ಇದೇನಿದೇನು ನಿನ್ನ ಪದವ ನಂಬಿದವ ಗೆಡರು
ಬಾಧಿಸು ವದೇನು ಪ
ಅವನ ಬದಿಯಲಿ ಗರುಡ ಮಣಿಯಿರೆ|
ಹಾವಿನ ಗರಳವ ಏರುವದೇ|
ಅಮೃತ ಕಲಶ ಮನೆಯೊಳಿರೆ|
ಸಾವಿನ ಭಯದಿಂಬಳಲುವರೇ ರಂಗಯ್ಯಾ 1
ಹನುಮನ ಪರಿಚಾರಕರಿಗೆ ಬೆಂಬತ್ತಿ
ಬಿನಗು ಭೊತಂಗಳು ತಟ್ಟುವವೇ
ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ
ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ 2
ದುರಿತ ಬಂದು|
ಕುಂದ ನಿನಗಲ್ಲವೇ
ಎನ್ನವ ಗುಣಗಳ ನೋಡದೆ ರಕ್ಷಿಸು
ಸನ್ನುತ ಮಹಿಪತಿ ನಂದನ ಜೀವನ 3