ಒಟ್ಟು 256 ಕಡೆಗಳಲ್ಲಿ , 59 ದಾಸರು , 218 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ ಪ ಪುರುಹೂತ ಪ್ರಮುಖ ಸುರ ವ್ರಾತವಿನುತ ಶಿರಿನಾಥನ ನಿನ್ನೊಳು ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು ಮಾತು ಲಾಲಿಸೊ ಎನ್ನ ಮಾತೆಯ ತೆರದಿ ಅ.ಪ ಪ್ರಾಣಾದಿ ಪಂಚರೂಪಕನೆ ಜಗ ತ್ರಾಣ ಭಾವಿ ವಿರಿಂಚನೆ ಮಾಣದೆ ತವ ರೂಪ ಕಾಣಿಸೊ ಮನದಲ್ಲಿ ಪಾಣಿಯುಗವ ಮುಗಿವೆ ಕ್ಷೀಣಪಾಪನ ಮಾಡೊ ರೇಣು ಭಜನೆಯ ಗೈದು ಸರ್ವದ ವೀಣೆ ಪಿಡಿದತಿ ಗಾನ ಮಾಡುತ ಜಾಣನೆನಿಸಿ ಕ್ಷೋಣಿ ಪಾಲಿಪೆ 1 ಮೂಲರಾಮನ ಪಾದಕಮಲಾ ಯುಗಕೆ ನೀಲಷಟ್ಟದ ವರಬಾಲಾ ವಾಲಿಯಾನುಜ ಕಪಿ ಜಾಲಪಾಲಕನನ್ನು ಆಲಿಸಿ ಭೂಮಿಜ ಲೋಲರಾಮನ ಮೈತ್ರ್ಯ ಪಾಲಿಸೀ ಶರಧಿಯನು ನೀನೆ ಲೀಲೆಯಿಂದಲಿ ದಾಟಿ ಸೀತೆಗೆ ಬಾಲರೂಪದಿ ರಾಮವಾರ್ತೆಂiÀi ಪೇಳಿ ವನವನು ಹಾಳುಮಾಡಿದಿ 2 ಪಾತಕÀ ರಾವಣ ಮಗನಾ ರಣದಿ ಘಾತಿಸಿ ಯಮಗಿತ್ತವನಾ ತಾತಗುರು ಜಗನ್ನಾಥವಿಠಲ ನಿಜ ಪೋತನಾಗಿ ಜಗದಿ ಖÁ್ಯತಿಯ ಪಡೆದಿ ರೀತಿ ಏನಿದು ನಿನ್ನ ಪದಯುಗ ದೂತನಾಲ್ಪರಿವ ಮಾತನು ಯಾತಕೇ ಕಿವಿ ಕೇಳದೋ ಕಪಿ ನಾಥ ಪಾಲಿಸೊ ಎನ್ನ ತಾತಾ 3
--------------
ಗುರುಜಗನ್ನಾಥದಾಸರು
ಮಾಧವಮಧುಸೂದನೆನಿಪಪಾದಭಜನೆಯಮಾಡುವೇ ಸಾಧು ಶಿಖರನೆ ಸರ್ವತಂತ್ರನೇ ಬೋಧಿಸೆನುತಾ ಬೇಡುವೇ ಪ ವಾರಿಧಿಶಯನ ಪಾರಮಹಿಮ ಪರಾತ್ಪರ ಪಾಪವಿದೂರನೇ ಅ.ಪ ಆತೊಡರ್ಚಿತುವೋತಡಂತಿಸೂ ಭೂತಪಕ್ಷದಯಾನಿಧೆ ಭೀತಿಗೊಳಿಸದಿರೆನ್ನ ನೀನೆ ಅನಾಥರಕ್ಷ ಕೃಪಾನಿಧೇ 1 ನೀನೆ ಕಲುಷವಿಖಂಡ ನಿಶ್ಚಲ ನೀನೆ ವೇದಾಂತಾರ್ಯನೂ ಶ್ರೀನಿವಾಸದಯಾನಿಧೆ ಜಗದಾನುಭವತತ್ತೂರ್ಯನೂ 2 ದೇಶಿಕನೆ ತ್ವದ್ದಾಸನಾಡೆಯ ಆಶೆಯಳಿದೀಗೆರಿನನೂ ಪಾಶರಹಿತನ ಮಾಡೊಯೆನುತಲಿ ಪಾಡುವೆನಾ ನಿನಗೆನ್ನನೂ 3 ನಿತ್ಯಪೂರ್ಣನೆ ಸತ್ವಗುಣಮಣಿ ಚಿತ್ಸುಖಾಂಶ ಚಿದಂಬರಾ ತತ್ವಮೆನಗೆ ಪ್ರಸಾದಿಸಿದ ಶ್ರೀತುಲಶಿರಾಮ ದಿಗಂಬರಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾತಕೆ ದಯಮಾಡಲೊಲ್ಲೆ ರಂಗಯ್ಯ - ಜಗ ಪ ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಅ ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ1 ನೆಂಟರಿಷ್ಟರು ನೀನೆ ರಂಗಯ್ಯ - ನೀನೆಬಂಟರಿಗೆ ಬಂಟನಯ್ಯ ರಂಗಯ್ಯ2 ದಾಸರ ದಾಸನಯ್ಯ ರಂಗಯ್ಯ - ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ3 ಶೇಷಗಿರಿ ವಾಸ ರಂಗಯ್ಯ - ಆದಿಕೇಶವನೆ ರಕ್ಷಿಸೊ ರಂಗಯ್ಯ4
--------------
ಕನಕದಾಸ
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ಧ್ರುವ ಧ್ಯಾನ ಮೌನ ಸ್ನಾನ ಸಂಧ್ಯಾಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ 1 ಹೀನ ದೀನ ಜ್ಞಾನಶೂನ್ಯ ದಾನ ಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣಾ ಕೃಪಾನಿಧೆ 2 ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ದೋರಿಸೆನ್ನ ಹೊರಿಯೊ ದಯಾನಿಧೆ 3 ಅರುಹು ಕುರುಹು ನರಿಯ ದೀಹ್ಯ ಮರುಳಮಂಕ ತರಳನಾ ಕರವ ಪಿಡಿಯ ಧರೆಯೊಳಿನ್ನು ತಾರಿಸೊ ದಯಾನಿಧೆ 4 ಆಶಾಪಾಶದೊಳು ವಾಸವಾದ ದೋಷ ರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ 5 ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಕ್ಷಿಸು ಎನ್ನನು ಪಕ್ಷಿವಾಹನ ಪಾಂಡು ಪಕ್ಷನೆ ತವ ಭಕ್ತಿಯಗಲಿಸದೆ ಲಕ್ಷಿಸಿ ಧ್ರುವನೊರೆದೆ ಲಕ್ಷ್ಮೀಶ ಮರೆಹೋದೆ ಪ ಕ್ಷಿತಿಯೊಳು ನಾಂ ಬಲು ಚತುರನೆನಿಪದು ರ್ಮತಿಯಿಂದ ಕಷ್ಟಕ್ಕೆ ಗುರಿಯಾದೆ ರತಿಪತಿಪಿತ ಎನ್ನ ಅತಿತಪ್ಪು ಮನ್ನಿಸಿ ಗತಿಗಾಣಿಸಿತ್ವಾಕ್ಯ ಅಖಿಲೇಶ ಯತಿನುತ ಸುರಪೋಷ ಹತಭವ ಗುಣಕೋಶ 1 ಮಂದಮತಿಯತನದಿಂದ ನಾ ಮಾಡಿದ ಹಿಂದಿನ ಅವಗುಣವೆಣಿಸದೆ ಪಾದ ಎಂದೆಂದು ಮರೆಯದೆ ಬಂಧುರಭಕ್ತಿಯ ವರ ನೀಡೊ ಕಂದನೊಳ್ದಯಮಾಡೊ ತಂದೆ ನೀ ಕಾಪಾಡೊ 2 ದುರುಲನೆನಿಸಿ ಬಲು ಧರಣಿಯೊಳ್ತಿರುಗುವ ಮರುಳುಗುಣವನೆನ್ನದೀಡ್ಯಾಡೊ ಹರಿಯ ದಾಸರ ಸಂಗ ಕರುಣದಿ ದೊರಕಿಸಿ ಪರಿಶುದ್ಧ ಮಾಡೆನ್ನ ಹೇಯ ಜನುಮ ಶರಣಜನರ ಪ್ರೇಮ ಕರುಣಿಯೆ ಶ್ರೀರಾಮ 3
--------------
ರಾಮದಾಸರು
ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ ಪ ಪರರ ಪೊಗಳಿಕೆ ಬೇಡ ಪರರ ತೆಗಳಿಕೆ ಬೇಡಪರಮಪಾವನ ನಿನ್ನ ಮಹಿಮೆಯನು ಬಣ್ಣಿಸುವಸರಸ ನುಡಿಗಳು ಬಾಯೆ ಬರುವಂತೆ ಮಾಡೊ 1 ಒಂದು ಲಕ್ಷದ ನಾಮದೊಂದು ಮಣಿಮಾಡಿಕುಂದದಿಹ ಭಕ್ತಿಗುಣದಿಂದ ಪೋಣಿಸಿ ಪದ್ಯದಂಥ ಹಾರವ ಮಾಡಿ ನಿನ್ನೆಡೆಗೆ ಅರ್ಪಿಸಲುಮಂದ ಬುದ್ಧಿಯ ನನಗೆ ಶಕ್ತಿಯನೀಡೋ 2 ರಾಗ ನಿನಗೆಯೆ ತಾಳ ನಿನಗೆಯೆ ಗೊತ್ತುರಾಗ ತಾಳಗಳ ಮೇಳ ನನಗೇನು ಗೊತ್ತುರಾಗತಾಳಗಳಲ್ಲಿ ಹಗುರಾಗಿ ಹಾಡಲಿಕೆತೂಗಿ ಶಬ್ದಗಳಿಡಲು ಸನ್ಮತಿಯ ನೀಡೋ 3 ಸುರವರನೆ ಬೇಕಯ್ಯ ನಿನ್ನ ಪ್ರೇರಣೆ ಇದಕೆವರಕವಿಯು ಸು ಕುಮಾರವ್ಯಾಸನಿಗೆ ವರವಿತ್ತುಉರುತರದ ಕನ್ನಡದಿ ಭಾರತವ ಬರೆಯಿಸಿದತೆರದಿ ಗದುಗಿನ ವೀರನಾರಾಯಣನೆ ಸಲಹೊ 4
--------------
ವೀರನಾರಾಯಣ
ರಾಮ ರಘುಕುಲಾಬ್ಧಿ ಸೋಮಾ ಪ ಸಂತತ ಭಕ್ತ ಪ್ರೇಮಾ ಮಂಗಲಧಾಮಾ | ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ಅ.ಪ. ಏಸಪರಾಧಗಳೆಣಿಸದೆ ದಯವಿಟ್ಟು | ದೋಷದೂರನ ಮಾಡೊ ಕೇಶವ ಕಮಲಾಕ್ಷಾ 1 ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ | ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ2 ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-| ಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ3
--------------
ವಿಜಯದಾಸ
ರಾಮಚಂದ್ರ ನೀ ದಯಮಾಡೊಪ್ರೇಮದಿಂದಲಿ ಹರಕೆಯ ನೀಡೋ ಪ ನಿನ್ನ ಜನುಮದ ದಿನವಿದು ನೋಡೊಘನ್ನ ತರದ ಸಂತೋಷ ನೀಡೊಬನ್ನವನ್ನು ನೀನಿಂತೀಡಾಡೊಮನ್ನಿಸಿ ಎನ್ನನು ದಯದಿ ಕಾಪಾಡೊ 1 ವನಿತೆ ಅಹಲ್ಯೆಯ ಶಾಪವ ಹರಿದೆದನುಜರುಪಟಳ ತಾಪವ ತರಿದೆಮನುಜರೆಲ್ಲರ ಧರ್ಮದಿ ಪೊರೆದೆಘನ ಸೌಖ್ಯವ ಭೋಗಿಸುವಂತಿರದೆ 2 ಕುಣಿಯುವದು ಮುದದಲಿ ಭಕ್ತರ ಗಡಣದಣಿಯದು ನೋಡೈ ಸೀತಾರಮಣಗುಣಿ ನೆ ಸುಖವಕೊಡು ಕರುಣಾಭರಣಮಣಿವೆ ಗದುಗಿನ ವೀರನಾರಾಯಣ 3
--------------
ವೀರನಾರಾಯಣ
ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ ವರಋಷಿ ಎನ್ನಿಸಿದಾತನ ಮರುತಾತ್ಮಜಾದಿ ನುತನ ಸುಚರಿತನ 1 ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ 2 ಭರತ ಶತೃಘ್ನ ಲಕ್ಷ್ಮಣ ಸೇವ್ಯನ ಸರಸಿಜಗಾಪ್ತಜ ಭಾವ್ಯನ ನೃಪಾಗ್ರಗಣ್ಯನಾದನ ವಿನೋದನಾ 3
--------------
ಗುರುರಾಮವಿಠಲ
ರುದ್ರದೇವರು ದೇವತೆಗಳ ದೇವ ಮಹದೇವ ದೇವ ಆವ ನಿಮಗೆ ಸರಿಯು ಕಾವುದೆಮ್ಮನು ಸರ್ವ ಪ ಮೂರನೆ ತತ್ವದ ಒಡೆಯನು ನೀನಯ್ಯ ಕಾರುಣಿಕ ಜನರಿಗಾರ್ಹ ಭಾವಕೆ ಮಾರಮಣನಾ ನೆನೆದು ಮೈಮರೆದು ನೀ ತಾರಕಾ ಉಪದೇಶಿ ಕಾಸಿ ವಾಸಿ 1 ಗಂಗೆಯ ಧರಿಸಿ ನೀ ಭಂಗಬಡುವ ಜನರ ಪೂತನ ಮಾಡಿದ್ಯೊ ಅಂಗಜನಯ್ಯನ ಭಕುತ ಶಿಖಾಮಣಿಯೆ ನಿ ಸ್ಸಂಗ ಜನರ ಪ್ರಿಯ ಸನಕಾÀದಿ ವಂದ್ಯ 2 ಮೋಸಗೊಳಿಸುವಿಯೊ ದುರ್ಜನರ ನಾನೀಶನೆಂದು ವಾಸುದೇವವಿಠಲಗಲ್ಲದವರ ಲೇಸು ಬೋಧಿಸುವಿಯೊ ಯೋಗ್ಯರನು ನೋಡಿ ಎನ್ನಲಿ ವಾಸ ಮಾಡೊ ಎನ್ನ ಮನದೊಡೆಯ 3
--------------
ವ್ಯಾಸತತ್ವಜ್ಞದಾಸರು
ರುದ್ರದೇವರು ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ-ಧವನ ತೋರಿಸಯ್ಯ ಗುರುಕುಲೋತ್ತುಂಗಪ. ಅರ್ಚಿಸಿದವರಿಗಭೀಷ್ಟವ ಕೊಡುವಹೆಚ್ಚಿನ ಅಘಗಳ ಬೇಗನೆ ತರಿವದುಶ್ಚರಿತರನ್ನೆಲ್ಲ ದೂರದಲ್ಲಿಡುವ ನ-ಮ್ಮಚ್ಚುತಗಲ್ಲದ ಅಸುರರ ಬಡಿವ 1 ಮಾರನ ಗೆದ್ದ ಮನೋಹರಮೂರ್ತಿಸಾರ ಸಜ್ಜನರಿಗೆ ಸುರ ಚಕ್ರವರ್ತಿ ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ 2 ಚೆನ್ನ ಪ್ರಸನ್ನ ಶ್ರೀ ಹಯವದನನ್ನಅನುದಿನ ನೆನೆವಂತೆ ಮಾಡೊ ನೀ ಎನ್ನಅನ್ಯರನರಿಯೆನೊ ಗುರುವೆಂಬೆ ನಿನ್ನಇನ್ನಾದರು ಹರಿಯ ತೋರೊ ಮುಕ್ಕಣ್ಣ 3
--------------
ವಾದಿರಾಜ
ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ಪ ಗೆಜ್ಜೆ ಕಟ್ಟಿದ್ದೊರೆ ಕೃಷ್ಣ ಭಜನೆಯಲ್ಲಿ ಮಾನದಲ್ಲಿ ಅ.ಪ. ಆರು ವಲಿದು ಮಾಡೊದೇನು ಆರುಮುನಿದು ಮಾಡೊದೇನು ಚಾರು ಚಾರು ಮೆಚ್ಚಲೇನು ಭಾರಿದೇವ ವಿಶ್ವಜನಕೆ ಹರಿಯದಾಸನೆಂದು ಇನ್ನು ಈರ ಮತವ ಸಾರಿಸಾರಿನಲಿದು ನಲಿದು ಸುಖಿಪುದಕ್ಕೆ 1 ದುಡ್ಡು ಕಾಸುಬೇಡ ನಮಗೆ ದೊಡ್ಡತನವು ಬೇಡ ಹಾಗೆ ಹೆಡ್ಡತನನ ಬಿಟ್ಟು ಪಿರಿಯಕೃಷ್ಣನನ್ನು ಭಜಿಸಲಿಕ್ಕೆ ಅಡ್ಡಿಏನು ಕುರುಡು ಮನವೆ ನೆನೆದುನೆನೆದು ನೋಡುನೀನೆ ದೊಡ್ಡತನವೆ ಸತ್ಯವೀದು ದಡ್ಡತನವೆ ದುರಭಿಮಾನ 2 ಹರಿಯದಾಸದೀಕ್ಷೆ ಪಡೆಯೆ ಸುಲಭವಲ್ಲ ಸುಲಭವಲ್ಲ ದುರಿತ ರಾಶಿಪೋಗಿ ಶುದ್ಧ ಚಿನ್ನದಂತೆ ಆಗದೇನೆ ಹಿರಿದು ಕಾಣೊ ಇಂಥಾ ಜನ್ಮ ಬರಿಯ ಮಾತಿಗೊಲಿಯದೇವ ಅರಿವಿನಂತೆ ನಡೆಯದಿರಲು ತೊರೆದು ಎಲ್ಲ ದುರಭಿಮಾನ 3 ಗೆಜ್ಜೆಕಟ್ಟಿ ಕುಣಿದು ಕುಣಿಯೆ ಲಜ್ಜೆನಾಶವಾಹುದೈಯ್ಯ ಲಜ್ಜೆನಾಶವಾಗಿ ಭಕ್ತಿಯುಕ್ತಿ ಉಕ್ಕಿಹರಿಯುತಿರಲು ಅಬ್ಜಪೀಠ ಪಿತನುತಾನೆ ಅಪ್ಪಿಕೊಂಡು ನಲಿದುನಲಿವ ಅಬ್ಜನಾಭ ನಲಿದು ವಲಿಯೆ ಹೆಚ್ಚುಉಂಟೆ ಅದರಕ್ಕಿಂತ 4 ಮೆರೆಯುತಿರಲು ದುಷ್ಟಕಲಿಯು ಅನ್ಯಮಾರ್ಗ ಸಾಧ್ಯವಿಲ್ಲ ಹರಿಯ ಭಜನೆ ಒಂದೇ ದಾರಿ ಹರಿಯ ವಲಿಸೆ ಸಿದ್ಧವೀದು ಜರಿದು ವಿಷಯ ಬೆರಸಿ ಭಕ್ತಿ ಸಿರಿಯ ರಮಣ “ಕೃಷ್ಣವಿಠಲ” ಚರಣ ಯುಗವ ಭಜಿಸಿ ನೀನು ಮಾನ್ಯನಾಗೋ ಧನ್ಯನಾಗೊ 5
--------------
ಕೃಷ್ಣವಿಠಲದಾಸರು
ಲೋಕನೀತಿ ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ ವ್ಯರ್ಥವಲ್ಲವೆ ಜನ್ಮವು ಪ. ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ ಮತ್ತೆ ಇರಬಹುದೆ ಹರಿಯೆ ಅ.ಪ. ಆರಿಗಾರಾಗುವರೊ ಪ್ರಾರಬ್ಧ ನೀಗದಲೆ ಶೌರಿ ದಾರಿಯ ತೋರನು ಈ ರೀತಿಯರಿತು ಹೇ ದುರ್ಮನವೆ ನರಹರಿಯ ಆರಾಧನೆಯನೆ ಮಾಡೊ 1 ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು ಏಕ ಮನದಲ್ಲಿ ಭಜಿಸು ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ ನೂಕು ಭವತಾಪ ಜಗದಿ 2 ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು ಈ ಪರಿಯಿಂದ ಭಜಿಸು ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ ತಾಪ ಹರಿಸುವನು ಭವದಿ 3
--------------
ಅಂಬಾಬಾಯಿ
ವನರುಹ ನಯನಾ | ವನಜೇಕ್ಷಣ ಪ್ರಿಯವನರುಹ ನಯನಾ | ಪ ತನುಮನ ಧನಗಳಾ | ನಿನಗರ್ಪಿಸುವಂಥಜನರ ಮನೋರಥ | ಅನುನಯದಿಂದಲೀವೆ 1 ಮನಸಿಜ ಜನಕನೇ | ಫಣಿಶೈಲ ಸದನನೇಅನಲಾಕ್ಷನ ಪ್ರಿಯ | ಗುಣ ಪರಿಪೂರ್ಣ 2 ಮನೆ ಮಗ ಮಡಧ್ಯಬಿ | ಮಾನವು ಪೋಗಲಿಲ್ಲಘನ ವಿಷಯಕೆ ಮನ | ಅನುಸರಿಸುವುದಯ್ಯ 3 ಕನಸು ಮನಸಿನೊಳು | ನಿನಪದ ಧ್ಯಾನವಅನುನಯದಿಂದಲಿತ್ತು | ಜನುಮ ಸಾರ್ಥಕ ಮಾಡೊ 4 ವ್ರಜ ಕರ ಪಿಡಿದು 5
--------------
ಗುರುಗೋವಿಂದವಿಠಲರು