ಒಟ್ಟು 327 ಕಡೆಗಳಲ್ಲಿ , 55 ದಾಸರು , 312 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾದರಾಯಣರು ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ ಪ ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ ಅ.ಪ. ಬಾದರಿ ಸುಖ ವಲಜೆ ಮುನಿತವ ಪೂರ್ಣ-ಬೋಧ ವೈಶಂಪಾಯನ ಮುನಿಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-ಗಾಧ ಮಹಿಮೆ ತೋರಿಸೋ 1 ವೃಂದ ಚಕೂತ ಮುನಿಗಳಿಗೆ ಸುಖಸಂದೋಹದಾರ್ಥ ಪೇಳುತಿರಲುಬಂದ ಸಂಶಯ ಹರಿಸುತ ಬೇಗ ಮಹಾ-ನಂದ ನೀಡಿದಿ ಕೇಳಿದವರಿಗೆ 2 ಸತ್ಯವತಿಯ ಸುಕುಮಾರನೆಧಾತ್ರಿಯೊಳಗೆ ಪುಣ್ಯಚರಿತನೆಸುತ್ತಮುತ್ತಲೂ ಶೇಷಶಯ್ಯನೆ ಎನ್ನನೇತ್ರಕ್ಕೆ ಪೊಳಿ ಇಂದಿರೇಶನೆ 3
--------------
ಇಂದಿರೇಶರು
ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ಪ ನಿತ್ಯ ಅ.ಪ. ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದುಹೀನ ಮಾನವನಿಗೆ ನೀನು ಬರುವಿ ಎಂಬೊಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ 1 ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ 2 ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ 3 ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ4 ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ 5
--------------
ಇಂದಿರೇಶರು
ಬಾರೋ ಬಾರೆಲೋ ಹೃದಯ ವಾರಿಜದೊಳುಬಾರಿ ಬಾರಿಗೆ ಕರೆವೆ ನಿನ್ನ ಮೋರೆ ತೋರೆಲೋ ಪ ಪುಟ್ಟ ಪಾದವ ಕ್ಷಿತಿಯೊಳಿಟ್ಟು ಮೋದವ ಕೊಟ್ಟು ಭಕ್ತರಿಗೆ ತೋರೋ ಕೃಷ್ಣ ರೂಪವಾ 1 ಸಿಂಧು ಮಥಿಸಿದಿ ಸುಧೆಯ ತಂದು ಬಡಿಸಿದಿ ಕೃಷ್ಣಾಚಂದದಿಂದ ದೇವತೆಗಳ ವೃಂದ ಸಲಹಿದಿ 2 ಇಂದು ವದನನೆ ಶಾಮಸುಂದರಾಂಗನೇಆನಂದದಿಂದ ತೋರೋ ಎನಗೆ ಕುಂಜಹೃದಯನೇ 3 ಇಂದಿರೇಶನೆ ಭವೇಂದ್ರ ವಂದ್ಯನೆ ಕೃಷ್ಣಾ ನಿನ್ನಕಂದನೆಂದು ಕರೆಯೋ ಎನ್ನ ನಂದ ಬಾಲನೇ4
--------------
ಇಂದಿರೇಶರು
ಬಾರೋ ಮನೆಗೆ ಕೃಷ್ಣಯ್ಯ ಕೃಷ್ಣಾಬಾರೋ ನಮ್ಮ ಮನೆಗೆ ಪ ಬಾರೋ ನಮ್ಮ ಮನೆಗೆ ವಾರೀಜನಾಭನೆಬಾರಿ ಬಾರಿಗು ನಿನ್ನ ಸಾರಿ ಕರೆವೆ ಕೃಷ್ಣ ಅ.ಪ. ಗೋಪಿ ಮಾನುನಿಯರು ಸ್ವಾಮಿ 1 ಕುಂದ ಚಂಪಕ ಜಾಜಿವೃಂದ ಶೋಭಿಪ ಮುಖ ಗಂಧವರ್ಚಿಪ ಕೃಷ್ಣ2 ಇಂದುವದನ ನಿನ್ನ ಚಂದವ ನೋಡಲುದಿವಿಜೇಂದ್ರರು ಬಂದಿಹರು ಇಂದಿರೇಶನೆ ಕೃಷ್ಣ 3
--------------
ಇಂದಿರೇಶರು
ಬಾಲಕೃಷ್ಣ ಇಂದುವದನೆ ಎನ್ನ ಕಂದನ ನೋಡೆ ಪ ಮಂದಿರದೊಳಗೆಷ್ಟು ಚಂದದಿಂದಾಡುವನೆ ಅ.ಪ ದೃಷ್ಟಿ ಮಾಲೆಯ ಕಟ್ಟಿಪೆ ಕೊರಳೊಳುದೃಷ್ಟಿ ಆಗುವುದಲ್ಲೆ ಪುಟ್ಟ ನಮ್ಮಪ್ಪನಿಗೆ 1 ನಗುವನು ಬೆಳದಿಂಗಳ ಹಗಲೆ ಬಂದಿಹುದೇನೆನಗುತ ನಿಂತಿರುವ ಸುಗುಣವಂತನ್ನ ಎನ್ನಬಗಲೊಳಗೆತ್ತಿಕೊಂಬುವೆನೆ 2 ದಧಿ ಪೇಯ ಪಿಡಿಯನು ಒಂದಿ£ 3 ಅಂಗಿ ಕುಂಚಿಗಿ ಹಾಕಿ ಶೃಂಗರಿಸುವೆನುಅಂಗಳದೊಳಗೆಷ್ಟು ಮಂಗಳ ತೋರುವನೆ 4 ಕೂಸಿನಿಂದಲೆ ಗೋಷ್ಟ ಭೂಷಿತವಾಗಿದೆಸಂತೋಷಿಸುತ ಇಂದಿರೇಶನು ನಲಿವನು 5
--------------
ಇಂದಿರೇಶರು
ಬಾಲಕೃಷ್ಣ ಏನು ಮೋದವೊ ವೇಣು ಬಾಲಕೃಷ್ಣಾನೀನು ಮಲಗಿ ತೊಡಿಯೊಳು ಗಾನ ಕೇಳಿದೆಯೋ ಪ ವ್ಯಾಳರಾಜ ಚರಿತೆ ಪೇಳುತಿರಲು ಒಬ್ಬಲೋಲ ಕಣ್ಣು ತೆರೆದು ಕೇಳಿದೆಯೋ ಕೂಸೇ 1 ಹಿಂದೆ ಎರಡು ಕಾಲು ಮುಂದೆ ಎರಡು ಕರವುಪೊಂದಿ ತೊಡಿಯಲಿ ಗಾನ ಚೆಂದ ಕೇಳಿದೆಯೋ2 ಇಂದಿರೇಶನ ಪೂಜಾಕಾಲದಲ್ಲಿನಂದತನಯ ಪದವ ಬಂದು ಕೇಳಿದೆಯೋ 3
--------------
ಇಂದಿರೇಶರು
ಬಾಲಕೃಷ್ಣ ತುರುವು ಕಾಯಲು ಕಳುಹಿದಳು ತನ್ನಬಾಲನ ಗೋಪಿಯು ಮುದ್ದಿಸುತಿಹಳು ಪ ಕರೆದು ಪಾಲನು ಕುಡಿಸುತಿಹಳು ನಿಂಬುಪರಿಮಳುಪ್ಪಿನಕಾಯ ಬುತ್ತಿ ಕಟ್ಟಿದಳುಸುರಭಿಯ ಮೊಸರು ಬೆಣ್ಣೆಯನು ದೋಸೆಸುರುಳಿ ಹೋಳಿಗೆ ಮಂಡಿಗೆಯ ಕಟ್ಟಿದಳುಸಂಡಿಗೆಯ ಕಟ್ಟಿದಳು 1 ಕರುಗಳೆಲ್ಲ ಕೂಡಿಸಿದಳು ನಿನ್ನಪರಿವಾರದವರು ಬಂದಾರೆ ನೋಡುನೀನು ಬಲರಾಮನು ಜೋಡು ಇಲ್ಲೇಯಮುನಾ ತೀರದಲ್ಲಿ ಆಡೋಹತ್ತಿರದಲ್ಲಿ ಆಡೋ 2 ಕೂಸಿಗೆ ಕುಂಚಿ ಹೊಚ್ಚಿದಳು ಬಿದ್ದಕೇಶಗಳೆಲ್ಲವು ತೀಡುತ್ತಲಿಹಳುಭೂಷಣಂಗಳ ಇಡುತಿಹಳುಇಂದಿರೇಶನ ಕೈಯ್ಯಲ್ಲಿ ಕೋಲು ಕೊಟ್ಟಿಹಳು(ಮುರಲಿ) ಕೊಳಲ ಕೊಟ್ಟಿಹಳು 3
--------------
ಇಂದಿರೇಶರು
ಬಾಲನ ಕಂಡಿಹೆನೆ ಗೋಪಾಲನ ಕಂಡಿಹೆನೆ ಪ ಬಾಲನ ಕಂಡಿಹೆ ಲೀಲೆಯ ಮಾಡುತ ಅಂಬೆ-ಗಾಲಿಕ್ಕುತ ಗೋಕುಲಾಲಯದೊಳಗಿಹಅ.ಪ. ಮುರಳಿ ಮುಖದೊಳಿದ್ದು ಊದುತ ವೃಜದಿಸರಸಿ ಗೋಪಿವನಿತೆರ ಮೋಹಿಪ 1 ಇಂದು ವಕ್ತ್ರನ 2 ಕಟಿ ಮಂದ-ಹಾಸ ಮಾಡುತಲಿದ್ದ ಇಂದಿರೇಶನ ಹೇ ಸಖಿ 3
--------------
ಇಂದಿರೇಶರು
ಬಾಳು ಪ್ರೀತಿಯಲಿ ನಮ್ಮ ಬಾಲಕೃಷ್ಣಗೆ ದ್ರಾಕ್ಷಾ-ದೋಳು ಬಂದಿಹ ಗೋಕುಲಾಲಯದಿಂದ ಪ ಪುಟ್ಟ ಕರದಿ ಚೌಕಿಲಿಟ್ಟ ದ್ರಾಕ್ಷದ ಬೆಳ್ಳಿಬಟ್ಟಲಾ ಪಿಡಿಯುತ ದೃಷ್ಟಿಗ್ಹೇಳಿದಾನು 1 ಉದ್ಧವಾ ಪದವನ್ನು ಶುದ್ಧವಾಗಲೆ ಪಾಡೆಮುದ್ದು ಕನಕಕಾಂಬೆ ಉದ್ದ ಬಾಲಕನು 2 ಸುಂದರ ಬಾಲಕಾ ಇಂದಿರೇಶನೆ ಇವಇಂದು ನೋಡುತ ಮುಖ ನಂದವಾಗಿಹುದು ಆನಂದವಾಗಿಹುದು 3
--------------
ಇಂದಿರೇಶರು
ಬಾಳೆ ಕಿತ್ತಳೆ ಜಂಬುದ್ರಾಕ್ಷಿ ರಸಾಲ ಫಣಸ ಖರ್ಜೂರ ಫಲಗಳ ಬಾಲಕೃಷ್ಣಗೆ ಮನುಜಾ ಸಾಯಂಕಾಲ ಪ್ರಾರ್ಥಿಪುದು ಪ ಪರಮಪುರುಷನು ಪೂಜೆಕಾಲದಿಸುರರು ಕರ್ಮಗಳಿಗೆ ಚಿಂತಿಸಿಪರಿಚರಿಸುವ ಪುರುಷ ಮಾಧವಚರಣ ಪೊಂದುವನು 1 ನಾನು ಮಾಡುವ ಕವಿತೆ ಎಲ್ಲವವೇಣು ಬಾಲನ ಮುಂದೆ ಪೇಳುವೆಸಾನುರಾಗವ ಮಾಡಲೆನ್ನೊಳುಮೌನಿ ನಾರದರು 2 ಇಂದಿರೇಶನ ಮುಖವ ನೋಡುತನಂದಗೋಪಗೆ ಈ ಸುಶೃತಿಗಳಿಂದವೃಂದ ಚರಿಸುತ ತತ್ವಾದಾಂಬುಜದ್ವಂದ್ವಕರ್ಪಿಸುವೆ 3
--------------
ಇಂದಿರೇಶರು
ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ. ಹದಿನಾಲ್ಕು ಲೋಕದೊಳು ವ್ಯಾಪಕವಾಗಿ ಮುದದಿಂದ ಹಂಸ ಮಂತ್ರವ ಜಪಿಸುತ ಮಧುವೈರಿಯನು ಒಲಿಸಿ ಕಡೆಗೆ ಅಜ- ಪದವನೈದುವಿ ಸುಖದಿ ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ ವಿಬುಧ ಗಣಾರ್ಚಿತ 1 ಮತಿವಂತನಾದಮ್ಯಾಲೆ ತ್ವತ್ಪಾದವೇ ಗತಿಯೆಂದು ನಂಬಿಹೆನು ನೀ- ನಿತ್ತ ಶಕುತಿಯಿಂದ ಪೂಜೆಯನು ಮಾ- ಡುತ ನಿನ್ನ ಪ್ರತಿಮೆಯ ನಮಿಸುವೆನು ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು ಪತನಗೊಳಿಪದನತುಳ ನೀ ನೋಡುತ್ತ ಎನ್ನನು ಜತನಮಾಡದೆ ವಿತಥ ಮಾಳ್ಪರೆ 2 ಹಿಂದೆ ತ್ರೇತಾಯುಗದಿ ಈ ಧರಣಿಗೆ ಬಂದು ನೀ ಕಪಿರೂಪದಿ ಅರ- ವಿಂದ ಬಾಂಧವನನು ಸೇರಿದಿ ಇಂದ್ರ ನಂದನನಿಂಗೆ ರಾಜ್ಯವ ಇಂದಿರೇಶನ ದಯದಿ ಕೊಡಿಸಿ ಪು- ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3 ಭೀಮನನೆನಿಸಿ ಕೀಚಕರ ನಿ- ರ್ನಾಮ ಗೊಳಿಸಿ ಜಯಿಸಿ ಕಿಮ್ಮೀರ ಬಕಮಾಗಧರ ಸೀಳಿಸಿ ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ- ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4 ಕಡೆಯಲಿ ಕಲಿಯುಗದಿ ನೀ ಯತಿಯಾಗಿ ಮೃಡನ ತರ್ಕವ ಖಂಡಿಸಿ ಜ್ಞಾನಾ ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು ಬಡಿದು ದೂರದಲೋಡಿಸಿ ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ ಮೆರದನೆ ತಡವ ಮಾಡದಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಬೆಂಕಿಗಿರುವೆಗಳ ಕಾಟುಂಟೇ ಹರಿ ಭವ ಭಯಮುಂಟೆ ಪ ಪಂಕಜಸಖನಿಗೆ ಕತ್ತಲಂಜಿಕೆಯುಂಟೆ ಪಂಕಜಾಕ್ಷನ ಧ್ಯಾನಕ್ಕೆಣೆಯುಂಟೆ ಅ.ಪ ವಜ್ರಾಯುಧಕೆ ಗಿರಿ ಉಳಿಯಲುಂಟೆ ಗಂಗೆ ಮಜ್ಜನದಿಂ ಮೈಲಿಗೆಯಿರುಲುಂಟೆ ಸಜ್ಜನರಿಂಗೂಡಿ ನಿರ್ಜರೇಶನ ಭಜ ನ್ಹೆಜ್ಜೆಜ್ಜ್ಹಿಗಿರೆ ಜನ್ಮ ಬರಲುಂಟೆ 1 ಮೌನಧಾರಿಗೆ ಅಭಿಮಾನ ಉಂಟೆ ನಿಜ ಧ್ಯಾನಿಕರಿಗೆ ಹೀನ ಬವಣೆಯುಂಟೆ ಜ್ಞಾನದೊಳೊಡಗೂಡಿ ಗಾನಲೋಲನ ಪಾದ ಆನಂದಕರಿಗಿಹ್ಯಸ್ಮರಣುಂಟೆ 2 ತಾಮಸ್ಹೋಗಲು ಕ್ಷೇಮ ಬೇರುಂಟೆ ದು ಷ್ಕಾಮಿ ತಳೆಯಲು ಮುಕ್ತಿದೂರುಂಟೆ ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪ್ರೇಮಪಡೆದ ಮೇಲೆ ಬಂಧ ಉಂಟೆ 3
--------------
ರಾಮದಾಸರು
ಬೋಧ ಪ ಶ್ರೀನಿವಾಸನ ನಾಮ ಲೀಲೆಯಸಾನುರಾಗದಿ ವಾಣಿಜಾಣೆಸೂನೂನ ಪಾಪವ ಹಾನಿಯ ಮಾಡುತ 1 ಹತ್ತು ನಾಲ್ಕು ಸುತ್ತದೇಶದಿಚಿತ್ರ ಚರಿತನ ವೃತ್ತಿ ನಿತ್ಯದಿವಿಸ್ತರಿಸಿ ಹೇಳುತ ಚಿತ್ತದಿ ಸುಖಿಸುವಿ 2 ಇಂದಿರೇಶನ ತಂದು ತೋರುವಿಎಂದು ನಿನ್ನನು ಪೊಂದಿ ಬಂದೆನಂದನ ಕಂದನ ಬಂದೀಗ ತೋರಿಸು 3
--------------
ಇಂದಿರೇಶರು
ಬ್ರಹ್ಮದೇವರು ಪರಮೇಷ್ಠಿ ನಿನ್ನನಾ ಸ್ಮರಿಸುವೆನನುದಿನ ಕರುಣದಿಂದ ಅಭಯವಿತ್ತು ಕಾಯೊ ಎಂದೆ ನಾ ಪ ಸೃಷ್ಟಿ ಕರ್ತನೆ ಜಗಕೆ ವಸಿಷ್ಠನಯ್ಯನೆ ಶ್ರೇಷ್ಠ ಮದ್ಯಮಾಧಮರಿಗಭೀಷ್ಟ ಕೊಡುವನೆ 1 ಹಿರಣ್ಯಗರ್ಭನೆ ಸುರಾಸುರೇಶನೆ ಸರಸ್ವತಿ ಮನೋಹರನೆ ದಯಾ ಸಮುದ್ರನೆ 2 ಗುರುರಾಮವಿಠಲನಾ ನೆರೆ ನಂಬಿದವರನಾ ಪರಮ ಸುಖದೊಳಿಟ್ಟು ಮುಕ್ತಿ ಪಥವ ತೋರ್ಪನಾ 3
--------------
ಗುರುರಾಮವಿಠಲ
ಭಾರತೀದೇವಿ ಭಾರತಾದೇವಿಯರ ಪಾದ ಚಾರು ಚರಣಕೆರಗುವೆ ಪ ವಾರಿಜಾಕ್ಷಿ ನಿನ್ನ ಮಹಿಮೆ ಬಾರಿ ಬಾರಿ ಪೊಗಳುವೆ ಅ.ಪ ಸುಂದರಾಂಗಿ ಶುಭಕರಾಂಗಿ ಬಂದು ಎನ್ನ ಪಾಲಿಸು ಇಂದಿರೇಶನನ್ನು ಸದಾ ಆ- ನಂದದಿಂದ ಭಜಿಸಲು 1 ಬಾರಿ ಬಾರಿ ನಿನ್ನ ಸ್ತುತಿಪೆ ಮಾರುತನರ್ಧಾಂಗಿಯೆ ಸಾರಿ ಸಾರಿ ಶ್ರೀರಮಣನ ಸಾರ ಕೃಪೆಯ ಕರುಣಿಸು2 ಕರುಣಿಸಮ್ಮ ನಿನ್ನ ಪತಿಯ ಸ್ಮರಣೆ ನಿರುತ ಮರೆಯದೆ ಕರುಣಾಕರನೆ ಕಮಲನಾಭ ವಿಠಲನಂಘ್ರಿ ಧ್ಯಾನವೀಯೆ 3
--------------
ನಿಡಗುರುಕಿ ಜೀವೂಬಾಯಿ