ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ
ಸಿರಿ ಹರಿಯೆ ಚಿ ಪ
ನೀ ಬರುವೆಂದಬುಜಾಭವಾದೀ ಸುರರು
ಕಾದೂಕೊಂಡಿಹರು
ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು
ಈ ಭವನವನು ನೀ ಪಾವನ ಮಾಡಲು ಅ.ಪ
ಕರೆದರೆ ಬರೆ ಯಾಕೊ
ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ
ಕೊಡುವ ದೊರೆಯೆಂದು ದೃಢದಿ ತಿಳಿದು ನಿ
ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ 1
ಭವ ಶರಧಿಗೆ ನಾವೆ
ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ
ಒಡೆಯ ನೀನಲ್ಲದೆ ಬಡದೇವತೆಗಳು
ಕೊಡಬಲ್ಲವೆ ಪೇಳು ತಡಮಾಡದೆ ನೀ 2
ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು
ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು
ಪದುಮನಾಭನೆ ನೀ ಸದಯದಿ ನೋಡಿ
ಇದನೆ ಕರುಣಿಸು ನಿನ್ನ ಪದಸೇವೆಯನು 3
ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ
ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ
ಪರಿ ಬೇಡುವೆ ನಿನ್ನ ಪದಸೇವಕರ
ಪರಿಚಾರಕರನೆನಿಸೊ ಪರಮ ದಯಾಳೊ 4
ಮಾತಿದು ಪುಸಿಯಲ್ಲ
ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ
ದೂರ ನೋಡುತಲಿ ಘೋರಪಾತಕರೊಳು
ಸೇರಿಸದೆನ್ನನು ಪಾರುಮಾಡಲು ಬೇಗ5