ಭವ |
ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ
ಆಶೆಯೆಂಬ ನದಿಯಲ್ಲಿ | ಘನ |
ಸೂಸುವ ಮನೋರಥವ ಸೆಳವಿನಲಿ |
ವಾಸನೆ ತೆರೆಗಳಿ ಬರಲಿ | ಬಲು |
ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ 1
ಉಲಿವ ಕುತರ್ಕ ಪಕ್ಷಿಗಳು | ನುಂಗ |
ನಕ್ರ ಕಾಮಕ್ರೋಧಗಳು |
ಬಲಿದು ವಿವೇಕ ಧಡಿಗಳು | ಕೋರೆ |
ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು2
ಸಿರಿ |
ಕಾಂತ ನಿನ್ನಯ ನಾಮ ಹಡಗ ತಂದು |
ಪಂಥಗಾಣಿಸೋ ಗತಿಗಿಂದು | ದಯ |
ವಂತ ಗುರು ಮಹಿಪತಿ ಪ್ರಭು ದೀನ ಬಂಧು3