ಒಟ್ಟು 170 ಕಡೆಗಳಲ್ಲಿ , 49 ದಾಸರು , 151 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆನ್ನು ಹರಿಯೆನ್ನು ಹರಿಯೆನ್ನು ಪ್ರಾಣಿಹರಿಯೆನ್ನದಿದ್ದರೆ ನರಹರಿಯಾಣೆ ಪ.ಹೆಂಗಸು ಮಕ್ಕಳು ಹೆರವರು ಪ್ರಾಣಿ |ಸಂಗಡ ಬರುವವರೊಬ್ಬರ ಕಾಣೆ 1ದಾನವಿಲ್ಲದ ದ್ರವ್ಯ ಗಳಿಸದೆ ಪ್ರಾಣಿಪ್ರಾಣ ಹೋಗುವಾಗ ಕಾಣೆ ದುಗ್ಗಾಣೆ 2ನೀರ ಮೇಲಿನ ಗುಳ್ಳೆ ಸಂಸಾರ ಪ್ರಾಣಿಸಾರಿದ ಪುರಂದರವಿಠಲನ ವಾಣಿ 3
--------------
ಪುರಂದರದಾಸರು