ಬೇಗ ಮಾಡೋ ಭಕುತಿ ಆಗುವುದು ಮುಕುತಿಆಗ ಈಗ ಎನ್ನದಿರು ಇದೆ ನಿನಗೆ ಮುಕುತಿ ಪ
ಧ್ಯಾನ ಹಲವ ಬಿಡು ಧ್ಯಾನ ಆತ್ಮನ ಮಾಡುಧ್ಯಾನ ಧಾರಣ ಸಮಾಧಿಯಂಗಳ ನೋಡು ನಿಜವ ಕೂಡು 1
ಎಚ್ಚರ ಬಾಹಿರ ಮರೆತು ಎಚ್ಚರ ಅಂತರವರಿತುಎಚ್ಚರ ಬಾಹಿರ ಅಂತರ ಮರೆತು ಎಚ್ಚರ ಬೇರರಿತು 2
ನಿತ್ಯ ಬಿಡದೆ ವಾದಕೆ ಮಯ್ಯ ಕೊಡದೆಸಾಧಿಸು ನಿತ್ಯಾನಿತ್ಯಾ ವಸ್ತುವ ಸಾಧಿಸು ಗುರುವ ಹಿಡಿದೇ 3
ಬೇರೆ ಎಂಬುದ ಮಾಣು ಎಲ್ಲವ ನಿನ್ನಲೆ ಕಾಣು ನಾಬೇರೆಯೆಂಬ ಮತಿಯ ಮಾಣು ಬಳಿಕ ಜಾಣ 4
ಬೋಧ ಬೋಧ ಗುರಿವಿಡಿಯೋ 5