ಜಾಂಬುವತಿ ಪ್ರಿಯ ವಿಠಲ | ಅಂಬುಜದಳಾಕ್ಷ ಪ
ನಂಬಿ ಬಂದಿಹನ ಮನ | ದಂಬಲವ ಸಲಿಸೋ ಅ.ಪ.
ಲೌಕಿಕಾನೇಕದಲಿ | ಸಿಲ್ಕಿ ನೊಂದವನಾಗಿಏಕಾಮೇವಾದ್ವಿತೀಯ | ನೀನೇವೆಯಂಬಾವಾಕು ನುಡಿವಾ ಇವಗೆ | ಪ್ರಾಕ್ಕು ಕರ್ಮವ ಕಳೆದುತೋಕನ್ನ ಸಲಹೆಂದು | ಪ್ರಾರ್ಥಿಸುವೆ ಹರಿಯೇ 1
ನೀಚೋಚ್ಛ ಸುಜ್ಞಾನ | ದಾಸ್ಯಕಿದುವೇ ಮೂಲವಾಚಿಸೋ ಇವನಲ್ಲಿ | ಕೀಚಕಾರಿಪ್ರಿಯಾವಾಚಾಮಗೋಚರನೆ | ಖೇಚರೋತ್ತಮಸವ್ಯಸಾಚಿ ಸಖನೇ ಇವನ | ಕಾಪಾಡೊ ಹರಿಯೇ 2
ಸಂಗೀತ ಲೋಲ ಹರಿ | ಮಂಗಳಾಂಗನೆ ಸಾಧುಸಂಗವನು ಇವಗಿತ್ತು | ಕಾಪಾಡೊ ಹರಿಯೇಇಂಗಿತಜ್ಞನೆ ವಿಷಯ | ನಿಸ್ಸಂಗನೆಂದೆನಿಸಿಸಂಗೀತದಲಿ ತವ ಪ್ರ | ಸಂಗವಿತ್ತು ಕಾಯೋ 3
ಮೂರೆರಡು ಭೇದಗಳ | ತಾರತಮ್ಯ ಜ್ಞಾನವಾರವಾರಕೆ ತಿಳಿಸಿ | ಕಾಪಾಡೊ ಇವನಾಸೂರಿಜನ ಸಂಪ್ರೀಯ | ಸೂರಿಸಂಗವನಿತ್ತುಪಾರುಗೈ ಭವದ ಕೂ | ಪಾರ ಹರಿಯೇ 4
ಗರುಡವಾಹನ ಕೃಷ್ಣ | ಗರುವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಹರಿಯೇ |ನಿರವಧಿಕ ಗುಣ ಪೂರ್ಣ | ಸರ್ವೇಷ್ಟ ಪ್ರದನಾಗಿಪೊರೆಯ ಬೇಕಿವನ | ಗುರು ಗೋವಿಂದ ವಿಠಲಾ 5