ಬಂದ ದುರಿತಗಳೆಲ್ಲ ಪರಿಹರಿಸಿ ಪೊರೆವದು ಪ
ಎಷ್ಟು ಪರಿಯಲಿ ನಿನ್ನ ಎಷ್ಟು ನಾ ಮೊರೆ ಇಡಲು
ಕಷ್ಟವನು ಕಳೆವ ಭರ ಕಾಣಲಿಲ್ಲ
ದೃಷ್ಟಿಲಿ ನೋಡದೆ ಹೋಗಿ ದಣಿಸುವ 1
ಸಾರ್ಥಕವು ಏನು ಎನ್ನ ಸಲಹದಿರಲು
ಕೀರ್ತಿವಂತನು ಎನಿಸಿಕೊಂಡು ಕಾಯದಿರೆ
ಅಪಕೀರ್ತಿ ಬಾರದೆ ನಿನಗೆ ಅಧಿಕ ಜನರೊಳಗೆ 2
ಧಾರುಣಿಯೊಳಧಿಕರಿನ್ನಾರು ನಿನಗಿನ್ನು
ತೋರು ಮಾರಜನಕನಾದ ಮಹಾಮಹಿಮನೆ
ಧೀರ 'ಹೊನ್ನಯ್ಯ ವಿಠ್ಠಲ’ ದೀನ ರಕ್ಷಕನೆಂದು
ಸಾರುತದೆ ನಿಮ್ಮ ಕೀರ್ತಿ ಸಕಲ ಲೋಕದಲಿ 3