ಒಟ್ಟು 230 ಕಡೆಗಳಲ್ಲಿ , 53 ದಾಸರು , 188 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |ಬಿದ್ದು ನಾ ಬೇಡಿಕೊಂಬೆ ಪನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |ಎಳೆಯದಿರೊ ಸುಮ್ಮನೆ ||ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ 1ನಿರುಗೆಯ ಪಿಡಿಯದಿರೊ - ಕಾಂಚಿಯದಾಮ|ಕಿರುಗಂಟೆ ಧ್ವನಿಗೆಯ್ಯದೆ? ||ಕಿರುದುಟಿಗಳ ನೀನು ಸವಿದು ಚಪ್ಪರಿಸಲು |ತರವಲ್ಲಗಂಡಮತ್ಸರವ ತಾಳುವನಲ್ಲ2ನಾಡ ಮಾತುಗಳೇತಕೊ - ಸಂಗೀತವ |ಪಾಡುವ ಸಮಯವೇನೊ ||ಗಾಡಿಕಾರಶ್ರೀ ಪುರಂದರವಿಠಲನೆ |ಪಾಡು ಪಂಥಗಳೆ ಒಡಗೂಡುವ ಸಮಯದಿ 3
--------------
ಪುರಂದರದಾಸರು
ಸಲಹು ವೆಂಕಟರಮಣ ದಯಾಂಬುಧಿಸಲಹು ವೆಂಕಟರಮಣ ಪ.ಮಸ್ತಕದೊಳೊಪ್ಪುವ ಮಾಣಿಕ ಮಕುಟದಕಸ್ತೂರಿನಾಮದ ಚೆಲುವವಿಸ್ತರ ಕದಪಿಲಿ ಹೊಳೆವಕುಂಡಲಪ್ರಶಸ್ತವದನಜಗಜೀವ1ಎಳೆನಗೆ ತಿಂಗಳ ಕಾಂತಿಲಿಹೃತ್ತಾಪಕಳೆವ ಕರುಣಿ ಸಿರಿಕಾಂತಗಳದೊಳು ವನಮಾಲೆವೈಜಯಂತಿಪದಕಗಳೊಲೆವ ಮಂಗಳಮೂರ್ತಿಮಂತ 2ಮುತ್ತಿನ ಸರ ಸರಪಳಿ ಭುಜಕೀರ್ತಿಯುಎತ್ತಿದ ಶಂಖಾರಿಪಾಣೆರತ್ತುನ ಮೇಲೊಡ್ಯಾಣ ಕಂಕಣ ಮುದ್ರೆಒತ್ತೆ ಅಭಯವರದನೆ 3ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವದುಷ್ಟರ ರಣಜಿತವೀರಇಟ್ಟ ವಜ್ರದ ಕಾಲಂದಿಗೆ ಪಾವುಗೆಮೆಟ್ಟಿದ ಸುರರಮಂದಾರ4ಅಗರುಚಂದನಕಪ್ಪುರ ಕೇಶರ ಸುರಭಿಗಳಿಗೆ ಅತಿಪ್ರಿಯ ಅಂಗಮಘಮಘಿಸುವ ಮಲ್ಲಿಗೆ ಸಂಪಿಗೆಯಮಾಲೆಗಳ ಪ್ರಸನ್ವೆಂಕಟ ರಂಗ 5
--------------
ಪ್ರಸನ್ನವೆಂಕಟದಾಸರು
ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹರಿಕೊಡದ ಕಾಲಕ್ಕೆ ಬಾಯಿಬಿಡುವೆಯೊ ಪ್ರಾಣಿಪ.ಉಡಲಿಲ್ಲ ಉಣಲಿಲ್ಲ ಕೊಡಲಿಲ್ಲ ಧರ್ಮವ |ಅಡಗಿಸಿ ಇಟ್ಟಿಹೆ ಮಣ್ಣೊಳಗೆ ||ಬಡತನ ಬಂದು ಕಂಬಳಿ ಹೊದೆವಾಗ |ತುಡುಗು ನಿನ್ನ ಜನ್ಮ ಸುಡು ಕಾಣೊಖೋಡಿ1ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ |ಗುಗ್ಗರಿಯನು ಮಾಡಿ ತಿನ್ನುವಿಯೊ ||ವೆಗ್ಗಳವಾದ ಯಮಧೂತರು ಎಳೆವಾಗ |ಬುಗ್ಗೆಯ ಹೊಯ್ಕೊಂಡು ಹೋದೆಯೊ ಖೋಡಿ 2ನಂಟರು - ಬಂಧುಗಳೂರೊಳಗಿರಲಿಕ್ಕೆ |ಕುಂಟು ಸುದ್ದಿಗಳನು ಆಡುವೆ ನೀ ||ಕಂಟಕರಾದ ಯಮದೂತರು ಎಳೆವಾಗ |ನಂಟ ಪುರಂದರವಿಠಲನ ದ್ರೋಹಿ 3
--------------
ಪುರಂದರದಾಸರು
ಹರಿಪದಾಚ್ಛಿನ್ನ ಭಕ್ತ ಹರಿಕಾರ್ಯಕ್ಕಾಸಕ್ತಮರುತಾಂಶನು ನಮ್ಮ ಗುರುರಾಯನು ಪ.ಇಂದುಮುಖಿ ಸೀತೆಯಾಕೃತಿಯ ರಕ್ಕಸನೊಯ್ಯೆಸಿಂಧುಲಂಘಿಸಿ ಅವನ ವನವ ಕಿತ್ತುಬಂದ ಅಕ್ಷನನು ಮಡುಹಿಟ್ಟು ಬೇಗದಿಬಂದು ರಾಮನ ಪದಕೆರಗಿದ ಹನುಮ 1ಮಣಿಮಂತಕೀಚಕ ಬಕ ಬಲ್ಲಿದಸುರರತತಿಗಳ ಶಿರಗಳ ಸವರಿವನಜಾಕ್ಷಿ ಸತಿಯಳ ಸಭೆಯೊಳು ಎಳೆಯೆ ದುಶ್ಯಾಸನನ ಕರುಳು ಕೆಡಹಿ ಸೀಳಿದ ಭೀಮಸೇನ 2ಆತ್ಮನಾರಾಯಣ ಭೇದವಿರೆ ಒಂದೆಂದು ಮಾಯಿಗಳೊದರೆಜಿಹ್ವೆಬಿಗಿಸಿಆತ್ಮ ವೈಷ್ಣವರಿಗೆ ಭೇದ ಬಂಧಿಸಿದ ಸರ್ವೋತ್ತಮ ಪ್ರಸನ್ವೆಂಕಟಪತಿಪ್ರಿಯನು 3
--------------
ಪ್ರಸನ್ನವೆಂಕಟದಾಸರು
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
--------------
ಪ್ರಸನ್ನವೆಂಕಟದಾಸರು
ಹರಿಯೆ ಅಚ್ಯುತಾನಂತ ಗೋವಿಂದದುರುಳಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಪಡೆದು ಅವನ ಸತಿಯ ಸುರಪತಿಯು ಎಳೆತರಲುಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವದುಷ್ಟಮರ್ದನ ದೂರಾತಿದೂರ ಜಗ-ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿಅನ್ಯರಲ್ಲವು ನಾವು ಹಿತವರೆ ನಿನಗಿನ್ನುಭಿನ್ನ ದೇಹ್ಯವುನೋಡುಮುನ್ನಿಂದಲಿ ಇನ್ನುಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆಹರಿಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಆವ ವಿಪರೀತವನೆ ಅಲ್ಲದ್ದು ನುಡಿದನುಏಸುಬಗೆಯಿಂದ ಉಪಾಯದಲಿ ಕೇಳಿದರುಈಸು ದಿನ ಇವ ಎನ್ನ ಸುತನು ಎಂದರಿದಿದ್ದೆನಾನಾ ಬಗೆಯಿಂದ ವಧೆಗೇನೇನು ಉಪಾಯಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಕೆಡಿಸದೆ ತಾನಿತ್ತವರಸತ್ಯವೆಂದೆನಿಸಿಪರಿಪರಿಯಿಂದ ಸಿರಿದೇವಿಗೆಇದೆ ಸಮಯವೆಂದುಸಿರಿಅಜಭವಾದಿಗಳೆಲ್ಲಪರಿಪರಿಯಿಂದಸುರ ಋಷಿಪಿತೃ ಗಂಧರ್ವಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಆಗ ಪ್ರಹಲ್ಲಾದಗೆ ಕರಕಮಲಗಳಿಂದಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಜಯ ಜಯತು ಪ್ರಹ್ಲಾದವರದ ಜಗದಾಧಾರ
--------------
ಗೋಪಾಲದಾಸರು
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ