ನಿನ್ನಚರಣಾರವಿಂದವ ಪ
ಪರಮ ಪುರುಷನಿನ್ನ ಚರಣ ಪಂಕಜವನ್ನು
ನಿರುತ ನಂಬಿದೆ ಎನ್ನದುರಿತ ಪರ್ವತವನ್ನು
ಸುರಪ ವಜ್ರದಿ ಗಿರಿಗಳನು ಖಂಡಿಸಿದವೋಲ್
ತರಿದು ರಕ್ಷಿಸೋ ಮುರಹರನೆ ಸ್ಮರಣೆಯಿತ್ತು 1
ಮಕ್ಕಳಾಟಿಕೆಯಿಂದ ಕೆಲವು ದಿವಸಸಂದು
ಕಾಲ ಬರಲುಸ್ತ್ರೀಯರಿಗೆ ಕ
ಣ್ಣಿಕ್ಕಿ ಮುದದಿ ದಿನಗಳೆದು ಮರೆತೆನೀಗಳು
ಸೀತಾ ರಮಣ ಸ್ಮರಣೆಯಿತ್ತು 2
ವಿಧಿ ಬರೆದ ಲಿಖಿತವೆಲ್ಲ
ಸಂತು ದರ್ಜನರೊಡನಾಟದೊಳಗೆ ಕಾಲ
ವಿಂತು ಸವೆದು ಜರೆ ಮುಸುಕಿತೆನೆಗೆ ಲಕ್ಷ್ಮೀ
ಕಾಂತ ನಿನ್ನಯ ನಾಮ ಸ್ಮರಣೆಯಂತ್ಯದೊಳಗಿತ್ತು 3