ಅಭಿಮಾನವ್ಯಾಕೊ ಮಾನವಾ ಪ
ಸಭಯ ದುಃಖದೊಳಗಿರುವಾ ದುರಭಿಅ.ಪ
ನೀರ ಮೇಲಿನ ಗುಳ್ಳೆಯಂದದಿ ತೋರ್ಪ ಶ-
ರೀರ ಭೋಗಾಪೇಕ್ಷಿಸಿ | ನಾನು ನನ್ನದೆಂದು 1
ತನ್ನನೇನು ತಾ ಬಲ್ಲದೆ | ನಾನು ನನ್ನದೆಂದು 2
ಪೈಣ ದಾರಿಗೆ ದಾರಿಯಾವುದು | ನಾನು ನನ್ನದೆಂದು3
ಇಭದಂತೆ ಮದವೇರುತಾ | ನಾನು ನನ್ನದೆಂದು4
ಇದು ಸ್ಥಿರವಿಲ್ಲ ಇನ್ನೊಂದು ತಪ್ಪುವುದದಲ್ಲ
ಪದರದೆ ನೀ ಕೇಳೀಸೊಲ್ಲ | ನಾನು ನನ್ನದೆಂದು 5
ವೇದಶಾಸ್ತ್ರ ಪುರಾಣವ್ಯಾರ ಪೊಗಳುವುದು
ಶೋಧನೆ ಮಾಡಿ ತಿಳಿಯದೆ | ನಾನು ನನ್ನದೆಂದು6
ಗುರುರಾಮವಿಠಲನು ಗುರುತಾಗಿರುವ ನೆಲೆ
ಅರಿತುಕೊಂಡವ ಧನ್ಯ | ನಾನು ನನ್ನದೆಂದು 7