ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- |
ಮಾರ ಮೌನದಲಿದ್ದಿ ಮಾತನಾಡಯ್ಯಾ ಪ
ಇಂದಿರಾ ಭೂದೇವಿ ಆಳಿದವನೊ |
ನಂದ ಗೋಕುಲದಲ್ಲಿ ಪುಟ್ಟಿದವನೊ ||
ಕರಿ - |
ಬಂಧನ ವಿನಾಶದ ವಿಠ್ಠಲನೊ 1
ಅಂಬರೀಷನ ಶಾಪ ಪರಿಹರನೊ |
ಶಂಭು ಮೊರೆಯಿಡಲು ಕಾಯಿದವನೊ ||
ಕಂಭದಿಂದೊಡೆದು ಬಂದವನೊ | ತ್ರಿ -
ಯಂಬಕನ ಭಕ್ತನ ಸಂಹರನೊ 2
ಬೆರಳಲ್ಲಿ ಬೆಟ್ಟವನೆತ್ತಿದವನೊ |
ದುರುಳ ಕಾಳಿಂಗನ ತುಳಿದವನೊ ||
ಒರಳನು ಕಾಲಲ್ಲಿ ಎಳೆದವನೊ |
ಸಿರಿ ವಿಜಯವಿಠ್ಠಲರಾಯನೊ 3