ಒಟ್ಟು 5051 ಕಡೆಗಳಲ್ಲಿ , 129 ದಾಸರು , 3317 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಶ್ರೀರಾಮಚಂದ್ರಗೆ ಮಂಗಳಾಂಗಗೆ ಪ ಭೃಂಗವೇಣಿ ಜನಕಜಾಂತರಂಗ ಲೋಲಗೆಅ.ಪ. ರಾವಣಾದಿ ದನುಜಮಥನ ಕಾಲರೂಪಗೆ ಪಾವಮಾನಿ ಹೃದಯ ಕಾಮುದ ಪೂರ್ಣ ಚಂದ್ರಗೆ 1 ದೇವತಾಳಿ ಗೀಯಮಾನ ದಿವ್ಯ ಚರಿತೆಗೆ ಭೂ ವಧೂ ಪರಿಪಾಲನೈಕ ದರ್ಮನಿರತಗೆ2 ಕಮಲ ಹಂಸ ರೂಪಗೆ ಧೇನುನಗರ ನಾಥ ವೇಂಕಟೇಶ ರೂಪಗೆ 3
--------------
ಬೇಟೆರಾಯ ದೀಕ್ಷಿತರು
ಮಂಗಳನಾಮಾ ನಮೋ ನಮೋ ಪ ಮಾಂಗಿರಿಧಾಮಾ ನಮೋ ನಮೋ ಅ.ಪ ಅಂಗಜಾತ ಪಿತ ಸುರಪತಿವಿನುತಾ ತುಂಗ ಕೃಪಾಂಬಕ ನಮೊ ನಮೋ 1 ರಂಗನಾಥ ನೀಲಾಂಗ ಮಹಾದ್ಭುತ ಸಿಂ[ಗಾನ]ನ ಹರೇ ನಮೋ ನಮೋ 2 ನಾಗಾಲಂಕೃತ ಸರೋಜ ಭೂಷಿತ ಕಮಲಭವಾನತ ನಮೋ ನಮೋ 3 ತಾರಕ ನಾಮ ನಮೋ ನಮೋ ರಘುರಾಮಾ ನಮೋ ನಮೋ 4 ಸುರಮುನಿ ನಾರದ ಗೌತಮ ಪ್ರೇಮಾ ಧರೆಗಭಿರಾವೂ ನಮೋ ನಮೋ 5 ಗಿರಿಜಾಧವನುತ ಗುಣ ಮಣಿಧಾಮಾ ರಾಕ್ಷಸ ಭೀಮಾ ನಮೋ ನಮೋ 6 ರಾಮಾ ರಘುರಾಮ ಕ್ಷೀರಾಬ್ಧಿಶಾಯಿ ಸೋಮಾ ಮಾಂಗಿರಿವರ ನಮೋ ನಮೋ7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳವೆನ್ನಿ ಮಾಲಕ್ಷುಮಿಗೀಗ ಶ್ರೀ- ರಂಗನರಸಿ ರಮಾದೇವಿಗೆ ಬ್ಯಾಗ ಪ ಸಿಂಧುನಂದನೆ ನಂದನಂದನನೆದೆಯಲ್ಲಿ ಹೊಂದಿಕೊಂಡಿರುವಂಥ ಸುಂದರ ಸಿರಿಗೆ 1 ವೈಜಯಂತಿ ಹರಿಯ ಶ್ರೀವತ್ಸದಲ್ಲಿ ಸರಸವಾಗಿರುವಂಥ ವರಮಹಾಲಕ್ಷುಮಿಗೆ 2 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆಮೊಗ್ಗು ವರವ ಕೊಡೆನಗೆ 3 ರಂಗನರಸಿ ಬೆಳ್ಳಿ ಬಂಗಾರವೆನಗಿತ್ತು ಕಂಗಳಿಂದಲಿ ನೋಡಿ ಮಂಗಳ ನೀಡೆ 4 ಆದಿನಾರಾಯಣನಾನಂತಗುಣ ಪರಿಪೂರ್ಣ- ನಾದ ಭೀಮೇಶಕೃಷ್ಣನರಸಿ ಲಕ್ಷುಮಿಗೆ5
--------------
ಹರಪನಹಳ್ಳಿಭೀಮವ್ವ
ಮಂಗಳವೆನ್ನಿ ಮುದವೆನ್ನಿ ಶೋಭಾನೆ ಪ ಸಿರಿ ಲತಾಂಗಿ ಹುತ್ಕುಮಲಾಲಯ ಕು ಹಸೆಯ ಜಗಲಿಗೇ 1 ಇಂದಿರೆ ಸಹೋದರೆ ಸುನಿಭಾನನೆ ಶ್ರುತಿಗೀತೆ ಮಂಗಳ ದೇವಿ ಹಸೆಗೇಳು 2 ಅತುಲಮಹಿಮ ಅಜರಾಮರಣನೆ ಪತಿತ ಪಾವನ್ನ ಹಸೆಗೇಳೋ 3 ಉದ್ಯದ್ರವಿ ಸನ್ನಿಭೆ ಆಗಮ ವೇದ್ಯಳೆ ವಿನತಾತ್ಮಜ ಧ್ವಜರಿ ನಪ್ರಿಯೆ ಹಸೆಗೇಳು 4 ಸಾರಥಿ ವ್ರಾತೋತ್ತಮ ವ್ರಜಭವ ನಾರೇರ ದಾಮೋದರ ಜಗನ್ನಾಥ ವಿಠ್ಠಲ ಹಸೆಗೇಳೋ 5
--------------
ಜಗನ್ನಾಥದಾಸರು
ಮಂಗಳವೆನ್ನಿರೆ ಮದನಗೋಪಾಲನಿಗೆ ಮಂಗಳವೆನ್ನಿರೆ ಮಾಧವಗೆ ಪ ಮಂಗಳವೆನ್ನಿರೆ ಮಾಮನೋಹರನಿಗೆ ಮಂಗಳವೆನ್ನಿರೆ ಮುರಹರಗೆ ಅ.ಪ ಭುವನಮೋಹನ ಶಾಮಲಸುಂದರಾಂಗಗೆ ಅಮಿತಪರಾಕ್ರಮ ಅಚ್ಚುತಗೆ ನವನವಲೀಲೆಯ ತೋರಿದ ದೇವಗೆ ಸುವಿನಯದಿಂದ ಶ್ರೀ ಶ್ರೀಧರಗೆ1 ಶಂಖು ಚಕ್ರಪೀತಾಂಬರಧಾರಿಗೆ ಬಿಂಕದಿಂದ ಮುರಳಿಯನೂದಿದಗೆ ಶಂಕರಾದಿ ಸುರಸೇವಿತಗೆ ನಿಷ್ಕ- ಳಂಕದಿ ಭಜಿಪರ ಪೊರೆದವಗೆ2 ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ ಪರಾಭವನಾಮ ಸಂವತ್ಸರದಿ ದುರಿತಗಳೆಲ್ಲವ ಪರಿಹರಿಸುತ ಕಾಯ್ವ ಸಿರಿವರ ಕಮಲನಾಭ ವಿಠ್ಠಲನಿಗೆ3
--------------
ನಿಡಗುರುಕಿ ಜೀವೂಬಾಯಿ
ಮಂಗಳವೆನ್ನಿರೆ ಮಹಲಕ್ಷ್ಮಿ ದೇವಿಗೆ ಶುಭ ಪ ಅರಳು ಮಲ್ಲಿಗೆ ಗಂಧ ಸುರಪಾರಿಜಾತ ಪುಷ್ಪವರ್ಪಿಸಿ ನರಸಿಂಹನರಸಿಗೆ ಪರಿಪರಿ ಫಲಗಳ ಹರದೇರುಡಿಯ ತುಂಬುತಲಿ ಶ್ರೀ ಲಕ್ಷ್ಮಿಗೆ 1 ಸರಿಗೆ ಸರವು ಜರದ ನೆರಿಗೆ ಮೇಲೊಲಿಯಲು ಅರಳು ಮಲ್ಲಿಗೆ ಜಾಜಿ ಸರವ ಮುಡಿದು ಹರುಷದಿಂದಲಿ ನಾಗಮುರಿಗಿ ಕಂಕಣಕೈಲಿ ಪರಿಪರಿ ವರಗಳ ಕೊಡುವಳಿಗೆ ಜಯ 2 ಕಡಗ ಕಾಲಂದುಗೆ ಘಲುರೆಂಬನಾದದಿ ಬೆಡಗಿನಿಂದಲಿ ಬರುವ ಭಾಗ್ಯದಾಯಿನಿಗೆ ಕಡಲಶಯನ ಕಮಲನಾಭವಿಠ್ಠಲನ ರಾಣಿ ಶುಭ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಾಂಗ ಮನ್ನಿಸು ತಪ್ಪನು ರಂಗನಾಥ ರಕ್ಷಿಸೈ ತಂದೆ ಯೆನ್ನನು ಪ ಅಮಿತ ಕಮಲ ರವಿತನಾಗದ ಮನುಜನೇಕೆ1 ಕಣ್ಣು ಇಲ್ಲದ ರೂಪು ಯಾಕೆ | ರಂಗನಾಥ ಹೊನ್ನು ಇಲ್ಲದ ಬಾಳು ಯಾತಕೆ | ಮುನ್ನ ಮೂಗು ಇಲ್ಲದ ಮೊಗವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು 2 ದಾನವಿಲ್ಲದ ಧನವಿದೇತಕೆ | ರಂಗನಾಥ ಜ್ಞಾನವಿಲ್ಲದ ವಿದ್ಯೆ ಯಾತಕೆ ಆಣೆಯಿಲ್ಲದ ಅರಸು ತಾನು ಅಡವಿಪಾಲು ಆದರೇನು ದೀನಬಂಧು ನಿನ್ನ ನಂಬದ ಮಾನಹೀನ ಮನುಜನೇಕೆ 3 ಮಕ್ಕಳಿಲ್ಲದ ಮನೆಯು ಯಾತಕೆ | ರಂಗನಾಥ ಅಕ್ಕರಿಲ್ಲದ ಊಟ ಯಾತಕೆ ಸೊಕ್ಕಿ ನಡೆವ ಬಂಟನೇಕೆ ಮಿಕ್ಕು ಮೀರ್ವ ಶಿಷ್ಯನೇಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕು ನರ ಜನ್ಮವೇಕೆ ? 4 ಕಾಕು ಮಾಡಿಯೆ ವೈಕುಂಠ ನಗರದೊಡೆಯ ನಾರಸಿಂಹ ಏಕಭಕ್ತಿಯಿಂದಲಿರುವೆ ಏಕೆ ಕೈಯ ಬಿಡುವೆ ದೊರೆಯೆ 5
--------------
ಅನ್ಯದಾಸರು
ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆಪ ಭವ ಭಯ ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ ಕೂರ್ಮ ಕ್ರೋಡ ನೃಹರಿಗೆ ದಾನವ ಬೇಡಿದಗೆ ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ ಬುದ್ಧ ಕಲ್ಕ್ಯನಿಗೆ ಜಯ 1 ಅನಿರುದ್ಧ ಮೂರುತಿಗೆ ಪಕ್ಷಿವಾಹನ ಹರಿಗೆ ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ 2 ಗೋಕುಲದೊಳು ಗೋಪಾಲಕರೊಡಗೂಡಿ ಗೋವ್ಗಳ ಕಾಯ್ದವಗೆ ಗೋವರ್ಧನಗಿರಿ ಎತ್ತಿದ ಧೀರಗೆ ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ 3 ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು ವೃಂದಾರಕರು ನುಡಿಯೆ ನಂದ ಯಶೋದೆಯರು ಬಂದು ತೋರೆನಲು ಛಂದದಿಂದ ವಿಶ್ವರೂಪವ ತೋರ್ದಗೆ 4 ಕಾಳಾಹಿವೇಣಿಯರೊಡಗೂಡಿ ನಲಿವಗೆ ಕಾಳಿಂದಿ ರಮಣನಿಗೆ ಕಾಲಕರ್ಮಕೆ ಈಶನಾದ ಸ್ವಾಮಿಗೆ ಕಾಳಿಮರ್ದನ ಕಮಲನಾಭವಿಠ್ಠಲನಿಗೆ 5
--------------
ನಿಡಗುರುಕಿ ಜೀವೂಬಾಯಿ
ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ. ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ ಅಂಬ ಪಾಹಿಮಾಂ ಜಯ 1 ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ 2 ರತ್ನನಿಚಯ ಭಾಸಮಾನ ರತ್ನಕಿಂಕಿಣೀ ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ 3 ನಿತ್ಯ ನಿನ್ನನು ಯತ್ನದಿಂದ ಧೇನುನಗರ ವಾಸೆ ಪಾಲಿಸು 4
--------------
ಬೇಟೆರಾಯ ದೀಕ್ಷಿತರು
ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ ಪ ಕೃಷ್ಣಗೆ ಮಾನಿನೀಯರು ಕಂಗಳಿಂದಲೆ ನೋಡಿಸುಖಿಸಿ ಕಮಲಮುಖಿಯರು ಅ.ಪ. ಕುಂಡಲ ಹಾರ ಪದಕ ಧರಿಸಿ ಕುಳಿತಿಹಾಪದಕ ಧರಿಸಿ ಕುಳಿತಿಹಾಸರಸಿಜಾಕ್ಷನೋಳ್ಪಜನನೆ ಹರುಷ ಕೊಡುತಿಹಾ 1 ಕಡಗ ಕಂಕಣ ವಂಕಿ ನಾಗಮುರಿಗೆ ಪೊಳೆವುದುನಾಗಮುರಿಗೆ ಪೊಳೆವುದುಜರದಗೊಂಡೆ ತಾಯತ ಮುತ್ತು ಸಿರಿಯು ತೂಗೊದು 2 ಕಾಲಕಡಗ ರುಳಿಯು ಗೆಜ್ಜೆ ಸಾಲು ಚರಣದಿಗೆಜ್ಜೆ ಸಾಲು ಚರಣದಿಭಾಳ ದನಿಯ ಮಾಡುತಿಹುದು ಕೇಳಿ ಕರ್ಣದಿ 3 ಕನಕ ವಸನ ಹೀರ ಕಾಂಚಿ ಕಟಿಯ ತಟದಲಿಕಾಂಚಿ ಕಟಿಯ ತಟದಲಿಮಿಂಚಿನಂತೆ ಮಿನುಗುತಿಹದೊ ನೋಡಿ ಸುಖದಲಿ 4 ಬೊಟ್ಟು ಹಿಡಿದು ಬಾಲನಿಂದ ಚರಿಸಿದಂದದಿಹಿಡಿದು ಬರಿಸಿದಂದದಿಕೃಷ್ಣ ವಿಷ್ಣು ಜಯದ ಸಿರಿಯು ಕೃಷ್ಣ ಜನ್ಯದೀ 5 ಕರವ ಪಿಡಿದು ಹಯದ ಷಣಶ ತಿರುಗುವಾ 6 ಹರಣ ಹರಣ ಮಾಡಿದಧುರದಿ ಪಾರ್ಥನ ಹೆಸರು ಮಾಡಿ ಹರಿಯ ನಡೆಸಿದಾ7 ಹರಿಯು ಮುಖವ ನೋಡಿ ರಾಜರು ಹರುಷಬಟ್ಟರುರಾಜರು ಹರುಷಬಟ್ಟರುಮುಖವ ದಯದಿ ಮೋಕ್ಷದ ಸಿರಿಯನುಂಡೆಯೋ 8 ನಿತ್ಯ ತಂದು ಸುಖಿಸುವೆ 9
--------------
ಇಂದಿರೇಶರು
ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ ಮಂಗಳಾರತಿ ಎತ್ತಿರೆಲ್ಲಮಂಗಳರೂಪಗೆ ಮಂಗಳ ಮಹಿಮಗೆ ಮಂಗಳಕರಗೆ ಮಂಗಳಪ್ರದಗೆ ಪ ಘೃತ ನೀಡಿಮುದದಿಂ ಚಿಜ್ಯೋತಿಯನೆ ಮುಟ್ಟಿಸಿಸದಮಲ ಸರ್ವ ಬ್ರಹ್ಮವೆ ಎಂದು 1 ತುಂಬಿ ಉಳಿವು ಇನ್ನು ಎಂಬೆಬಲುಪ್ರಭೆ ತಿಳಿಯೆ ಥಳಥಳ ಹೊಳೆಯೆ ತೊಳಗಿ ತೊಳಗಿ ಬೆಳಗಿ ಬೆಳಗಿ 2 ನಾನಾ ವರ್ಣವೆ ಪೊಳೆಯಲು ಅತ್ತಲಿತ್ತಲುನಾನಾ ವರ್ಣವ ತಾಳುತ್ತ ಎತ್ತಾಲೆತ್ತಲುತಾನು ಚಿದಾನಂದ ಗುರು ಬೇರಾಗದೆತಾನೆ ತಾನೆಯಾಗಿ3
--------------
ಚಿದಾನಂದ ಅವಧೂತರು
ಮಂಗಳಾರತಿ ಮಾಡಿರೆ ಮಾರಮಣಗೆ ಪ ಮಂಗಳಾರತಿ ಮಾಡಿ ಗಂಗಾಜನಕನಿಗೆ ಶೃಂಗಾರ ಶೀಲಗೆ ಅಂಗನೆ ಮಣಿಯರುಅ.ಪ ನೀರೊಳಗಾಡಿದವಗೆ ಬೆನ್ನಿಲಿ ಗಿರಿ ಭಾರ ಪೊತ್ತಿಹ ದೇವಗೆ ಮಣ್ಣಿನಲಿದ್ದ ಬೇರುಗಳನೆ ಮೆದ್ದಗೆ ಶ್ರೀಹರಿಗೆ ಮೂರೆರಡರಿಯದ ಪೋರನÀ ಮಾತಿಗೆ ಕ್ರೂರ ದೈತ್ಯನ ಕರುಳ್ಹಾರ ಮಾಡಿದಗೆ 1 ಬಡವ ಬ್ರಾಹ್ಮಣನಾಗುತ ದಾನವ ಬೇಡಿ ಕೊಡಲಿ ಪಿಡಿದ ಭಾರ್ಗವಗೆ ಕೋಡಗಗಳ ಕೂಡಿ ಕಡಲ ಬಂಧಿಸಿ ಮಡದಿಯ ತಂದವಗೆ ಕಡಹಲ್ದ ಮರನೇರಿ ಮಡದೇರಿಗೊಲಿದಗೆ ಬಿಡದೆ ತೇಜಿಯನೇರಿ ಸಡಗರ ತೋರ್ದಗೆ 2 ಪರಮಪುರುಷದೇವನ ಪರಿಪರಿಯಿಂದ ಸ್ಮರಣೆ ಮಾಡುತ ಪಾಡುತ ಸಿರಿಯರಸಗೆ ಸರಸೀಜಾಕ್ಷಿಯರೆಲ್ಲರೂ ಸರಸದಿ ಬಂದು ಪರಾಭವ ನಾಮ ವತ್ಸರದಲಿ ಸುಜನರು ಸಿರಿವರ ಕಮಲನಾಭ ವಿಠ್ಠಲನಿಗೆ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಾರತಿಯ ತಂದೆತ್ತಿರೆ ಶುಭಮಂಗಳ ಜಗದಾದಿದೇವಿಗೆ ಪ ಮಧುಕೈಟಭಾಸುರ ಮರ್ದನ ದೇವಿಗೆಮದನ ಕೋಟಿ ರೂಪ ಮಹಾದೇವಿಗೆಸದಮಲ ಬ್ರಹ್ಮರ ಹೃದಯದ ಆತ್ಮಗೆಮದನಾರಿ ಭೂತೆಗೆ ಆರತಿ ಎತ್ತಿರೆ 1 ಭಾನು ಸಾಸಿರ ಕೋಟಿ ತೇಜ ಮಹಾತ್ಮಳಿಗೆದಾನವಾಂತಕಳಾದ ದಯಾಶೀಲಗೆಮಾನನಿಧಿ ಭಕ್ತರನು ಮರೆಯದೇ ರಕ್ಷಿಪಬಾಣಾರಿ ಜನನಿಗೆ ಆರತಿಯನೆತ್ತಿರೆ 2 ರಕ್ಷಬೀಜಾರಿಗೆ ರಾಕ್ಷಸಧ್ವಂಸಿಗೆಭಕ್ತರ ಸಲಹುವ ಬಗಳಾಂಬೆಗೆಮುಕ್ತಿ ಸದ್ಗುರು ಚಿದಾನಂದವಧೂತಗೆಮುತ್ತಿನಾರತಿಯನೆತ್ತಿರೆ3
--------------
ಚಿದಾನಂದ ಅವಧೂತರು
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ. ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ. ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು 1 ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ 2 ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ 3
--------------
ನಂಜನಗೂಡು ತಿರುಮಲಾಂಬಾ
ಮಂಗಳಾರುತಿ ತಂದು ಬೆಳಗಿರೆ | ಅಂಗನೇಯರು ರಂಗಗೇ ||ಅ|| ತುಂಗ ಮಹಿಮ ಶುಭಾಂಗ ಕರುಣಾ | ಪಾಂಗ ಶ್ರೀನರಸಿಂಗಗೇ ಅ.ಪ. ಪ್ರಳಯ ಜಲಧಿಯೊಳಾಲದೆಲೆಯಲಿ | ಮಲಗಿ ಬೆರಳು ಸವಿದಗೇಶ್ರೀಲತಾಂಗಿಯು ಸ್ತೋತ್ರ ಗೈಯ್ಯಲು |ಒಲಿದು ಜೀವರ ಸೃಜಿಸಿದವಗೆ 1 ಮೂಲಕಾರಣ ಮಾಡಿ ಪ್ರಕೃತಿಯ | ನಾಲಕ್ಕಿಪ್ಪತ್ತು ತತ್ವದಾಲೀಲೆಯಿಂದಲಿ ಸೃಜಿಸಿ ಬೊಮ್ಮನ ಚೆಲುವ ತನುವನೆ ಮಾಡ್ದಗೇ2 ಮತ್ತೆ ವಾರಧಿ ಶಯ್ಯನಾಗುತ | ತತ್ವಮಾನಿ ಬೊಮ್ಮನಪೆತ್ತು ತನ್ನಯ ಪೊಕ್ಕಳಿಂದಲಿ | ಕೀರ್ತಿಯನು ಪಡೆದಾತಗೇ 3 ನೀರೊಳಾಡಿ ನಗವ ನೆಗಹಿ | ಕೋರೆದಾಡೆಯ ತೋರ್ದಗೇನರಸಿಂಹಗೆ ದಾನ ಬೇಡ್ದಗೆ | ಧೀರ ಪರಶುರಾಮ ರಾಮಗೇ 4 ಗಿರಿಯ ನೆಗಹಿ ನಗಗಳ್ವೈರಿಯ | ಮರುಳು ಮಾಡಿದ ಚೆಲುವಗೇಬರಿಯ ಮೈಯ್ಯಗೆ ತುರಗನೇರಿದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು