ಒಟ್ಟು 190 ಕಡೆಗಳಲ್ಲಿ , 55 ದಾಸರು , 176 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು
ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರಹೆಸರು ಬಲ್ಲವರುಂಟೆ ಪೇಳಿರಿ ಜನರೆ ಪ.ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳುಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳುಸುತ್ತೇಳು ಮೈಗೆರಡು ಜೋಡು ಬಂಗಾರಸೃಷ್ಟಿಯೊಳಗೆ ಇದರ ಹೆಸರ ಬಲ್ಲವರುಂಟೆ 1ಜಡೆ ಮೆರಗುವ ಬಾಲೆ ಒಡಲೊಳಗೆ ಕರುಳಿಲ್ಲಬಿಡದೆ ಪಟ್ಟಾವಳಿಯುಟ್ಟು ಬಲ್ಲವಳುಅಡವಿಯೊಳಗೆ ಪುಟ್ಟಿ ಪಡೆದಳು ದೇಹವಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ 2ಬೇರಾಗಿ ಬೆರಳೈದು ಮೂರು ತಾನೊಂದಾಗಿಯಾರು ಕಂಡರು ಎಂದು ನಸುನಗುತಸೇರಿದ ಭಕುತರ ಪೊರೆವ ರಂಗಯ್ಯನಸೇರಿ ಮೆಚ್ಚಿಸಿಕೊಳ್ಳೊ ಪುರಂದರವಿಠಲ 3
--------------
ಪುರಂದರದಾಸರು
ಮೂರುತಿಯನೆ ನಿಲ್ಲಿಸೋಮಾಧವನಿನ್ನಪಎಳತುಳಸಿಯ ವನಮಾಲೆಯು ಕೊರಳೊಳುಹೊಳೆವ ಪೀತಾಂಬರದುಡೆಯಲೊಪ್ಪುವ ನಿನ್ನ 1ಮುತ್ತಿನ ಹಾರ ನವರತ್ನದುಂಗುರ ಬೆರಳಮತ್ತೆ ಶ್ರೀಲಕುಮಿಯ ಉರದೊಲೊಪ್ಪುವ ನಿನ್ನ 2ಭಕ್ತರ ಕಾಮಧೇನು ಕಲ್ಪತರುವೆಂಬಭಕ್ತ ವತ್ಸಲ ಪುರಂದರವಿಠಲನೆ ನಿನ್ನ 3
--------------
ಪುರಂದರದಾಸರು
ಯಾದವ ಯದುಕುಲ ಬಾಲನೆ ಬಾರೋಮಾಧವಮದನಗೋಪಾಲನೆ ಬಾರೋ ಪಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪಮನೆಮನೆಯೊಳು ಮೊಸರ ಕಡೆವರು ಬಾರೋವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋತನಯರೊಡನೆ ಚಂಡಿನಾಟವಾಡಲು ಬಾರೋಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ 1ಸುರರುನಾರದರೆಲ್ಲ ಸ್ಮರಿಸುವರ್ ಬಾರೋಕರವಮುಗಿವೆ ನಿನ್ನ ಚರಣಕ್ಕೆ ಬಾರೋನರನಸಾರಥಿಕೃಷ್ಣ ಹರುಷದಿ ಬಾರೋ 2ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋಕಂಡು ರಕ್ಷಿಸೋ ಎನ್ನಕಮಲನಯನ ಬಾರೋಪಂಡರೀಪುರವಾಸ ಚಂಡವಿಕ್ರಮ ಬಾರೋಅಂಡಜವಾಹನಮಾರ್ತಾಂಡನಂತಿಳಿದು ಬಾರೋ 3ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋಸುಂದರ ಚಿನುಮಯ ಮೂರ್ತಿಯೆ ಬಾರೋಮಂದರಧರಮದನಜನಕನೆ ಬಾರೋಇಂದಿರೆಯರಸ ಗೋವಿಂದನೆ ಬಾರೋ 4
--------------
ಗೋವಿಂದದಾಸ
ರಂಗ ಕುಣಿದ ಮುದ್ದು ರಂಗ ಕುಣಿದ ಪ.ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
--------------
ಪ್ರಸನ್ನವೆಂಕಟದಾಸರು
ಲಾಲಿಸಿದಳು ಮಗನ - ಯಶೋದೆ |ಲಾಲಿಸಿದಳು ಮಗನ ಪಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು |ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ 1ಬಾಲಕನೇ ಕೆನೆವಾಲ ಮೊಸರನೀವೇ |ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು 2ಮುಗುಳು ನಗೆಯಿಂದಲಿ ಮುದ್ದು ತಾ ತಾರೆಂದು |ಜಗದೊಡೆಯನ ಶ್ರೀ ಪುರಂದರವಿಠಲನ 3
--------------
ಪುರಂದರದಾಸರು
ವಾಸುದೇವ ನಿನ್ನವರ್ಮ ಕರ್ಮಂಗಳದೇಶ ದೇಶದೊಳು ಹೇಳಲೆ ? ಪಬೇಸರಿಯದೆ ಎನ್ನ ಹೃದಯ ಕಮಲದಲ್ಲಿವಾಸವಾಗಿ ಸುಮ್ಮನಿರುವೆಯೊ ? ಅ.ಪಮತ್ಸರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳತಿದ್ದಿದ್ದು ಹೇಳಲೆ ?ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆ ಮೆಚ್ಚಿಕೊಟ್ಟದ್ದು ನಾ ಹೇಳಲೆ 1ಕಡಗೋಲು ಮಂಡೆಯಂದದಿ ಕೈಕಾಲು ಮುದುಡಿಕೊಂಡದ್ದು ನಾ ಹೇಳಲೆ ?ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ ಸುದ್ದಿ ಹೇಳಲೆ 2ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದಸುದ್ದಿ ಹೇಳಲೆ ?ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ ನಾನು ಹೇಳಲೆ 3ಕಂದನ ಮಾತಿಗೆ ಕಡುಕೋಪದಿಂ ಬಂದು ಕಂಬವನೊಡೆದದ್ದು ಹೇಳಲೆ ?ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆಧರಿಸಿದ್ದು ಹೇಳಲೆ 4ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯ ಬೇಡಿದುದನು ಹೇಳಲೆ ?ಲೀಲೆಯಿಂದಲಿ ಧರೆಯಈರಡಿ ಮಾಡಿದ ಜಾಲತನ್ವನುನಾನು ಹೇಳಲೆ5ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯ ಪಿಡಿದದ್ದು ಹೇಳಲೆ ?ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡ ದೋಷತನವ ನಾನು ಹೇಳಲೆ 6ತಾಯ ಮಾತನೆಕೇಳಿ ತಮ್ಮನ ಒಡಗೂಡಿಅಡವಿಯೊಳಿದ್ದುದು ಹೇಳಲೆ ?ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ ನೆರೆದದ್ದು ಹೇಳಲೆ ? 7ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ(ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ) ದುರುಳತನದ ಸುದ್ದಿ ಹೇಳಲೆ 8.............................................................................................................................................................................. 9ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವ ಪಿಡಿದದ್ದು ಹೇಳಲೆ ?ಆಯತದಿಂದ ಕಲಿಯಲಿದ್ದು ಮನುಜರ ಮಾಯವ ತೋರಿದ್ದು ಹೇಳಲೆ 10ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರಿವಾಗಿನಿಂತದ್ದು ಹೇಳಲೆ ?ಕರುಣದಿಂ ಭಕುತರ ಪುರಂದರವಿಠಲನೆಂದು ನಾ ಹೇಳಲೆ 11 *
--------------
ಪುರಂದರದಾಸರು
ಶ್ರೀವಾಯುದೇವರಿಗೆ ನೀತವಾದ |ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ಪತಾಲು ಜಾನುಗಳು ಸ್ತನ ತುದಿಯುನಾಸಿಕಚಕ್ಷು |ನಾಲಕ್ಕೊಂದು ದೀರ್ಘ ಜಂಘ ಗ್ರೀವ ||ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ |ಮೇಲಾದ ತ್ವಕು ಬೆರಳುನಖಪಂಚ ಸೂಕ್ಷ್ಮ 1ಕಕ್ಷಿ ಕುಕ್ಷಿಯು ವಕ್ಷಕರ್ಣನಖಸ್ಕಂದಾರು |ರಕ್ಷಘ್ನನಿಗೆ ಶೋಭಿಪವು ಉನ್ನತ ||ಅಕ್ಷಿಚರಣಕರನಖಅಧರಜಿಹ್ವೇಣುಜಿಹ್ವೆ|ಮೋಕ್ಷದನ ಈ ಏಳು ಅವಯವವು ರಕ್ತ 2ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |ಉತ್ತಮಲಲಾಟಉರದ್ವಯ ವಿಸ್ತಾರಾ ||ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ 3
--------------
ಪ್ರಾಣೇಶದಾಸರು
ಸತ್ಯವೇ ಸ್ನಾನ ಜಪ ನೇಮ - ಹೋಮ - ಅ - |ಸತ್ಯದಲಿ ನಡೆದುಮಾಳ್ಪದುವ್ಯರ್ಥಕರ್ಮಪ.ಅಪ್ಪಳಿಸಿ ಪರರ ದ್ರವ್ಯಗಳನ್ನು ತಂದುಂಡು |ಒಪ್ಪದಲಿ ಉಪವಾಸ ವ್ರತವ ಮಾಡಿ ||ತಪ್ಪದಲೆ ತಾ ಸ್ವರ್ಗ ಸೂರೆಗೊಂಬುವನೆಂಬ |ಸರ್ಪಗಳು ಮಾಡದಪರಾಧವೇನಯ್ಯ ? 1ಬಿಡದೆ ಮದ - ಮತ್ಸರಾಹಂಕಾರದೊಳು ಮುಳುಗಿ |ಒಡನೆ ಬೆರಳುಗಳೆಣಿಸಿ ಮೌನದಿಂದ ||ತಡೆಯದಲೆ ಪರಲೋಕ ಸುಖವನೈದುವೆನೆಂಬ |ಬಡ ಬಕವು ಮಾಡಿದಪರಾಧವೇನಯ್ಯ 2ಪರಸತಿಯು ಪರಧನವು ಪರನಿಂದೆ ಪರಹಿಂಸೆ |ಪರಮ ಪಾತಕದ ಕಾರಣವ ತೊರೆದು ||ಧರೆಗಧಿಕಪುರಂದರ ವಿಠಲನ ನೆರೆಭಜಿಸಿ |ವರವನು ಪಡೆಯೆ ಸಾಲೋಕ್ಯವನ್ನೀವ 3
--------------
ಪುರಂದರದಾಸರು
ಸಿಕ್ಕಿದನೆಹರಿಅಕ್ಕಕ್ಕ ಸುಖದಕ್ಕಿಸಿ ಕೊಳಬನ್ನ್ಯಕ್ಕಕ್ಕಚಿಕ್ಕವನಿವನಲ್ಲಮ್ಮಮ್ಮ ಬಿಡೆಪುಕ್ಕಟೆ ಜಾರುವನಮ್ಮಮ್ಮ ಪ.ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್ಚಲ್ಲಣ ತೊಯಿದಿದೆ ನೋಡವ್ವೆಅಳ್ಳೆದೆಗಾರನು ಅಳುಕುವನೆ ಹಗಲ್ಗಳ್ಳನ ಮಾಟವ ನೋಡವ್ವೆ 1ಮುಂಗುರುಳಿಗೆ ಮೆತ್ತಿದೆ ಕೆನೆಮೊಸರುಕಂಗಳುತುಪ್ಪಾಗಿದೆ ತಂಗಿ ರತ್ನದುಂಗುರ ಬೆರಳು ಮುಂಗೈಯ ಮತ್ತಂಗೈ ಬೆಣ್ಣ್ಯಾಗಿದೆ ತಂಗಿ 2ಪಡಗೊಡಿದು ಬಿಸಳಿಗೆ ನುಗ್ಗಲ್ಲೆಅಡಗ್ಯಡಗ್ಯಾಡುವನಿವನಂತೆಬಡಗಣ ಮೂಡಣ ಪಡು ತೆಂಕಣದಿತುಡುಗನ ಹುಯ್ಯಲು ಘನವಂತೆ 3ಗೋಡೆಯನೇರುವ ಧುಮುಕುವ ತಾ ಸಿಡಿದೋಡುವನಂಜದೆ ಅಲ್ಲಲ್ಲೆನೋಡಲು ಬಾಲಕ ಬಾಲೆಯರ ಪಿಡಿದಾಡ್ಯಾಲಂಗಿಪನಲ್ಲಲ್ಲೆ 4ಈಗಲೆ ಕಟ್ಟುವ ಬಿಟ್ಟರೆ ಇನ್ನಾವಾಗಲಿ ಸಿಕ್ಕುವನೆ ಬಾಲೆಹ್ಯಾಗಾದರೆ ಪ್ರಸನ್ವೆಂಕಟಗಿರಿಭೋಗಿಯ ಹೊಂದುವ ಬಾಲೆ 5
--------------
ಪ್ರಸನ್ನವೆಂಕಟದಾಸರು
ಹರಿನಮ್ಮೊಗತನ ಮಾಡಲೀಸನೆ ಕೇಳಮ್ಮ ಇವನಚರಿಯವಾರ ಮುಂಧೇಳುವನೆ ಗೋಪ್ಯಮ್ಮ ಪತನ್ನೊಳು ತಾನೇ ರುದಿಸುತ ಬಂದ ಕಾಣಮ್ಮ | ಯಾಕೆನೆಕಣ್ಣಿನ ಬೇನೆ ಅತಿ ಕಠಿಣೆಂದಾ ಅವನಮ್ಮ |ಸಣ್ಣನಳುವಳೆ ಮೊಲೆ ಹಾಲ್ತಾ ಎಂದನಮ್ಮ | ನಿನ ಕ-ಯ್ಯನ್ನು ಮುಟ್ಟಿದಿರೆಂದುಮಾನಕೊಂಡನಮ್ಮ 1ತರುಗಳ ಬಾಲಕೆ ತರಳರ ಕೈ ಕಟ್ಟುವನಮ್ಮ | ಯನ್ನಕರದಲ್ಲಿ ಹಿಡಿ ಹಿಡಿಯೆಂದು ತೇಳಿಕ್ಕುವನಮ್ಮ ||ವರಗುವುದೆಲ್ಲಿ ನೀವೆಂದು ಕೇಳುವನಮ್ಮ | ನಿಮ್ಮಪುರುಷರು ಕಾಂಬುವಯಿಲ್ಲ ಎಲ್ಲೆಂಬುವನಮ್ಮ 2ಜೋಗೀ ರೂಪವ ತಾಳಿ ಮನೆಗೆ ಬಂದನಮ್ಮ | ನಾನುಬಾಗಿ ಸುತರಿಲ್ಲೆಂದವನ ಕೇಳಿದೆನಮ್ಮ ||ಹೋಗಲಿ ಎಲ್ಲರೂ ಮಂತ್ರವ ಕೊಡುವೆನೆಂದಮ್ಮಾ | ಕೃಷ್ಣನಾಗಿ ಇದುರಿಗೆ ನಿಂತ ಭಂಡು ಕೇಳಮ್ಮ3ನಾಕು ಬೆರಳ ತೋರಿ ತಲೆದೂಗುವನಮ್ಮ | ಇಂಥ-ದ್ಯಾಕೊ ಎಂದರೆ ಯೀಸೆ ಹಾಲ್ಕೊಡೆಂದನಮ್ಮ ||ಕಾಕುಬುದ್ಧಿಯೊಂದೆರಡೆ ಮೂರೇನಮ್ಮ | ಶ್ರೀ ಪಿ-ನಾಕಿಯಾಣೆ ಕರೆದು ಕೇಳೆ ಗೋಪ್ಯಮ್ಮ4ಮತಿಗೆಠ್ಠೆಣ್ಹುಡುಗರ ಕರೆದೊಯ್ದೋಣ್ಯೊಳಗಮ್ಮಾ | ನಾವುಸತಿಪುರುಷಾಗ್ಯಾಡುವ ಬಾ ಎಂಬೊನಲ್ಲಮ್ಮ ||ಪೃಥಿವಿಯ ಹುಡುಗರ ತೆರದರೆ ಚಿಂತಿಲ್ಲಮ್ಮ | ಇವನುಸುತರನು ಪಡೆವದು ಬಲ್ಲನೇ ಸುಳ್ಳಮ್ಮ 5ನವನೀತವ ಕೊಳ್ಳೆಂದೊದರುತ ಬಂದನಮ್ಮ | ನಾನುಹವರನ ಕಾಶಿಗೆ ಎಷ್ಟೆಂದು ಕೇಳಿದೆನೆಮ್ಮ ||ಖವ ಖವ ನಗುತಲಿ ಬದಿಬದಿಗೆ ಬಂದನಮ್ಮ | ತಕ್ಕೊಯುವತಿ ಇದರಷ್ಟೆಂದು ಕುಚ ಮುಟ್ಟುವನಮ್ಮ 6ಹಿತ್ತಲ ಕದಕೆ ಶೀ(ಕೀ)ಲ್ಯುಂಟೋ ಇಲ್ಲೆಂಬುವನಮ್ಮ | ನಮ್ಮ-ಅತ್ತೆಯ ಕಣ್ಣು ಹೋಗಲಿ ಎನಬೇಕೇನಮ್ಮ ||ಉತ್ತರ ಕೊಡದಿರೆ ಒಪ್ಪಿದೆ ಇದಕೆಂಬುವನಮ್ಮ | ಇಷ್ಟೊಂ-ದರ್ಥೆ ಪ್ರಾಣೇಶ ವಿಠಲಗೆ ಯಶೋದೆಯಮ್ಮ 7
--------------
ಪ್ರಾಣೇಶದಾಸರು