ಆಡಿದ ನಾಟಕವ ಕಿರಾತ ಮದನಗೂಢ ಚಿದಾನಂದನನರಿಯದ ನರ ಮೃಗವ ಪ
ಸ್ತ್ರೀಯ ದೇಹವು ಎಂಬ ಅಡವಿಯೊಳಗೆಸ್ತ್ರೀಯ ಹುಬ್ಬೆಂಬ ಸಿಂಗಾಡಿ ತೆಗೆದುಮುಂಗುರುಳುಗಳು ಎಂಬ ಸಿಂಜನಿಯನೆ ಬಿಗಿದುಸ್ತ್ರೀ ದೃಷ್ಟಿಯೆಂದೆಂಬ ಸಿಳೀ ಮುಖವನೆ ಪಿಡಿದು 1
ಸಿರಿತುಳುಕುವ ಅವಯವದ ಸಿಡಿಬಲೆಯನೊಡ್ಡಿಪರಿಯ ತಿಳಿಯದೆ ಬರುವ ಪುರುಷ ಮೃಗವಕರುಣವಿಲ್ಲದೆ ಮಹಾ ಕೋಪದಿಂದಲಿಎರಡು ಗಿರಿಯ ಸಂದಿಯಲಿರಿದು ಇರಿದು ಕೆಡುತಿಹ 2
ಇಂತು ಬೇಟೆಯನಾಡಿ ಎಲ್ಲ ಲೋಕವ ಕೆಡಹಿಚಿಂತೆ ಮಾಡುವ ಚಿದಾನಂದ ಭಕ್ತರ ಮುಂದೆ ಸುಳಿಯಲಿಕಂಜಿಮರೆಯದೆ ಶಿವನ ಗುರುತ ಅಂತಹುದುಇವರನೀಗ ಮುಟ್ಟಬಾರದು ಎಂದು 3