ಪ ಬಡಿಸುತ 1 ಹಪ್ಪಳ ಮುರಿದು ಹಾಕಿಸಿ ಅತಿಥಿಗಳನು ನೂಕಿಸಿ ತುಪ್ಪದ ಸೌಟು ತೋರಿಸಿ ಉಪ್ಪು ಚಟ್ನಿ ಹೆಚ್ಚಿಸಿ 2 ಮೂರು ಗಂಟೆಯೂಟವು ಮೂಢತನದೋಡಾಟವು ವೋರೆ ವೋರೆ ನೋಟವು ಸಾರು ಅನ್ನಾ ಕಾಟವು 3 ಎಣ್ಣೆ ವಗ್ಗರಣೆ ಎಲ್ಲಕು ಅನ್ನ ಹೊತ್ತಿ ಇರುವುದು ಸನ್ನೆ ಸೈಯಿಗೆಯೇ ಬಲ 4 ಸಾಲದಡಿಗೆ ಕಾಯಿಪಲ್ಯ ಬೇಯಲಿಲ್ಲ ವೊಂದಾದರು ರಾಯ ಗುರುರಾಮವಿಠಲ ಬಲ್ಲ ಉ- ಪಾಯಗಾರರು ಬೀಗರು 5
--------------
ಗುರುರಾಮವಿಠಲ
ಶೈಲ ರಾಜಕುಮಾರಿ ಶಂಕರಿ ಪ ಫಾಲಲೋಚನನರಸಿ ಭವಭೀತಿ ಬಿಡಿಸಿ ನಿ- ನ್ನೋಲಗ ಸಂತತವೀವುದು ಅ.ಪ ಕರುಣದಿ ನಿರುತವು ಪಾಲಿಸೆ 1 ನೀರಜ ರುಜುವಾಗಿ ನಿಲುವಂತೆಮಾಳ್ಪುದು 2 ಗುರುರಾಮ ವಿಠಲ ಸೋದರಿ ನಿನ್ನ ತುರುಬಿನ ಪರಿಮಳ ಕುಸುಮವನೀಡುತ ಕಾಯ್ವುದು 3
--------------
ಗುರುರಾಮವಿಠಲ