ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ
ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ.
ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1
ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2
ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3