ಒಟ್ಟು 8021 ಕಡೆಗಳಲ್ಲಿ , 132 ದಾಸರು , 4501 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವರಿಂದಲಿ ಭಕ್ತಧಿಕನು | ಭಾವ ಭಕುತಿಯಲಿ ಬಲ್ಲಿದನು ಪ ಅವನ ಉದರದಲಿ ಜಗವಿಹುದು | ಅವನ ತನ್ನೆದೆಯಲ್ಲಿ ನಿಲಿಸಿಹನು 1 ದಾವನಿಂದಲಿ ಜಗಹುಟ್ಟುತಲಿಹುದು | ಅವನ ಜನುಮಕಿವ ತಾರಿಸಿದನು 2 ಕಾಳಗದಲಿ ನಿಸ್ಸೀಮನ ದಾವನು | ಸೋಲಿಸಿದವನೆನು ನದಿಸುತನು 3 ಸಾಗರ ಜಲ ಘನ ತುಂಬಿಕೊಂಡಿಹುದು ಮೇಘ ಮುಖದಿ ಬೆಳೆಯಾಗುವದು 4 ಬಾಳಿಗಿಡವು ಸ್ವಾನಂದದಲಿಹುದು | ಬಾಳೆಹಣ್ಣವು ಜನ ನಲಿಸುವುದು 5 ಸಂಗರಹಿತ ಗುರು ಮಹಿಪತಿ ಸ್ವಾಮಿಯ | ಹಂಗಿಗನನು ತನ್ನ ಮಾಡಿದನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವಾ ನಿನ್ನ ಚರಣವನ್ನು ಮರೆಯಲಾರೆನು ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ ಶಂಕಾನಾಶ ಸರ್ವಾಧಾರ ಶಂಕರಸಖಾ ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ 1 ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು ಬನ್ನ ಬಡುವುದು ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ 2 ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ 3
--------------
ಶಾಂತಿಬಾಯಿ
ದೇವಾ ನಿನ್ನ ಪಾದವನ್ನು ಯಾವಾಗಲೂ ಸ್ಮರಿಸುವೆನೂ ಭಾವ ಭಕ್ತಿ ಪ್ರೇಮವಿತ್ತು ಕಾವುವೆನ್ನ ಹರಿಯೇ ನೀನು ಪ ದೀನನಾಥನೆಂಬ ಬಿರುದಾ ಮಾನಭಕ್ತರಿಂದ ಪೊರೆದಾ ಹೀನ ದೀನನಾದ ಎನ್ನಾ ಜ್ಞಾನವಿತ್ತು ರಕ್ಷಿಪುದು 1 ಇಂದಿರೇಶ ನಾರಾಯಣಾ ಬೃದದಿಂದಾ ಭಜಿಪೆ ನಿನ್ನಾ ಮಂದಮತಿಯ ಕಳೆದು ನಿಜಾನಂದದೊಳಗಿರಿಸೊ ಯನ್ನಾ 2 ಬೇಡಿಕೊಂಬೆನೀಗ ನಿನ್ನಾ ನೋಡುವುದು ಕೃಪೆಯೊಳೆನ್ನಾ] ಬಿಡಬ್ಯಾಡಾ ಬ್ಯಾರೆನಗೆ ಇಡೊ ಇಡೊ ನಿನ್ನೊಳೆನ್ನಾ 3 ಚಿಂತೆಗಳನ್ನೆಲ್ಲಾ ತೊರಿಸೊ ಸಂತ ಸಂಗದೊಳಿರಿಸೊ ಕಂತುಪಿತನೆ ಗುರುವೆ ಎನ್ನಾ ಶಾಂತಿ ಪದವ ಪಾಲಿಸೊ 4
--------------
ಶಾಂತಿಬಾಯಿ
ದೇವಾ ನೀ ಪಾಲಿಪುದೂ ಓ ಹರಿಯೆ ಹರಿಯೆ ಪ ಮದನ ಜನಕ ರಂಗಾ ಪಾವನಾಂಗನೆ ನಿಜಸೇವೆಯೊಳಿರಿಸೆಂದೂ 1 ದಾರುಧಿ ಭೀಕರನ್ಯಾರೊ ವೈಷ್ಣವೋತ್ತಮ ಬಾರೊ ಸಾಧುಶಿಖರನಾರೊ ಸತ್ವರೂಪನು ತೋರೊ 2 ಧರಣೀನಾಗನಗರಿ ಕರುಣವಾರುಧಿಯಾದಾ ಗುರುವೆ ತುಳಶೀರಾಮ ಪರಮಾತ್ಮನೆ ನೀ ಬಾರೊ 3
--------------
ಚನ್ನಪಟ್ಟಣದ ಅಹೋಬಲದಾಸರು
ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ ಧ್ರುವ ದಾತ ಸುರಲೋಕನಾಥ ಶ್ರುತಿಸ್ಮøತಿ ಸನ್ಮತ ಯತಿಜನವಂದಿತ ಪತಿತಪಾವನನಹುದೀತ 1 ಆನಂದೊ ಬ್ರಹ್ಮಸ್ವರೂಪ ಅನುದಿನ ಭಯಪಾಲಿಸ 2 ಶ್ರೀನಾಥ ಮಹಾಮಹಿಮರ ಮಹಿಪತಿಗುರು ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಿ ನರ್ಮದೆ ಪಾಲಿಸಮ್ಮಾ ಪ ಕಾವನಯ್ಯನ ಚರಣ ತೋರಿಕಾವುದೆಮ್ಮ ಪಾವನಾತ್ಮಕೆ ಅ.ಪ. ಕಲುಷ ಹರಣವಮ್ಮ 1 ವರ ವಿಸ್ತಾರ ಪಾತ್ರವಮ್ಮ | ನರರಾಯಾಸ ಶಾಂತವಮ್ಮಅರುಣ ಉದಯದಿಂದ ನಿನ್ನ | ಸುರನರಾದಿ ಸೇವಿಸುವರು 2 ವರ ಸುಜಪದಮಾಲೆ ಕರದಿ |ದರವು ಪದುಮ ಗ್ರಂಥಪಾಣಿಗುರು ಗೋವಿಂದ ವಿಠಲ ಚರಣ |ನಿರತ ಧ್ಯಾನಾನಂದ ಮಗ್ನೆ3
--------------
ಗುರುಗೋವಿಂದವಿಠಲರು
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ1 ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ 2 ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು 3 ಸಜ್ಜುಗೈಯಲು 5ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ 5ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ 4 ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ 5 ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು 6 ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ 7
--------------
ಗುರುಗೋವಿಂದವಿಠಲರು
ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಧ್ರುವ ಅನಾಥನಾಥ ನೀನೆ ಸಾನುಕೂಲ ಅನುದಿನ ಮಾಡುವೆ ನೀ ಪ್ರತಿಪಾಲ 1 ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2 ನೀನೆ ಸಕಲಕೆಲ್ಲ ಸಲಹುವ ದಾತ ಜನವನದೊಳು ಘನಗುರು ಸಾಕ್ಷಾತ 3 ದೇವಾದೀದೇವ ಶ್ರೀದೇವ ಅವಧೂತ ಭವ ಹರ ಗುರು ನೀನೆ ಸದೋದಿತ 4 ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ ಭಾನುಕೋಟಿತೇಜ ನೀನೆ ಅಚಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇಹ ಪ್ರಾರಬ್ಧವು ದೇಹಕೆ ಸ್ತ್ರೀದೇಹ ಬಿಟ್ಟಾತಗೆ ಹ್ಯಾಗೆದೇಹ ಪ್ರಾರಬ್ಧವು ಕಡೆಯಲ್ಲಿ ಬೀಳ್ವುದುದಯ ಮಾಡುವೆನು ಒಳಿತಾಗೆ ಪ ಪರಿ ಹಾಗೆ1 ಅಂಬು ತಿಲಕೆ ಬಿದ್ದ ಹಾಗೆ 2 ಭೂಪ ಚಿದಾನಂದ ಸದ್ಗುರುವಾಗಿ ಭೂಮಿ ಮೇಲಿಹರದು ಹ್ಯಾಗೆದೀಪದ ತೈಲವು ತೀರುವನಕ ಇರ್ದು ದೀಪವು ನಂದಿದ ಹಾಗೆ 3
--------------
ಚಿದಾನಂದ ಅವಧೂತರು
ದೇಹ ಭಾವವು ಹೋಗಿ ದೇವನೇ ತಾನಾಗಿದೇಹಗುಣವೆಲ್ಲಿಯದೋ ಮುಕ್ತ ಪ ಗರುಡನ ಮನೆಯೊಳಗೆ ನಾಗರ ಜಾತಿಯಪರಿ ನಡೆವುದೇನೋ ಮುಕ್ತಶರೀರ ಸಹಿತದ ಬ್ರಹ್ಮಾಗಿ ತಾನಿರೆಹರಿವವೆ ಪ್ರಾಣಗಳು ಮುಕ್ತ1 ಉರಿಯದು ಉರಿಯಲು ಉರಿಯಲಿಅರಗದು ಇಹುದೇನೋ ಮುಕ್ತಕರುವಿಟ್ಟೆರಕದಿ ಥಳಥಳ ಹೊಳೆಯದೆಇರುವುದೇ ಈ ಇಂದ್ರಿಯಗಳು ಮುಕ್ತ2 ರವಿಯದು ಬೆಳಗಿರೆ ಕಿರಣ ಕಾಂತಿಯಿಂಗೂಗೆಗಳೆಲ್ಲ ತಿರುಗುವವೋ ಮುಕ್ತಖವ ಖವ ಖವಿಸುತ ಪರವಶವಿರೆವಿವರಿಸೆ ಮನವೆಲ್ಲೊ ಮುಕ್ತ 3 ಈಶನ ಕಣ್ಣುರಿ ಭುಗು ಭುಗು ಭುಗಿಲೆನೆಏಸು ಉಳಿವುದು ಕಾದು ಮುಕ್ತಿಸೂಸುವ ಮುಖದಲಿ ತೃಪ್ತಿಯೆ ತುಂಬಿರೆವಾಸನೆ ಎಲ್ಲಿಹುದೋ ಮುಕ್ತ 4 ಪರಮಾತ್ಮನು ತಾ ಪರಿಪೂರ್ಣನಾನಿರೆಮೆರೆವುದು ಅವಿದ್ಯೆ ಮುಕ್ತಗುರು ಚಿದಾನಂದ ಸಹಜದಿ ತಾನಿರೆಇರುವುದೆ ಜೀವತ್ವ ಮುಕ್ತ 5
--------------
ಚಿದಾನಂದ ಅವಧೂತರು
ದೇಹದ ಒಳಗಿಹ್ಯ ದೇವರ ತಿಳಿದಿಹ ಆತನೆ ದೇಹಾತೀತನು ಮಾ 1 ಆತನೇ ಶ್ರೀಹರಿಭಕ್ತನು ಮಾ2 ಲಿಂಗವಂತನು ಮಾ3 ಷಟಸ್ಥಳ ಶೋಧಿಸಿ ಸಾಧಿಸಿ ತಿಳದಿಹ ಆತನೆ ಶೀಲವಂತನು ಮಾ 4 ಶುದ್ಧಾತ್ಮ ಶಿವತತ್ವ ಸೂತ್ರವ ತಿಳದಿಹ ಆತನೆ ಶಿವಭಕ್ತನು ಮಾ 5 ದೃಢ ನಿರ್ವಾಣೆಯು ಮಾ 6 ಆತನೆ ಮಹಾಪಂಡಿತನು ಮಾ 7 ಆತನೆ ಆಚಾರ ನಿಷ್ಠನು ಮಾ 8 ಐದು ತತ್ವದ ಗತಿಗಳ ತಿಳದಿಹ ಆತನೆ ಮಹಾ ವೈದಿಕನು ಮಾ 9 ಪಂಚ ಮುದ್ರೆಯ ಸ್ಥಾನವು ತಿಳದಿಹ ಆತನೆ ಸುಬ್ರಾಹ್ಮಣನು ಮಾ 10 ಗುರುವೆಂದರುವದು ಮಾ 11 ಆತನೆ ಸಿದ್ದ ಶರಣನು ಮಾ 12 ಆತನೆ ಮಹಾ ಸತ್ಪುರುಷನು ಮಾಟ 13 ಆತನೆ ವರಗುರು ಮೂರ್ತಿಯು ಮಾ 14 ಅವತಾರ ಮಹಿಮನು ಮಾ 15 ಆತನೆ ಸಾಧು ಸಂತನು ಮಾ 16 ಸದ್ಗುರು ಮೂರ್ತಿಯು ಮಾ 17 ಮಹಾ ಜ್ಞಾನಿಪುರುಷನು ಮಾ 18 ಮರುಳಮಂಕ ಮನುಜರು ಮಾ 19 ಆತನೆ ಶ್ರೀ ಗುರುದಾಸನು ಮಾ 20 ಮಹಿಪತಿ ಭವನಾಶವಾಯಿತು ಮಾ 21
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇಹದ ಭಾವಾ ಮೋಹವಾ ಕಳೆ ನಾನೀನೆನ್ನುವ ಭೇದವಾ ಪ ತನು ಮೂರರ ಸಾಕ್ಷೀ ನೀನಿಹೆ ಘನ ಚಿನ್ಮಯರೂಪಾ ನೀನಿಹೆ ಅನುಮಾನಿಸದೀಪರಿ ಯೋಚಿಸು ನೀ ಮನವಾರೆ ಇದೇ ನಿಜವೆಂದೆನುತಾ ಅನುದಿನದಲಿ ನಿಶ್ಚಯಗೊಳಿಸುತಲಿ ಅನುಭವದಲಿ ತಿಳಿ ಈ ಬೋಧವಾ ಕಳೆ ನಾನೀನೆನ್ನುವ ಭೇದವಾ 1 ಇದು ತೋರಿ ಅಡಗುವಾ ಕಲ್ಪನೆ ಅದು ತೋರಿಕೆಯಳಿದ ಆತ್ಮನೇ ಪರಿ ಈ ಜಗವೆಲ್ಲ ಅದು ನೀನಿರುವಿ ಇದು ನೀನಲ್ಲ ಇದೆ ತಿಳಿವಿಕೆಯಿಂದಲಿ ಮುಕುತಿ ಕಣಾ ಇದೆ ಶಂಕರಗುರುವಿನ ಬೋಧವಾ ತಿಳಿದಾನಂದಿಸು ನೀನೇ ಶಿವಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು ಬ್ರಹ್ಮವೆಲ್ಲಿದೇಹವು ಬ್ರಹ್ಮವು ಒಂದೆಯೋ ದೇಹವು ಇಹುದು ಬ್ರಹ್ಮದಲ್ಲಿ ಪ ಮಾಯೆಯು ಬಿಟ್ಟು ಬ್ರಹ್ಮವು ಎಂದೆನೆಮಾಯೆಯ ಬಿಟ್ಟು ಬ್ರಹ್ಮೆಲ್ಲಿಕಾಯ ಬಿಟ್ಟು ಆತ್ಮವು ಎಂತೆನೆಕಾಯವ ಬಿಟ್ಟು ಆತ್ಮೆಲ್ಲಿ1 ಪಿಂಡವ ಬಿಟ್ಟು ಬ್ರಹ್ಮಾಂಡ ವೆಂತೆನೆಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿಖಂಡವ ಬಿಟ್ಟಾಖಂಡವೆಂತೆನೆಖಂಡವ ಬಿಟ್ಟು ಅಖಂಡವದೆಲ್ಲಿ2 ಜಗವನು ಬಿಟ್ಟು ತನ್ನನು ತೋರೆನೆಜಗವನು ಬಿಟ್ಟು ತಾನೆಲ್ಲಿಜಗಪತಿ ಚಿದಾನಂದ ಸದ್ಗುರು ನೀನು ನೀಜಗಸಂಶಯವೆಲ್ಲಿ 3
--------------
ಚಿದಾನಂದ ಅವಧೂತರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ದೈವ ಭಕ್ತಿ ಸಂಸಾರದೊಳಿಲ್ಲ ಪ ಜೀವಗಭಿಮಾನವು ಬಿಡದಲ್ಲ ಅ.ಪ ವನಜಲೋಚನನ ಅರ್ಚನೆಗೆ ಆಲಸ್ಯ 1 ದಾನಕ್ಕೆ ದಾರಿದ್ರ್ಯ ತನಗೋಸುಗ ಸಾಲ ಮಾನವ ಜನಕೆ 2 ಮಕ್ಕಳ ಮದುವೆಗೆ ರೊಕ್ಕಸಾವಿರ ಹೊನ್ನು ಪಕ್ಕಿವಾಹನಗೆ ದೊರೆಯದೊಂದು ಕಾಸು 3 ಮತ್ತೆ ತನ್ನ ಹೆಂಡತಿಗೆ ಹತ್ತುವರಹದ ಸೀರೆ ಮುತ್ತೈದೆಗೀವರೆ ಮೂರಾಣೆಯ ಕುಬಸ 4 ಮದುವೆ ಮುಂಜಿಗೆ ಸಾಲ ಮಾಡದಿದ್ದರೆ ಹ್ಯಾಂಗೆ ಬುಧರು ಯಾಚಿಸಿದರೆಯಿಲ್ಲ ಎಂಬುವುದೇ? 5 ಎಷ್ಟು ಬಂದರು ಸಂಸಾರಕ್ಕೆ ಸಾಲದು ಭ್ರಷ್ಟ ಯಾಚಕರಿಗೇತಕೆ ಕೊಡಬೇಕು 6 ಸತಿಸುತನು ನಾವು ಸಲಹಿದರೆ ಸಾಕು ಅತಿಶಯದಾನ ಧರ್ಮಂಗಳು ಬೇಡ 7 ದಾಕ್ಷಿಣ್ಯಗಾರರಿಗೆ ಭಕ್ಷ್ಯ ಭೋಜ್ಯಗಳ ಊಟ ಕುಕ್ಷಿಂಭರರು ಕೇಳೆ ಭಕ್ಷ್ಯವೂ ಇಲ್ಲ 8 ಶ್ರೀನಿಧಿ ಗುರುರಾಮ ವಿಠಲ ವಲಿವನೆ? 9
--------------
ಗುರುರಾಮವಿಠಲ