ಎಂದು ಕಾಣ್ವೆನೊ ಇಂದಿರೇಶನ ದಿವ್ಯಚರಣ
ಎಂದು ಕಾಣ್ವೆನು ಪ
ಎಂದು ಕಂಡಾನಂದಿಸುವೆನು ಮಂದರೋದ್ಧರ
ಸಿಂಧುಶಾಯಿಯ ಸುಂದರ ಪಾದಾರವಿದಂಗಳನು
ನಿಂದು ಮನದಣಿ ನೇತ್ರದಿಂದ ಅ.ಪ
ದನುಜಾರಿಯ ಘನಮಹಿಮೆ ಜನಕಜೆಯ ಪ್ರಾಣಪ್ರಿಯನ
ಮಿನುಗುವ ದಿನಮಣಿಕೋಟಿತೇಜೋಮಯನ
ಘನಕೋಮಲ ನಿಜರೂಪ ಕಣ್ಣಿಲಿಂ ನೋಡ್ಹಿಗ್ಗುವ ದಿನ 1
ಕರಿಯ ಕಾಯ್ದನ ಕರುಣದಿಂದ ತರುಣಿಗ್ವಂದನ
ಶರಣೆನುತ ಮರೆಬಿದ್ದವಗೆ ಸ್ಥಿರಪಟ್ಟವ ಕರುಣಿಸಿದನ
ಕಾಲ 2
ಪಕ್ಷಿಗಮನನ ಲಕ್ಷ್ಮೀನಾಥ ಸಹಸ್ರಾಕ್ಷಶಯನನ
ಲಕ್ಷವಿಟ್ಟು ಭಕ್ತರನ್ನು ರಕ್ಷಿಸಿ ಭಕ್ತವತ್ಸಲನೆಂಬ
ನೋಡುವ ಪದವಿ 3